Asianet Suvarna News Asianet Suvarna News

ದೇವಸ್ಥಾನಗಳು, ಧಾರ್ಮಿಕ ಕ್ಷೇತ್ರಗಳು ಪಾಲಿಥೀನ್ ಮುಕ್ತವಾಗಬೇಕು: ಮಹರ್ಷಿ ಆನಂದ ಗುರೂಜಿ

ವಿಶ್ವಕ್ಕೆ ಮಾದರಿ ಆಗಬಲ್ಲ ರಾಮ ಮಂದಿರ ಪಾಲಿಥಿನ್ ಮುಕ್ತ ಆಗ ಬೇಕು. ಅಯೋಧ್ಯೆ ರಾಮ ಮಂದಿರವನ್ನು ಮಾದರಿ ಆಗಿಸಿ , ಎಲ್ಲಾ ಸ್ಥಳಿಯ ದೇವಸ್ಥಾನಗಳು ಪಾಲಿಥಿನ್ ಮುಕ್ತ ಆಗಬೇಕು ಇಂತಹ ಅಭೂತಪೂರ್ವ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಿ ಬೇಕು ಎಂದು ಡಾ.ಮಹರ್ಷಿ ಆನಂದ ಗುರೂಜಿ ಹೇಳಿದರು. 

Temples and Religious Places should become Polythene Free Says Dr Maharshi Anand Guruji gvd
Author
First Published Jan 10, 2024, 9:36 PM IST

ಬೆಂಗಳೂರು (ಜ.10): ವಿಶ್ವಕ್ಕೆ ಮಾದರಿ ಆಗಬಲ್ಲ ರಾಮ ಮಂದಿರ ಪಾಲಿಥಿನ್ ಮುಕ್ತ ಆಗ ಬೇಕು. ಅಯೋಧ್ಯೆ ರಾಮ ಮಂದಿರವನ್ನು ಮಾದರಿ ಆಗಿಸಿ , ಎಲ್ಲಾ ಸ್ಥಳಿಯ ದೇವಸ್ಥಾನಗಳು ಪಾಲಿಥಿನ್ ಮುಕ್ತ ಆಗಬೇಕು ಇಂತಹ ಅಭೂತಪೂರ್ವ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಿ ಬೇಕು ಎಂದು ಡಾ.ಮಹರ್ಷಿ ಆನಂದ ಗುರೂಜಿ ಹೇಳಿದರು. ಮಹರ್ಷಿ ಆನಂದ ಗುರೂಜಿ ಅವರು ಪರ್ಯಾವರಣ ಸಂರಕ್ಷಣ ಗತಿವಿಧಿ ಆಯೋಜಿಸಿದ್ದ ಪಾಲಿಥಿನ್ ಮುಕ್ತ ಅಯೋಧ್ಯೆಯತ್ತ ನಮ್ಮ ಚಿತ್ತ ಎಂಬ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಖ್ಯಾತ ಪತ್ರಕರ್ತೆ ಶ್ರೀಲಕ್ಷ್ಮಿ ರಾಜಕುಮಾರ ಸಂವಾದದಲ್ಲಿ ಭಾಗವಹಿಸಿ ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಪ್ರಕೃತಿ ಪೋಷಣೆ ಅವಿಭಾಜ್ಯ ಅಂಗವಾಗಿದೆ. ಆದರೆ ನಮ್ಮ ಇಂದಿನ ಬದಲಾದ ಮಾನಸಿಕತೆ ಪರಿಸರವನ್ನು ಮಲಿನಗೊಳಿಸುವಂತೆ ಮಾಡಿದೆ. ನಾವು ನಮ್ಮ ಸಂಸ್ಕೃತಿಯ ಮೂಲದಲ್ಲಿರುವ ವಿಷಯಗಳನ್ನು ನೆನಪಿಸಿಕೊಂಡು ಭೂಮಿ ತಾಯಿಗೆ ಪರಿಸರಕ್ಕೆ ಪೂರಕವಾಗಿ ಬದುಕಬೇಕು ಎಂದು ಹೇಳಿದರು. 

ರೆಸಾರ್ಟ್‌ನಲ್ಲಿ ಮಾಜಿ ಸಿಎಂ ಎಚ್‌ಡಿಕೆ ತಂತ್ರಗಾರಿಕೆ: ರಾಜಕೀಯ ಲೆಕ್ಕಚಾರದಲ್ಲಿ ಕುಮಾರಸ್ವಾಮಿ!

ತ್ಯಾಜ್ಯ ನಿರ್ವಹಣೆ ತಜ್ಞರಾದ ರಾಮ ಪ್ರಸಾದ ಪಾಲಿಥಿನ್ ತ್ಯಾಜ್ಯದ ಭೀಕರತೆಯ ಬಗ್ಗೆ ತಿಳಿಸಿದರು ಮತ್ತು ತ್ಯಾಜ್ಯ ನಿರ್ವಹಣೆಗೆ ಬರುವ ಖರ್ಚುಗಳು  ಎಷ್ಟು ಅದರಿಂದ ಪರಿಸರಕ್ಕೆ ಆರೋಗ್ಯಕ್ಕೆ ಮತ್ತು ಆರ್ಥಿಕತೆಗೆ ಎಷ್ಟು ಹಾನಿ ಎಂಬ ವಿವರವನ್ನು ತಿಳಿಸಿಕೊಟ್ಟರು.  ಪರ್ಯಾವರಣ ಸಂರಕ್ಷಣ ಗತಿವಿಧಿಯ ಜಯರಾಮ ಬೊಳ್ಳಾಜೆ ಮಾತನಾಡಿ ಪರ್ಯಾವರಣ ಸಂರಕ್ಷಣ ಗತಿವಿಧಿ ಪರಿಸರ ಸ್ನೇಹಿ ದೇವಾಲಯಕ್ಕಾಗಿ ಯಾವ ಯಾವ ಕೆಲಸ ಮಾಡುತ್ತಿದೆ, ಪಾಲಿಥಿನ್ ಮುಕ್ತ ಅಯೋಧ್ಯೆಗಾಗಿ ಸಂಘಟನೆಯ ಕಾರ್ಯಕರ್ತರ ನಿರಂತರ ಶ್ರಮದ ಬಗ್ಗೆ ಮಾಹಿತಿ ನೀಡಿದರು. 

ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿಗಳಾದ ಜಗನ್ನಾಥ ಶಾಸ್ತ್ರಿ ಮಾತನಾಡಿ ನಮ್ಮಲ್ಲಿ ಬಳಸಿ ಬಿಸಾಡುವ (use and though) ಸಂಸ್ಕೃತಿ ಇಂದು ಹೆಚ್ಚಾಗುತ್ತಿದೆ, ಆದರೆ ಈ ಮನಸ್ಥಿತಿ ಬದಲಾಗಬೇಕಿದೆ, ಮೂಲದಲ್ಲಿ ಇರುವ ಅಂಶದ ಆಳ ತಿಳಿಯಬೇಕು ಎಂದು ಹೇಳಿದರು ಮತ್ತು ಆಯೋಧ್ಯೆಯಲ್ಲಿ ಅಳವಡಿಸಿರುವ ಪರಿಸರ ಸ್ನೇಹಿ ಅಂಶಗಳ ಸ್ಥೂಲ ಮಾಹಿತಿ ನೀಡಿದರು.

ಕಾಫಿನಾಡ ಪಶ್ಚಿಮಘಟ್ಟ ಕಾಡಿನಲ್ಲಿ ಸೀಕ್ರೆಟ್ ರಿಯಲ್ ಎಸ್ಟೇಟ್ ದಂಧೆ!

ಪಾಲಿಥಿನ್ ಮುಕ್ತ ಅಯೋಧ್ಯೆ ಮತ್ತು ಪಾಲಿಥಿನ್ ಮುಕ್ತ ಧಾರ್ಮಿಕ ಕ್ಷೇತ್ರಗಳು ಅನ್ನುವ ಅಂಶ ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡಿ ಬದಲಾವಣೆ ಬರಬೇಕು, ಆಡಳಿತ ವ್ಯವಸ್ಥೆಗಳು ಸಹಕರಿಸಿದರೆ ಉತ್ತಮ ಫಲಿತಾಂಶ ಸಾಧ್ಯ ಎಂಬ ಒಮ್ಮತದ ಅಭಿಪ್ರಾಯ ಸಂವಾದ ಕಾರ್ಯಕ್ರಮದಲ್ಲಿ ಅಭಿವ್ಯಕ್ತವಾಯಿತು. ಪರ್ಯಾವರಣ ಸಂರಕ್ಷಣ ಗತಿವಿಧಿ ಜನ ಸಂವಾದ ವಿಭಾಗದ ಮುಖ್ಯಸ್ಥ ಸಹನಾ ಹೆಗಡೆ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಪರ್ಯಾವರಣ ಸಂರಕ್ಷಣ ಗತಿವಿಧಿ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕರಾದ ವೆಂಕಟೇಶ ಸಂಗನಾಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Follow Us:
Download App:
  • android
  • ios