ಹಿಜಾಬ್ ವಿವಾದದ ವಿಸ್ತ್ರತ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್
ಕರ್ನಾಟಕದಲ್ಲಿ ಭಾರೀ ಸದ್ದು ಮಾಡಿದ್ದ ಹಿಜಾಬ್ ವಿವಾದದ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ಮುಂದೂಡಿದೆ. ಹಿಜಾಬ್ ವಿವಾದದ ವಾದ- ಪ್ರತಿವಾದ ಈ ಕೆಳಗಿನಂತಿದೆ ನೋಡಿ.
ನವದೆಹಲಿ, (ಸೆಪ್ಟೆಂಬರ್.05): ಉಡುಪಿಯಲ್ಲಿ ಶುರುವಾಗಿ ರಾಷ್ಟ್ರಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಹಿಜಾಬ್ ವಿವಾದ ಪ್ರಕರಣದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 7ಕ್ಕೆ ಮುಂದೂಡಿದೆ.
ಹಿಜಾಬ್‌ಗೆ ತರಗತಿಯಲ್ಲಿ ನಿರ್ಬಂಧ ವಿಧಿಸಿದಕ್ಕೆ ಹೈಕೋರ್ಟ್ ನಲ್ಲಿ ನೀಡಿರುವ ತೀರ್ಪಿನ ವಿರುದ್ಧ ಒಟ್ಟು 23 ಅರ್ಜಿ ಸಲ್ಲಿಕೆಯಾಗಿತ್ತು. ಇಂದು(ಸೆ.05) ಸುಪ್ರೀಂ ಕೋರ್ಟ್‌ನಲ್ಲಿ ಹಿಜಾಬ್ ವಿವಾದ ಬಗ್ಗೆ ಪರ-ವಿರೋಧದ ಬಗ್ಗೆ ವಿಸ್ತ್ರತ ವಿಚಾರಣೆ ನಡೆಸಿದ ನ್ಯಾ. ಹೇಮಂತ್ ಗುಪ್ತಾ ನೇತೃತ್ವದ ಪೀಠ, ಮುಂದಿನ ವಿಚಾರಣೆಯನ್ನು ಸೆ.7 ಮಧ್ಯಾಹ್ನ 2 ಗಂಟೆಗೆ ನಿಗದಿಪಡಿಸಿದೆ.
ಹಿಜಾಬ್‌ಗೆ ಸಿಗದ ಅನುಮತಿ ಕರಾವಳಿಯಲ್ಲಿ ಟೀಸಿ ಪಡೆದ ನೂರಾರು ಮುಸ್ಲಿಂ ವಿದ್ಯಾರ್ಥಿನಿಯರು!
ಹಿಜಾಬ್ ಪರ ವಕೀಲ ಸಂಜಯ್ ಹೆಗ್ಡೆ ವಾದ ಮಂಡಿಸಿದರು. ಇನ್ನು ವಾದ- ಪ್ರತಿವಾದ ಈ ಕೆಳಗಿನಂತಿದೆ ನೋಡಿ.
ನ್ಯಾ. ಹೇಮಂತ್ ಗುಪ್ತಾ: ಸಂವಿಧಾನದ ಪ್ರಕಾರ ನಮ್ಮದು ಜಾತ್ಯಾತೀತ ರಾಷ್ಟ್ರ. ಸರಕಾರಿ ಸಂಸ್ಥೆಗಳಲ್ಲಿ ಧರ್ಮ ಸೂಚಕ ಉಡುಪಿ ಧರಿಸಬಹುದೇ..? ಧರ್ಮ ಸೂಚಕ ಉಡುಪು ಧರಿಸಬಹುದು ಎಂಬುದು ನಿಮ್ಮ ವಾದವೇ..? ಈ ವಿಚಾರದಲ್ಲಿ ವಾದ ಮಂಡಿಸಲು ಇಚ್ಚಿಸುವಿರಾ..? ಎಂದು ನ್ಯಾ. ಹೇಮಂತ್ ಗುಪ್ತಾ ಅರ್ಜಿದಾರ ವಕೀಲರಿಗೆ ಪ್ರಶ್ನಿಸಿದರು.
ಅರ್ಜಿದಾರರ ಪರ ವಕೀಲ ರಾಜೀವ್ ಧವನ್ : ಇದಕ್ಕೆ ಅರ್ಜಿದಾರರ ಪರ ವಕೀಲ ರಾಜೀವ್ ಧವನ್ ಪ್ರತಿಕ್ರಿಯಿಸಿ, ಕೋರ್ಟ್ ನಂ 2ರಲ್ಲಿ ಪೇಟಾ ಧರಿಸಿದ ನ್ಯಾಯಾಣಧೀಶರ ಚಿತ್ರವಿದೆ. ಅದನ್ನು ನೋಡಿ ನ್ಯಾಯಾಧೀಶದರೇ..?
ನ್ಯಾ. ಗುಪ್ತಾ: ಪೇಟಾ ಧರ್ಮ ಸೂಚಿಸುವ ಉಡುಪು ಅಲ್ಲ. ತನ್ನ ತಾತ ಪೇಟಾ ಧರಿಸುತ್ತಿದ್ದರು ,ನಾನು ಧರಿಸುತ್ತಿಲ್ಲ. ಪೇಟಾ ಅಥವಾ ಮುಂಡಾಸನ್ನು ಧರ್ಮಕ್ಕೆ ಹೋಲಿಸಬೇಡಿ.
ಹಿಜಾಬ್ ವಿವಾದ: ಮಂಗಳೂರು ವಿವಿ ಕಾಲೇಜು 'ಬಾಹ್ಯ ಶಕ್ತಿಗಳು' ಅಂದಿದ್ದು ಯಾರಿಗೆ?
ಸಂಜಯ್ ಹೆಗ್ಡೆ: ಹಿಜಾಬ್ ವಿಚಾರವಾಗಿ ಏಕಪಕ್ಷೀಯ ನಿರ್ಧಾರ ಮಾಡಲಾಗಿದೆ . ಶಾಲೆಯ ಕಮಿಟಿಯಲ್ಲಿ ಸ್ಥಳೀಯ ಶಾಸಕರೇ ಅಧ್ಯಕ್ಷರು. ಅವರು ಹಿಜಾಬ್ ಗೆ ವಿರುದ್ಧವಾಗಿದ್ದಾರೆ. ಇಂತಹ ಶಾಸಕ ಅಧ್ಯಕ್ಷರಿಂದ ಪಾರದರ್ಶಕತೆ ಹೇಗೆ ಸಾಧ್ಯ. ಹಿಜಾಬ್ ವಿರುದ್ಧ ಅಭಿಯಾನ ಆರಂಭದಲ್ಲಿ. ವಿದ್ಯಾರ್ಥಿನಿಯರ ಬಳಿ ಒತ್ತಾಯವಾಗಿ ಸಹಿ ಮಾಡಿಸಿಕೊಂಡಿದ್ದಾರೆ. ಹಿಜಾಬ್ ಧರಿಸಿ ಬರುವುದಿಲ್ಲ ಎಂದು ಸಹಿ ಮಾಡಿಸಿಕೊಂಡಿದ್ದಾರೆ. ಈ ಹಿಂದೆಯೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುತ್ತಿದ್ದರು. ಅದಕ್ಕೆ ಬಹಳಷ್ಟು ದಾಖಲೆಗಳು, ಪುರಾವೆ ಇವೆ. ಆದರೆ ಏಕಾಏಕಿ ಹಿಜಾಬ್ ಧರಿಸದಂತೆ ಶಿಕ್ಷಕಿ ಸೂಚನೆ ನೀಡುತ್ತಾರೆ . ತರಗತಿಯಿಂದ ವಿದ್ಯಾರ್ಥಿನಿಯನ್ನು ಹೊರಕಳುಹಿಸಲಾಗುತ್ತೆ. ಪ್ರಾಂಶುಪಾಲರ ಬಳಿ ಚರ್ಚಿಸುವಂತೆ ಹೇಳಲಾಗುತ್ತೆ. ಆದರೆ ಪ್ರಾಂಶುಪಾಲರು ಒಂದು ದಿನ ಚರ್ಚೆಯನ್ನೇ ನಡೆಸಿಲ್ಲ. ಅಂದು ವಿದ್ಯಾರ್ಥಿನಿಯರಿಗೆ ವಿದ್ಯಾಬ್ಯಾಸಕ್ಕೆ ತೊಂದರೆ ಆಗಿದೆ. ಅಲ್ಲಿಂದ ಹಿಜಾಬ್ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ. ಮಾಧ್ಯಮಗಳಲ್ಲೂ ಹಿಜಾಬ್ ವಿಚಾರ ಹೈಡ್ರಾಮ ಸೃಷ್ಟಿಮಾಡಲಾಯಿತು ಎಂದು ವಕೀಲ ಸಂಜಯ್ ಕೇಸ್ ಬಗ್ಗೆ ವಿವರಣೆ ನೀಡಿದರು.
ನ್ಯಾ. ಗುಪ್ತಾ: ಸ್ಕರ್ಟ್,ಮಿಡ್ಡಿಗಳಲ್ಲಿ ಶಾಲೆಗಳಿಗೆ ಬರಬಹುದೇ..? -
ಸಂಜಯ್ ಹೆಗ್ಡೆ: ಅರ್ಜಿದಾರರ ಪರ ವಕೀಲ ವಾದದ ಸಂದರ್ಭದಲ್ಲಿ ಉಡುಪಿ ಹೆಸರು ಪದೆ ಪದೆ ಪ್ರಸ್ತಾಪ.
ನ್ಯಾ. ಗುಪ್ತಾ: ಇದಕ್ಕೆ ಮೂಲಭೂತ ಹಕ್ಕು ವಿಚಾರದ ಪ್ರಶ್ನೆ ಬಂದಾಗ ಕೇವಲ ಉಡುಪಿಗೆ ಸೀಮಿತವಾಗಿರುವುದಿಲ್ಲ
ಸಂಜಯ್ ಹೆಗ್ಡೆ: ಅದಕ್ಕೆ ಹೆಗ್ಗಡೆ ಈ ಗಲಾಟೆ ಆರಂಭವಾಗಿದ್ದೆ ಉಡುಪಿಯಲ್ಲಿ ಹಾಗಾಗಿ ಪ್ರಸ್ತಾಪಿಸಲಾಗಿದೆ
ಸಂಜಯ್ ಹೆಗ್ಡೆ: ದಕ್ಷಿಣ ಭಾರತದಲ್ಲಿ ಕಾಲೇಜುಗಳಲ್ಲಿ ಸಮವಸ್ತ್ರ ಇದೆ. ನಾನು ಓದಿದ ಕಾಲೇಜಿನಲ್ಲೂ ಸಮವಸ್ತ್ರವಿದೆ
ನ್ಯಾ ಗುಪ್ತಾ: ನಿಮ್ಮಂತಹ ವಿದ್ಯಾರ್ಥಿಗಳಿಂದ ಅಶಿಸ್ತು ಬಯಸಲಿಲ್ಲ ಎಂದೆನಿಸುತ್ತದೆ
ಸಂಜಯ್ ಹೆಗ್ಡೆ: ನಾನು ತುಂಬಾ ಕೆಟ್ಟ ವಿದ್ಯಾರ್ಥಿಯಾಗಿದ್ದೆ. ಇಲ್ಲ ಎಲ್ಲಾ ಕಾಲೇಜುಗಳಲ್ಲಿ ಸಮವಸ್ತ್ರವಿದೆ
ನ್ಯಾ. ಧುಲಿಯಾ: ಇಂಜಿನಿಯರಿಂಗ್ ಕಾಲೇಜಾಗಿರಬೇಕು?
ಹಿಜಾಬ್ ವಿವಾದಕ್ಕೆ ಡೋಂಟ್ ಕೇರ್ ಎಂದ ಮುಸ್ಲಿಂ ವಿದ್ಯಾರ್ಥಿನಿಯರು: ಉಡುಪಿ ಸರ್ಕಾರಿ ಕಾಲೇಜಲ್ಲಿ ಅಡ್ಮಿಷನ್ ಹೆಚ್ಚಳ
ಸಂಜಯ್ ಹೆಗ್ಡೆ: ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಕಾಲೇಜುಗಳಲ್ಲಿ ಸಮವಸ್ತ್ರವಿದೆ
ನ್ಯಾ ಗುಪ್ತಾ: ಧರ್ಮದ ಆಚರಣೆಗಳನ್ನು ಅನುಸರಿಸುವ ಜಾಗದಲ್ಲಿ ಹಿಜಾಬ್ ಗೆ ಅವಕಾಶವಿದೆ. ಆದ್ರೆ ಸಮವಸ್ತ್ರ ಧರಿಸುವ ಸ್ಥಳಲ್ಲಿ ಈ ನಿಯಮ ಇರುವ ಅವಕಾಶ ಇದೆಯಾ..? -
ಸಂಜಯ್ ಹೆಗ್ಡೆ: ಚುನ್ನಿ ಮತ್ತು ಸ್ಕಾರ್ಪ್ ಯುನಿಫಾರಂ ಭಾಗ. ಸಮವಸ್ತ್ರದ ಬಣ್ಣದಲ್ಲಿಯೇ ಸ್ಕಾಫ್ ಧರಿಸಬಹುದು.
ಕರ್ನಾಟಕ ಅಡ್ವಕೇಟ್ ಜನರಲ್ ಪಿ.ನಾವಡಗಿ ವಾದ
ವಿದ್ಯಾರ್ಥಿಗಳು ಹಿಜಾಬ್ ಧರಿಸಿದ ಬಳಿಕ ಇನ್ನು ಕೆಲವು ವಿದ್ಯಾರ್ಥಿಗಳು ಭಗವಾ ಶಾಲು ಅಥವಾ ಕೇಸರಿ ಶಾಲು ಧರಿಸಿದರು. ಇದು ಶಿಕ್ಷಣ ಸಂಸ್ಥೆಗಳಲ್ಲಿ ಅಶಾಂತಿಗೆ ಕಾರಣವಾದ ನಂತರ ಶಾಲಾ ಅಧಿಕಾರಿಗಳು ಮಾರ್ಗದರ್ಶನ ಕೋರಿ ನಮಗೆ ಪತ್ರ ಬರೆದರು. ರಾಜ್ಯವು ಯಾವುದೇ ಸಮವಸ್ತ್ರವನ್ನು ಶಿಫಾರಸು ಮಾಡದಂತೆ ಎಚ್ಚರಿಕೆ ವಹಿಸಿದೆ
ಆದರೆ ಪ್ರತಿ ಸಂಸ್ಥೆಗೆ ಸಮವಸ್ತ್ರವನ್ನು ಶಿಫಾರಸು ಮಾಡಲು ಮುಕ್ತ ಅವಕಾಶ ನೀಡಿದೆ. ಕೆಲವು ಸಂಸ್ಥೆಗಳು ಹಿಜಾಬ್ ಅನ್ನು ನಿಷೇಧಿಸಿವೆ. ಇದು ಸರಕಾರಕ್ಕೆ ಸವಾಲಾಗಿದೆ. ಇಲ್ಲಿ ಸರ್ಕಾರ ಯಾವುದೇ ಹಕ್ಕನ್ನು ತಡೆ ಹಿಡಿದಿಲ್ಲ ಸಂಸ್ಥೆಯ ನಿಯಮವನ್ನು ಅನುಸರಿಸಿ ಎಂದು ಮಾತ್ರ ನಾವು ಹೇಳಿದ್ದೇವೆ. ಮುಸ್ಲಿಂ ಅಲ್ಪಸಂಖ್ಯಾತ ಸಂಸ್ಥೆಗಳಲ್ಲಿ ಹಿಜಾಬ್ ಗೆ ಅವಕಾಶ ಮಾಡಿಕೊಂಡಿದ್ದಾರೆ. ಅದನ್ನು ಸರಕಾರ ಪ್ರಶ್ನೆ ಮಾಡುವುದಿಲ್ಲ. ಶಾಲಾ ಕಮಿಟಿಗಳ ನಿರ್ಧಾರಕ್ಕೆ ಸರಕಾರ ಮಧ್ಯಪ್ರವೇಶ ಮಾಡಿಲ್ಲ ಎಂದು ಸರ್ಕಾರದ ಪರ ಕರ್ನಾಟಕ ಅಡ್ವಕೇಟ್ ಜನರಲ್ ಪಿ.ನಾವಡಗಿ ವಾದ ಮಂಡಿಸಿದರು.
ಹಿಜಾಬ್ ವಿವಾದ ಆರಂಭವಾಗಿದ್ದು
ಉಡುಪಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ (Government PU College in Udupi) ಈ ವರ್ಷದ ಜನವರಿಯಲ್ಲಿ ಹಿಜಾಬ್ (Hijab Row) ವಿವಾದ ಆರಂಭವಾಗಿತ್ತು. ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರನ್ನು ಕಾಲೇಜಿ ಆಡಳಿತ ಮಂಡಳಿ ಪ್ರವೇಶ ನಿರ್ಬಂಧ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಆರು ಬಾಲಕಿಯರು ಕಾಲೇಜಿನ ಹೊರಗಡೆ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಕೆಲವು ಮುಸ್ಲಿಂ ಸಂಘಟನೆಗಳು ಕೂಡ ಬೆಂಬಲ ನೀಡಿದ್ದವು. ಬಾಲಕಿಯರ ಪ್ರತಿಭಟನೆ ತೀವ್ರವಾಗುತ್ತಿದ್ದಂತೆ, ಉಡುಪಿಯ ಹಾಗೂ ಕರಾವಳಿ ಭಾಗದಲ್ಲಿ ಕೂಡ ಇದು ವ್ಯಾಪಿಸಿತು. ಕೇಸರಿ ಬಣ್ಣದ ಶಾಲು ಧರಿಸಿ ಹುಡುಗರು ಹಾಗೂ ಹುಡುಗಿಯರು ಕಾಲೇಜ್‌ಗೆ ಬರಲು ಆರಂಭಿಸಿದ್ದರು.
ಕೆಲವೇ ದಿನಗಳಲ್ಲಿ ಇದು ರಾಜ್ಯದ ಹಲವು ಭಾಗಗಳಿಗೆ ವ್ಯಾಪಿಸಿತ್ತು. ಪ್ರತಿಭಟನೆಗಳು ತೀವ್ರವಾಗುತ್ತಿದ್ದಂತೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಕರ್ನಾಟಕ ಸರ್ಕಾರ, ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರ ಸಂಹಿತೆಯನ್ನು ಪಾಲಿಸಬೇಕು. ಹಿಜಾಬ್ ಹಾಗೂ ಕೇಸರಿ ಶಾಲುಗಳನ್ನು ಕಾಲೇಜುಗಳಲ್ಲಿ ಧರಿಸುವುದಕ್ಕೆ ನಿಷೇಧ ವಿಧಿಸಿತ್ತು.