ಆ್ಯಪ್‌ ಒಂದು ಪ್ರಯೋಜನ ನೂರು!

ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸುವುದರ ಜೊತೆಗೆ ದಾನದ ಮಹತ್ವ ಸಾರುವ ಆ್ಯಪ್‌ ಇದು! ಆರ್ಟಿಫಿಶಿಯಲ್‌ ಇಂಟಲೆಜೆನ್ಸಿಯೊಂದಿಗೆ ಆ್ಯಪ್‌ ಕೆಲಸ

Bengaluru Student Develops Organ Secure App For Medical Emergency

ಕಷ್ಟ ಬಂದಾಗ ಜೀವ ಉಳಿಸುವವರು ದೇವರಾಗಿ ಕಾಣ್ತಾರಂತೆ. ಇದು ಆರೋಗ್ಯಕ್ಕೆ ಹೋಲಿಸಿದಾಗ ಕಷ್ಟ. ನಮ್ಮವರನ್ನು ಉಳಿಸಿಕೊಳ್ಳಲು ಆಸ್ಪತ್ರೆಗೆ ಅಲೆಯುವುದು ಹೀಗೆ ನಾನಾ ಕಾರಣ. ಇಂತಹ ಸಮಸ್ಯೆಗಳನ್ನು ಹೋಗಲಾಡಿಸಲೆಂದೇ ಇಂಜಿನಿಯರಿಂಗ್‌ ವಿದ್ಯಾರ್ಥಿ ಪ್ರತೀಕ್‌ ಮೊಹಪತ್ರ, ಆರ್ಟಿಫಿಶಿಯಲ್‌ ಇಂಟಲಿಜೆನ್ಸಿ ಬಳಿಸಿಕೊಂಡು ಆರ್ಗನ್‌ ಸೆಕ್ಯುರಿಟಿ ಕಾನ್ಸೆಪ್ಟ್‌ ಮೇಲೆ ಆ್ಯಪ್‌ ಅಭಿವೃದ್ಧಿ ಪಡಿಸಿದ್ದಾರೆ. ಈ ಪ್ರಯೋಗಕ್ಕೆ ಮೈಕ್ರೋಸಾಫ್ಟ್‌ ಕಂಪನಿಯು ‘ಎಐ ಫಾರ್‌ ಗುಡ್‌ ಐಡಿಯಾ ಚಾಲೆಂಜ್‌’ ಪ್ರಶಸ್ತಿ ಲಭಿಸಿದೆ.

ಮಧ್ಯರಾತ್ರಿ ಡೆಂಗ್ಯೂ ರೋಗಿಯ ಪ್ಲೇಟ್‌ಲೆಟ್‌ 10 ಸಾವಿರಕ್ಕೆ ಇಳಿಯುತ್ತೆ ಅಂತಿಟ್ಟುಕೊಳ್ಳೋಣ. ಆ ಹೊತ್ತಿಗೆ ಪ್ಲೇಟ್‌ಲೆಟ್‌ ದಾನಿಗಳನ್ನು ಎಲ್ಲಿಂದ ಹುಡುಕೋದು, ಅಂಥ ಸಂಕಷ್ಟದ ಹೊತ್ತಿನಲ್ಲಿ ನಿಮ್ಮ ಸಹಾಯಕ್ಕೆ ಬರುವಂಥ ಆ್ಯಪ್‌ ಒಂದನ್ನು ಬೆಂಗಳೂರಿನ ಆರ್‌ವಿ ಕಾಲೇಜಿನ ವಿದ್ಯಾರ್ಥಿ ಅಭಿವೃದ್ಧಿ ಪಡಿಸುತ್ತಿದ್ದಾರೆ. ಇನ್ನು ಆರು ತಿಂಗಳಲ್ಲಿ ಈ ಆ್ಯಪ್‌ ಕಾರ್ಯನಿರ್ವಹಣೆ ಆರಂಭಿಸಲಿದೆ.

ಒಡಿಶಾ ಮೂಲದ ಬೆಂಗಳೂರಿನ ತರುಣ ಪ್ರತೀಕ್‌ ಮಹೋಪಾತ್ರ ಎಂಬ 21 ವರ್ಷದ ಕಂಪ್ಯೂಟರ್‌ ಸೈನ್ಸ್‌ ವಿದ್ಯಾರ್ಥಿ, ಆರ್ಗನ್‌ ಸೆಕ್ಯುರಿಟಿ ವಿಷಯದ ಆಧಾರದ ಮೇಲೆ ಆ್ಯಪ್‌ ಅಭಿವೃದ್ಧಿ ಪಡಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಮೈಕ್ರೋಸಾಫ್ಟ್‌ ಕಂಪನಿಯು ವೈದ್ಯಕೀಯ ಕ್ಷೇತ್ರದಲ್ಲಿ ರೋಗಿಗೆ ತುರ್ತು ಸಂದರ್ಭ, ಸಮಸ್ಯೆ ಎದುರಾದಾಗ ಎಲ್ಲೆಂದರಲ್ಲಿ ಅಲಿಯುವುದು ಇಂತಹ ಕಷ್ಟಗಳನ್ನು ತಪ್ಪಿಸಲು ಮುಂದಾಯಿತು. ಅದಕ್ಕೆಂದೇ ಆರ್ಟಿಫಿಶಿಯಲ್‌ ಇಂಟಲಿಜೆನ್ಸಿ ಬಳಸಿ ಆ್ಯಪ್‌ ಅಭಿವದ್ಧಿಗೆ ಕರೆಕೊಟ್ಟಿತು. ಈ ಸ್ಪರ್ಧೆಯಲ್ಲಿ ಪ್ರತೀಕ್‌ ಅವರ ಆರ್ಗನ್‌ ಸೆಕ್ಯೂರಿಟಿ ಕಾನ್ಸೆಪ್ಟ್‌ಗಾಗಿ ‘ಎಐ ಫಾರ್‌ ಗುಡ್‌ ಐಡಿಯಾ ಚಾಲೆಂಜ್‌’ ಪ್ರಶಸ್ತಿ ನೀಡಿದೆ.

ಇದನ್ನೂ ಓದಿ ಶೀಘ್ರದಲ್ಲೇ WhatsApp ಹೊಸ ನಿಯಮ; ಇಂಥವರ ಅಕೌಂಟ್‌ ನಿಷೇಧ!

ಕಾನ್ಸೆಪ್ಟ್‌ ಹುಟ್ಟಿದ್ದು ಹೀಗೆ:

ಒಮ್ಮೆ ಅಮೇಜಾನ್‌ ಪ್ರೈಮ್‌ನಲ್ಲಿ ಅಂಗಾಂಗಗಳ ಸಂರಕ್ಷಣೆ ಬಗ್ಗೆ ವೆಬ್‌ ಸೀರಿಸ್‌ ನೋಡುವಾಗ ಈ ಕಾನ್ಸೆಪ್ಟ್‌ ಹುಟ್ಟಿತು. ನಂತರ ಈ ಕುರಿತು ಯೂಟ್ಯೂಬ್‌, ಗೂಗಲ್‌ನಲ್ಲಿ ಮಾಹಿತಿ ಕಲೆ ಹಾಕುವುದರ ಜೊತೆಗೆ ಬೆಂಗಳೂರಿನ ಪ್ರಸಿದ್ಧ ವೈದ್ಯರೊಂದಿಗೆ ಚರ್ಚಿಸಿ ಮಾಹಿತಿ ಪಡೆದಿದ್ದಾರೆ. ಮಾಡೆಲ್‌ ಹಾಗೂ ಪ್ರೆಸೆಂಟೇಷನ್‌ನೊಂದಿಗೆ ವೈದ್ಯರ ಮುಂದಿಟ್ಟಾಗ ಯಶಸ್ವಿಯಾಗಿದ್ದು, ಇನ್ನಷ್ಟುಅಭಿವೃದ್ಧಿಗೆ ಅವರ ಸಲಹೆ ಸಹಕಾರ ಪಡೆಯುತ್ತಿದ್ದಾರೆ. ವೈದ್ಯರ ನಂತರ ಮೈಕ್ರೋಸಾಫ್ಟ್‌ ಕಂಪನಿಯ ಎದುರು ಪ್ರಸ್ತುತ ಪಡಿಸಿ ಯಶಸ್ವಿಯಾಗಿದ್ದಾರೆ.

ಆ್ಯಪ್‌ನಲ್ಲಿ ದೇಹದ ಭಾಗಗಳ ಪರಿಚಯ:

ಆ್ಯಪ್‌ ತೆರೆದಾಗ ದೇಹದ ಎಲ್ಲಾ ಅಂಗಾಂಗಳ ಬಗ್ಗೆ, ದಾನದ ಬಗ್ಗೆ, ನಿಯಮಗಳ ಕುರಿತು ಬಳಕೆದಾರರಿಗೆ ಮೊದಲು ಅರಿವು ಮೂಡಿಸುತ್ತೆ. ಇದರಲ್ಲಿ ಹೃದಯ, ಕಿಡ್ನಿ, ಕರುಳು, ಕಣ್ಣು, ಮಿದುಳು, ರಕ್ತ ಹಾಗೂ ರಕ್ತದ ಗುಂಪು, ಪ್ಲೇಟ್‌ಲೆಟ್ಸ್‌ ಹೀಗೆ ಎಲ್ಲಾ ಮಾಹಿತಿ ನೀಡುತ್ತೆ. ನಂತರ ಡೋನರ್‌(ದಾನ) ವಿಭಾಗದಲ್ಲಿ ಮೆಡಿಕಲ್‌ ಡೀಟೈಲ್ಸ್‌ ನೀಡಿದರಾಯ್ತು. ತುರ್ತು ಅಗತ್ಯ ಇರುವವರಿಗೆ ಮ್ಯಾಚ್‌ ಆಗುವಂತಿದ್ದರೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಮೂಲಕ ತಂತಾನೆ ಸಂಪರ್ಕಿಸುತ್ತದೆ. ಅಷ್ಟೇ ಅಲ್ಲ ದಾನಿಯು ಮದ್ಯವ್ಯಸನಿಯೇ, ಧೂಮಪಾನಿಯೇ, ಹಿಮೋಗ್ಲೋಬಿನ್‌ ಹೀಗೆ ಇದೇ ಅಧ್ಯಯನ ಮಾಡುತ್ತೆ. ಈ ಆ್ಯಪ್‌ ಮೂಲಕ ದೇಹದಾನವನ್ನು ಮಾಡಬಹುದಾಗಿದೆ. ದೇಹದಾನದಿಂದ ಮೆಡಿಕಲ್‌ ವಿದ್ಯಾರ್ಥಿಗಳ ಅಧ್ಯಯನಕ್ಕೆ ಹಾಗೂ ಅನೇಕ ಕಾರಣಗಳಿಗೆ ನೆರವಾಗುತ್ತದೆ ಎನ್ನುತ್ತಾರೆ ಪ್ರತೀಕ್‌.

ಇದನ್ನೂ ಓದಿ | ಫೇಸ್‌ಬುಕ್‌ನಲ್ಲಿ ಈ ಸೆಟಿಂಗ್ಸ್ ಈಗಲೇ ಬದಲಿಸಿ!

ಆರ್ಟಿಫಿಶಿಯಲ್‌ ಇಂಟಲೆಜೆನ್ಸಿಯೊಂದಿಗೆ ಆ್ಯಪ್‌ ಕೆಲಸ:

ಈ ಆ್ಯಪ್‌ನಲ್ಲಿ ಪ್ರಮುಖವಾಗಿ ದಾನಿಗಳು ಹಾಗೂ ರಿಸಿವರ್‌(ಪಡೆಯುವವರು) ನಡುವೆ ನೇರ ಸಂಪರ್ಕವಿರುತ್ತೆ. ದಾನಿಗಳು ತಮ್ಮ ಮೆಡಿಕಲ್‌ ಡಿಟೈಲ್ಸ್‌ನ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಹಾಗೆ ರಿಸಿವರ್‌ ವಿಭಾಗದಲ್ಲಿ ಸೇವೆಯನ್ನು ಪಡೆಯುವ ರೋಗಿಯ ಸಂಪೂರ್ಣ ಮೆಡಿಕಲ್‌ ಡೀಟೈಲ್ಸ್‌ ನೀಡಬೇಕು. ಈ ಮೂಲಕ ತುರ್ತು ಸಂದರ್ಭದಲ್ಲಿ ರೋಗಿ ಬೇಕಾದ್ದನ್ನು ದಾನಿಗಳ ವಿಭಾಗದಲ್ಲಿ ಇದ್ದರೆ ನೇರವಾಗಿ ಸಂಪರ್ಕಿಸುತ್ತದೆ. ಇದೆಲ್ಲಾ ಆಗುವುದು ಆರ್ಟಿಫಿಶಿಯಲ್‌ ಇಂಟಲಿಜೆನ್ಸಿ ಮೂಲಕ. ಉದಾಹರಣೆಗೆ ರೋಗಿಗೆ ತುರ್ತಾಗಿ ರಕ್ತದ ಅಗತ್ಯವಿರುತ್ತದೆ. ಆಗ ಆ್ಯಪ್‌ನ ರಿಸಿವರ್‌ ವಿಭಾಗದಲ್ಲಿ ರೋಗಿಯ ಸಂಪೂರ್ಣ ಮಾಹಿತಿ ನೀಡಿ ಸಚ್‌ರ್‍ಕೊಟ್ಟರೆ, ದಾನಿಗಳ ವಿಭಾಗದಲ್ಲಿ ಆ ರಕ್ತದ ಗುಂಪಿನಲ್ಲಿ ಮ್ಯಾಚ್‌ ಆಗುವವರನ್ನು ನೇರವಾಗಿ ಸಂಪರ್ಕಿಸುತ್ತದೆ. ಸಾಮಾನ್ಯವಾಗಿ ವೈದ್ಯರು ರಕ್ತ ದಾನ ಮಾಡಲು ಬಂದವರನ್ನು ಧೂಮಪಾನ ಮಾಡಿದ್ದರೆಯೇ, ಮದ್ಯವೆಸನಿಯಾಗಿದ್ದರೆಯೇ ಎಂದು ಪರೀಕ್ಷಿಸುತ್ತಾರೆ. ಹಾಗೆ ಡಾಕ್ಟರ್‌ ಮಾಡುವ ಕೆಲಸವನ್ನು ಆರ್ಟಿಫಿಶಿಯಲ್‌ ಇಂಟಲಿಜೆನ್ಸಿ ಮೂಲಕ ಈ ಆ್ಯಪ್‌ ಮಾಹಿತಿ ನೀಡುತ್ತೆ

ಔಷಧಗಳ ಮೇಲೂ ಕಣ್ಣು

ಮೆಡಿಕಲ್‌ ಶಾಪ್‌ನಲ್ಲಿ ಸಿಗುವ ಎಲ್ಲಾ ಔಷಧಗಳು ಒರಿಜಿನಲ್‌ ಹೌದೋ ಅಲ್ಲವೋ ಎನ್ನುವುದಕ್ಕೂ ಪ್ರತೀಕ್‌ ಡ್ರಗ್‌ ಅಥೆಂಟಿಕೇಷನ್‌ ಆ್ಯಪ್‌ ಅನ್ನೂ ಅಭಿವೃದ್ಧಿ ಪಡಿಸಿದ್ದಾರೆ. ಅಂದ್ರೆ ತಲೆನೋವಿನ ಮಾತ್ರೆ ತೆಗೆದುಕೊಳ್ಳುವ ಮುನ್ನ ಆ ಮಾತ್ರೆ ಎಷ್ಟುಸತ್ಯ, ದೇಹಕ್ಕೆ ಹೊಂದುತ್ತದೆಯೇ, ಸೈಡ್‌ ಎಫೆಕ್ಟ್, ಅಡ್ಡ ಪರಿಣಾಮ, ಡೋಸೇಜ್‌ ಎಲ್ಲವನ್ನೂ ತಿಳಿಸುತ್ತದೆ. ಪ್ರತೀಕ್‌ ಅವರ ಈ ಸಂಶೋಧನೆಗೆ ಡ್ರಗ್‌ ಸೇಫ್‌ ವಿಷಯದಲ್ಲಿ ಬಿಗ್‌ ಡೆಟಾ ಅವಾರ್ಡ್‌ ಅಟ್‌ ಇಮೇಜಿನ್‌ ಕಪ್‌ 2018 ಗೌರವ ಲಭಿಸಿದೆ.

‘ಒಮ್ಮೆ ಮೂತ್ರಪಿಂಡ ಕಸಿಗೆ ರೋಗಿಗೆ ಏನಿಲ್ಲವೆಂದರು 5ರಿಂದ 20 ಲಕ್ಷ ರುಪಾಯಿ ಬೇಕಾಗುತ್ತದೆ. ಇಷ್ಟೊಂದು ಹಣ ಹೊಂದಿಸಲು ಸಾಮಾನ್ಯರಿಗೆ ಕಷ್ಟವಾಗುತ್ತದೆ. ಇದರಿಂದಾಗಿ ಪ್ರತಿ ದಿನ ಶೇ. 25 ರಷ್ಟುಜನ ಅಂಗಾಂಗಳ ತೊಂದರೆಯಿಂದ ಮೃತಪಡುತ್ತಿದ್ದಾರೆ. ಈ ಆರ್ಗನ್‌ ಸೆಕ್ಯೂರ್‌ ಆ್ಯಪ್‌ನಿಂದ ಯಾವ ಮಧ್ಯವರ್ತಿಯ ಸಹಕಾರವಿಲ್ಲದೆ ಕೇವಲ ಆರ್ಟಿಫಿಶಿಯಲ್‌ ಇಂಟಲಿಜೆನ್ಸಿ ಮೂಲಕ ಸೂಕ್ತ ಡೋನರ್‌ ಅನ್ನು ನೇರವಾಗಿ ಸಂಪರ್ಕೀಸಿ ಉಚಿತವಾಗಿಯೇ ಅಗತ್ಯತೆಯನ್ನು ತಕ್ಷಣ ಪಡೆಯಬಹುದು. ಜೊತೆಗೆ ಒಬ್ಬ ದಾನಿಯಿಂದ ಸುಮಾರು ಎಂಟು ಜನರಿಗೆ ಸಿಗುತ್ತದೆ. ಈ ಆ್ಯಪ್‌ ಅನ್ನು ಮತ್ತಷ್ಟುಅಭಿವೃದ್ಧಿಪಡಿಸಲಾಗುತ್ತಿದೆ. ನಂತರ ಕರ್ನಾಟಕದಲ್ಲಿ ಮೊದಲು ಇದನ್ನು ಜಾರಿಗೆ ತಂದು ನಂತರ ದೇಶ ಹಾಗೂ ವಿಶ್ವಾದ್ಯಂತ ಜಾರಿಗೆ ತರಲಾಗುತ್ತದೆ.’

- ಪ್ರತೀಕ್‌ ಮಹೋಪಾತ್ರ, ಇಂಜಿನಿಯರಿಂಗ್‌ ವಿದ್ಯಾರ್ಥಿ

Latest Videos
Follow Us:
Download App:
  • android
  • ios