Mangaluru: ರಾಜಸ್ತಾನದಲ್ಲಿ ನಡೆದ ಹಿಂದೂ ಟೈಲರ್ ಹತ್ಯೆ ನಾಚಿಗೆಗೇಡು: ಕಟೀಲ್

ರಾಜಸ್ಥಾನದಲ್ಲಿ ನೂಪುರ್ ಶರ್ಮಾ ಬೆಂಬಲಿಸಿದ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ‌ನಳಿನ್ ಕುಮಾರ್ ‌ಕಟೀಲ್ ಪ್ರತಿಕ್ರಿಯಿಸಿದ್ದಾರೆ. 

udaipur murder case bjp president nalin kumar kateel reaction in mangaluru gvd

ಮಂಗಳೂರು (ಜೂ.29): ರಾಜಸ್ಥಾನದಲ್ಲಿ ನೂಪುರ್ ಶರ್ಮಾ ಬೆಂಬಲಿಸಿದ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ‌ನಳಿನ್ ಕುಮಾರ್ ‌ಕಟೀಲ್ ಪ್ರತಿಕ್ರಿಯಿಸಿದ್ದಾರೆ. ರಾಜಸ್ತಾನದಲ್ಲಿ ನಡೆದ ಹಿಂದೂ ಟೈಲರ್ ಹತ್ಯೆ ನಾಚಿಗೆಗೇಡು, ಇದೊಂದು ವ್ಯವಸ್ಥಿತ ಸಂಚು, ದೇಶದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆ ಶುರುವಾಗಿದೆ. ಇದೇ ಮಾದರಿಯಲ್ಲಿ ಶಿವಮೊಗ್ಗದಲ್ಲೂ ಹರ್ಷಾನ ಹತ್ಯೆ ‌ನಡೆದಿತ್ತು. ಹರ್ಷನ ಕತ್ತು ಸಿಗಿದು ಹತ್ಯೆ ಮಾಡಿ ಅದರ ವಿಡಿಯೋ ತಂಗಿಗೆ ಕಳುಹಿಸಲಾಗಿತ್ತು. 

ರಾಜಸ್ಥಾನ ಘಟನೆ ಮತ್ತು ಗಲಭೆಯ ಹಿಂದೆ ವಿದೇಶಿ ಕೈವಾಡವಿದ್ದು, ಅಲ್ಲಿನ ಸರ್ಕಾರದ ಪುಷ್ಟೀಕರಣ ನೀತಿಯ ಕಾರಣದಿಂದ ಈ ಘಟನೆ ಆಗಿದೆ. ಕಾಂಗ್ರೆಸ್ ಈಗ ಮೌನವಾಗಿರೋದ್ರ ಹಿನ್ನೆಲೆ ಏನು? ಇಂಥಹ ದುಷ್ಕೃತ್ಯ ನಡೆದಾಗ ಕಾಂಗ್ರೆಸ್ ಯಾರ ಪರವಾಗಿರುತ್ತೆ ಅನ್ನೋದು ಮುಖ್ಯವಾಗಿದ್ದು, ಈ ಘಟನೆ ದೇಶದಲ್ಲಿ ‌ನಡೆಯಲು‌ ಕಾರಣ ತುಷ್ಟೀಕರಣದ ರಾಜನೀತಿ. ಇಂಥಹ ಘಟನೆ ಖಂಡಿಸ್ತೇನೆ, ಇದರ ವಿರುದ್ದ ಕಠಿಣ ಕ್ರಮ ಆಗಬೇಕು. ಉತ್ತರ ಪ್ರದೇಶದ ಯೋಗಿ ಮಾದರಿ ನಿರ್ಧಾರಗಳ ಅವಶ್ಯಕತೆ ಇದೆಯಿದ್ದು, ತಕ್ಷಣ ಕಠಿಣ ಕ್ರಮ ಆಗಬೇಕು, ಕೇಂದ್ರ ಸರ್ಕಾರ ಎನ್ಐಎ ಕಳುಹಿಸಿದೆ. 

ಉದಯಪುರ ಹತ್ಯೆ ಖಂಡಿಸಿದ ಮುಸ್ಲಿಂ ಧರ್ಮಗುರುಗಳು, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ!

ಇದೊಂದು ಮಾನವೀಯತೆಗೆ ಸವಾಲಾಗಿರುವ ಪ್ರಕರಣವಾಗಿದ್ದು, ನಿರಂತರ ಗಲಭೆ ಸೃಷ್ಟಿಸಲು ಹತ್ಯೆ ಮಾಡಿ ಸಮಾಜ ಒಡೆಯಲಾಗ್ತಿದೆ. ಜಿಹಾದಿ ಹೆಸರಿನಲ್ಲಿ ಇದನ್ನ ಮಾಡಲಾಗ್ತಿದ್ದು, ವಿಶ್ವಾಸ ಕಡಿಮೆ ಮಾಡಲಾಗ್ತಿದೆ. ಕಾಶ್ಮೀರದಲ್ಲಿ ಹಿಂದೆ ನಡೆದ ಘಟನೆಗಳು ಸಹ ‌ಹೊರಗಡೆ ಬರ್ತಿದೆ.ದೇಶದಲ್ಲಿ ಅತಂತ್ರ ಸ್ಥಿತಿ ‌ತರಬೇಕು, ಜಿಹಾದಿ ಮಾನಸಿಕತೆ ಬೆಳೆಸಲು ಎಂಬ ಯತ್ನ ನಡೆಯುತ್ತಿದ್ದು, ನರೇಂದ್ರ ಮೋದಿ ಸರ್ಕಾರ ಇದನ್ನ ಸಹಿಸಲ್ಲ, ತಡೆ ಹಾಕುತ್ತೆ. ಈ ರೀತಿಯ ಘಟನೆಗಳನ್ನು ಅಲ್ಲಲ್ಲೇ ನಿಯಂತ್ರಿಸುವ ಕೆಲಸ ಆಗಬೇಕು. ಕ್ರೂರಿ ಮಾನಸಿಕತೆಗಳಿಗೆ ಭಯದ ವಾತಾವರಣ ಸೃಷ್ಟಿಸಬೇಕಾಗಿದ್ದು, ಅಂಥಹ ವಾತಾವರಣವನ್ನ ನಮ್ಮ ಸರ್ಕಾರವೂ ಮಾಡಲಿದೆ ಎಂದು ನಳಿನ್ ಕುಮಾರ್ ‌ಕಟೀಲ್ ತಿಳಿಸಿದರು.

Latest Videos
Follow Us:
Download App:
  • android
  • ios