ಅಕ್ಟೋಬರ್ 13ಕ್ಕೆ ಐಫೋನ್ 12 ಸೀರಿಸ್ ಫೋನ್ ಬಿಡುಗಡೆ?
ಸ್ಮಾರ್ಟ್‌ಫೋನ್ ತಯಾರಿಕಾ ಆಪಲ್ ಕಂಪನಿ 50 ಸಾವಿರ ರೂ.ನಿಂದ 80 ಸಾವಿರ ರೂ.ವರೆಗಿನ ನಾಲ್ಕು ನಮೂನೆಯ ಐಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿಲಿದೆ.
ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿಯಿಂದ ಇಡೀ ಜಗತ್ತು ನಿಧಾನವಾಗಿ ತನ್ನ ಮೊದಲಿನ ಸ್ಥಿತಿಗೆ ಮರಳುವ ಎಲ್ಲ ಲಕ್ಷಣಗಳನ್ನು ತೋರುತ್ತಿದೆ. ಯಾಕೆಂದರೆ, ಸ್ಮಾರ್ಟ್‌ಫೋನ್‌ಗಳಲ್ಲಿ ಕ್ರಾಂತಿಯನ್ನು ಸೃಷ್ಟಿಸಿರುವ ಆಪಲ್ ಕಂಪನಿ ಮುಂದಿನ ತನ್ನ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಆಫ್‌ಲೈನ್ ಸ್ಟೋರ್‌ಗಳನ್ನು ಇತ್ತೀಚೆಗೆಷ್ಟೇ ಆರಂಭಿಸಿತ್ತು.
ಅಕ್ಟೋಬರ್ 13ರಂದು ಆಪಲ್ ಕಂಪನಿ ಐಫೋನ್ 12 ಸೀರಿಸ್ ಫೋನ್‌ಗಳು ಮಾರುಕಟ್ಟೆಗೆ ಬಿಡುಗೆಯಾಗಲಿವೆ. ಈ ಫೋನ್‌ಗಳು ಹೇಗೆ ಇರಲಿವೆ, ಬೆಲೆ ಏನು, ಏನೆಲ್ಲ ವಿಶೇಷತೆಗಳಿರಲಿವೆ ಎಂಬ ಬಗ್ಗೆ ಈವರೆಗೆ ಮಾಹಿತಿ ಇರಲಿಲ್ಲ. ಆದರೆ ಇದೀಗ ವೆಬ್‌ಸೈಟ್ ಲೀಕ್ ಮಾಡಿರುವ ಮಾಹಿತಿಯ ಪ್ರಕಾರ, ಆಪಲ್ ಐಫೋನ್ 12 ಸೀರಿಸ್‌ನ ಒಂದಿಷ್ಟು ವಿಶೇಷತೆಗಳ ಬಗ್ಗೆ ಗೊತ್ತಾಗಿದೆ.
ಮುಂದಿನ ವಾರದಲ್ಲಿ ಬಿಡುಗಡೆಯಾಗಲಿರುವ ಐಫೋನ್ 12 ಸೀರಿಸ್‌ನಲ್ಲಿ ಒಟ್ಟು ನಾಲ್ಕು ಮಾದರಿಯ ಫೋನ್‌ಗಳು ಇರಲಿವೆ. ಅವು ಹೀಗಿವೆ; ಐಫೋನ್ 12 ಮಿನಿ, ಐಫೋನ್ 12, ಐಫೋನ್ 12 ಪ್ರೊ, ಐಫೋನ್ 12 ಪ್ರೋ ಮ್ಯಾಕ್ಸ್. ಹೌದು ಆಪಲ್ ಇಷ್ಟೊಂದು ಮಾದರಿಯ ಫೋನ್‌ಗಳನ್ನು ಬಿಡುಗಡೆ ಮಾಡಲು ಹೊರಟಿದೆ.
Work From home ಮಾಡುತ್ತಿದ್ದೀರಾ, ಈ ಹ್ಯಾಕರ್ಸ್‌ಗಳ ಬಗ್ಗೆ ಇರಲಿ ಎಚ್ಚರ
ಈ ಎಲ್ಲ ಫೋನ್‌ಗಳು ಒಎಲ್‌ಇಡಿ ಡಿಸ್‌ಪ್ಲೇಗಳನ್ನು ಹೊಂದಿವೆ. ಜೊತೆಗೆ ಇವೆಲ್ಲವೂ 5ಜಿ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡಲಿವೆ ಎಂಬ ಸುದ್ದಿ ಇದೆ. ಸತ್ಯ ಸಂಗತಿ ಏನು ಎಂಬುದು ಇನ್ನು ಮೂರ್ನಾಲ್ಕು ದಿನಗಳಲ್ಲಿ ತಿಳಿಯಲಿದೆ. ವಿಶೇಷ ಎಂದರೆ, ಕಂಪನಿ ಸ್ಮಾರ್ಟ್ ಡೇಟಾ ಮೋಡ್ ಒದಗಿಸಲಿದ್ದು, ಬಳಕೆದಾರರು ಸುಲಭವಾಗಿ 4ಜಿಯಿಂದ 5ಜಿಗೆ ತಮ್ಮ ಫೋನ್ ಅನ್ನು ಸ್ವಿಚ್ ಆನ್ ಮಾಡಿಕೊಳ್ಳಬಹುದು. ಜೊತೆಗೆ ಡೀಪ್ ಫ್ಯೂಷನ್ ಮತ್ತು ಅತ್ಯಾಧುನಿಕ ನೈಟ್ ಮೋಡ್ ಮಾದರಿಗಳಲ್ಲೂ ಈ ಫೋನ್‌ಗಳು ದೊರೆಯಲಿವೆ ಎನ್ನಲಾಗುತ್ತಿದೆ.
ಏನೇನು ವಿಶೇಷತೆಗಳು?
- 15 ವ್ಯಾಟ್ ವೈರ್‌ಲೆಸ್ ಚಾರ್ಚಿಂಗ್ ಸಪೋರ್ಟ್ ಇರಲಿದೆ.
- ಮ್ಯಾಕ್ ಕಂಪ್ಯೂಟರ್‌ಗಳಲ್ಲಿ ಕಾಣ ಸಿಗುವ ಮ್ಯಾಗ್‌ಸೇಫ್ ತಂತ್ರಜ್ಞಾನ ಬಳಕೆ.
- ಮ್ಯಾಗ್ ಸೇಫ್ ಚಾರ್ಜರ್ ಮತ್ತು ಮ್ಯಾಗ್‌ಸೇಫ್ ಡ್ಯು ಚಾರ್ಜರ್ ಇರಲಿವೆ.
- ಐಫೋನ್ 12 ಮಿನಿ 5.4 ಇಂಚ್ ಸ್ಕ್ರೀನ್ ಹೊಂದಿರಲಿದೆ
- ಡ್ಯುಯಲ್ ಸೆಟ್‌ಅಪ್‌ನಲ್ಲಿ ವೈಡ್ ಆಂಗಲ್ ಕ್ಯಾಮರಾ ಮತ್ತು ಅಲ್ಟ್ರಾವೈಡ್ ಆಂಗಲ್ ಕ್ಯಾಮರಾ ಇರಲಿದೆ.
- ಐಫೋನ್ 12 ಪ್ರೋ ಮ್ಯಾಕ್ಸ್ 6.7 ಇಂಚ್ ಡಿಸ್‌ಪ್ಲೇ ಹೊಂದಿರಲಿದೆ.
ಹಾಟ್ 10 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಇನ್ಫಿನಿಕ್ಸ್
ಈ ಫೋನ್‌ಗಳ ಬೆಲೆ ಎಷ್ಟು?
ವೀಬೋ ಲೀಕ್ ಪ್ರಕಾರ, ಐಫೋನ್ 12 ಮಿನಿ ಬೆಲೆ 699 ಡಾಲರ್ ಇರಲಿದೆ. ಅಂದರೆ ಅಂದಾಜು 51 ಸಾವಿರ ರೂ. ಅದೇ ವೇಳೆ, ಐಫೋನ್ 12 ಬೆಲೆ 799 ಡಾಲರ್(ಅಂದಾಜು 58 ಸಾವಿರ) ಇರಲಿದ್ದು, ಐಫೋನ್ 12 ಪ್ರೋ ಬೆಲೆ 999 ಡಾಲರ್(73 ಸಾವಿರ) ಇರಲಿದೆ. ಇನ್ನು ಅತ್ಯಾಧುನಿಕ 12 ಪ್ರೋ ಮ್ಯಾಕ್ಸ್ ಬೆಲೆ 1099 ಡಾಲರ್ ಇರಲಿದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಇದರ ಬೆಲೆ 80 ಸಾವಿರಕ್ಕೂ ಅಧಿಕವಾಗಲಿದೆ. ಈ ಎಲ್ಲ ಫೋನ್‌ಗಳು ಕಪ್ಪು, ಬಿಳಿ, ಕೆಂಪು, ನೀಲಿ ಮತ್ತು ಹಸಿರು ಬಣ್ಣಗಳಲ್ಲಿ ದೊರೆಯಲಿದೆ. ಜೊತೆಗೆ ಗೋಲ್ಡ್, ಸಿಲ್ವರ್, ಗ್ರಾಫೈಟ್ ಬಣ್ಣಗಳಲ್ಲಿ ಸಿಗಲಿವೆ.
ಬಳಕೆದಾರರ ಸ್ನೇಹಿ ಫೋನ್‌ಗಳು
ಆಪಲ್ ಕಂಪನಿ ಫೋನ್‌ಗಳು ಯಾವಾಗಲೂ ಕ್ರಾಂತಿಕಾರಿಯಾಗಿರುತ್ತವೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕಲ್ಪನೆಗೂ ನಿಲುಕದ ರೀತಿಯಲ್ಲಿ ಫೀಚರ್‌ಗಳನ್ನು ಆಪಲ್ ಕಂಪನಿ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಒದಗಿಸುತ್ತದೆ. ಹಾಗಾಗಿ, ಜಗತ್ತಿನ ಬಹುತೇಕ ದೇಶಗಳಲ್ಲಿ ಈ ಆಪಲ್ ಫೋನ್‌ಗಳಲ್ಲಿ ವಿಶೇಷವಾದ ಸ್ಥಾನವಿದೆ. ಈ ಕಂಪನಿ ಫೋನ್‌ಗಲು ತುಸು ದುಬಾರಿಯಾದರೂ ಕೊಟ್ಟ ಕಾಸಿಗೆ ಮೋಸ ಇರುವುದಿಲ್ಲ ಎಂಬುದು ಬಳಕೆದಾರರ ಪ್ರಾಮಾಣಿಕ ಅನಿಸಿಕೆ.
‘ಮಿತ್ರ’ ಚೀನಾದ ಟಿಕ್‌ಟಾಕ್ ಆ್ಯಪ್ ನಿಷೇಧಿಸಿದ ಪಾಕ್: ಡ್ರ್ಯಾಗನ್‌ಗೆ ಶಾಕ್!