ಫೇಸ್ಬುಕ್ ನಮಗೆ ಎಷ್ಟೆಲ್ಲ ನೀಡಿದೆ? ಹಳೆಯ ಗೆಳೆಯರನ್ನು ಹುಡುಕಿಕೊಡುವುದರಿಂದ ಹಿಡಿದು ಹೊಸ ಗೆಳೆಯರನ್ನು ಆತ್ಮೀಯರನ್ನಾಗಿಸಿದೆ, ಅಡಿಗೆ ಹೇಳಿಕೊಟ್ಟಿದೆ, ಕ್ರಾಫ್ಟ್ ಕಲಿಸಿದೆ, ಬೇಜಾರಾದಾಗೆಲ್ಲ ಬೇಕಾದಷ್ಟು ಫನ್ನಿ ವಿಡಿಯೋಸ್ ತೋರಿಸಿದೆ, ಪೇಜ್ ಕ್ರಿಯೇಟ್ ಮಾಡಿ ಬಿಸ್ನೆಸ್ ಮಾರ್ಕೆಟಿಂಗ್‌ಗೆ ವೇದಿಕೆಯಾಗಿದೆ.... ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ.

ಆದರೆ, ಇದೇ ಫೇಸ್ಬುಕ್ ಕೆಲವೊಮ್ಮೆ ನಾವು ನೆನಪು ಮಾಡಿಕೊಳ್ಳಲು ಇಷ್ಟವಿಲ್ಲದ ನೆನಪುಗಳನ್ನು ನೋಟಿಫಿಕೇಶನ್ ಆಗಿ ಹೊತ್ತು ತರುತ್ತದೆ, ಮೆಸೇಜ್ ಓದಿದ ನೋಟಿಫಿಕೇಶನ್ ತೋರಿಸಿ ಗೆಳೆಯರ ಜೊತೆ ಜಗಳ ತಂದಿಟ್ಟಿದೆ, ಬೇಡವೆಂದರೂ ಗ್ರೂಪ್ ಮೆಸೇಜ್‌ಗಳ ಸುರಿಮಳೆಯನ್ನೇ ಸುರಿಸಿ ಕಿರಿಕಿರಿ ಮಾಡಿದೆ. ಸಾಕೋಸಾಕೆನಿಸುವಷ್ಟು ಕ್ಯಾಂಡಿ ಕ್ರಶ್ ನೋಟಿಫಿಕೇಶನ್ ಕೊಟ್ಟು ಥತ್ತೇರಿಕೆ ಎನಿಸಿದ್ದಿದೆ. ಆದರೆ, ನಿಮ್ಮ ಫೇಸ್ಬುಕ್‌ನಲ್ಲಿ ಏನು ಬೇಕು, ಏನು ಬೇಡ ಎಂದು ನಾವು ನಿರ್ಧರಿಸುವ ಆಯ್ಕೆಯನ್ನೂ ಕೊಟ್ಟಿದೆ ಎಂಬುದನ್ನು ನಾವು ಮರೆತು ಬಿಟ್ಟಿದ್ದೇವೆ. ಫೇಸ್ಬುಕ್‌ನಲ್ಲಿ ಏನು ಬೇಡವೋ ಅವನ್ನೆಲ್ಲ ಇಂದೇ ಟರ್ನ್ ಆಫ್ ಮಾಡಿ. ಶಾಂತವಾದ ಫೇಸ್ಬುಕ್ ಜೊತೆಗೆ ಪ್ರೀತಿಯ ಬಾಂದವ್ಯ ಉಳಿಸಿಕೊಳ್ಳಿ. 

https://kannada.asianetnews.com/life/do-people-really-believe-what-you-say-about-your-love-life-on-facebook-pv3bte

1. ಆನ್ ದಿಸ್ ಡೇ ಮೆಮೋರಿಗಳು

ಕೆಲ ನೆನಪುಗಳು ಬಹಳ ಕಹಿಯಾಗಿರುತ್ತವೆ. ಫೇಸ್‌ಬುಕ್ ಪ್ರತಿ ದಿನ ಆನ್ ದಿಸ್ ಡೇ ಎಂದು ಹಳೆಯ ನೆನಪುಗಳನ್ನು ನೆನಪು ಮಾಡಿಕೊಡುವಾಗ ಈ ಕಹಿ ನೆನಪುಗಳು ಮೇಲೆ ಬಂದು ಇರಿಸುಮುರಿಸಾಗಬಹುದು. ಆದರೆ, ನಿಮಗೆ ಗೊತ್ತಾ ನೀವು ಆನ್ ದಿಸ್ ಡೇ ಮೆಮೋರಿ ಬರದಂತೆ ಸೆಟಿಂಗ್ಸ್ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ, ಇಂಥ ದಿನದ, ಇಂಥವರಿರುವ ಯಾವ ನೆನಪುಗಳನ್ನೂ ಮಾಡಿಕೊಡುವುದು ಬೇಡ ಎಂದು ಪ್ರತ್ಯೇಕ ಸೆಟಿಂಗ್ಸ್‌ಗೆ ಕೂಡಾ ಅವಕಾಶವಿದೆ. ನಿಮ್ಮ ಟೈಮ್‌ಲೈನ್‌ನ ಎಡಭಾಗದಲ್ಲಿ ನ್ಯೂಸ್ ಫೀಡ್ ಇರುವ ಕಾಲಂನಲ್ಲೇ ಕೆಳಗೆ ಹೋದರೆ ಆನ್ ದಿಸ್ ಡೇ ಕಾಣಿಸುತ್ತದೆ. ಆ ಪುಟದ ಮೇಲೆ ಕ್ಲಿಕ್ ಮಾಡಿ, ನೋಟಿಫಿಕೇಶನ್ ಹಾಗೂ ಪ್ರಿಫರೆನ್ಸ್ ಆಯ್ಕೆ ನೋಡಿಕೊಂಡು ಹೇಗೆ ಬೇಕೋ ಹಾಗೆ ಸೆಟ್ ಮಾಡಿ. 

2. ವಿಡಿಯೋ ಆಟೋ ಪ್ಲೇ

ನ್ಯೂಸ್ ಫೀಡ್ ಚೆಕ್ ಮಾಡುವಾಗ ವಿಡಿಯೋಗಳು ತಮ್ಮಷ್ಟಕ್ಕೆ ತಾವು ಪ್ಲೇ ಆಗಲು ತೊಡಗಿ ಹಲವೊಮ್ಮೆ ಕಚೇರಿಯ ನಿಶಬ್ದದಲ್ಲಿ ದೊಡ್ಡ ಸದ್ದು ಮಾಡಿ ಪೇಚಿಗೆ ಸಿಲುಕಿಸುತ್ತವೆ. ಮತ್ತೆ ಹಲವು ಬಾರಿ ನಮಗೆ ಬೇಡದಿದ್ದರೂ ಈ ವಿಡಿಯೋಗಳು ಪ್ಲೇ ಆಗಿ ಗಮನ ಸೆಳೆದು ಟೈಂ ವೇಸ್ಟ್ ಮಾಡಿಸುತ್ತವೆ. ಅಲ್ಲದೆ, ಡೇಟಾ ಕೂಡಾ ವೇಸ್ಟ್ ಆಗುತ್ತದೆ. ಹೀಗೆ ವಿಡಿಯೋಗಳು ನಮ್ಮ ಅನುಮತಿ ಇಲ್ಲದೆ ಪ್ಲೇ ಆಗುವುದು ಬೇಡವೆಂದಿದ್ದಲ್ಲಿ, ಸೆಟಿಂಗ್ಸ್‌ಗೆ ಹೋಗಿ ವಿಡಿಯೋ ಸೆಕ್ಷನ್ ಕ್ಲಿಕ್ ಮಾಡಿ. ಅದರಲ್ಲಿ ಆಟೋ ಪ್ಲೇ ವಿಡಿಯೋಸ್‌ಗೆ ಹೋಗಿ ಟರ್ನ್ ಆಫ್ ಬಟನ್ ಕ್ಲಿಕ್ ಮಾಡಿ.

ವಾಟ್ಸಪ್ ಮತ್ತು ಇನ್ಸ್ಟಾಗ್ರಾಮ್‌ಗೆ ಇನ್ಮುಂದೆ ಹೊಸ ಹೆಸರು!

3. ಲೊಕೇಶನ್ ಶೇರಿಂಗ್

ಫೇಸ್‌ಬುಕ್ ಮೆಸೆಂಜರ್ ಮೂಲಕ ನಾವು ನಮ್ಮ ಲೊಕೇಶನ್ ಶೇರ್ ಮಾಡಬಹುದು. ಮೆಸೆಂಜರ್ ಬಳಸುವ ಗೆಳೆಯರಿಗೆ ನೀವು ಹತ್ತಿರದಲ್ಲೇ ಇದ್ದರೆ ಅದು ತಿಳಿಸುತ್ತದೆ. ಹೀಗೆ ನೀವು ಎಲ್ಲಿದ್ದೀರಿ ಎಂಬುದು ಯಾರಿಗೂ ತಿಳಿಯಬಾರದೆಂದರೆ ಸೆಟಿಂಗ್ಸ್‌ಗೆ ಹೋಗಿ 'ಲೊಕೇಶನ್' ಆಯ್ಕೆಗೆ 'ನೆವರ್' ಎಂದು ಕ್ಲಿಕ್ ಮಾಡಿ. 

4. ಲೈವ್ ನೋಟಿಫಿಕೇಶನ್ಸ್

ಫೇಸ್‌ಬುಕ್ ಲೈವ್ ಬಂದ ಮೇಲೆ ನೀವು ವಿಡಿಯೋಗೆ ಟ್ಯಾಗ್ ಆಗಿದ್ದರೂ ಇಲ್ಲದಿದ್ದರೂ ನೋಟಿಫಿಕೇಶನ್‌ಗಳು ಬಂದು ಬಂದು ಕಿರಿಕಿರಿ ಮಾಡುತ್ತವೆ. ಗೆಳೆಯರಲ್ಲಿ ಯಾರೇ ಲೈವ್ ಬಂದರೂ ಅದರ ನೋಟಿಫಿಕೇಶನ್ ನಿಮಗೆ ಬರುತ್ತದೆ. ನಿಮಗೆ ಇದು ರಗಳೆ ಎನಿಸಿದರೆ ಸೆಟಿಂಗ್ಸ್‌ನಲ್ಲಿ ನೋಟಿಫಿಕೇಶನ್‌ಗೆ ಹೋಗಿ 'ಆನ್ ಫೇಸ್‌ಬುಕ್' ಕ್ಲಿಕ್ ಮಾಡಿ. ಇಲ್ಲಿ ನೀವು ಲೈವ್ ವಿಡಿಯೋಸ್, ಫೋಟೋ ಟ್ಯಾಗ್ಸ್, ಮಾರ್ಕೆಟ್ ಪ್ಲೇಸ್, ಬರ್ತಡೇಗಳು ಮುಂತಾದವನ್ನು ನೋಟಿಫಿಕೇಶನ್ ಬರದಂತೆ ಟರ್ನ್ ಆಫ್ ಮಾಡಬಹುದು.

5. ಗ್ರೂಪ್ ನೋಟಿಫಿಕೇಶನ್ಸ್

ವರ್ಷಗಳ ಹಿಂದೆ ನೀವು ಸೇರಿದ ಗ್ರೂಪ್‌ನೊಂದಿಗೆ ಯಾವ ಸಂಪರ್ಕವೂ ಇಲ್ಲ, ಆ ಕುರಿತು ಆಸಕ್ತಿಯೂ ಇಲ್ಲ. ಆದರೂ ಅದರ ನೋಟಿಫಿಕೇಶನ್‌ಗಳು ಪದೇ ಪದೇ ಬಂದು ಹಿಂಸೆಯಾಗುತ್ತಿದ್ದರೆ ನೋಟಿಫಿಕೇಶನ್‌ನಲ್ಲಿ ಆಲ್ ಪೋಸ್ಟ್, ಹೈಲೈಟ್ಸ್, ಫ್ರೆಂಡ್ಸ್ ಪೋಸ್ಟ್ಸ್ ಅಥವಾ ಪರ್ಸನಲ್ ಫೇವರೇಟ್ ಗೆ ಹೋಗಿ ಆಫ್ ಬಟನ್ ಒತ್ತಿ.

6. ಮೆಸೇಜ್ ರೀಡ್ ನೋಟಿಫಿಕೇಶನ್ಸ್

ಮೆಸೇಜ್ ಓದಿರುತ್ತೀರಿ, ನಿಧಾನವಾಗಿ ಉತ್ತರಿಸೋಣವೆಂದೋ ಅಥವಾ ಉತ್ತರಿಸಲು ಮರೆತೋ ಅಲ್ಲಿಯೇ ಬಿಡುತ್ತೀರಿ. ಇದರಿಂದ ಮೆಸೇಜ್ ನೋಡಿದರೂ ಉತ್ತರಿಸಲಿಲ್ಲವೆಂದು ಅತ್ತ ಕಡೆಯ ಫ್ರೆಂಡ್ ಸಿಟ್ಟು ಮಾಡಿಕೊಂಡು ಜಗಳಕ್ಕೂ ನಾಂದಿಯಾಗಬಹುದು. ನೀವು ಮೆಸೇಜ್ ಓದಿದ್ದೀರೆಂದು ತಿಳಿಯಬಾರದೆಂದರೆ ಪ್ರತಿ ಮೆಸೇಜ್ನ ಬಲಬದಿಯಲ್ಲಿ ಸರ್ಕಲ್ ಒಂದಿರುತ್ತದೆ. ಈ ಸರ್ಕಲ್ ಓಪನ್ ಇದ್ದರೆ ನೀವು ಓದಿದ್ದೀರೆಂದೂ, ಕ್ಲೋಸ್ ಆಗಿದ್ದರೆ ಓದಿಲ್ಲವೆಂದೂ ಸೂಚಿಸುತ್ತದೆ. ಓದಾದ ಬಳಿಕ ಈ ಸರ್ಕಲ್ ಮೇಲೆ ಒಮ್ಮೆ ಕ್ಲಿಕ್ ಮಾಡಿ ಅದನ್ನು ಅನ್‌ರೆಡ್ ನಂತೆ ಕಾಣಿಸುವಂತೆ ಮಾಡಬಹುದು.