Asianet Suvarna News Asianet Suvarna News

ಹಾಸನ: ರೈಲ್ವೆ ಹಳಿ ಮೇಲೆ ಕುಸಿದ ಭಾರಿ ಪ್ರಮಾಣ ಮಣ್ಣು! ಮಧ್ಯರಾತ್ರಿಯಿಂದ ನಿಂತಲ್ಲೇ ನಿಂತ ಎರಡು ಕಡೆ ರೈಲುಗಳು

ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ರೈಲ್ವೆ ಹಳಿ ಮೇಲೆ ಭಾರೀ ಪ್ರಮಾಣದ ಕಲ್ಲು ಮಣ್ಣು ಮರಗಳು ಕುಸಿದುಬಿದ್ದಿದ್ದು, ಹಾಸನ-ಮಂಗಳೂರು ಮಾರ್ಗದ ರೈಲು ಸಂಚಾರ ತತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Huge landslides Hassan Mangalore railway line traffic temporarily suspended rav
Author
First Published Aug 10, 2024, 12:04 PM IST | Last Updated Aug 10, 2024, 12:07 PM IST

ಹಾಸನ (ಆ.10): ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ರೈಲ್ವೆ ಹಳಿ ಮೇಲೆ ಭಾರೀ ಪ್ರಮಾಣದ ಕಲ್ಲು ಮಣ್ಣು ಮರಗಳು ಕುಸಿದುಬಿದ್ದಿದ್ದು, ಹಾಸನ-ಮಂಗಳೂರು ಮಾರ್ಗದ ರೈಲು ಸಂಚಾರ ತತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಸಕಲೇಶಪುರ ತಾಲೂಕಿನ ನಾಗರ ಬಳಿಯಿರುವ ಹಾಸನ-ಮಂಗಳೂರು ನಡುವಿನ 42,/43 ನಡುವೆ ಭೂಕುಸಿತವಾಗಿದೆ. ಇದರಿಂದಾಗಿ ಹಾಸನದಿಂದ ಮಂಗಳೂರಿಗೆ, ಮಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ರೈಲುಗಳು ಸಂಚಾರ ಸ್ಥಗಿತಗೊಂಡು ಸಕಲೇಶಪುರ, ಯಡಕುಮಾರಿ, ಶಿರವಾಗಿಲು, ಆಲೂರು ಸೇರಿ ಆರುಕಡೆ ನಿಂತಲ್ಲೇ ನಿಂತಿರುವ ಆರು ರೈಲುಗಳು. ದಿಢೀರ್ ಸ್ಥಗಿತದಿಂದಾಗಿ ರೈಲ್ವೆ ಪ್ರಯಾಣಿಕರು ಪರದಾಡುವಂತಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಹಳಿ ಮೇಲೆ ಕುಳಿತ ಪ್ರಯಾಣಿಕರು. ಭೂ ಕುಸಿತದಿಂದ ಮುಂದೆ ಚಲಿಸಲಾಗದೆ ಮಧ್ಯರಾತ್ರಿಯಿಂದಲೂ ನಿಂತಲ್ಲೇ ನಿಂತಿರುವ ರೈಲುಗಳು. ಸದ್ಯ ಹಳಿ ಮೇಲೆ ಬಿದ್ದಿರುವ ಮಣ್ಣ ತೆರವು ಮಾಡುವ ಕಾರ್ಯಾಚರಣೆ ನಡೆದಿದ್ದು, ರೈಲುಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡುತ್ತಿರುವ ರೈಲ್ವೆ ಇಲಾಖೆ. 

 

ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ ಮಾರ್ಗದಲ್ಲಿ 24 ಗಂಟೆ ಸಂಚಾರ: ತುಸು ನಿರಾಳ, ಮುಂದಿದೆ ಕಳವಳ!

ಆತಂಕದಲ್ಲಿ ಪ್ರಯಾಣಿಕರು:

ರೈಲ್ವೆ ಹಳಿ ಮೇಲೆ ಭೂಕುಸಿತದಿಂದ ದಿಢೀರನೇ ರೈಲ್ವೆ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಆತಂಕಗೊಂಡಿದ್ದಾರೆ. ಸಾವಿರಾರು ಪ್ರಯಾಣಿಕರಿದ್ದು, ಕುಡಿಯುವ ನೀರು, ಆಹಾರ ಅಲಭ್ಯತೆಯಿಂದ ಪರದಾಡುತ್ತಿದ್ದಾರೆ. ತಕ್ಷಣ ಕಾರ್ಯಪ್ರವೃತ್ತಗೊಂಡಿರುವ ರೈಲ್ವೆ ಇಲಾಖೆ ಈಗಾಗಲೇ ಸಮರೋಪಾದಿಯಲ್ಲಿ ಪರಿಸ್ಥಿತಿ ನಿಭಾಯಿಸಲು ಕ್ರಮ ಕೈಗೊಂಡಿದೆ. ಆಚಂಗಿ ಬಳಿ ಭಾರೀ ಮಣ್ಣು ಕುಸಿದಿದ್ದು, ಹಳಿಗಳ ಮೇಲೆ ಬಿದ್ದ ಮಣ್ಣು ತೆರವುಗೊಳಿಸುವ ಕಾರ್ಯದಲ್ಲಿ ಕಾರ್ಮಿಕರು ತೊಡಗಿದ್ದಾರೆ. ಈ ಎಲ್ಲ ಪ್ರಯತ್ನಗಳ ಹೊರತಾಗಿಯೂ ಪ್ರಯಾಣಿಕರಲ್ಲಿ ಆತಂಕ ಹೆಚ್ಚುತ್ತಿದೆ.

ವಯನಾಡು ಭೂಕುಸಿತ ಬೆನ್ನಲ್ಲೇ ಮತ್ತೆ ಆತಂಕ ಸೃಷ್ಟಿಸಿದ ನಿಗೂಢ ಶಬ್ದ!

ಇಂತಹ ಘಟನೆ ಬಗ್ಗೆ ರೈಲ್ವೇ ಅಧಿಕಾರಿಗಳಿಂದ ಸಕಾಲಿಕ ಹಾಗೂ ನಿಖರ ಮಾಹಿತಿ ಇಲ್ಲದಿರುವುದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಯ ಬಗ್ಗೆ ಯಾವುದೇ ಸ್ಪಷ್ಟವಾದ ಮಾಹಿತಿ ಸಿಗದೇ ಕೆಲವರು ಐದು ಗಂಟೆಗಳವರೆಗೆ ಸಿಕ್ಕಿಹಾಕಿಕೊಂಡಿದ್ದಾರೆ. ಅದೃಷ್ಟವಶಾತ್, ಯಾವುದೇ ಗಾಯಗಳ ವರದಿಯಾಗಿಲ್ಲ, ಮತ್ತು ರೈಲು ಚಾಲಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

Latest Videos
Follow Us:
Download App:
  • android
  • ios