ಚಲುವರಾಯಸ್ವಾಮಿ, ಜಯರಾಂ ಬಡಿದಾಡಿಕೊಂಡಿದ್ದು ನಿಜ; ಸುಳ್ಳಾದ್ರೆ ಚಾಮುಂಡಿಬೆಟ್ಟಕ್ಕೆ ಬರಲಿ: ಪುಟ್ಟರಾಜು ಸವಾಲು

ಚಲುವರಾಯಸ್ವಾಮಿಗೆ ರಾಜಕೀಯದಲ್ಲಿ ಅದೃಷ್ಟ ಚನ್ನಾಗಿದೆ. ಒಂದೊಂದು ಚುನಾವಣೆಯಲ್ಲಿ ಒಬ್ಬೊಬ್ಬ ಹೊಸ ಅಭ್ಯರ್ಥಿ ತರುತ್ತಾರೆ. ತಾವು ಆರ್ಥಿಕವಾಗಿ ಸದೃಡರಾಗಲು ಈ ರೀತಿ ಮಾಡ್ತಾರೆ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಮಾಜಿ ಸಚಿವ ಪುಟ್ಟರಾಜು ವಾಗ್ದಾಳಿ ನಡೆಸಿದರು.

Karnataka by election latest news former minister puttaraju press conference at mandya rav

ಮಂಡ್ಯ (ನ.10): ಚಲುವರಾಯಸ್ವಾಮಿಗೆ ರಾಜಕೀಯದಲ್ಲಿ ಅದೃಷ್ಟ ಚನ್ನಾಗಿದೆ. ಒಂದೊಂದು ಚುನಾವಣೆಯಲ್ಲಿ ಒಬ್ಬೊಬ್ಬ ಹೊಸ ಅಭ್ಯರ್ಥಿ ತರುತ್ತಾರೆ. ತಾವು ಆರ್ಥಿಕವಾಗಿ ಸದೃಡರಾಗಲು ಈ ರೀತಿ ಮಾಡ್ತಾರೆ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಮಾಜಿ ಸಚಿವ ಪುಟ್ಟರಾಜು ವಾಗ್ದಾಳಿ ನಡೆಸಿದರು.

ಇಂದು ಮಂಡ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚಲುವರಾಯಸ್ವಾಮಿ ದೇವೇಗೌಡರ ಬಗ್ಗೆ ಇಲ್ಲಸಲ್ಲದ ಮಾತನಾಡ್ತಾರೆ. ದೇವೇಗೌಡರು ಭಾವನಾತ್ಮಕವಾಗಿ ಭಾಷಣ ಮಾಡ್ತಾರೆ ಅಂತಾರೆ. ಹೌದು ದೇವೇಗೌಡರ ಭಾವನೆ ಏನೆಂಬುದು ಕಳೆದ 45 ವರ್ಷಗಳಿಂದ ನೋಡಿದ್ದೇನೆ. ದೇವೇಗೌಡರಿಗೆ ರೈತರ ಪರವಾಗಿ ಕಳಕಳಿಯಿದೆ. ರೈತರ ಪರವಾಗಿ ಭಾವನಾತ್ಮಕವಾಗಿ ಮಾತನಾಡ್ತಾರೆ. ದೇವೇಗೌಡರು ಕೇವಲ 6 ತಿಂಗಳು ಪ್ರಧಾನಿಯಾಗಿದ್ರು, 16 ತಿಂಗಳು ಮುಖ್ಯಮಂತ್ರಿಯಾಗಿದ್ರು ಅಷ್ಟೇ ಅಂತಾ ಹೇಳಿದ್ದಾರೆ. ಆದರೆ ಚಲುವರಾಯಸ್ವಾಮಿ ತರ ಪಕ್ಷ ಬದಲಾಯಿಸುವ ಗುಣ ದೇವೇಗೌಡರಿಗೆ ಇಲ್ಲ. ದೇವರಾಜ ಅರಸು ಅಂತವರನ್ನೇ ಎದುರಿಸಿದವರು ದೇವೇಗೌಡರು. ಅಂತವರ ಬಗ್ಗೆ ಮಾತನಾಡೋದು ಆಕಾಶಕ್ಕೆ ಉಗುಳಿದಂತೆ. ಆಕಾಶಕ್ಕೆ ಉಗುಳಿದ್ರೆ ಅದು ವಾಪಸ್ ಮುಖದ ಮೇಲೆ ಬಂದು ಬಿಳುತ್ತೆ ಎಂದು ಗೊತ್ತಿಲ್ಲ ಎಂದು ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.

'ಮಿಸ್ಟರ್ ಕೆರೆ ಕಳ್ಳ ಚೆಲುವರಾಯಸ್ವಾಮಿ ನೀನೊಬ್ಬ ಖತರ್ನಾಕ್ ಕಳ್ಳ ಎಂಬುದು ರಾಜ್ಯಕ್ಕೆ ಗೊತ್ತು': ಜೆಡಿಎಸ್ ವಾಗ್ದಾಳಿ

ಇನ್ನು ಕುಮಾರಸ್ವಾಮಿ ಸ್ಟೀಲ್ ಫ್ಯಾಕ್ಟರಿಯಲ್ಲಿ ಹಣ ವಸೂಲಿ ಮಾಡ್ತಾ ಇದ್ದಾರೆ ಎಂದು ಆರೋಪ ಮಾಡಿದ್ದಾರೆ. ಸಿಎಂ ಆಗಿದ್ದಾಗ ಲಾಟರಿ, ಸಾರಾಯಿ ಬ್ಯಾನ್ ಮಾಡಿದ್ದು ಕುಮಾರಸ್ವಾಮಿಯವರು. ಆಗ ಈ ಮಹಾನುಭವರು ಬ್ಯಾನ್ ಮಾಡೋದು ಬೇಡಾ ಎಂದು‌ ಹೇಳಲು ಬಂದಿದ್ರು. ಅದಕ್ಕೆ ಅವರನ್ನು ಬಾಗಿಲು ಬಳಿ ನಿಲ್ಲಿಸಿದ್ರು. ಎಂತಹ ಭ್ರಷ್ಟನೆಂದರೆ  ಇವರ ವಿರುದ್ಧ ಕೃಷಿ ಇಲಾಖೆಯ ಅಧಿಕಾರಿಗಳೇ ರಾಜ್ಯಪಾಲರಿಗೆ ಪತ್ರ ಬರೆದಿದ್ದರು ಎಂದು ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಚಲುವರಾಯಸ್ವಾಮಿ, ಕೀಲಾರ ಜಯರಾಂ ಬಡಿದಾಡಿಕೊಂಡ್ರು. ಅಂದು ನಾನು ಸಹ ನಿಶ್ಚಿತಾರ್ಥ ಕಾರ್ಯಕ್ರಮದ ಸ್ಟೇಜ್ ಮೇಲಿದ್ದೆ. ಇದಕ್ಕಿದ್ದಂತೆ ರೂಮ್‌ನಲ್ಲಿ ಕಿರುಚಾಟ ಕೇಳಿಬಂತು. ಒಳಗಿನಿಂದ ನನ್ನ ಬನ್ನಿ ಬನ್ನಿ ಎಂದು ಕೂಗುತ್ತಿರುವುದು ಕೇಳಿತು. ಒಳಗಡೆ ಚಲುವರಾಯಸ್ವಾಮಿ, ಕೀಲಾರ ಜಯರಾಂ ನಡುವೆ ಜಗಳವಾಗ್ತಾ ಇತ್ತು. ಜಯರಾಂಣ್ಣ ಮೊದಲು ಹೊಡೆದರು. ಈಗ ಜಯರಾಂಣ್ಣನ ಹಾಕಿ‌ ತುಳಿಯುತ್ತಿದ್ದಾರೆ. ಬಂದು ಬಿಡಿಸಿ ಬೇಗ ಬನ್ನಿ ಇಲ್ಲದಿದ್ರೆ ಸಾಯಿಸಿಬಿಡ್ತಾರೆ ಎಂದು ಕೂಗಿದ್ರು ಆಗ ನಾನು ನೋಡಿದ್ರೆ ಏನಿಲ್ಲ ಅವರನ್ನು ಕಳಿಸಿದ್ದೋ ಬಿಡಿ ಅಂತಾ ಹೇಳಿದ್ರು. ಇದು ಸುಳ್ಳು ಎಂದ್ರೆ ಬನ್ನಿ ಚಾಮುಂಡಿಬೆಟ್ಟಕ್ಕೆ ಹೋಗಿ ಪ್ರಮಾಣ ಮಾಡೋಣ. ಜಗಳ ನಡೆದೇ ಇಲ್ಲ ಎಂದು ಜಯರಾಂಣ್ಣ ಆಣೆ ಮಾಡಲಿ.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಈ ಬಾರಿ ನಿಖಿಲ್ ಕುಮಾರಸ್ವಾಮಿ ಗೆದ್ದೇ ಗೆಲ್ತಾರೆ. ಮೈತ್ರಿ ಪಕ್ಷದ ನಾಯಕರು ನಿಖಿಲ್ ಪರ ಕೆಲಸ ಮಾಡುತ್ತಿದ್ದಾರೆ. ಉಪಚುನಾವಣೆ ಆದ ಬಳಿಕ 136 ಜನರು ಎಷ್ಟು ಗುಂಪು ಆಗ್ತಾರೆ ಕಾದು ನೋಡಿ ಎನ್ನುವ ಮೂಲಕ ಕಾಂಗ್ರೆಸ್ ನಾಯಕರು ಮೈತ್ರಿ ಪಕ್ಷ ಸೇರುವ ಕುರಿತು ಸುಳಿವು ನೀಡಿದರು.
 

Latest Videos
Follow Us:
Download App:
  • android
  • ios