Asianet Suvarna News Asianet Suvarna News

ರಾಮ ಮಂದಿರ ಸಾಕಾರ ಹಿಂದಿದೆ ಉಡುಪಿ ಅಷ್ಟಮಠಗಳ ಪಾತ್ರ..!

ಪೇಜಾವರ ಶ್ರೀಗಳು ಅಲ್ಲಿಂದಲೇ ಆಗಿನ ರಾಷ್ಟ್ರಪತಿ ವೆಂಕಟರಾಮನ್ ಅವರಿಗೆ ಪರಿಸ್ಥಿತಿ ವಿವರಿಸಿ ಪತ್ರ ಬರೆದರು. ತಕ್ಷಣ ಪ್ರತಿಕ್ರಿಯಿಸಿದ ರಾಷ್ಟ್ರಪತಿ, ಪೇಜಾವರ ಶ್ರೀಗಳನ್ನು ಗೌರವದಿಂದ ಅಯೋಧ್ಯೆಗೆ ತೆರಳಲು ಅವಕಾಶ ನೀಡುವಂತೆ ಮುಲಾಯಂ ಸರ್ಕಾರಕ್ಕೆ ಆದೇಶಿಸಿದರು. 

Udupi Ashtamathas is behind the Construction of Ram Mandir in Ayodhya grg
Author
First Published Jan 23, 2024, 10:16 AM IST

ಸುಭಾಶ್ಚಂದ್ರ ಎಸ್.ವಾಗ್ಳೆ ಉಡುಪಿ

1989 ರಲ್ಲಿ ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಸರ್ಕಾರ ವಿತ್ತು. ಆಗ ಪೇಜಾವರ ಮಠದ ಮಠದ ಕೀರ್ತಿಶೇಷ ವಿದ್ಯಾಮಾನ ತೀರ್ಥರು, ಅದಮಾರು ಮಠದ ಕೀರ್ತಿಶೇಷ ವಿಭುದೇಶ ತೀರ್ಥರು, ಕುಕ್ಕೆ ಸುಬ್ರಹ್ಮಣ್ಯ ಮಠದ ಆಗಿನ ವಿದ್ಯಾಭೂಷಣ ತೀರ್ಥರು ಆಯೋಧ್ಯೆಯಲ್ಲಿ ನಡೆಯುವ ರಾಮಮಂದಿರದ ಶಿಲಾನ್ಯಾಸದಲ್ಲಿ ಭಾಗವಹಿಸಲು ತೆರಳುತ್ತಿದ್ದರು. ಅಷ್ಟರಲ್ಲಿ ಅಯೋಧ್ಯೆಯಲ್ಲಿ 10 ಮಂದಿ ರಾಮಭಕ್ತರ ಹತ್ಯೆಯಾಯಿತು. ಆಯೋಧ್ಯೆಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿತ್ತು. ಪೇಜಾವರ ಶ್ರೀಗಳು ಈ ಸಂದರ್ಭದಲ್ಲಿ ಅಯೋಧ್ಯೆಗೆ ಬಂದರೆ ಪರಿಸ್ಥಿತಿ ಕೈಮೀರುತ್ತದೆ ಎಂದು ಹೆದರಿದ ಮುಲಾಯಂ ಸಿಂಗ್ ಸರ್ಕಾರ, ಪೇಜಾವರ ಮತ್ತು ಇತರ ಸ್ವಾಮೀಜಿಗಳನ್ನು ಪ್ರತಾಪ್‌ ಗಢದಲ್ಲಿ ತಡೆದು, ಅಲ್ಲಿಯೇ ಮನೆಯೊಂದರಲ್ಲಿ ಗೃಹ ಬಂಧನಕ್ಕೊಳಪಡಿಸಿತು.

ವಾರದ ನಂತರ ಆಯೋಧ್ಯೆಯಲ್ಲಿ ಪರಿಸ್ಥಿತಿ ತಹಬಂದಿಗೆ ಬಂದ ಮೇಲೆ ಅವರನ್ನು ಬಿಡುಗಡೆ ಮಾಡಲಾಯಿತು. ಪೇಜಾವರ ಶ್ರೀಗಳು ಮತ್ತು ವಿದ್ಯಾಭೂಷಣ ತೀರ್ಥರು ಅಯೋಧ್ಯೆಗೆ ಹೊರಟರು. ಆದರೆ, ಅಲಹಾಬಾದ್‌ನಲ್ಲಿ ಮತ್ತೆ ಅವರನ್ನು ಬಂಧಿಸಲಾಯಿತು. ಪೊಲೀಸರು ಅವರ ಸ್ನಾನ, ಪೂಜಾದಿಗಳಿಗೆ ಅಡ್ಡಿ ಮಾಡಲಿಲ್ಲ. ಆದರೆ, ಮನೆಯಿಂದ ಹೊರಗೆ ಹೋಗುವುದಕ್ಕೆ ಮಾತ್ರ ಬಿಡಲಿಲ್ಲ. 

Ram Mandir: 500 ವರ್ಷಗಳ ಬಳಿಕ ಧರೆಗಿಳಿದ ಬಾಲರಾಮ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ರಾಮ ಜಪ

ರಾಷ್ಟ್ರಪತಿಗೆ ಪತ್ರ ಬರೆದಿದ್ದ ಪೇಜಾವರ ಶ್ರೀ

ಪೇಜಾವರ ಶ್ರೀಗಳು ಅಲ್ಲಿಂದಲೇ ಆಗಿನ ರಾಷ್ಟ್ರಪತಿ ವೆಂಕಟರಾಮನ್ ಅವರಿಗೆ ಪರಿಸ್ಥಿತಿ ವಿವರಿಸಿ ಪತ್ರ ಬರೆದರು. ತಕ್ಷಣ ಪ್ರತಿಕ್ರಿಯಿಸಿದ ರಾಷ್ಟ್ರಪತಿ, ಪೇಜಾವರ ಶ್ರೀಗಳನ್ನು ಗೌರವದಿಂದ ಅಯೋಧ್ಯೆಗೆ ತೆರಳಲು ಅವಕಾಶ ನೀಡುವಂತೆ ಮುಲಾಯಂ ಸರ್ಕಾರಕ್ಕೆ ಆದೇಶಿಸಿದರು. ನಂತರ ಪೇಜಾವರ ಶ್ರೀಗಳು ಸರ್ಕಾರದ ರಕ್ಷಣೆಯಲ್ಲಿ ಅಯೋಧ್ಯೆಗೆ ತೆರಳಿದರು.ಅಲ್ಲಿನ ದಲಿತರೊಬ್ಬರ ಕೈಯಿಂದ ರಾಮ ಮಂದಿರದ ಶಿಲಾನ್ಯಾಸ ನಡೆಸಲಾಯಿತು. ರಾಮಮಂದಿರ ಹಿಂದೂ ಸಮಾಜದ ಪ್ರತಿಯೊಂದು ಸಂದೇಶವನ್ನು ಆ ಮೂಲಕ ಸಾರಲಾಯಿತು. 1992 ರಲ್ಲಿ ಪಿ.ವಿ.ನರಸಿಂಹ ರಾವ್‌ ಪ್ರಧಾನಿಯಾಗಿದ್ದಾಗ ಆಯೋಧ್ಯೆಯಲ್ಲಿ ಕರಸೇವೆ ನಡೆಯಿತು. ಅದರಲ್ಲಿ ಪೇಜಾವರ ಶ್ರೀಗಳು ಮತ್ತು ಉಡುಪಿಯ ಎಲ್ಲಾ ಅಷ್ಟಮಠಾಧೀಶರೂ ಭಾಗವಹಿಸಿದ್ದರು. ಆಗಲೂ ಉತ್ತರಪ್ರದೇಶ ಸರ್ಕಾರ ಪೇಜಾವರ ಶ್ರೀಗಳಿಂದ 'ಕೇವಲ ಮಂದಿರದ ಕರಸೇವೆ ಮಾಡುತ್ತೇವೆ, ಬಾಬ್ರಿ ಮಸೀದಿಯನ್ನು ಮುಟ್ಟುವುದಿಲ್ಲ' ಎಂದು ಲಿಖಿತವಾಗಿ ಬರೆಸಿಕೊಂಡಿತ್ತು. ಒಂದು ರೀತಿಯಲ್ಲಿ ಪೇಜಾವರ ಶ್ರೀಗಳು ಅಲ್ಲಿ ಸೇರಿದ್ದ ಸಾವಿರಾರು ಮಂದಿ ರಾಮಭಕ್ತ ಕರಸೇವಕರ ಪರವಾಗಿ ಸರ್ಕಾರಕ್ಕೆ ಲಿಖಿತವಾಗಿ ಮಾತುಕೊಟ್ಟಿದ್ದರು.

ಪೇಜಾವರಶ್ರೀ ಕೂಗಿದರೂ ಕರಸೇವಕರು ಕೇಳಲೇ ಇಲ್ಲ

ಆದರೆ, ಅನಿರೀಕ್ಷಿತ ಬೆಳವಣಿಗೆಯಲ್ಲಿ ಉದ್ವಿಗ್ನಕ್ಕೊಳಗಾದ ಸಾವಿರಾರು ಮಂದಿ ಕರಸೇವಕರು ಮಸೀದಿಯ ಗುಂಬಜ್ ಹತ್ತಿ ಅದನ್ನು ಒಡೆಯತೊಡಗಿದರು. ಆಗ ಪೇಜಾವರ ಶ್ರೀಗಳು ಧ್ವನಿವರ್ಧಕದಲ್ಲಿ ಕರಸೇವಕರಿಗೆ ಮಸೀದಿಗೆ ಹಾನಿ ಮಾಡದಂತೆ, ಮಾಡಿದರೆ ತಾವು ಸರ್ಕಾರಕ್ಕೆ ಕೊಟ್ಟಿದ್ದ ಮಾತಿನ ಉಲ್ಲಂಘನೆಯಾಗುತ್ತದೆ ಎಂದು ಪದೇಪದೇ ಎಚ್ಚರಿಸಿದರು. ಆದರೆ, ಸಾವಿರಾರು ಮಂದಿ ಇದ್ದ ಗುಂಪಿನಲ್ಲಿ ಶ್ರೀಗಳ ಮಾತನ್ನು ಯಾರೂ ಕೇಳಲಿಲ್ಲ, ಗುಂಬಜ್ ಉರುಳಿತು. ಪೇಜಾವರ ಶ್ರೀಗಳು ಮಾತು ಉಳಿಸಿಕೊಳ್ಳಲಾಗಲಿಲ್ಲ ಎಂದು ತೀವ್ರವಾಗಿ ನೊಂದುಕೊಂಡರು. ಮರುದಿನ ಸಂತರೆಲ್ಲರೂ ಉರುಳಿದ ಗುಂಬಜ್ ಬಳಿಗೆ ಹೋದಾಗ, ಅಲ್ಲಿ ರಾಮನ ಪ್ರತಿಮೆ ಸಿಕ್ಕಿತು. ಅದರ ಪೂಜೆ ನಿಲ್ಲುವುದು ಬೇಡ ಎಂದು ಅದನ್ನು ಪೇಜಾವರ. ಶ್ರೀಗಳು ತಮ್ಮ ಕೈಯ್ಯಾರೆ ಅಲ್ಲಿಯೇ ಸಣ್ಣ ಕೋಣೆಯಲ್ಲಿ ಪ್ರತಿಷ್ಠೆ ಮಾಡಿದರು

ಜೀವನ ಸಾರ್ಥಕವಾಯಿತು ಎಂದಿದ್ದರು ಪೇಜಾವರ ಶ್ರೀ

ನಂತರವೂ ಅನೇಕ ಬಾರಿ ಪೇಜಾವರ ಶ್ರೀಗಳು ಅಯೋಧ್ಯೆಗೆ ಹೋಗಿದ್ದರು. ಕೇಂದ್ರ ಮತ್ತು ಯುಪಿ ಸರ್ಕಾರಗಳ ನಡುವೆ ಮಾತುಕತೆಯ ನೇತೃತ್ವ ವಹಿಸಿದ್ದರು. 2017ರಲ್ಲಿ ಪೇಜಾವರ ಶ್ರೀಗಳ 5ನೇ ಪರ್ಯಾಯಾವಧಿಯಲ್ಲಿ ಉಡುಪಿಯಲ್ಲಿ ನಡೆದ ಧರ್ಮಸಂಸದ್‌ನಲ್ಲಿ ರಾಮಮಂದಿರ ನಿರ್ಮಾಣದ ನಿರ್ಣಯ ಕೈಗೊಳ್ಳಲಾಗಿತ್ತು. ಅದಕ್ಕೆ ಪೂರಕವಾಗಿ 2019ರಲ್ಲಿ ಕೋರ್ಟು ತನ್ನ ತೀರ್ಪು ನೀಡಿತು. ಈ ತೀರ್ಪನ್ನು ಟಿ.ವಿ.ಯಲ್ಲಿ ನೋಡಿದ ಶ್ರೀಗಳು ತುಂಬಾ ಭಾವುಕರಾದರು. ತಮ್ಮ ಜೀವನ ಸಾರ್ಥಕವಾ ಯಿತು ಎಂದಿದ್ದರು. ಬಹುಶಃ ಅದೇ ಸಂತೃಪ್ತಿಯಲ್ಲಿ ಅವರು

ಬೀಗ ಒಡೆದದ್ದು ಪುತ್ತಿಗೆ ಶ್ರೀಪಾದರು, ಶ್ರೀಗಳ ಕೈಗೆ ಕಲ್ಲಿಟ್ಟು ಬೀಗ ಒಡೆಯಲು ಹೇಳಿದ್ದ ಅಶೋಕ್ ಸಿಂಘಲ್

ಅಯೋಧ್ಯೆಯಲ್ಲಿ ಬಚ್ಚಿಟ್ಟಿದ್ದ ರಾಮಲಲ್ಲಾ ವಿಗ್ರಹದ ಕೋಣೆಯ ಬೀಗವನ್ನು ಒಡೆದವರು ಉಡುಪಿಯ ಪುತ್ರಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು. ಆಗ ಅವರಿಗೆ 24ರ ಹರೆಯ, ವಿಶ್ವಹಿಂದೂ ಪರಿಷತ್ತಿನ ಹಿರಿಯ ನಾಯಕರಾಗಿದ್ದ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಅಯೋಧ್ಯೆ ಹೋರಾಟದ ಮುಂಚೂಣಿಯದಲ್ಲಿದ್ದರು. 1985ರಲ್ಲಿ ಉಡುಪಿಯಲ್ಲಿ ನಡೆದ ಧರ್ಮಸಂಸದ್‌ನಲ್ಲಿ ರಾಮಲಲ್ಲಾ ವಿಗ್ರಹವಿದ್ದ ಕೋಣೆಯ ಬೀಗ ತೆರೆಯುವ ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ಈ ಮಹತ್ವದ ನಿರ್ಣ ಯವನ್ನು ಕಾರ್ಯರೂಪಕ್ಕೆ ತರಲು 1986ರಲ್ಲಿ ಪೇಜಾವರ ಶ್ರೀಗಳು ಅಯೋಧ್ಯೆಗೆ ತೆರಳಿದ್ದರು. ಅವರೊಂದಿಗೆ ಪುತ್ತಿಗೆ ಶ್ರೀಗಳಿದ್ದರು. ಉತ್ತರ ಪ್ರದೇಶ ಸರ್ಕಾರ ಕೋಣೆಗೆ ಬೀಗವೇನೋ ಹಾಕಿತ್ತು, ಆದರೆ, ನ್ಯಾಯಾಲಯ ಬೀಗ ತೆಗೆಯುವಂತೆ ಆದೇಶಿಸಿದಾಗ ತೆರೆಯಲು ಬೀಗದ ಕೈಯೇ ಸರ್ಕಾರಿ ಅಧಿಕಾರಿಗಳ ಬಳಿ ಇರಲಿಲ್ಲ, ಆಗ ವಿ.ಹಿಂ.ಪ.ನ ಹಿರಿಯ ನಾಯಕ ಅಶೋಕ್ ಸಿಂಘಾಲ್ ಅವರು ಮುಷ್ಟಿ ಗಾತ್ರದ ಕಲ್ಲೊಂದನ್ನು ಹೆಕ್ಕಿ ತಂದು ಪುತ್ತಿಗೆ ಶ್ರೀಗಳ ಕೈಗೆ ಕೊಟ್ಟು 'ಛೋಟಾ ಸ್ವಾಮೀಜಿ ತಾಲಾ ತೋಡ್ ದಿಜಿಯೇ... ಎಂದರು. ಪುತ್ತಿಗೆ ಶ್ರೀಗಳು ತಾಲವನ್ನು ಒಡೆದೇ ಬಿಟ್ಟರು.  ಅಂದಿನಿಂದ ಇಂದಿನವರೆಗೂ ರಾಮಲಲ್ಲಾ ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ. 

ಭಾರತ ತ್ರೇತಾಯುಗ ಪ್ರವೇಶ ಮಾಡಿದಂತಿದೆ; ರಾಮಮಂದಿರದ ಶಂಕುಸ್ಥಾಪನೆ ಭಾವನಾತ್ಮಕ ಕ್ಷಣ: ಯೋಗಿ ಆದಿತ್ಯನಾಥ್‌

ನಿರ್ಣಯಗಳು ಆದದ್ದು ಉಡುಪಿಯಲ್ಲಿ

ರಾಮಮಂದಿರ ಮುಕ್ತಿ ಹೋರಾಟಕ್ಕೆ ನಿಜವಾದ ಕಾವು ಸಿಕ್ಕಿದ್ದೇ ಕರ್ನಾಟಕದಿಂದ, ಅದೂ ಉಡುಪಿ ಜಿಲ್ಲೆಯಿಂದ, ಶತಮಾನಗಳಿಂದ ರಾಮಮಂದಿರದ ಬಗ್ಗೆ ಹೋರಾಟ ನಡೆಯುತ್ತಿದ್ದರೂ ಅದು ಜನರ ಹೋರಾಟ ವಾಗಿರಲಿಲ್ಲ. 1985ರಲ್ಲಿ ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ನ 2ನೇ ಧರ್ಮ ಸಂಸದ್‌ನಲ್ಲಿ ರಾಮಮಂದಿರ ಮುಕ್ತಗೊಳಿಸುವ ಹೋರಾಟಕ್ಕೆ ಕರೆ ನೀಡಲಾಯಿತು, ಇದು ಬೆಂಕಿಯಂತೆ ದೇಶದಾದ್ಯಂತ ವ್ಯಾಪಿಸಿತು. 1966ರಲ್ಲಿ ಪ್ರಯಾಗದಲ್ಲಿ ನಡೆದ ಮೊದಲ ಧರ್ಮ ಸಂಸದ್‌ನಲ್ಲಿ ಹಿಂದೂ ಸಮಾಜದಲ್ಲಿ ಅಂದು ತೀವ್ರ ಒಡಕಿಗೆ ಕಾರಣವಾಗಿದ್ದ ಆಸ್ಪೃಶ್ಯತೆ ವಿರುದ್ಧ ನಿರ್ಣಯವನ್ನು ಕೈಗೊಳ್ಳ ಲಾಗಿತ್ತೇ ಹೊರತು, ರಾಮಮಂದಿರಕ್ಕೆ ಆದ್ಯತೆ ನೀಡಿರಲಿಲ್ಲ. 1985ರಲ್ಲಿ ನಡೆದ ಉಡುಪಿ ಧರ್ಮಸಂಸದ್‌ನಲ್ಲಿ 'ತಾಲಾ ಖೋಲೋ' ಎಂಬ ಹಕ್ಕೊತ್ತಾಯ ನಿರ್ಣಯ ಕೈಗೊಳ್ಳಲಾಯಿತು. ರಾಮಮಂದಿರ- ಬಾಬ್ರಿ ಮಸೀದಿ ಪ್ರಕರಣ ನ್ಯಾಯಾಲಯದಲ್ಲಿದ್ದರಿಂದ 1949ರಿಂದ ರಾಮಲಲ್ಲಾನ ವಿಗ್ರಹವನ್ನು ಆಯೋಧ್ಯೆಯ ಕೋಣೆಯೊಂ ದರಲ್ಲಿಟ್ಟು ಅಲ್ಲಿನ ಸರ್ಕಾರ ಬೀಗ ಹಾಕಿತ್ತು. ಹಿಂದುಗಳಿಗೆ ಕನಿಷ್ಠ ರಾಮಲಲ್ಲಾನ ದರ್ಶನಕ್ಕೂ ಅವಕಾಶ ಇರಲಿಲ್ಲ. ಇದರ ವಿರುದ್ಧ 1985ರಲ್ಲಿ ನ.30ರಂದು ಉಡುಪಿ ಧರ್ಮ ಸಂಸತ್ ನಲ್ಲಿ ತಾಲಾ ಖೋಲೋ (ಬೀಗ ತೆರೆಯಿರಿ) ಎಂದು ಸರ್ಕಾರವನ್ನು ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಯಿತು. ยู - g (1986 2.8) ಗಡುವನ್ನೂ ನೀಡಲಾಯಿತು. ಸರ್ಕಾರ ಬೀಗ ತೆರೆಯದಿದ್ದರೆ ಆತ್ಮಾಹುತಿ ಮಾಡಿಕೊಳ್ಳುತ್ತೇವೆ ಎಂದು ಧರ್ಮಸಂಸದ್ ನಲ್ಲಿ ಭಾಗವಹಿಸಿದ್ದ ಕೆಲವು ಸಾಧುಸಂತರು ಕಠಿಣ ಎಚ್ಚರಿಕೆಯನ್ನೂ ನೀಡಿದ್ದರು. ಇದು ಅಂದಿನ ಕೇಂದ್ರ ಮತ್ತು ಉತ್ತರ ಪ್ರದೇಶದ ಸರ್ಕಾರಗಳನ್ನು ಆತಂಕಕ್ಕೀಡು ಮಾಡಿತ್ತು. ಫೈಜಾಬಾದಿನ ಜಿಲ್ಲಾ ನ್ಯಾಯಾಲಯ ಕೂಡ ಗಡುವಿಗೆ ಮೊದಲೇ, 1986ರ ಫೆ.1ರಂದು ರಾಮಲಲ್ಲಾ ವಿಗ್ರಹವಿದ್ದ ಕೋಣೆಯ ಬೀಗ ತೆರೆಯಿಸಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿತು. 1985ರ ಉಡುಪಿ ಧರ್ಮಸಂಸದ್ ರಾಮನಿಗೆ ಮುಕ್ತಿ ನೀಡಿತು, ನಂತರ ಹೋರಾಟ ತೀವ್ರಗೊಂಡಿತು. ನಡುವೆ ಸಾಕಷ್ಟು ಬೆಳವಣಿಗೆಗಳಾದವು. ಆದರೆ, ರಾಮಮಂದಿರಕ್ಕೆ , 2017 ಯಲ್ಲಿ ನಡೆದ 12ನೇ ಧರ್ಮಸಂಸದ್ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸುವ ನಿರ್ಣಯವನ್ನು ಕೈಗೊಂಡಿತು. ಅದರ ಪರಿಣಾಮವೋ ಎಂಬಂತೆ 2019ರಲ್ಲಿ ಸುಪ್ರೀಂ ಕೋರ್ಟ್ ರಾಮಮಂದಿರ-ಬಾಬ್ರಿ ಮಸೀದಿ ಪ್ರಕರಣದ ಅಂತಿಮ ತೀರ್ಪು ನೀಡಿ, ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿತು.

ಎರಡೂ ನಿರ್ಣಯಗಳಿಗೆ ಸಾಕ್ಷಿ ಆಗಿದ್ದವರು ವಿಶ್ವೇಶ ತೀರ್ಥರು

1985ರಲ್ಲಿ ಉಡುಪಿಯಲ್ಲಿ ನಡೆದ ಧರ್ಮಸಂಸದ್ ನ ಸಂದರ್ಭದಲ್ಲಿ ಪೇಜಾವರ ಮಠದ ಹಿಂದಿನ ಶ್ರೀ ವಿಶ್ವೇಶ ತೀರ್ಥರ 3ನೇ ಪರ್ಯಾಯ ನಡೆಯುತಿತ್ತು. 2017ರಲ್ಲಿ ಉಡುಪಿಯಲ್ಲಿ ನಡೆದ ಧರ್ಮಸಂಸದ್ ಸಂದರ್ಭದಲ್ಲಿಯೂ ಪೇಜಾವರ ಶ್ರೀಗಳ 5ನೇ ಪರ್ಯಾಯ ನಡೆಯುತ್ತಿತ್ತು. ಎರಡೂ ಧರ್ಮಸಂಸದ್ ಗಳಲ್ಲಿ ವಿಹಿಂಪ ಕೈಗೊಂಡ ನಿರ್ಣಯಗಳಿಗೆ ಪೇಜಾವರ ಶ್ರೀಗಳೇ ಸಾಕ್ಷಿಗಳಾಗಿದ್ದರು. ಮುಂದೆ ರಾಮಮಂದಿರ ಹೋರಾಟದಲ್ಲಿ ನಿರ್ಣಾಯಕ ಪಾತ್ರವನ್ನೂ ವಹಿಸಿದ್ದರು.

Follow Us:
Download App:
  • android
  • ios