Asianet Suvarna News Asianet Suvarna News

5 ಟ್ರಿಲಿಯನ್ ಡಾಲರ್ ಆರ್ಥಿಕ ಶಕ್ತಿಯಾಗಲು ಭಾರತಕ್ಕೆ ಡಿಜಿಟಲ್ ಕ್ಷೇತ್ರದಲ್ಲಿ ಅವಕಾಶ!

* ಡಿಜಿಟಲ್ ಕ್ಷೇತ್ರದಲ್ಲಿ ಸಾಧನೆ ಮಾಡಲು ಭಾರತಕ್ಕೆ ಉತ್ತಮ ಅವಕಾಶ

* 5 ಟ್ರಿಲಿಯನ್ ಡಾಲರ್ ಆರ್ಥಿಕ ಶಕ್ತಿಯಾಗಲು ಭಾರತಕ್ಕೆ ಡಿಜಿಟಲ್ ಕ್ಷೇತ್ರದಲ್ಲಿ ಚಾನ್ಸ್

* ವಿಶ್ವದ ಮೂರು ಅತಿದೊಡ್ಡ ಸಾರ್ವಜನಿಕ ಡಿಜಿಟಲ್ ಪ್ಲಾಟ್‌ಫಾರ್ಮ್‌ ನಿರ್ಮಿಸಿದೆ ಭಾರತ

Open digital ecosystems crucial to India becoming a 5 trillion dollar economy Nasscom pod
Author
Bangalore, First Published Aug 24, 2021, 6:22 PM IST

ನವದೆಹಹಲಿ(ಆ.24): ಭಾರತದಲ್ಲಿ ಬೆಳೆಯುತ್ತಿರುವ ಓಪನ್ ಡಿಜಿಟಲ್ ವ್ಯವಸ್ಥೆಯು 2025 ರ ವೇಳೆಗೆ ದೇಶ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ನಿಟ್ಟಿನಲ್ಲಿ ಪ್ರಮುಖ ಮುಖ ಪಾತ್ರ ವಹಿಸಲಿದೆ ಎಂದು Nasscom ತನ್ನ 'ಡಿಜಿಟಲ್ ಇಂಡಿಯಾ: ದಿ ಪ್ಲಾಟ್‌ಫಾರ್ಮೈಸೇಶನ್ ಪ್ಲೇ' ವರದಿಯಲ್ಲಿ ತಿಳಿಸಿದೆ.

"ಸಾರ್ವಜನಿಕ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಈ ಗುರಿ ಸಾಧಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಅತೀ ಹೆಚ್ಚು ಜನಸಂಖ್ಯೆಗೆ ಕಡಿಮೆ ವೆಚ್ಚದಲ್ಲಿ ಸರ್ವಿಸ್‌ ಡೆಲಿವರಿಗೆ ಹೊಸ ಮಾರ್ಗವನ್ನು ಸೂಚಿಸುವ ಮೂಲಕಈ ಗುರಿ ಸಾಧಿಸಬಹುದು" ಎಂದೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಸರ್ಕಾರದ ಡಿಜಿಟಲ್‌ ಲೈಬ್ರರಿಗೆ 1 ಕೋಟಿ ಓದುಗರು!

ಓಪನ್ ಡಿಜಿಟಲ್ ಇಕೋ ಸಿಸ್ಟಂ ಭಾರತಕ್ಕೆ 700 ಶತಕೋಟಿ ಡಾಲರ್ ಗಳಿಸುವ ಅವಕಾಶವಾಗಿದ್ದು ಇದರಲ್ಲಿ 500 ಬಿಲಿಯನ್ ಡಾಲರ್-ಭಾರತದ ಜಿಡಿಪಿಯ 5.5%-ಮತ್ತು ದೇಶಕ್ಕೆ 200 ಶತಕೋಟಿ ಉಳಿತಾಯದ ಉತ್ಪಾದನೆಯನ್ನು ಒಳಗೊಂಡಿದೆ ಎಂಬುವುದು ಉಲ್ಲೇಖನೀಯ.

ಭಾರತವು ವಿಶ್ವದ ಮೂರು ಅತಿದೊಡ್ಡ ಸಾರ್ವಜನಿಕ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಿದೆ - ಆಧಾರ್, ಅತಿದೊಡ್ಡ ವಿಭಿನ್ನ ಡಿಜಿಟಲ್ ಐಡೆಂಟಿಟಿ ಪ್ಲಾಟ್‌ಫಾರಂ; UPI- ಅತಿದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆ; ಮತ್ತು CoWIN, ಅತಿದೊಡ್ಡ ವ್ಯಾಕ್ಸಿನೇಷನ್ ಪ್ಲಾಟ್‌ಫಾರಂ.

e-RUPIಗೆ ಮೋದಿ ಚಾಲನೆ; ಡಿಜಿಟಲ್ ಇಂಡಿಯಾ ಕ್ರಾಂತಿಗೆ ವಿಶ್ವವೇ ಬೆರಗು!

ಡಿಜಿಟಲೀಕರಣದ ಸಮಗ್ರ ವಿಧಾನವನ್ನು ಅನುಸರಿಸಿ ಭಾರತವು ಸಾರ್ವಜನಿಕ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ವಲಯಗಳಾಗಿ ನಿರ್ಮಿಸಲು ಸಜ್ಜಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜಾಗತಿಕವಾಗಿ ಈ ಭಾರತೀಯ ವೇದಿಕೆಗಳ ವಿಸ್ತರಣೆ ಮತ್ತು ಅಳವಡಿಕೆ ಮುಂದಿನ ಹಂತದ ಬೆಳವಣಿಗೆಗೆ ಕಾರಣವಾಗುತ್ತದೆ. ಇತರ ದೇಶಗಳಿಗೆ BHIM UPI ವ್ಯವಸ್ಥೆ ವಿಸ್ತರಣೆ ಮತ್ತು CoWIN ವೇದಿಕೆಯನ್ನು ಇತರ ದೇಶಗಳಿಗೆ ಲಭ್ಯವಾಗುವಂತೆ ಮಾಡುವ ಮೂಲಕ ಭಾರತೀಯ ಪ್ಲಾಟ್‌ಫಾರಂಗಳು ಜಾಗತಿಕವಾಗಿ ಗುರುತಿಸಿಕೊಳ್ಳಬಹುದಾಗಿದೆ. 

Follow Us:
Download App:
  • android
  • ios