ದಾಖಲೆಯ 7561 ಕೋಟಿ ರು. ಅನುದಾನ: ರಾಜ್ಯಕ್ಕೆ ರೈಲ್ವೆ ಬಂಪರ್!
ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಈ ಬಾರಿ ರಾಜ್ಯದ ರೈಲ್ವೆ ಯೋಜನೆಗಳಿಗೆ ಬಂಪರ್ ಅನುದಾನ ದೊರೆತಿದ್ದು, ಒಟ್ಟು 7561 ಕೋಟಿ ರು.ಗಳ ನೆರವು ಲಭಿಸಿದೆ. ಇದು ಈ ಹಿಂದೆ ಯಾವುದೇ ಒಂದು ವರ್ಷದಲ್ಲಿ ರಾಜ್ಯಕ್ಕೆ ದೊರೆತ ಅನುದಾನದಲ್ಲಿ ಅತ್ಯಂತ ಗರಿಷ್ಠ ಮೊತ್ತವಾಗಿದೆ.
ಬೆಂಗಳೂರು (ಫೆ.04): ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಈ ಬಾರಿ ರಾಜ್ಯದ ರೈಲ್ವೆ ಯೋಜನೆಗಳಿಗೆ ಬಂಪರ್ ಅನುದಾನ ದೊರೆತಿದ್ದು, ಒಟ್ಟು 7561 ಕೋಟಿ ರು.ಗಳ ನೆರವು ಲಭಿಸಿದೆ. ಇದು ಈ ಹಿಂದೆ ಯಾವುದೇ ಒಂದು ವರ್ಷದಲ್ಲಿ ರಾಜ್ಯಕ್ಕೆ ದೊರೆತ ಅನುದಾನದಲ್ಲಿ ಅತ್ಯಂತ ಗರಿಷ್ಠ ಮೊತ್ತವಾಗಿದೆ. ನೈಋುತ್ಯ ರೈಲ್ವೆ ವಲಯಕ್ಕೆ ಈ ಬಾರಿ 9200 ಕೋಟಿ ರು. ನೆರವು ನೀಡಲಾಗಿದೆ.
ಅದರಲ್ಲಿ ಕರ್ನಾಟಕವೊಂದಕ್ಕೇ 7561 ಕೋಟಿ ರು. ದೊರೆತಿದೆ. ಇನ್ನುಳಿದ ಮೊತ್ತ ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರಕ್ಕೆ ಲಭಿಸಿದೆ. ಬಹು ಬೇಡಿಕೆಯ ಹತ್ತು ಮಾರ್ಗಗಳ ಕಾಮಗಾರಿ, ವಿದ್ಯುದೀಕರಣ, ನಿಲ್ದಾಣಗಳ ಮೇಲ್ದರ್ಜೆಗೇರಿಸುವುದು, ಜೋಡಿಮಾರ್ಗ (ಡಬ್ಲಿಂಗ್) ಯೋಜನೆಗಳು ಈ ಬಾರಿ ರಾಜ್ಯಕ್ಕೆ ಲಭಿಸಿವೆ. ಆದರೆ, ಹೊಸದಾಗಿ ಯಾವುದೇ ಹೊಸ ಮಾರ್ಗಗಳನ್ನು ಘೋಷಣೆ ಮಾಡಿಲ್ಲ.
ದಾಖಲೆ ಆದಾಯ: ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೈಋುತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್, 2022ರಲ್ಲಿ ನೈಋುತ್ಯ ರೈಲ್ವೆ ಸಾರ್ವಕಾಲಿಕ ಆದಾಯ ದಾಖಲೆ ಬರೆದಿದೆ. ಈ ಅವಧಿಯಲ್ಲಿ 5,680 ಕೋಟಿ ಆದಾಯ ಗಳಿಸಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಆದಾಯ ಗಳಿಕೆಯಲ್ಲಿ 29%ರಷ್ಟು ಹೆಚ್ಚಾಗಿದೆ ಎಂದರು.
ಅಮೃತ ಕಾಲದ ಬಜೆಟ್‌ಗೆ 7 ಆದ್ಯತೆಗಳು: ಭಾರತ @100ಗೆ ಬಜೆಟ್‌ನಲ್ಲಿ ಮುನ್ನುಡಿ
ಹೊಸ ಮಾರ್ಗ: ಈಗಾಗಲೆ ಘೋಷಣೆಯಾದ ಹೊಸ ಮಾರ್ಗಗಳಿಗೆ ಒಟ್ಟಾರೆ 2,423 ಕೋಟಿ ಅನುದಾನ ಮಂಜೂರಾಗಿದ್ದು, ಅದರಲ್ಲಿ ಕರ್ನಾಟಕಕ್ಕೆ .1,408 ಕೋಟಿ ರು. ದೊರೆತಿದೆ. ತೆಲಂಗಾಣ 150 ಕೋಟಿ ರು. ಸೇರಿ ಅನುದಾನ 1,558 ಕೋಟಿ ರು. ಮಾರ್ಗಕ್ಕೆ ಸಿಕ್ಕಿದೆ. 865 ಕೋಟಿ ರು. ಮುಂದೆ ಘೋಷಣೆಯಾಗುವ ಹೊಸ ಮಾರ್ಗ ಕಾಮಗಾರಿಗೆ ಮೀಸಲಿಡಲಾಗುವುದು ಎಂದು ತಿಳಿಸಿದರು.
ನಿಲ್ದಾಣ ಮೇಲ್ದರ್ಜೆಗೆ: ಈ ಬಾರಿ ಅಮೃತ್ ಭಾರತ ಯೋಜನೆಯಡಿ ರಾಜ್ಯದ ಹುಬ್ಬಳ್ಳಿ, ಧಾರವಾಡ, ಚಾಮರಾಜನಗರ, ಹರಿಹರ, ಹಾಸನ, ಶಿವಮೊಗ್ಗ ಸೇರಿ 52 ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಕೈಗೊಳ್ಳಲಾಗುವುದು. ಅದರಲ್ಲಿ ಈಗಾಗಲೇ ಯಶವಂತಪುರ ಹಾಗೂ ಬೆಂಗಳೂರು ದಂಡು ರೈಲ್ವೆ ನಿಲ್ದಾಣವನ್ನು ಆದ್ಯತೆ ಮೇರೆಗೆ ಹೈಟೆಕ್ ಮಾಡಲಾಗುತ್ತಿದೆ. ಅತ್ಯಾಧುನಿಕ ಸೌಕರ್ಯ ಹಾಗೂ ತಂತ್ರಜ್ಞಾನಗಳೊಂದಿಗೆ ಈ ನಿಲ್ದಾಣಗಳು ತಲೆ ಎತ್ತಲಿವೆ ಎಂದು ತಿಳಿಸಿದರು.
ಜೋಡಿ ಮಾರ್ಗ: ಜೋಡಿ ಮಾರ್ಗಕ್ಕಾಗಿ .1,529 ಕೋಟಿ, ವಿದ್ಯುದೀಕರಣಕ್ಕಾಗಿ .793.3ಕೋಟಿ ಮೀಸಲಿದ್ದು, ಈಗಾಗಲೇ ನೈರುತ್ಯ ವಲಯ ಮಾರ್ಗದಲ್ಲಿ 2,243 ಕಿಮೀ ನಷ್ಟು ವಿದ್ಯುದೀಕರಣ ಪೂರ್ಣಗೊಂಡಿದೆ. ಜತೆಗೆ 44 ಹೊಸ ಮಾರ್ಗಗಳ ಯೋಜನೆ ಸಮೀಕ್ಷೆಗಾಗಿ 10 ಕೋಟಿ ರು. ಮೀಸಲಾಗಿದೆ. ಸಂಚಾರಿ ವ್ಯವಸ್ಥೆ ಸುಧಾರಣೆಗೆ . 100 ಕೋಟಿ ರಸ್ತೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ನಿರ್ಮಾಣಕ್ಕಾಗಿ . 242 ಕೋಟಿ ಮೀಸಲಿಡಲಾಗಿದೆ. ದಕ್ಷಿಣ ರೈಲ್ವೆಯ ಮಂಗಳೂರು ವಿಭಾಗಕ್ಕೆ ಕೆಳ ಸೇತುವೆ ರಚನೆ, ಸಂಪರ್ಕ ರಸ್ತೆ, ಸೇತುವೆಗಳಿಗೆ ಈ ಬಾರಿ 29.74 ಕೋಟಿ ರು.ಮೊತ್ತ ಲಭಿಸಿದೆ. ಮಧ್ಯ ರೇಲ್ವೆಯ ಕಲಬುರಗಿ ವಿಭಾಗಕ್ಕೆ 1,000 ರು. ದೊರೆತಿದೆ ಎಂದರು.
ಬೆಂಗಳೂರಿನಲ್ಲಿ ವಂದೇ ಮೆಟ್ರೋ: ವಂದೇ ಭಾರತ್ ರೈಲಿನಂತೆ ವಂದೇ ಮೆಟ್ರೋ ಕೂಡ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಇನ್ನು, ರಾಜ್ಯದ ಹಲವು ಕಡೆಗಳಲ್ಲಿ ಹೊಸ ರೈಲು ಮಾರ್ಗಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರದ ಜೊತೆ ಚರ್ಚೆ ಮಾಡಿ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದೆ. ಇನ್ನು, 50 ಸಾವಿರ ಜನಸಂಖ್ಯೆ ಇರುವ ನಗರಕ್ಕೆ ಹೊಸದಾಗಿ ರೈಲ್ವೆ ಸಂಪರ್ಕ ಕಲ್ಪಿಸಲು ಒಟ್ಟಾರೆ 60 ಸಾವಿರ ಕೋಟಿ, ಐಷಾರಾಮಿ ನಿಲ್ದಾಣಗಳ ನಿರ್ಮಾಣಕ್ಕೆ 30 ಸಾವಿರ ಕೋಟಿ ಮೀಸಲಾಗಿದ್ದು, ನೈಋುತ್ಯ ರೈಲ್ವೆಗೆ ಮುಂದೆ ಮೊತ್ತ ಮಂಜೂರಾಗಲಿದೆ.
ಅವಧಿ ರಾಜ್ಯಕ್ಕೆ ದೊರೆತ ಸರಾಸರಿ ಅನುದಾನ
2009-14 835 ಕೋಟಿ
2014-22 3424 ಕೋಟಿ
2023-24 7561 ಕೋಟಿ
10 ಮಾರ್ಗಗಳ ಕಾಮಗಾರಿ
ಗದಗ(ತಳಕಲ್) -ವಾಡಿ 350 (ಕ.ಸ.150)
ಗಿಣಿಗೇರಾ-ರಾಯಚೂರು 300
ತುಮಕೂರು-ದಾವಣಗೆರೆ (ಚಿತ್ರದುರ್ಗ ಮಾರ್ಗ) 420.85 (ಕ.ಸ.200)
ತುಮಕೂರು-ರಾಯದುರ್ಗ (ಕಲ್ಯಾಣದುರ್ಗ ಮಾರ್ಗ) 350
ಬಾಗಲಕೋಟೆ-ಕುಡಚಿ 360 (ಕ.ಸ.150)
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರ 150
ಬೆಳಗಾವಿ-ಧಾರವಾಡ (ಕಿತ್ತೂರ ಮಾರ್ಗ) 10
ಮರಿಕುಪ್ಪಮ್-ಕುಪ್ಪಮ್ 200
ಕಡೂರು-ಚಿಕ್ಕಮಗಳೂರು-ಹಾಸನ 145
ಮಳಗೂರ-ಪಾಲಸಮುದ್ರಮ್ 20
ಡಬ್ಲಿಂಗ್ ಯೋಜನೆ
ಗದಗ-ಹೊಟಗಿ 170
ಪೆನುಕೊಂಡ-ಧರ್ಮಾವರಂ 120
ಬೈಯ್ಯಪ್ಪನಹಳ್ಳಿ-ಹೊಸೂರು 100
ಯಶವಂತಪುರ-ಚನ್ನಸಂದ್ರ 85
ಲೋಂಡಾ-ಮೀರಜ್ 200
ಹುಬ್ಬಳ್ಳಿ-ಚಿಕ್ಕಜಾಜೂರು 150
ಬೆಂಗಳೂರು ಕಂಟೋನ್ಮೆಂಟ್-ವೈಟ್‌ಫೀಲ್ಡ್ 250
ಹೊಡಪೇಟೆ-ತಿನೈಘಾಟ್-ವಾಸ್ಕೋಡಗಾಮಾ 400
ಅಮೃತ ಕಾಲದ ಬಜೆಟ್, ಭವಿಷ್ಯದ ಭಾರತಕ್ಕೆ ಬುನಾದಿ: ಪ್ರಧಾನಿ ಮೋದಿ
ವಿದ್ಯುದಿಕರಣ ಯೋಜನೆ (ಕೋಟಿಗಳಲ್ಲಿ)
ಗದಗ-ಹೊಟಗಿ 110
ಚಿಕ್ಕಬಾಣಾವರ- ಹುಬ್ಬಳ್ಳಿ 128
ಬಿರೂರು- ತಾಳಗುಪ್ಪ 56
ಹಾಸನ-ಮಂಗಳೂರು134
ಮೀರಜ್-ಲೋಂಡಾ 182
ಹೊಸಪೇಟೆ-ಹುಬ್ಬಳ್ಳಿ-ವಾಸ್ಕೋಡ ಗಾಮಾ 20
ಚಿಕ್ಕಬಾಣಾವರ-ಹಾಸನ 77
2009-14ರ ಅವಧಿಯಲ್ಲಿ ಕರ್ನಾಟಕಕ್ಕೆ ಕೇವಲ ಸರಾಸರಿ .835 ಕೋಟಿ ಅನುದಾನ ಸಿಕ್ಕಿತ್ತು. ಅದಕ್ಕೆ ಹೋಲಿಸಿದರೆ 9 ಪಟ್ಟು ಹೆಚ್ಚು ಅಂದರೆ .7,561 ಕೋಟಿ ಅನುದಾನ ಈ ವರ್ಷ ಪ್ರಧಾನಿ ನರೇಂದ್ರ ಮೋದಿಯವರಿಂದ ಈ ಬಾರಿ ಕರ್ನಾಟಕಕಕ್ಕೆ ಲಭಿಸಿದೆ.
- ಅಶ್ವಿನಿ ವೈಷ್ಣವ್, ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ