ಜೈನಮುನಿ ಹತ್ಯೆ ಪ್ರಕರಣ: ಯಾರೇ ಆರೋಪಿಗಳಿದ್ದರೂ ತನಿಖೆಯಿಂದ ಗೊತ್ತಾಗುತ್ತದೆ -ಸಚಿವ ಡಿ.ಸುಧಾಕರ

ಈಗಾಗಲೇ ಪೊಲೀಸರು ಇಬ್ಬರು ಆರೋಪಿಗಳನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದು, ಇನ್ನೂ ಯಾರೇ ಆರೋಪಿಗಳು ಇದ್ದರೂ ಪೊಲೀಸರ ತನಿಖೆಯಿಂದ ಗೊತ್ತಾಗುತ್ತದೆ ಎಂದು ಸಚಿವ ಡಿ.ಸುಧಾಕರ ಹೇಳಿದರು.

Jain monk murder case D sudhakar statement abt murder case in chikkodi at belgum rav

ಚಿಕ್ಕೋಡಿ (ಜು.12) : ಈಗಾಗಲೇ ಪೊಲೀಸರು ಇಬ್ಬರು ಆರೋಪಿಗಳನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದು, ಇನ್ನೂ ಯಾರೇ ಆರೋಪಿಗಳು ಇದ್ದರೂ ಪೊಲೀಸರ ತನಿಖೆಯಿಂದ ಗೊತ್ತಾಗುತ್ತದೆ ಎಂದು ಸಚಿವ ಡಿ.ಸುಧಾಕರ ಹೇಳಿದರು.

ತಾಲೂಕಿನ ಹಿರೇಕೋಡಿ ಗ್ರಾಮದ ಜೈನಮುನಿ ಆಚಾರ್ಯ 108 ಕಾಮಕುಮಾರ ಮಹಾರಾಜರ ನಂದಿಪರ್ವತ ಆಶ್ರಮಕ್ಕೆ ಭೇಟಿ ನೀಡಿ ಭಕ್ತರಿಗೆ ಸಾಂತ್ವನ ಹೇಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮೀಜಿಯೊಬ್ಬರನ್ನು ಹೀಗೆ ಭೀಕರವಾಗಿ ಹತ್ಯೆ ಮಾಡಿದ್ದು ಆಘಾತವನ್ನುಂಟು ಮಾಡಿದೆ. ಕೇವಲ 15 ವರ್ಷಗಳ ಅವಧಿಯಲ್ಲಿ ಆಶ್ರಮವನ್ನು ಎಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆಸಿದ್ದಾರೆಂದರೆ ಅವರಲ್ಲಿ ಸಮಾಜದ ಬಗ್ಗೆ ಎಷ್ಟೊಂದು ಕಳಕಳಿ ಇತ್ತು ಎಂಬುವುದು ಗೊತ್ತಾಗುತ್ತದೆ ಎಂದರು.

ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು ಜೈನಮುನಿ ಹತ್ಯೆ: ಐಸಿಸ್ ಶಂಕೆ..ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯ..!

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಬಿಇ ಪದವೀಧರರಾಗಿದ್ದ ಕಾಮಕುಮಾರ ಮಹಾರಾಜರು ಇಲ್ಲೊಂದು ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜು ಇಲ್ಲವೇ, ಸ್ಥಳೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶಿಕ್ಷಣ ಸಂಸ್ಥೆಯನ್ನು ತೆರೆಯುವ ಉದ್ದೇಶ ಹೊಂದಿದ್ದಾಗಿ ಟ್ರಸ್ಟ್‌ ಅಧ್ಯಕ್ಷ ಭೀಮಗೊಂಡ ಉಗಾರೆ ಅವರು ಸಚಿವರಲ್ಲಿ ಕೇಳಿಕೊಂಡಾಗ ಮುಂದಿನ ದಿನಗಳಲ್ಲಿ ಸಮಾಜ ಬಾಂಧವರ ಹಾಗೂ ಸ್ಥಳೀಯರ ಸಭೆಯನ್ನು ಕರೆದು ಸರ್ಕಾರದಿಂದ ಏನೆಲ್ಲ ಮಾಡಬಹುದು ಎಂಬ ಕುರಿತು ಚರ್ಚೆ ಮಾಡಿ ಅನುಷ್ಠಾನ ತರಲಾಗುವುದು ಎಂದು ಭರವಸೆ ನೀಡಿದರು.

ತಾಲೂಕಿನ ಹಿರೇಕೋಡಿ ಆಶ್ರಮದಲ್ಲಿ ಜೈನಮುನಿಗಳು ಏನೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂಬುವುದನ್ನು ವೀಕ್ಷಿಸಿದರು. ಅತೀ ಕಡಿಮೆ ಅವಧಿಯಲ್ಲಿ ಆಶ್ರಮವನ್ನು ಅಭಿವೃದ್ಧಿ ಮಾಡಿದ್ದು, ಈ ಆಶ್ರಮ ಕೇವಲ ಜೈನ ಧರ್ಮೀಯರಿಗೆ ಮಾತ್ರವಲ್ಲ ಇನ್ನುಳಿದ ಧರ್ಮೀಯರಿಗೂ ಆರಾಧ್ಯ ಕೇಂದ್ರವಾಗಿದೆ ಎಂಬುವುದನ್ನು ಭಕ್ತರು ಹಾಗೂ ಟ್ರಸ್ಟಿಗಳಿಂದ ಮಾಹಿತಿ ಪಡೆದುಕೊಂಡರು.

 

ಜೈನಮುನಿ ಹತ್ಯೆ ಆರೋಪಿಗೆ ಶಿಕ್ಷೆ ಬೇಡ, ಮನಃ ಪರಿವರ್ತನೆಯಾಗಲಿ - ಗುಣಧರನಂದಿ ಮಹಾರಾಜ್‌

ಶಾಸಕ ಗಣೇಶ ಹುಕ್ಕೇರಿ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ, ಡಾ.ಎನ್‌.ಎ.ಮಗದುಮ್‌, ಡಾ.ಪದ್ಮರಾಜ ಪಾಟೀಲ, ಎಸ್ಪಿ ಡಾ.ಸಂಜಯ ಪಾಟೀಲ, ಟ್ರಸ್ಟ್‌ ಅಧ್ಯಕ್ಷ ಭೀಮಗೊಂಡ ಉಗಾರೆ, ವರ್ಧಮಾನ ಸದಲಗೆ, ರವೀಂದ್ರ ಹಂಪಣ್ಣವರ ಸೇರಿದಂತೆ ಇತರರು ಇದ್ದರು.

Latest Videos
Follow Us:
Download App:
  • android
  • ios