ಯಾವ ಸಮಯದಲ್ಲಿ Instagram Reels ಪೋಸ್ಟ್ ಮಾಡಿದ್ರೆ ಹೆಚ್ಚು ವೈರಲ್ ಆಗುತ್ತೆ?
Instagram ನಲ್ಲಿ ಫೋಟೋ/ರೀಲ್ಸ್ ಅಪ್ಲೋಡ್ ಮಾಡಲು ಸೂಕ್ತ ಸಮಯದ ಬಗ್ಗೆ ತಿಳಿಯಿರಿ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಮತ್ತು ವಾರಾಂತ್ಯದಲ್ಲಿ ಯಾವ ಸಮಯದಲ್ಲಿ ಪೋಸ್ಟ್ ಮಾಡಿದರೆ ಹೆಚ್ಚು ವೀಕ್ಷಣೆಗಳು ಮತ್ತು ವೈರಲ್ ಆಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
Instagram Tips: ಇಂದು ಎಲ್ಲರೂ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಕೆಲವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಅಲ್ಲಯೇ ಹಣ ಸಂಪಾದಿಸುತ್ತಾರೆ. ಎಷ್ಟೋ ಮಂದಿ ಫೇಸ್‌ಬುಕ್, ಯುಟ್ಯೂಬ್ ಮತ್ತು ಇನ್‌ಸ್ಟಾಗ್ರಾಂಗಳಿಂದಲೇ ಲಕ್ಷ ಲಕ್ಷ ಹಣ ಸಂಪಾದನೆ ಮಾಡಿಕೊಂಡು ಬದುಕು ಕಟ್ಟಿಕೊಂಡದ್ದಾರೆ. ಆದ್ರೆ ಒಂದಿಷ್ಟು ವರ್ಗದ ಜನತೆಗೆ ತಾವು ಅಪ್ಲೋಡ್ ಮಾಡುವ ಫೋಟೋ ಅಥವಾ ವಿಡಿಯೋಗೆ ಹೆಚ್ಚು ಲೈಕ್ಸ್ ಮತ್ತು ಶೇರ್ ಆಗಬೇಕೆಂದು ಇನ್ನಿಲ್ಲದ ಕಸರತ್ತು ಮಾಡುತ್ತಾರೆ.
ಭಾರತದಲ್ಲಿಇನ್‌ಸ್ಟಾಗ್ರಾಂ ಫೋಟೋ/ರೀಲ್ಸ್ ಅಪ್ಲೋಡ್ ಮಾಡೋಕೆ ಸೂಕ್ತ ಸಮಯವಿರುತ್ತದೆ. ನಿಮ್ಮ ಆಡಿಯನ್ಸ್ ಸಂಖ್ಯೆ ಮತ್ತು ಸ್ಥಳದ ಆಧಾರದ ಮೇಲೆ ಸಮಯ ನಿರ್ಧಾರವಾಗುತ್ತದೆ. ಈ ಲೇಖನ ಸಾಮಾನ್ಯ ಟ್ರೆಂಡ್ ಮತ್ತು ಡೇಟಾ ಆಧಾರದ ಮೇಲೆ, ಯಾವ ಸಮಯದಲ್ಲಿ ಪೋಸ್ಟ್ ಮಾಡಿದ್ರೆ ಸೂಕ್ತ ಎಂಬ ಮಾಹಿತಿಯನ್ನು ಒಳಗೊಂಡಿದೆ. ಈ ಸಮಯದಲ್ಲಿ ಮಾಡುವ ಪೋಸ್ಟ್‌ಗಳಿಗೆ ಹೆಚ್ಚು ವ್ಯೂವ್ ಬರೋದರ ಜೊತೆಗೆ ವೈರಲ್ ಸಹ ಆಗುತ್ತವೆ.
ರೀಲ್ ಅಥವಾ ಫೋಟೋ ಪೋಸ್ಟ್ ಅನ್ನು ಪೋಸ್ಟ್ ಮಾಡಲು ಇದು ಸರಿಯಾದ ಸಮಯ
ಬೆಳಗ್ಗೆ: ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 7 ರಿಂದ 9 ಗಂಟೆ ಫೋಟೋ/ರೀಲ್ ಅಪ್ಲೋಡ್ ಮಾಡಲು ಸೂಕ್ತ ಸಮಯವಾಗಿದೆ. ಸಾಮಾನ್ಯವಾಗಿ ಬೆಳಗ್ಗೆ ಈ ಸಮಯದಲ್ಲಿ ಜನರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ.
ಮಧ್ಯಾಹ್ನ: ಮಧ್ಯಾಹ್ನ 12 ರಿಂದ 1 ಗಂಟೆ ಮಧ್ಯದಲ್ಲಿ ಪೋಸ್ಟ್ ಮಾಡಲು ಉತ್ತಮ ಸಮಯವಾಗಿದೆ. ಈ ಸಮಯದಲ್ಲಿ ಜನರು ಊಟದ ವಿರಾಮದಲ್ಲಿರುತ್ತಾರೆ. ಮನೆಯಲ್ಲಿದ್ದವರು ಎಲ್ಲಾ ಕೆಲಸಗಳನ್ನು ಮಾಡಿ ಈ ಸಮಯದಲ್ಲಿ ಫ್ರೀಯಾಗಿರುತ್ತಾರೆ. ಈ ವೇಳೆ ಜನರು ಅಧಿಕವಾಗಿ ಫೋನ್ ಬಳಕೆ ಮಾಡುತ್ತಾರೆ.
ಸಂಜೆ: ದಿನದ ಅಂತ್ಯದಲ್ಲಿ ಅಂದ್ರೆ ಸಂಜೆ 5 ರಿಂದ 7ರ ನಡುವೆಯೂ ಸೋಶಿಯಲ್ ಮೀಡಿಯಾ ಬಳಕೆದಾರರ ಸಂಖ್ಯೆ ಏರಿಕೆಯಾಗುತ್ತದೆ. ಇಡೀ ದಿನ ಕೆಲಸ ಮಾಡಿದವರು ಈ ಸಮಯದಲ್ಲಿ ದಣಿವಾರಿಸಿಕೊಳ್ಳುತ್ತಿರುತ್ತಾರೆ. ಈ ಸಮಯದಲ್ಲಿ ಇಡೀ ದಿನ ಏನು ನಡೆದಿದೆ ಎಂಬುದನ್ನು ತಿಳಿದುಕೊಳ್ಳಲು ಮೊಬೈಲ್ ನೋಡುತ್ತಾರೆ.
ಇದನ್ನೂ ಓದಿ: ಬಿಡುಗಡೆಯಾಯ್ತು ಕಡಿಮೆ ಬೆಲೆಯಲ್ಲಿ ಭಾರತದ ಮೊದಲ IP69 Realme 14x 5G ಸ್ಮಾರ್ಟ್‌ಫೋನ್; ದರ, ಬ್ಯಾಟರಿ, ಫೀಚರ್ಸ್ ಮಾಹಿತಿ
ವಾರಾಂತ್ಯ : ವಾರಾಂತ್ಯದಲ್ಲಿ ಪೋಸ್ಟ್ ಮಾಡುವುದು ಅತ್ಯಂತ ಲಾಭದಾಯಕವಾಗುತ್ತದೆ. ವೀಕೆಂಡ್ ದಿನಗಳಲ್ಲಿ ಬಹುತೇಕರು ಮೊಬೈಲ್ ನೋಡುತ್ತಲೇ ಸಮಯ ಕಳೆಯುತ್ತಾರೆ. ಶನಿವಾರ ಮಧ್ಯಾಹ್ನ ಮತ್ತು ಭಾನುವಾರ ಬೆಳಗ್ಗೆ ಪೋಸ್ಟ್ ಮಾಡಲು ಉತ್ತಮ ಸಮಯವಾಗಿದೆ.
ಖಾತೆ ವಿಶ್ಲೇಷಣೆ: ಇನ್‌ಸ್ಟಾಗ್ರಾಂ ಬಳಕೆದಾರರರ ಡ್ಯಾಶ್‌ಬೋರ್ಡ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮ್ಮನ್ನು ಎಷ್ಟು ಜನರು ಫಾಲೋ ಮಾಡುತ್ತಾರೆ. ಯಾವ ಸಮಯದಲ್ಲಿ ಹೆಚ್ಚು ಬಳಕೆದಾರರು ನಿಮ್ಮ ಪೋಸ್ಟ್ ವೀಕ್ಷಣೆ ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಬಹುದು. ಇದು ನಿಮಗೆ ಫೋಟೋ, ರೀಲ್ಸ್ ಶೇರ್ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: 365ಕ್ಕೆ 395ರ ಚೆಕ್‌ಮೆಟ್ ಕೊಟ್ಟ BSNL; ಏನಾಗ್ತಿದೆ ಅಂತ ಗೊಂದಲದಲ್ಲಿ ಸಿಲುಕಿದ ಏರ್‌ಟೆಲ್, ಜಿಯೋ