Asianet Suvarna News Asianet Suvarna News

ಎಲ್ಲಾ 'ಮಂಗಳ'ವಾಗಲಿ: ಮಾನವ ಅಂಗಾರಕನ ಮುತ್ತಲಿದ್ದಾನೆ 2035ರಲ್ಲಿ!

2035ಕ್ಕೆ ಮಂಗಳ ಗ್ರಹಕ್ಕೆ ಕಾಲಿಡಲಿದ್ದಾನೆ ಮಾನವ| ಮಾನವಸಹಿತ ಮಂಗಳಯಾನಕ್ಕೆ ಸಿದ್ಧತೆ ನಡೆಸಿದೆ ನಾಸಾ|  2024ರಲ್ಲಿ ನಾಸಾ ಮತ್ತೆ ಚಂದ್ರನಲ್ಲಿಗೆ ಮಾನವರನ್ನು ಕಳುಹಿಸಲಿರುವ ನಾಸಾ| ಯೋಜನೆಯ ಫಲಶೃತಿ ಅವಲೋಕಿಸಿ ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸಲಿರುವ ನಾಸಾ| ಇಂಟರನ್ಯಾಶನಲ್ ಆಸ್ಟ್ರೋನಾಟಿಕಲ್ ಕಾಂಗ್ರೆಸ್‌ನಲ್ಲಿ ಜಿಮ್ ಬಿಡನ್‌ಸ್ಟೈನ್ ಮಾಹಿತಿ| 

NASA Plans To Send Humans on Mars by 2035
Author
Bengaluru, First Published Oct 23, 2019, 6:51 PM IST

ವಾಷಿಂಗ್ಟನ್(ಅ.23): ಅಂದುಕೊಂಡ ಗುರಿ ಸಾಧಿಸುವುದು ಮಾನವನ ಗುಣ. ಅದರಲ್ಲೂ ಆಧುನಿಕ ಮಾನವ ತನ್ನ ಬುದ್ದಿಮತ್ತೆಯಿಂದಲೇ ಬ್ರಹ್ಮಾಂಡ ಸೀಳುವ ಛಾತಿಯುಳ್ಳವನಾಗಿದ್ದಾನೆ. 

ಮಂಗಳನಲ್ಲಿತ್ತು ಉಪ್ಪು ಸರೋವರ: ಅಂಗಾರಕ ಅದಿನ್ನೆಷ್ಟು ಕುತೂಹಲಗಳ ಆಗರ?

ಅದರಂತೆ ಮಂಗಳ ಗ್ರಹದ ಇಂಚಿಂಚು ನೆಲವನ್ನು ಕೆದಕುತ್ತಿರುವ ನಾಸಾ, 2035ರಲ್ಲಿ ಅಂಗಾರಕನ ಅಂಗಳಕ್ಕೆ ಮಾನವನನ್ನು ಕಳುಹಿಸುವ ಇರಾದೆ ಹೊಂದಿದೆ. ಈ ಕುರಿತು ನಾಸಾ ಈಗಾಗಲೇ ಕಾರ್ಯಪ್ರವೃತ್ತವಾಗಿದೆ.

ಮಂಗಳನ ಅಂಗಳದಲ್ಲಿ ಜೀವಿಗಳಿವೆ: ನಾಸಾ ವಿಜ್ಞಾನಿಯ ಅಚ್ಚರಿಯ ಘೋಷಣೆ!

2024ರಲ್ಲಿ ನಾಸಾ ಮತ್ತೆ ಚಂದ್ರನಲ್ಲಿಗೆ ಮಾನವರನ್ನು ಕಳುಹಿಸಲಿದ್ದು, ಈ ಯೋಜನೆಯ ಫಲಶೃತಿ ಅವಲೋಕಿಸಿ ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸುವ ಯೋಜನೆ ರೂಪಿಸಲಿದೆ ನಾಸಾ.

ಅಂಗಾರಕನಲ್ಲಿ ಒಂದಲ್ಲ, ಎರಡು ಸೂರ್ಯಗ್ರಹಣ: ವಿಡಿಯೋ!

 ಇಂಟರನ್ಯಾಶನಲ್ ಆಸ್ಟ್ರೋನಾಟಿಕಲ್ ಕಾಂಗ್ರೆಸ್‌ನಲ್ಲಿ ಈ ಕುರಿತು ಮಾಹಿತಿ ನೀಡಿರುವ ಜಿಮ್ ಬಿಡನ್‌ಸ್ಟೈನ್, ಈ ಮೊದಲು 2028ರಲ್ಲಿ ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸುವ ಚಿಂತನೆ ಇತ್ತಾದರೂ, ತಾಂತ್ರಿಕ ಅಡಚಣೆಗಳನ್ನು ನಿವಾರಿಸಲು ಇನ್ನೂ ಕೆಲವು ಸಮಯ ಹಿಡಿಯಲಿದೆ ಎಂದಿದ್ದಾರೆ.

ಮಂಗಳ ಹೀಗೆ ಶಬ್ಧ ಮಾಡ್ತಾನೆ: ಕಳೆದು ಹೋಗ್ತಿರಿ ಕೇಳ್ತಾನೆ!

ಈ ಹಿನ್ನೆಲೆಯಲ್ಲಿ 2035ರಲ್ಲಿ ನಾಸಾ ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸಲಿದ್ದು, ಯೋಜನೆಗೆ ಪೂರಕ ತಯಾರಿ ಭರದಿಂದ ಸಾಗಿದೆ ಎಂದು ಜಿಮ್ ಬಿಡನ್‌ಸ್ಟೈನ್ ಸ್ಪಷ್ಟಪಡಿಸಿದ್ದಾರೆ.

Follow Us:
Download App:
  • android
  • ios