2100ಕ್ಕೂ ಇದೇ ಕ್ಯಾಲೆಂಡರ್! ಇನ್ನು 6 ವರ್ಷಕ್ಕೆ ಇದೇ ಪಂಚಾಂಗ
2100ಕ್ಕೂ ಇದೇ ಕ್ಯಾಲೆಂಡರ್! ಇನ್ನು 6 ವರ್ಷಕ್ಕೆ ಇದೇ ಪಂಚಾಂಗ | ಗಣಿತಶಾಸ್ತ್ರ ವಿಶ್ಲೇಷಿಸಿ ನಾರಾಯಣ ಮಾಹಿತಿ
ಬೆಂಗಳೂರು(ಜ.03): ಈ ಶತಮಾನದ ಕೊನೆಯ ವರ್ಷವಾದ 2100ನೇ ಇಸವಿಯ ಕ್ಯಾಲೆಂಡರ್ ಮತ್ತು ಈ ವರ್ಷದ ಕ್ಯಾಲೆಂಡರ್ ಒಂದೇ ಆಗಿದೆ! ಹಾಗೆಯೇ ನೀವು ಇನ್ನೂ ಹೊಸ ಕ್ಯಾಲೆಂಡರ್ ಕೊಂಡು ಕೊಂಡಿಲ್ಲ ಎಂದಾದರೆ 2010ರ ಕ್ಯಾಲೆಂಡರ್ ನಿಮ್ಮಲ್ಲಿದ್ದರೆ ಅದನ್ನು ಬಳಸುವ ಅವಕಾಶವೂ ಇದೆ!
ಏಕೆಂದರೆ, ಈ ಸಾಲಿನ ಕ್ಯಾಲೆಂಡರ್ ಹಾಗೂ 2010 ವರ್ಷದ ಕ್ಯಾಲೆಂಡರ್ ಒಂದೇ ರೀತಿಯಿವೆ. ಗಣಿತ ಶಾಸ್ತ್ರದ ನಿವೃತ್ತ ಪ್ರೊಫೆಸರ್ ಡಾ.ಕೆ.ವಿ.ನಾರಾಯಣ 2021ರ ವಿಶೇಷತೆಯನ್ನು ಗಣಿತ ಶಾಸ್ತ್ರದ ನೆಲೆಯಲ್ಲಿ ವಿಶ್ಲೇಷಿಸಿ ಈ ಮಾಹಿತಿಯನ್ನು ನೀಡಿದ್ದಾರೆ.
ಅಹಮದಾಬಾದ್‌ನಲ್ಲಿ ಏಕಶಿಲಾ ಪ್ರತಿಮೆಗಳು ಕಂಡು ಮಾಯ..ಅನ್ಯಗ್ರಹ ಜೀವಿಗಳ ಆಟವೇ?
2010ನೇ ಕ್ಯಾಲೆಂಡರ್ ಮತ್ತು 2021ನೇ ಕ್ಯಾಲೆಂಡರ್ ಒಂದೇ ರೀತಿ ಇದೆ. ಇದು 2027 ಮತ್ತು ಈ ಶತಮಾನದ ಕೊನೆಯ ವರ್ಷವಾಗಿರುವ 2100ಕ್ಕೆ ಪುನಾರವರ್ತನೆ ಆಗಲಿದೆ. ಹಾಗೆಯೇ ಈ ವರ್ಷದ ಆರಂಭ ಮತ್ತು ವರ್ಷಾಂತ್ಯ ಎರಡೂ ಶುಕ್ರವಾರವೇ ಇರಲಿದೆ ಎಂದು ತಿಳಿಸಿದ್ದಾರೆ.
ಸತತವಾಗಿ ಬರುವ ಎರಡು ಅವಿಭಾಜ್ಯ ಸಂಖ್ಯೆಗಳಾದ 43 ಮತ್ತು 47ನ್ನು ಗುಣಿಸಿದಾಗ 2021 ಬರುತ್ತದೆ. 2021 ನ್ನು 1, 43,47 ಮತ್ತು 2021 ರಿಂದ ಮಾತ್ರ ವಿಭಜಿಸಬಹುದಾಗಿದೆ. ಈ ನಾಲ್ಕು ವಿಭಾಜಕಗಳ ಒಟ್ಟು ಮೊತ್ತ 2112 ಆಗಿದೆ. 2112 ಎಂಬುದು ಎಡಗಡೆಯಿಂದ ಬರೆದರೂ, ಬಲಗಡೆಯಿಂದ ಬರೆದರೂ ಒಂದೇ ರೀತಿ ಇರುವ ಸಂಖ್ಯೆಯಾಗಿದೆ ಎಂದು ನಾರಾಯಣ್ ವಿವರಿಸಿದ್ದಾರೆ. 2021ನೇ ಇಸವಿಯೂ 21ನೇ ಶತಮಾನದ 21ನೇ ವರ್ಷವಾಗಿದೆ ಎಂದು ಅವರು ಹೇಳಿದ್ದಾರೆ.