Pavan Davuluri: ಮೈಕ್ರೋಸಾಫ್ಟ್‌ ವಿಂಡೋಸ್‌ಗೆ ಭಾರತೀಯ ಪವನ್ ದಾವುಲೂರಿ ಹೊಸ ಬಾಸ್‌!

ಮೈಕ್ರೋಸಾಫ್ಟ್‌ ಸಂಸ್ಥೆಗೆ ಭಾರತೀಯ ಮೂಲದ ಸತ್ಯ ನಾದೆಳ್ಳ ಚೀಫ್‌ ಆಗಿದ್ದರೆ, ಇದರ ಅಡಿಯಲ್ಲಿ ಬರುವ ಮೈಕ್ರೋಸಾಫ್ಟ್‌ ವಿಂಡೋಸ್‌ ಹಾಗೂ ಸರ್ಫೇಸ್‌ಗೆ ಐಐಟಿ ಮದ್ರಾಸ್‌ನ ಪದವೀಧರ ಪವನ್ ದಾವುಲೂರಿ ಅವರನ್ನು ಹೊಸ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

Pavan Davuluri is new Microsoft Windows boss He is IIT Madras graduate san

ನವದೆಹಲಿ (ಮಾ.26): ಐಐಟಿ ಮದ್ರಾಸ್‌ನ ಮಾಜಿ ವಿದ್ಯಾರ್ಥಿ, ಭಾರತೀಯ ಮೂಲದ ಪವನ್‌ ದಾವುಲೂರಿ ಅವರನ್ನು ಮೈಕ್ರೋಸಾಫ್ಟ್‌ ವಿಂಡೋಸ್‌ & ಸರ್ಫೇಸ್‌ನ ಹೊಸ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಇಲ್ಲಿಯವರೆಗೂ ಈ ಸ್ಥಾನ ವಹಿಸಿಕೊಂಡಿದ್ದ ಪಾನೋಸ್‌ ಪನಯ್‌ ಅವರ ನಿರ್ಗಮನದ ಬಳಿಕ ಈ ಹುದ್ದೆ ಖಾಲಿ ಉಳಿದಿದತ್ತು. ಈಗ ಪವನ್‌ ದಾವುಲೂರಿ ಅವರನ್ನು ಈ ಸ್ಥಾನಕ್ಕ ನೇಮಿಸಲಾಗಿದೆ. ಪಾನೋಸ್‌ ಪನಯ್‌ ಕಳೆದ ವರ್ಷ ಅಮೇಜಾನ್‌ನಲ್ಲಿ ಅವಕಾಶ ದೊರೆತ ಕಾರಣಕ್ಕೆ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಾಮಾನ್ಯವಾಗಿ ಮೈಕ್ರೋಸಾಫ್ಟ್‌ ತನ್ನ ವಿಂಡೋಸ್‌ ಹಾಗೂ ಸರ್ಫೇಸ್‌ ಗ್ರೂಪ್‌ಗಳಿಗೆ ಭಿನ್ನ ಮುಖ್ಯಸ್ಥರನ್ನು ನೇಮಕ ಮಾಡುತ್ತದೆ. ಇದಕ್ಕೂ ಮುನ್ನ ಪವನ್‌ ದಾವುಲೂರಿ, ಸರ್ಫೇಸ್‌ನ ಸಿಲಿಕಾನ್‌ ವರ್ಕ್‌ನ ಉಸ್ತುವಾರಿ ವಹಿಸಿಕೊಂಡಿದ್ದರೆ, ಮಿಖಾಯಿಲ್‌ ಪಾರಾಖಿನ್‌, ವಿಂಡೋಸ್‌ ವಿಭಾಗವನ್ನು ನೋಡಿಕೊಳ್ಳುತ್ತಿದ್ದರು. ಆದರೆ, ಪಾರಾಖಿನ್‌ ಹೊಸ ಜವಾಬ್ದಾರಿ ವಹಿಸಿಕೊಳ್ಳಲು ನಿರ್ಧಾರ ಮಾಡಿದ ಕಾರಣ, ದಾವುಲೂರಿ ಈಗ ಮೈಕ್ರೋಸಾಫ್ಟ್‌ನ ವಿಂಡೋಸ್‌ ಹಾಗೂ ಸರ್ಫೇಸ್‌ ಎರಡರ ಜವಾಬ್ದಾರಿಯನ್ನು ಈಗ ಪವನ್‌ ಹೊತ್ತುಕೊಂಡಿದ್ದಾರೆ.

ಪವನ್‌ ದಾವುಲೂರಿಗೆ ಭಾರತದ ನೇರ ಸಂಪರ್ಕವಿದೆ. ಐಐಟಿ ಮದ್ರಾಸ್‌ನಿಂದ ಅವರು ಪದವಿ ಪಡೆದಿದ್ದಾರೆ. ಹೊಸ ಜವಾಬ್ದಾರಿಯೊಂದಿಗೆ ಅವರು ಅಮೆರಿಕದ ಪ್ರಖ್ಯಾತ ಟೆಕ್‌ ಕಂಪನಿಗಳ ಉಸ್ತುವಾರಿ ವಹಿಸಿಕೊಂಡ ಭಾರತೀಯ ಸಾಲಿಗೆ ಸೇರಲಿದ್ದಾರೆ. ಈಗಾಗಲೇ ಸುಂದರ್‌ ಪಿಚೈ ಹಾಗೂ ಸತ್ಯ ನಾದೆಳ್ಳ ಅಮೆರಿಕದ ಪ್ರಮುಖ ಟೆಕ್‌ ಕಂಪನಿಗಳ ನೊಗ ಹೊತ್ತಿದ್ದಾರೆ.

ದಿ ವರ್ಜ್‌ನಿಂದ ಪಡೆದ ಮೈಕ್ರೋಸಾಫ್ಟ್‌ನ ಎಕ್ಸ್‌ಪೀರಿಯನ್ಸ್‌ ಮತ್ತು ಡಿವೈಸ್‌ ವಿಭಾಗದ ಮುಖ್ಯಸ್ಥ ರಾಜೇಶ್ ಝಾ ಅವರ ಆಂತರಿಕ ಪತ್ರದಲ್ಲಿ, ಪರಾಖಿನ್ ಅವರ ನಿರ್ಗಮನವನ್ನು ಘೋಷಣೆ ಮಾಡಲಾಗಿದೆ ಮತ್ತು ದಾವುಲಲೂರಿ ಅವರ ಹೊಸ ಪಾತ್ರವನ್ನು ಘೋಷಣೆ ಮಾಡಲಾಗಿದೆ. 'ಈ ಬದಲಾವಣೆಯ ಭಾಗವಾಗಿ ನಾವು ವಿಂಡೋಸ್‌ ಎಕ್ಸ್‌ಪೀರಿಯನ್ಸ್‌ & ವಿಂಡೋಸ್‌+ಡಿವೈಸಸ್‌ ಟೀಮ್‌ಗಳನ್ನು ಕೋರ್‌ ಪಾರ್ಟ್‌ ಆದ ಎಕ್ಸ್‌ಪೀರಿಯನ್ಸ್‌ + ಡಿವೈಸಸ್‌ (ಇ+ಡಿ) ವಿಭಾಗಕ್ಕೆ ಸೇರಿಸುತ್ತಿದ್ದೇವೆ.  ಈ ಎಐ ಯುಗಕ್ಕೆ ವಿಂಡೋಸ್ ಕ್ಲೈಂಟ್ ಮತ್ತು ಕ್ಲೌಡ್ ಅನ್ನು ವ್ಯಾಪಿಸಿರುವ ಸಿಲಿಕಾನ್, ಸಿಸ್ಟಮ್‌ಗಳು, ಎಕ್ಸ್‌ಪೀರಿಯನ್ಸ್‌ಗಳು ಮತ್ತು ಡಿವೈಸ್‌ಗಳ ನಿರ್ಮಿಸಲು ಸಮಗ್ರ ವಿಧಾನವನ್ನು ತೆಗೆದುಕೊಳ್ಳಲು ಇದು ನಮಗೆ ಅನುವು ಮಾಡಿಕೊಡುತ್ತದೆ. ಪವನ್ ದಾವುಲೂರಿ ಈ ತಂಡವನ್ನು ಮುನ್ನಡೆಸುತ್ತಾರೆ ಮತ್ತು ನನಗೆ ವರದಿ ಮಾಡುವುದನ್ನು ಮುಂದುವರಿಸುತ್ತಾರೆ. ಶಿಲ್ಪಾ ರಂಗನಾಥನ್ ಮತ್ತು ಜೆಫ್ ಜಾನ್ಸನ್ ಮತ್ತು ಅವರ ತಂಡಗಳು ನೇರವಾಗಿ ಪವನ್‌ಗೆ ವರದಿ ಮಾಡುತ್ತವೆ. ವಿಂಡೋಸ್ ತಂಡವು ಎಐ, ಸಿಲಿಕಾನ್ ಮತ್ತು ಎಕ್ಸ್‌ಪೀರಿಯನ್ಸ್‌ಗಳ ಕುರಿತು ಮೈಕ್ರೋಸಾಫ್ಟ್ ಎಐ ತಂಡದೊಂದಿಗೆ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ" ಎಂದು ಅವರು ಬರೆದಿದ್ದಾರೆ.

ಹನಿಮೂನ್‌ನ 'ಹಾಟ್‌' ಫೋಟೋ ಶೇರ್‌ ಮಾಡಿಕೊಂಡ ಕಿರುತೆರೆ ನಟಿ!

ದಾವಲೂರಿ ಅವರು ಮೈಕ್ರೋಸಾಫ್ಟ್‌ನೊಂದಿಗೆ 23 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದಲ್ಲಿ ಎಂಎಸ್‌ನೊಂದಿಗೆ ಅವರ ಸ್ನಾತಕೋತ್ತರ ಪದವಿಯ ನಂತರ, ದಾವುಲೂರಿ ಅವರು ಮೈಕ್ರೋಸಾಫ್ಟ್‌ನ ರಿಯಾಲಬಲಿಟಿ ಕಾಂಪೋನೆಂಟ್‌ ಮ್ಯಾನೇಜರ್‌ ಆಗಿ ಸೇರಿಕೊಂಡಿದ್ದರು. ಮೆಮೊದಲ್ಲಿ, ರಾಜೇಶ್ ಝಾ ಅವರು ಮೈಕ್ರೋಸಾಫ್ಟ್ ಎಐ ಸಂಸ್ಥೆಯ ಸ್ಥಾಪನೆಯ ನಂತರ ವಿಂಡೋಸ್ ಮತ್ತು ವೆಬ್ ಅನುಭವಗಳ (WWE) ತಂಡದೊಳಗಿನ ಸಾಂಸ್ಥಿಕ ಬದಲಾವಣೆಗಳ ಬಗ್ಗೆ ತಂಡಕ್ಕೆ ತಿಳಿಸಿದರು. ಮಿಖಾಯಿಲ್ ಪರಾಖಿನ್ ಅವರು ಕೆವಿನ್ ಸ್ಕಾಟ್ ಅವರ ಮೇಲ್ವಿಚಾರಣೆಯಲ್ಲಿ ಹೊಸ ಪಾತ್ರಗಳನ್ನು ಅನ್ವೇಷಿಸುತ್ತಾರೆ, WWE ನಿಂದ ಪರಿವರ್ತನೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

'ದ್ರೋಹ ಎಸೆಗಿದ್ದಾಳೆ..' ಮದುವೆಗೂ ಒಂದು ವಾರ ಮುನ್ನ ಇಂಡೋ-ಪಾಕ್‌ ಲೆಸ್ಬಿಯನ್‌ ಜೋಡಿ ಬ್ರೇಕ್‌ಅಪ್‌!

Latest Videos
Follow Us:
Download App:
  • android
  • ios