ತುಂಗಭದ್ರಾ ನೀರು ಉಳಿಸಲು ಗ್ರೇಟ್ ಐಡಿಯಾ ಕೊಟ್ಟ ತಜ್ಞ ಕನ್ನಯ್ಯ, ನೀರು ಪೋಲಾಗುತ್ತಿರುವುದಕ್ಕೆ ಮರುಕ
ಟಿಬಿ ಡ್ಯಾಂ ಕ್ರಸ್ಟ್ ಗೇಟ್ ದುರಸ್ತಿ ಕಾರ್ಯ ಹಿನ್ನೆಲೆ ಸ್ಟಾಪ್ ಲಾಗ್ ಗೇಟ್ ನಿರ್ಮಾಣ ಸಂಬಂಧ ಪರಿಣಿತ ಆಂಧ್ರ ಮೂಲದ ಕನ್ನಯ್ಯ ನಾಯ್ಡು ರಾಜ್ಯಕ್ಕೆ ಆಗಮಿಸಿ ನೀರು ಪೋಲಾಗುತ್ತಿರುವ ಬಗ್ಗೆ ಮರುಗಿದರು.
ಹೊಸಪೇಟೆ(ಆ.13): ಕೊಪ್ಪಳ ಜಿಲ್ಲೆಯ ತುಂಗಭದ್ರಾ ಡ್ಯಾಂನ 19ನೇ ನಂಬರ್ ಕ್ರಸ್ಟ್ ಗೇಟ್ ಅನ್ನು ದುರಸ್ತಿ ಮಾಡುವ ಸಲುವಾಗಿ ಸ್ಟಾಪ್ ಲಾಗ್ ಗೇಟ್ ನಿರ್ಮಾಣ ಸಂಬಂಧ ಪರಿಣಿತ ಆಂಧ್ರ ಮೂಲದ ಕನ್ನಯ್ಯ ನಾಯ್ಡು ಅವರು ಸೋಮವಾರ ರಾಜ್ಯಕ್ಕೆ ಆಗಮಿಸಿದರು. ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ನೀರನ್ನು ಉಳಿಸಿಕೊಳ್ಳುವ ಸಲಹೆ ನೀಡಿದ್ದಾರಂತೆ.
ತಾತ್ಕಾಲಿಕ ಗೇಟ್ ಅಳವಡಿಸುವ ಬಗ್ಗೆ ಸಭೆ ನಡೆಸಿದ ಕನ್ನಯ್ಯ ನೀರು ವ್ಯರ್ಥವಾಗುತ್ತಿರುವ ಬಗ್ಗೆ ಭಾವುಕರಾದರು. ನಾನು ತುಂಗಭದ್ರಾ ಡ್ಯಾಂ ನಲ್ಲಿಯೇ ಕೆಲಸ ಮಾಡಿದ್ದೇನೆ. ನಾನು ತುಂಗಭದ್ರಾ ನೀರು ಕುಡಿದು ಬೆಳೆದಿದ್ದೇನೆ ಎಂದು ನೀರು ವ್ಯರ್ಥವಾಗಿ ಹರಿಯುತ್ತಿರುವ ಬಗ್ಗೆ ಮರುಗಿದರು.
ಕೆಆರ್‌ಎಸ್ ತುಂಬಿ ನೂರಾರು ಟಿಎಂಸಿ ನೀರು ಹರಿದು ಹೋದರೂ ಮಂಡ್ಯದ ಕೆರೆಗಳು ಖಾಲಿ, ಅಧಿಕಾರಿಗಳ ನಿರ್ಲಕ್ಷ್ಯ!
ಆಲಮಟ್ಟಿ, ನಾರಾಯಣಪುರ, ಕೆಆರ್‌ಎಸ್ ಸೇರಿದಂತೆ ಹಲವಾರು ಜಲಾಯಶಯಗಳಿಗೆ ಗೇಟ್ ಅಳವಡಿಸಿರುವ ಅನುಭವ ನ್ಯಾಷನಲ್ ಡ್ಯಾಮ್ ಗೇಟ್ ಎಕ್ಸಪರ್ಟ್ ಕಣ್ಣಯ್ಯ ನಾಯ್ಡು ಅವರಿಗಿದೆ. ನೀರು ಇರುವ ವೇಳೆಯಲ್ಲಿಯೇ ತಾತ್ಕಾಲಿಕ್ ಗೇಟ್ ಅಳವಡಿಸುವ ಸಾಧ್ಯತೆಯನ್ನು ಸಭೆಯಲ್ಲಿ ತಿಳಿಸಿದ್ದಾರೆ. ಕಣ್ಣಯ್ಯ ನಾಯ್ಡು ಜೊತೆಗೆ ಸುಧೀರ್ಘ ಸಭೆ ನಡೆಸಿದ ಅಧಿಕಾರಿಗಳು ಹೊಸ ಗೇಟ್ ಅಳವಡಿಕೆಯ ಬಗ್ಗೆ ಸಲಹೆ ಪಡೆದುಕೊಂಡರು. ತಲಾ 12 ಅಡಿಯ 5 ಸೆಗ್ಮೇಂಟ್‌ಗಳನ್ನು ಕ್ರೇನ್ ಮೂಲಕ ಕೆಳಗಿಳಿಸಿ ನೀರನ್ನು ತಡೆ ಹಿಡಿಯಬಹುದಾಗಿದೆ ಎನ್ನುವ ಸಲಹೆಯನ್ನು ಕಣ್ಣಯ್ಯ ನೀಡಿದ್ದಾರೆ.
ತುಂಗಭದ್ರಾ ಜಲಾಶಯಕ್ಕೆ ಸ್ಟಾಪ್ ಲಾಗ್ ಗೇಟ್ ನಿರ್ಮಾಣ ಹಿನ್ನೆಲೆ ತಜ್ಷರು ಪ್ಲಾನ್ ಎ ಮತ್ತು ಪ್ಲಾನ್ ಬಿ ಮಾಡಿಕೊಂಡಿದ್ದಾರೆ. ಪ್ಲಾನ್ A ನೀರು ಹರಿಯುವಾಗಲೇ ಗೇಟ್ ಅಳವಡಿಸೋದು. ಪ್ಲಾನ್ B ಐವತ್ತು ಟಿಎಂಸಿ ನೀರುಹರಿದು ಹೋದ ಬಳಿಕ ಗೇಟ್ ಅಳವಡಿಸೋದು. ಇವತ್ತು ತಜ್ಞರಿಂದ ಪ್ಲಾನ್ ಎ ಪ್ರಯೋಗ ನಡೆಯಲಿದೆ. ಒಂದೊಮ್ಮೆ ಪ್ಲಾನ್ ಎ ಸಕ್ಸಸ್ ಆದ್ರೆ ಜಲಾಶಯದಲ್ಲಿ ನೀರು ಖಾಲಿ ಮಾಡುವ ಸ್ಥಿತಿಯೇ ಬರಲ್ಲ. ಪ್ಲಾನ್ ಬಿ : ಜಲಾಶಯದಲ್ಲಿ ನೀರು ಖಾಲಿ ಮಾಡಿ ಗೇಟ್ ಅಳವಡಿಸೋದು.
ತುಂಗಭದ್ರಾ ಬೋರ್ಡಿಂದ ಅನ್ಯಾಯವಾದ್ರೂ ಬಿಜೆಪಿ ಸುಮ್ಮನಿರುವುದ್ಯಾಕೆ: ತಂಗಡಗಿ ವಾಗ್ದಾಳಿ
ಹೇಗಿರಲಿದೆ ಪ್ಲಾನ್ ಎ:
ತುಂಗಭದ್ರಾ ಜಲಾಶಯದಲ್ಲಿ ನೀರು ಪೋಲಾಗದಂತೆ ಗೇಟ್ ಅಳವಡಿಸೋದು
19 ನೇ ಕ್ರಸ್ಡ್ ಗೇಟ್ ಜಾಗದಲ್ಲಿ ಅದೇ ಮಾದರಿಯ ಕಬ್ಬಿಣದ ಗೇಟ್ ಬಾಕ್ಸ್ ಕೂರಿಸೋದು
ಹಳೆಯ ಕ್ರಸ್ಟ್ ಗೇಟ್ 48 ಟನ್ ತೂಕ, 60 ಅಡಿ ಅಗಲ 20 ಅಡಿ ಉದ್ದ ಇತ್ತು
ಹಳೆಯ ವಿನ್ಯಾಸದ ಪ್ರಕಾರವೇ 50 ಟನ್ ಗಾತ್ರದ ಕಬ್ಬಿಣದ ಬಾಕ್ಸ್ ಇರಿಸೋದು
ಉಳಿದ ಕ್ರಸ್ಟ್ ಗೇಟ್ ಗಳನ್ನು ಮುಚ್ಚುತ್ತಾ ಏಕಕಾಲಕ್ಕೆ ಬಾಕ್ಸ್ ನಿಲ್ಲಿಸೋದು
ಬಾಕ್ಸ್ ಅಳವಡಿಕೆ ಕಾರ್ಯಕ್ಕೆ ಈಗಾಗಲೇ ಜಿಂದಾಲ್ ನಿಂದ ಕ್ರೇನ್ ತರಿಸಿಕೊಳ್ಳಲಾಗಿದೆ..
ಪ್ಲಾನ್ ಎ ಸಕ್ಸಸ್ ಆದರೆ ಜಲಾಶಯದಲ್ಲಿ ನೀರು ಉಳಿದುಕೊಳ್ಳುತ್ತೆ
ಪ್ಲಾನ್ Aಗೆ ಹಲವು ತೊಡಕುಗಳು:
ಆದರೆ ಪ್ಲಾನ್ ಎ ಕಾರ್ಯರೂಪಕ್ಕೆ ಬರಲು ಹಲವು ತೊಡಕುಗಳು
ಜಲಾಶಯದ ಉಳಿದ ಗೇಟ್ ಗಳಿಗೆ ಹಾನಿ ಆಗೋ ಸಾಧ್ಯತೆ
50 ಟನ್ ತೂಕದ ಕಬ್ಬಿಣದ ಬಾಕ್ಸ್ ನಿಲ್ಲುತ್ತಾ ಅನ್ನೋ ಪ್ರಶ್ನೆ
ಏಕಾಏಕಿ ನೀರಿನ ಹರಿವು ತಡೆದಲ್ಲಿ ಡ್ಯಾಂಗೆ ಧಕ್ಕೆ ಅಂತ ತಜ್ಞರ ಆತಂಕ
33 ಸಾವಿರ ಕ್ಯೂಸೆಕ್ ನೀರನ್ನು ಬಾಕ್ಸ್ ಇಟ್ಟು ತಡೆದಾಗ ಪಕ್ಕದ ಗೋಡೆಗಳಲ್ಲಿ ಬಿರುಕು ಬೀಳುವ ಸಾಧ್ಯತೆ..
ಪ್ಲಾನ್ ಎ ಕಾರ್ಯರೂಪ ಮಾಡಿದ್ರೆ ಜಲಾಶಯದ ಭವಿಷ್ಯಕ್ಕೆ ಅಪಾಯ ಅಂತಿರೋ ತಜ್ಞರು
50:50 ಆಪ್ಷನ್ ಆಗಿ ಇಟ್ಡುಕೊಂಡು ಕಾರ್ಯಾಚರಣೆ