RSS ಮುಖ್ಯಸ್ಥ Mohan Bhagwat ಹೇಳಿಕೆಗೆ ಮುತಾಲಿಕ್ ಅಸಮಾಧಾನ

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಹೇಳಿಕೆ ನೀಡಿದ ಹಿನ್ನೆಲೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.

pramod muthalik disappointed about rss chief mohan bhagwat statement gow

ಕಲಬುರಗಿ (ಜೂ. 4): ಪ್ರತಿಯೊಂದು ಮಸೀದಿಯಲ್ಲಿ ಲಿಂಗ ಹುಡುಗ ಅವಶ್ಯಕತೆಯಿಲ್ಲ (no need to find gender in every mosque) ಎನ್ನುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. 

ಕಲಬುರ್ಗಿಯಲ್ಲಿ ಎಂದು ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಪ್ರಮೋದ್ ಮುತಾಲಿಕ್,  ಪ್ರತಿ ಮಸೀದಿಯಲ್ಲಿ ಲಿಂಗವನ್ನು ಹುಡುಕುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ್ದು, ಅವರು ಹೇಳಿಕೆ ನೀಡಿದ ಹಿನ್ನೆಲೆ ಅರ್ಥವಾಗುತ್ತಿಲ್ಲ. ಇಡೀ ದೇಶದಲ್ಲಿ ಹಿಂದೂ ಸಮಾಜ ಜಾಗೃತವಾಗಿದೆ. 96 ವರ್ಷಗಳಿಂದ ಆರ್‌ಎಸ್‌ಎಸ್‌ನ ಪ್ರಯತ್ನಗಳನ್ನು ದೇಶದ ಹಿಂದೂ ಸಂಘಟನೆಗಳು ಅರಿತುಕೊಂಡಿವೆ. ಮೋಹನ್ ಭಾಗ್ವತ್ ಅವರ ಹೇಳಿಕೆ ನನಗೆ ತೀವ್ರ ಬೇಸರ ತರಿಸಿದೆ. 

ನನ್ನಂಥವರಿಗೆ ಅನ್ಯಾಯದ ವಿರುದ್ಧ ಹೋರಾಟ ಮಾಡಲು ಕಲಿಸಿದ್ದು ಆರೆಸ್ಸೆಸ್.‌ ಆರೆಸ್ಸೆಸ್ ಏನು ಹೇಳಿದೆಯೋ ಅದನ್ನೇ ನಾವು ಪಾಲಿಸುತ್ತಿದ್ದೇವೆ. ನಮ್ಮ ದೇವಸ್ಥಾನಗಳನ್ನು ಭಗ್ನ ಮಾಡಿ ಮಸೀದಿ ಕಟ್ಟಿರುವುದನ್ನು ಸಂವಿಧಾನಬದ್ಧವಾಗಿ ಮತ್ತೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಮೋಹನ್ ಭಾಗವತ್ ಜಿ ಅವರ ಹೇಳಿಕೆ ತೀವ್ರ ನೋವು ತರಿಸಿದೆ ಎಂದರು. 

ಮಠಾಧೀಶರ ಹೋರಾಟ ತಡೆದರೆ ರಾಜ್ಯಕ್ಕೆ ಬೆಂಕಿ ಹತ್ತುತ್ತೆ : Pramod Muthalik ಎಚ್ಚರಿಕೆ

ಬಹಳ ವರ್ಷಗಳ ನಂತರ ಹಿಂದೂ ಸಮಾಜದಲ್ಲಿ ಬಹುದೊಡ್ಡ ಜಾಗೃತಿ ಮೂಡಿದೆ.‌ ಒಂದಿರಲಿ ಅದು ಸಾವಿರ ಇರಲಿ ಅಂತಹ ದೇವಸ್ಥಾನಗಳನ್ನು ಕಾನೂನುಬದ್ಧವಾಗಿ ಪಡೆಯುವ ಕಾರ್ಯ ಮಾಡಲೇಬೇಕು ಅದು ತಪ್ಪಲ್ಲ ಎಂದು ಪ್ರಮೋದ್ ಮುತಾಲಿಕ್ ಸಮರ್ಥಿಸಿಕೊಂಡರು. ಇದನ್ನು ತಡೆಯುವ ಕಾರ್ಯ ದಯವಿಟ್ಟು ಮಾಡಬೇಡಿ ಎಂದು ಅವರು ಮೋಹನ್ ಭಾಗ್ವತ್ ಅವರಿಗೆ ಮನವಿ ಮಾಡಿಕೊಂಡರು.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಆಂಜನೇಯ ದೇವಸ್ಥಾನವನ್ನು ಧ್ವಂಸಮಾಡಿ ಮಸೀದಿ ನಿರ್ಮಾಣ ಮಾಡಿದ್ದೆ ಟಿಪ್ಪುಸುಲ್ತಾನ್. ಈಗ ಅಲ್ಲಿ ಆಂಜನೇಯನಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು. ಜೊತೆಗೆ  ಮಠಾಧೀಶರ ಒಕ್ಕೂಟ ಜೂ. 12ರಂದು ಕರೆಕೊಟ್ಟಿರುವ ಹೋರಾಟ ತಡೆದರೆ ಬೆಂಕಿ ಬೀಳುತ್ತೆ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ. 

ಕಲ್ಬುರ್ಗಿಯಲ್ಲಿ ಇಂದು ಸುವರ್ಣನ್ಯೂಸ್ ಜೊತೆ ಮಾತನಾಡಿದ ಅವರು, ಹಿಂದೂಪರ ಸಂಘಟನೆಗಳಿಂದ ಶ್ರೀರಂಗಪಟ್ಟಣ ಚಲೋ ಹಮ್ಮಿಕೊಂಡಿರುವುದುರಲ್ಲಿ ತಪ್ಪೇನಿದೆ? ಸರ್ಕಾರ ಅವರನ್ನು ತಡೆದರುವುದರಲ್ಲಿ ತಪ್ಪಿದೆ ಎಂದರು. 

ಖಾಸಗಿ ಪ್ಲೇ ಸ್ಕೂಲ್ ಗಳಿಗೆ ಸೆಡ್ಡು ಹೊಡೆದ Udupiಯ ಹವಾನಿಯಂತ್ರಿತ ಅಂಗನವಾಡಿ 

ಇನ್ನು ಶ್ರೀರಂಗಪಟ್ಟಣದಲ್ಲಿ ಆಂಜನೇಯ ದೇವಸ್ಥಾನ ಭಗ್ನ ಮಾಡಿ ಮಸೀದಿ ನಿರ್ಮಾಣ ಮಾಡಿದ್ದೇ ಟಿಪ್ಪು ಸುಲ್ತಾನ್.‌ ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಅದು ದೇವಸ್ಥಾನ ಎನ್ನುವುದಕ್ಕೆ ಬೇಕಾದ ಎಲ್ಲಾ ಕುರುಹುಗಳು ಅಲ್ಲಿ ಸಿಕ್ಕಿವೆ. ಈ ಹೋರಾಟ ಇಂದು ನಿನ್ನೆಯದಲ್ಲ.. ಕಳೆದ 20 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಈಗ ಈ ಹೋರಾಟ ಪೀಕ್ ಹಂತಕ್ಕೆ ಬಂದು ನಿಂತಿದೆ ಎಂದರು.

ವಿ.ಹೆಚ್.ಪಿ, ಬಜರಂಗದಳ ಕಾರ್ಯಕರ್ತರು ಅಲ್ಲಿ ಪೂಜೆ ಮಾಡುವುದಕ್ಕಾಗಿ ತೆರಳುತ್ತಿದ್ದಾರೆ.‌ ಸರ್ಕಾರ ಇವರನ್ನು ತಡೆದಿದ್ದು  ತಪ್ಪು. ಸರಕಾರ ಮಸೀದಿ ಒಳಗಡೆ ಅತಿಕ್ರಮಣ ಮಾಡಿರುವವರನ್ನು ತಡೆಯಬೇಕಿತ್ತು. ಅಲ್ಲಿ ನಮಾಜ್ ಮಾಡುತ್ತಿರುವುದು,  ಮದರಸ ಮಾಡಿದ್ದು ಅಕ್ರಮವಾಗಿ. ಇದು ಪ್ರಾಚ್ಯವಸ್ತು ಇಲಾಖೆ ಕಟ್ಟಡ. ಯಾರು ಅತಿಕ್ರಮಣ ಮಾಡುವಂತಿಲ್ಲ.  ಆದ್ರೂ ಒಳಗಡೆ ಹೇಗೆ ನಮಾಜ್ ಮಾಡುತ್ತಿದ್ದಾರೆ ? ಅದನ್ನು ತಡೆಯುವುದು ಸರಕಾರದ ಕೆಲಸ ಅಲ್ಲವೇ ಎಂದು ಮುತಾಲಿಕ್ ಖಾರವಾಗಿ ಪ್ರಶ್ನಿಸಿದರು. 

ಅದನ್ನು ತಡೆಯುವುದು ಬಿಟ್ಟು ಪೂಜೆ ಮಾಡುತ್ತಿರುವರನ್ನು ತಡೆಯುತ್ತಿರುವುದು ಅಕ್ಷ್ಯಮ್ಯ.  ಏನಾದ್ರೂ ಗಲಭೆಗಳಾದ್ರೆ ಇದಕ್ಕೆ ಸರಕಾರವೇ ನೇರ ಹೊಣೆಯಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು. 

Latest Videos
Follow Us:
Download App:
  • android
  • ios