Covid-19 Crisis: ಸೋಂಕಿನ ಲಕ್ಷಣ ಇದ್ದರೆ ರ‍್ಯಾಪಿಡ್ ಟೆಸ್ಟ್ ಕಡ್ಡಾಯ
* ವರದಿ ನೆಗೆಟಿವ್ ಬಂದರೆ ಆರ್‌ಟಿಪಿಸಿಆರ್ ಮಾಡಿ
* ಆರೋಗ್ಯ ಸಿಬ್ಬಂದಿ ಆರೈಕೆ ಅವಧಿ 5 ದಿನಕ್ಕೆ ಇಳಿಕೆ
* 60 ವರ್ಷ ಮೇಲ್ಪಟ್ಟವರು ಪರೀಕ್ಷೆ ನಂತರ ಕಡ್ಡಾಯವಾಗಿ ಏಳು ದಿನ ಹೋಂ ಕ್ವಾರಂಟೈನ್‌ನಲ್ಲಿರಬೇಕು
ಬೆಂಗಳೂರು(ಜ.20): ಕೊರೋನಾ(Coronavirus) ಸೋಂಕು ಲಕ್ಷಣಗಳಿರುವವರಿಗೆ ಕಡ್ಡಾಯವಾಗಿ ರ‍್ಯಾಪಿಡ್ ಆ್ಯಂಟಿಜನ್ ಸೋಂಕು ಪರೀಕ್ಷೆ(Rapid Test) ನಡೆಸಬೇಕು ಎಂದು ಆರೋಗ್ಯ ಇಲಾಖೆ(Department of Health) ಸೂಚಿಸಿದೆ.
ಸೋಂಕು ಪರೀಕ್ಷೆ, ಸಂಪರ್ಕಿತರ ಪತ್ತೆ ಹಾಗೂ ಕ್ವಾರಂಟೈನ್(Quarantine) ಕುರಿತು ಸುತ್ತೋಲೆ ಹೊರಡಿಸಿದ್ದು, ಸೋಂಕು ಲಕ್ಷಣ ಹೊಂದಿರುವವರಿಗೆ ಕಡ್ಡಾಯವಾಗಿ ರ‍್ಯಾಪಿಡ್ ಪರೀಕ್ಷೆ ನಡೆಸಬೇಕು, ಒಂದು ವೇಳೆ ವರದಿ ನೆಗೆಟಿವ್ ಬಂದರೆ ಆರ್‌ಟಿಪಿಸಿಆರ್ ಪರೀಕ್ಷೆಗೆ(RTPCR Test) ಒಳಪಡಿಸಬೇಕು. ಇನ್ನು ಸೋಂಕಿತ ಕರ್ತವ್ಯ ನಿರ್ವಹಿಸುವ ಸ್ಥಳ ಮತ್ತು ವಾಸಿಸುವ ಮನೆ ಸೇರಿದಂತೆ ಎಲ್ಲ ಪ್ರಾಥಮಿಕ ಸಂಪರ್ಕಿತರು, ಸೋಂಕಿನ ಲಕ್ಷಣ ಹೊಂದಿರುವವರು, ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಕಡ್ಡಾಯ ಪರೀಕ್ಷಿಸಬೇಕು. ಸೋಂಕಿತರ ಹೈರಿಸ್ಕ್ ಸಂಪರ್ಕಿತರು ಅಂದರೆ, ಆರೋಗ್ಯ ಸಮಸ್ಯೆಯುಳ್ಳವರು, 60 ವರ್ಷ ಮೇಲ್ಪಟ್ಟವರು ಪರೀಕ್ಷೆ ನಂತರ ಕಡ್ಡಾಯವಾಗಿ ಏಳು ದಿನ ಹೋಂ ಕ್ವಾರಂಟೈನ್‌ನಲ್ಲಿರಬೇಕು ಎಂದು ತಿಳಿಸಲಾಗಿದೆ.
Omicron Variant: ಬೆಂಗ್ಳೂರಲ್ಲಿ ತಾಯಿ-ಮಗನಿಗೆ ಒಮಿಕ್ರೋನ್: ಸಾಮೂಹಿಕ ಪರೀಕ್ಷೆ
ಆರೋಗ್ಯ ಸಿಬ್ಬಂದಿ ಆರೈಕೆ ಅವಧಿ 5 ದಿನಕ್ಕೆ ಇಳಿಕೆ
ಆರೋಗ್ಯ ಸಿಬ್ಬಂದಿ ಆರೈಕೆ ಅವಧಿಯನ್ನು ಐದು ದಿನಕ್ಕೆ ಇಳಿಸಲಾಗಿದೆ. ಆರೋಗ್ಯ ಸಿಬ್ಬಂದಿ ಸೋಂಕು ಲಕ್ಷಣ ಕಾಣಿಸಿಕೊಂಡರೆ ಪರೀಕ್ಷೆಗೊಳಗಾಗಬೇಕು, ಸೋಂಕು ದೃಢಪಟ್ಟರೆ ಐದು ದಿನ ಹೋಂ ಐಸೋಲೇಷನ್ ಅಥವಾ ಕೊರೋನಾ ಕೇರ್ ಸೆಂಟರ್‌ನಲ್ಲಿ ಆರೈಕೆ/ಚಿಕಿತ್ಸೆಯಲ್ಲಿರಬೇಕು. ಇನ್ನು ಸೋಂಕು ದೃಢಪಟ್ಟ ಆರೋಗ್ಯ ಸಿಬ್ಬಂದಿಯ ಹೈರಿಸ್ಕ್ ಸಂಪರ್ಕಿತರು ಮೂರು ದಿನ ಹೋಂ/ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕೊರೋನಾ ಟೆಸ್ಟಿಂಗ್ ಕಮ್ಮಿ ಮಾಡಬೇಡಿ: ಕೇಂದ್ರ ಸರ್ಕಾರ
ಕೆಲವು ರಾಜ್ಯಗಳು ಕೊರೋನಾ ಪರೀಕ್ಷೆಯನ್ನು (Covid Testing) ಕಡಿಮೆಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಸೋಮವಾರ ಸೂಚಿಸಿದೆ. ಈ ಸಂಬಂಧ ಎಲ್ಲಾ ರಾಜ್ಯ (States) ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ರವಾನಿಸಿರುವ ಕೇಂದ್ರ ಹೆಚ್ಚುವರಿ ಆರೋಗ್ಯ ಕಾರ‍್ಯದರ್ಶಿ ಆರತಿ ಅಹುಜಾ (Arti Ahuja), ತತ್‌ಕ್ಷಣದಿಂದಲೇ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸುವಂತೆ ಸಲಹೆ ನೀಡಿದ್ದಾರೆ. ಈ ಮೂಲಕ ಕೆಲವು ನಿರ್ದಿಷ್ಟಪ್ರದೇಶಗಳ ಕೋವಿಡ್ ಪಾಸಿಟಿವಿಟಿ (Covid Positivity) ಮೇಲೆ ನಿಗಾ ಇಡಲು ಕೋರಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ವೇರಿಯಂಟ್ ಆಫ್ ಕನ್ಸರ್ನ್ ಎಂದು ಗುರುತಿಸಿರುವ ಒಮಿಕ್ರೋನ್ ವೈರಸ್ (Omicron Virus) ದೇಶಾದ್ಯಂತ ಹರಡುತ್ತಿದೆ. ಈ ರೂಪಾಂತರಿ ನಿಗ್ರಹಕ್ಕೆ ಆಕ್ರಮಣಕಾರಿ ಪರೀಕ್ಷೆಯೇ ಪ್ರಮುಖ ಮದ್ದು. ಆದಾಗ್ಯೂ ಕೆಲ ರಾಜ್ಯಗಳಲ್ಲಿ ಕಡಿಮೆ ಪ್ರಮಾಣ ಪರೀಕ್ಷೆ ನಡೆಯುತ್ತಿದೆ ಎಂಬ ವರದಿಗಳು ಕೇಂದ್ರ ಸರ್ಕಾರಕ್ಕೆ ಲಭಿಸಿವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಪರೀಕ್ಷೆಯಿಂದ ವೇಗವಾಗಿ ಹೊಸ ಕೊರೋನಾ ಹಾಟ್‌ಸ್ಪಾಟ್, ಕ್ಲಸ್ಟರ್ ಗುರುತಿಸಬಹುದು. ಇದರಿಂದ ಸೋಂಕಿತರ ಸಂಪರ್ಕ ಪತ್ತೆ ಹಚ್ಚುವಿಕೆ, ಕ್ವಾರಂಟೈನ್ ಮತ್ತಿತರ ಸೋಂಕು ನಿಯಂತ್ರಕ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬಹುದು. ತನ್ಮೂಲಕ ಜಿಲ್ಲೆ ಮತ್ತು ರಾಜ್ಯಗಳು ಸೋಂಕನ್ನು ನಿಗ್ರಹಿಸಬಹುದು ಎಂದು ಅಹುಜಾ ಹೇಳಿದ್ದಾರೆ.
Omicron: ವಿದೇಶದಿಂದ ಬಂದವರಿಗೆ ಕಡ್ಡಾಯ ಟೆಸ್ಟ್: ಸಿಎಂ ಬೊಮ್ಮಾಯಿ
ಬಲವಂತವಾಗಿ ಲಸಿಕೆ ನೀಡುವಂತಿಲ್ಲ: ಯಾವುದೇ ವ್ಯಕ್ತಿಯ ಸಮ್ಮತಿ ಪಡೆಯದೇ ಬಲವಂತವಾಗಿ ಕೋವಿಡ್ ಲಸಿಕೆ (Covid Vaccine) ನೀಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಲಸಿಕೆ ಪಡೆಯಲು ನಿರಾಕರಿಸುವವರಿಗೆ ಬಲವಂತವಾಗಿ ಲಸಿಕೆ ನೀಡುವುದು ಹಾಗೂ ಸರ್ಕಾರ ಸೌಲಭ್ಯ ನಿರಾಕರಿಸುವಂತಹ ಘಟನೆಗಳು ದೇಶಾದ್ಯಂತ ನಡೆಯುತ್ತಿರುವಾಗಲೇ ಕೇಂದ್ರ ಸರ್ಕಾರದ ಈ ಸ್ಪಷ್ಟನೆ ಮಹತ್ವ ಪಡೆದುಕೊಂಡಿದೆ.
‘ಕೋವಿಡ್ ಲಸಿಕಾಕರಣ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರಲ್ಲಿ ವ್ಯಕ್ತಿಯ ಸಮ್ಮತಿ ಪಡೆಯದೆ ಬಲವಂತವಾಗಿ ಲಸಿಕೆ ನೀಡುವ ಕುರಿತು ಯಾವುದೇ ಪ್ರಸ್ತಾಪ ಇಲ್ಲ’ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ಅಫಿಡವಿಟ್‌ನಲ್ಲಿ ತಿಳಿಸಿದೆ. ‘ಅಂಗವೈಕಲ್ಯ ಹೊಂದಿದವರಿಗೆ ಆದ್ಯತೆ ಮೇರೆಗೆ ಹಾಗೂ ಮನೆ ಬಾಗಿಲಿಗೆ ಕೊರೋನಾ ಲಸಿಕೆ ನೀಡಬೇಕು’ ಎಂದು ಎವಾರಾ ಫೌಂಡೇಷನ್ ಎಂಬ ಎನ್‌ಜಿಒ ಸುಪ್ರೀಂಕೋರ್ಟ್‌ನಲ್ಲಿ (Supreme Court) ಅರ್ಜಿ ಸಲ್ಲಿಸಿತ್ತು. ಅದರ ವಿಚಾರಣೆ ವೇಳೆ ಕೇಂದ್ರ ಆರೋಗ್ಯ ಸಚಿವಾಲಯ ಪ್ರಮಾಣಪತ್ರ ಸಲ್ಲಿಕೆ ಮಾಡಿದೆ.