Asianet Suvarna News Asianet Suvarna News

Mysuru: ಜಯಲಕ್ಷ್ಮಿ ವಿಲಾಸ ಅರಮನೆ ಮ್ಯಾನ್ಷನ್‌ನ ಪುನರುಜ್ಜೀವನಕ್ಕೆ ಕಡೆಗೂ ಕೂಡಿ ಬಂತು ಕಾಲ!

ಭಾರತದಲ್ಲಿನ U.S. ಮಿಷನ್ ಮತ್ತು ಅದರ ಅನುಷ್ಠಾನ ಪಾಲುದಾರರಾದ ಮೈಸೂರು ವಿಶ್ವವಿದ್ಯಾನಿಲಯವು, ಕರ್ನಾಟಕದ ಮೈಸೂರಿನಲ್ಲಿರುವ ಜಯಲಕ್ಷ್ಮಿ ವಿಲಾಸ ಮ್ಯಾನ್ಷನ್‌ನ ಜಾನಪದ ವಸ್ತುಸಂಗ್ರಹಾಲಯಕ್ಕಾಗಿ U.S. ಅನುದಾನಿತ ಸಂರಕ್ಷಣಾ ಪ್ರಯತ್ನಗಳನ್ನುಇಂದು ಅಧಿಕೃತವಾಗಿ ಘೋಷಿಸಿತು. 

Jayalakshmi Vilas Mansion in Mysuru Palace Gets Funds For Restoration gvd
Author
First Published Jan 4, 2024, 5:04 PM IST

ಮೈಸೂರು (ಜ.04): ಭಾರತದಲ್ಲಿನ U.S. ಮಿಷನ್ ಮತ್ತು ಅದರ ಅನುಷ್ಠಾನ ಪಾಲುದಾರರಾದ ಮೈಸೂರು ವಿಶ್ವವಿದ್ಯಾನಿಲಯವು, ಕರ್ನಾಟಕದ ಮೈಸೂರಿನಲ್ಲಿರುವ ಜಯಲಕ್ಷ್ಮಿ ವಿಲಾಸ ಮ್ಯಾನ್ಷನ್‌ನ ಜಾನಪದ ವಸ್ತುಸಂಗ್ರಹಾಲಯಕ್ಕಾಗಿ U.S. ಅನುದಾನಿತ ಸಂರಕ್ಷಣಾ ಪ್ರಯತ್ನಗಳನ್ನುಇಂದು ಅಧಿಕೃತವಾಗಿ ಘೋಷಿಸಿತು. ಈ ಯೋಜನೆಯು, U.S. ಸರ್ಕಾರದ ಅಂಬಾಸಡರ್ಸ್‌ ಫಂಡ್‌ ಫಾರ್‌ ಕಲ್ಚರಲ್‌ ಪ್ರಿಸರ್ವೇಶನ್‌ (AFCP) ಮೂಲಕ ಧನಸಹಾಯ ಪಡೆದಿದ್ದು, ಜಯಲಕ್ಷ್ಮಿ ವಿಲಾಸ ಮ್ಯಾನ್ಷನ್‌ನ ಜಾನಪದ ವಸ್ತುಸಂಗ್ರಹಾಲಯ ಕಟ್ಟಡದ ಪಶ್ಚಿಮ ವಿಭಾಗ ಮತ್ತು ಕರ್ನಾಟಕ ರಾಜ್ಯದಾದ್ಯಂತ ಸಂಗ್ರಹಿಸಲಾಗಿರುವ 6,500 ಕ್ಕೂ ಹೆಚ್ಚು ಕಲಾಕೃತಿಗಳ ಸಂರಕ್ಷಣೆಗೆ ಈ ಅನುದಾನವನ್ನು ಬಳಸಲಾಗುತ್ತದೆ.  

ಮೈಸೂರು ವಿಶ್ವವಿದ್ಯಾನಿಲಯವು ಡೆಕ್ಕನ್ ಹೆರಿಟೇಜ್ ಫೌಂಡೇಶನ್‌ ಸಹಭಾಗಿತ್ವದಲ್ಲಿ ಪುನರುದ್ಧಾರ ಮತ್ತು ಸಂರಕ್ಷಣಾ ಪ್ರಯತ್ನಗಳನ್ನು ನಡೆಸುತ್ತಿದ್ದು, ಇದು 2025 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.  ಮೈಸೂರು ವಿಶ್ವವಿದ್ಯಾನಿಲಯಕ್ಕೆ AFCP ಅನುದಾನವನ್ನು ಘೋಷಿಸಿದ U.S. ಕಾನ್ಸಲ್ ಜನರಲ್ ಚೆನ್ನೈ ಕ್ರಿಸ್ಟೋಫರ್ ಡಬ್ಲ್ಯು. ಹಾಡ್ಜಸ್, “ಜಯಲಕ್ಷ್ಮಿ ವಿಲಾಸ ಮ್ಯಾನ್ಷನ್‌ನ ಜಾನಪದ ವಸ್ತುಸಂಗ್ರಹಾಲಯದ ಸಂರಕ್ಷಣಾ ಯೋಜನೆಗೆ ನೀಡಿರುವ ಬೆಂಬಲವು ಭಾರತದ ಜನರು ಮತ್ತು ಅದರ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಕುರಿತಂತೆ ಅಮೇರಿಕವು ಹೊಂದಿರುವ ಸ್ನೇಹ ಮತ್ತು ಗೌರವಕ್ಕೆ ಮತ್ತೊಂದು ಪುರಾವೆಯಾಗಿದೆ. ಒಮ್ಮೆ ಪೂರ್ಣಗೊಂಡ ನಂತರ, ಜಯಲಕ್ಷ್ಮಿ ವಿಲಾಸ ಮ್ಯಾನ್ಷನ್‌ನ ಮತ್ತು ಜಾನಪದ ವಸ್ತುಸಂಗ್ರಹಾಲಯವು ಭವಿಷ್ಯದ ಪೀಳಿಗೆಯ ಭಾರತೀಯರು ಮತ್ತು ಅಂತರಾಷ್ಟ್ರೀಯ ಪ್ರವಾಸಿಗರನ್ನು ಸಂತೋಷಪಡಿಸುತ್ತದೆ,” ಎಂದರು.

ಕಾಂಗ್ರೆಸ್ ಸರ್ಕಾರದಿಂದ ರಾಮಭಕ್ತರ ಬೆದರಿಸುವ ಕೆಲಸ: ಆರ್‌.ಅಶೋಕ್

ಅವರು ಮಾತಾನಾಡುತ್ತಾ, “ಸಮುದಾಯದ ಪಾಲ್ಗೊಳ್ಳುವಿಕೆಯು ನಮ್ಮ ಎಲ್ಲಾ AFCP ಯೋಜನೆಗಳ ಪ್ರಮುಖ ಭಾಗವಾಗಿದೆ. ಮೈಸೂರು ವಿಶ್ವವಿದ್ಯಾನಿಲಯಕ್ಕೆ U.S. ಮಿಷನ್ ಇಂಡಿಯಾದ AFCP ನೀಡಿರುವ $300,000 ಅನುದಾನವು ಕಳೆದ ಇಪ್ಪತ್ತು ವರ್ಷಗಳಲ್ಲಿ ಭಾರತದಲ್ಲಿ ನೀಡಲಾದ ಎರಡನೇ ಅತಿದೊಡ್ಡ AFCP ಅನುದಾನವಾಗಿದೆ. ಮೈಸೂರಿನಲ್ಲಿರುವ AFCP ಯೋಜನೆಯು ಕರ್ನಾಟಕದಲ್ಲಿ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ಮತ್ತು ಸಂರಕ್ಷಿಸುವ ಬಗ್ಗೆ ಕಳಕಳಿ  ಹೊಂದಿರುವ- ಸಂರಕ್ಷಣೆ ಮತ್ತು ವಸ್ತುಸಂಗ್ರಹಾಲಯ ತಜ್ಞರು, ವಾಸ್ತುಶಿಲ್ಪಿಗಳು ಮತ್ತು ವಿನ್ಯಾಸಕರು ಮತ್ತು ನುರಿತ ಕುಶಲಕರ್ಮಿಗಳನ್ನು ಒಟ್ಟುಗೂಡಿಸುತ್ತದೆ,” ಎಂದು ಹೇಳಿದರು. 

ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಪ್ರೊ. N.K. ಲೋಕನಾಥ್ ರವರು, ಮೈಸೂರು ವಿಶ್ವವಿದ್ಯಾನಿಲಯವನ್ನು U.S. ದೂತಾವಾಸವು ಅನುದಾನ ನೀಡಲು  ಗುರುತಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು. “ಪುನರುಜ್ಜೀವನಗೊಂಡ ಜಯಲಕ್ಷ್ಮಿ ವಿಲಾಸ ಭವನದ ಜಾನಪದ ವಸ್ತುಸಂಗ್ರಹಾಲಯವು ಮೈಸೂರಿನ ಪ್ರವಾಸಿ ಆಕರ್ಷಣೆಗಳನ್ನು ಹೆಚ್ಚಿಸುವುದು ಮಾತ್ರವಲ್ಲದೇ, ಕರ್ನಾಟಕದ ಜನಾಂಗೀಯ ಸಂಪ್ರದಾಯಗಳ ಮೇಲೆ ಕೇಂದ್ರೀಕರಿಸಿದ ವಿದ್ವಾಂಸರಿಗೆ ಸಂಶೋಧನೆ ಮತ್ತು ಉನ್ನತ ಶಿಕ್ಷಣದ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ,” ಎಂದು ಅವರು ಹೇಳಿದರು. 

ಮೈಸೂರು ವಿಶ್ವವಿದ್ಯಾನಿಲಯವು 2012 ರಲ್ಲಿ U.S. ಕಾನ್ಸುಲೇಟ್ ಜನರಲ್ ಚೆನ್ನೈನಿಂದ ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್‍ನ (ORI) ಸಂರಕ್ಷಣೆ ಮತ್ತು ಅದರ 40,000 ಪುರಾತನ ತಾಳೆಗರಿ ಹಸ್ತಪ್ರತಿಗಳು ಮತ್ತು ಪುಸ್ತಕಗಳ ಅಮೂಲ್ಯ ಸಂಗ್ರಹಕ್ಕಾಗಿ ಅನುದಾನವನ್ನು ಪಡೆದಿರುವುದನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು. ಪುನರುಜ್ಜೀವನಗೊಂಡ ORI ಕಟ್ಟಡವನ್ನು 2015 ರಲ್ಲಿ ಭಾರತದ ಮಾಜಿ U.S. ರಾಯಭಾರಿ ರಿಚರ್ಡ್ ವರ್ಮಾ ಉದ್ಘಾಟಿಸಿದರು. ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಇಂಡಿಯಾದ ಅಧ್ಯಕ್ಷೆ ರಾಯಭಾರಿ ಲತಾ ರೆಡ್ಡಿ ರವರು ಸಾಂಸ್ಕೃತಿಕ ಪರಂಪರೆಯ ತಾಣಗಳನ್ನು ಸಂರಕ್ಷಿಸುವ ಮಹತ್ವವನ್ನು ಒತ್ತಿ ಹೇಳುತ್ತಾ, “ಜಯಲಕ್ಷ್ಮಿ ವಿಲಾಸ ಭವನದಲ್ಲಿ, DHF ತನ್ನ ಕಾರ್ಯಾಚರಣೆಯಲ್ಲಿ ಸಮರ್ಥನೀಯವಾದ ಅಂತರ್ಗತ ಪಾಲಿಸೆಮಿಕ್ ಮ್ಯೂಸಿಯಂ ಅನ್ನು ರಚಿಸಲು ವಾಸ್ತುಶಿಲ್ಪದ ಪುನರ್ರಚನೆ ಮತ್ತು ವಸ್ತು ಸಂರಕ್ಷಣೆಯಲ್ಲಿ ಉತ್ತಮ ಅಭ್ಯಾಸಗಳನ್ನು ಹುಟ್ಟುಹಾಕಲು ಯೋಜಿಸಿದೆ,” ಎಂದರು. 

ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಜಯಲಕ್ಷ್ಮಿ ವಿಲಾಸ ಮ್ಯಾನ್ಷನ್‌ ಅನ್ನು 1905 ರಲ್ಲಿ ಮೈಸೂರು ಮಹಾರಾಜ ಚಾಮರಾಜ ಒಡೆಯರ್ ರವರು, ಹಿರಿಯ ಪುತ್ರಿ ಮಹಾರಾಜಕುಮಾರಿ ಜಯಲಕ್ಷಮ್ಮಣ್ಣಿಯವರಿಗೆ ನಿವಾಸವಾಗಿ ನಿರ್ಮಿಸಿದ್ದರು. ಈ ಭವ್ಯವಾದ ಕಟ್ಟಡವನ್ನು ಯುರೋಪಿಯನ್ ಶಾಸ್ತ್ರೀಯ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು ಅದು ನಾಲ್ಕು ವಿಭಾಗಗಳನ್ನು ಹೊಂದಿದೆ. 1959 ರಲ್ಲಿ K.V. ಪುಟ್ಟಪ್ಪ (ಕುವೆಂಪು) ರವರು ಉಪಕುಲಪತಿಯಾಗಿದ್ದ ಸಮಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಜಯಲಕ್ಷ್ಮಿ ವಿಲಾಸ ಭವನ ಮತ್ತು ಅದರ ಸುತ್ತಮುತ್ತಲಿನ ಭೂಮಿಯನ್ನು, ವಿಶಾಲವಾದ ಮಾನಸ ಗಂಗೋತ್ರಿ ಕ್ಯಾಂಪಸ್‌ನ ಭಾಗವಾಗಿಸಲು ಸ್ವಾಧೀನಪಡಿಸಿಕೊಂಡಿತು. ಡಾ.ಜವರೇಗೌಡ ರವರು 1969 ರಲ್ಲಿ ಜಾನಪದ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿದರು.

ಕಾಂಗ್ರೆಸ್‌ ಸರ್ಕಾರಕ್ಕೆ 5ನೇ ಗ್ಯಾರಂಟಿಯೇ ಪ್ರಮುಖ ಅಸ್ತ್ರ: ಸಚಿವ ಮಧು ಬಂಗಾರಪ್ಪ

ವಿದೇಶದಲ್ಲಿ ಸಾಂಸ್ಕೃತಿಕ ಸಂರಕ್ಷಣೆಗಾಗಿ ಇರುವ U.S. ಸರ್ಕಾರದ ಅತ್ಯಂತ ಮಹತ್ವದ ಸಾಂಸ್ಕೃತಿಕ ಉಪಕ್ರಮಗಳಲ್ಲಿ ಅಂಬಾಸಡರ್ಸ್‌ ಫಂಡ್‌ ಫಾರ್‌ ಕಲ್ಚರಲ್‌ ಪ್ರಿಸರ್ವೇಶನ್‌ (AFCP) ನಿಧಿಯು ಒಂದಾಗಿದೆ.  ಯುನೈಟೆಡ್ ಸ್ಟೇಟ್ಸ್ ಭಾರತದೊಂದಿಗೆ ಜತೆಯಾಗಿ ಕಳೆದ 20 ವರ್ಷಗಳಲ್ಲಿ, ಒಟ್ಟು 2.7 ಮಿಲಿಯನ್ ಮೊತ್ತದ 24 AFCP ಯೋಜನೆಗಳನ್ನು ಬೆಂಬಲಿಸಿದೆ. ಅವುಗಳಲ್ಲಿ ಪ್ರಸಿದ್ಧವಾದ ಸುಂದರ್‌ವಾಲಾ ಬುರ್ಜ್, ಬಟಾಶೆವಾಲಾ ಮೊಘಲ್ ಸಮಾಧಿ ಸಂಕೀರ್ಣ ಮತ್ತು UNESCO ವಿಶ್ವ ಪರಂಪರೆಯ ತಾಣವಾದ ಹೊಸದಿಲ್ಲಿಯಲ್ಲಿರುವ ಹುಮಾಯೂನ್ ಸಮಾಧಿಯೊಳಗಿರುವ ಅರಬ್ ಸೆರಾಯ್ ಕಾಂಪ್ಲೆಕ್ಸ್ ಗೇಟ್‍ವೇ - ಇವುಗಳ ಸಂರಕ್ಷಣೆ; ಪಶ್ಚಿಮ ರಾಜಸ್ಥಾನದ ಲಂಗಾ ಮತ್ತು ಮಂಗನಿಯಾರ್ ಸಮುದಾಯಗಳ ಅಳಿವಿನಂಚಿನಲ್ಲಿರುವ ಜಾನಪದ ಸಂಗೀತದ ರೆಕಾರ್ಡಿಂಗ್ ಮತ್ತು ಲಿಪ್ಯಂತರ; ಮತ್ತು ಬೆಂಗಳೂರಿನ ಯುನೈಟೆಡ್ ಥಿಯೋಲಾಜಿಕಲ್ ಕಾಲೇಜಿನಲ್ಲಿರುವ ತಾಳೆಗರಿ ಹಸ್ತಪ್ರತಿಗಳು ಮತ್ತು ಅಪರೂಪದ ಪುಸ್ತಕಗಳ ಸಂರಕ್ಷಣೆ ಸೇರಿವೆ. AFCP ಮೂಲಕ, ಯುನೈಟೆಡ್ ಸ್ಟೇಟ್ಸ್ ಪ್ರಪಂಚದಾದ್ಯಂತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯಲ್ಲಿ ಅಮೇರಿಕನ್ ನಾಯಕತ್ವವನ್ನು ಪ್ರದರ್ಶಿಸುವುದರೊಂದಿಗೆ, ಇತರ ಸಂಸ್ಕೃತಿಗಳ ಬಗೆಗಿರುವ ಗೌರವವನ್ನು ತೋರಿಸುತ್ತದೆ.

Follow Us:
Download App:
  • android
  • ios