Asianet Suvarna News Asianet Suvarna News

ಈ ವರ್ಷಾಂತ್ಯದೊಳಗೆ ಎಲ್ಲರಿಗೂ ವಸತಿ ಅಸಾಧ್ಯ: CAG

2022ರ ವೇಳೆಗೆ ‘ಎಲ್ಲರಿಗೂ ವಸತಿ’ ಗುರಿಯನ್ನು ರಾಜ್ಯದಲ್ಲಿ ಸಾಧಿಸುವುದು ಕಷ್ಟಕರವಾಗಿದೆ ಎಂದು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ತಿಳಿಸಿದೆ.

Housing for all impossible by yearend says CAG bengaluru rav
Author
First Published Sep 21, 2022, 10:51 AM IST

ವಿಧಾನಸಭೆ (ಸೆ.21) : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ನಗರ ಪ್ರದೇಶದ ಬಡವರಿಗೆ ವಸತಿ ಕಲ್ಪಿಸುವ ಸಂಬಂಧ ಹಾಕಿಕೊಂಡಿರುವ 2022ರ ವೇಳೆಗೆ ‘ಎಲ್ಲರಿಗೂ ವಸತಿ’ ಗುರಿಯನ್ನು ರಾಜ್ಯದಲ್ಲಿ ಸಾಧಿಸುವುದು ಕಷ್ಟಕರವಾಗಿದೆ ಎಂದು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ತಿಳಿಸಿದೆ. ಮಂಗಳವಾರ ಸದನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದಲ್ಲಿ ನಗರ ಪ್ರದೇಶದ ಬಡವರಿಗೆ ವಸತಿ ಯೋಜನೆÜಗಳ ಅನುಷ್ಠಾನ ಕುರಿತ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯನ್ನು ಮಂಡಿಸಿದರು.

Bengaluru: ಸಿಎಜಿ ‘ರಾಜಕಾಲುವೆ ವರದಿ’ ಜಾರಿಗೆ ಸಮಿತಿ ರಚಿಸಿ: ಹೈಕೋರ್ಟ್

ರಾಜ್ಯ ಸರ್ಕಾರದ ವಸತಿ ಇಲಾಖೆಯು ರಾಜೀವ್‌ಗಾಂಧಿ ವಸತಿ ನಿಗಮ ನಿಯಮಿತವು ಕೈಗೆಟುಕುವ ಬೆಲೆಯಲ್ಲಿ ವಸತಿ (ಎಎಚ್‌ಪಿ) ಮತ್ತು ಫಲಾನುಭವಿ ನೇತೃತ್ವದ ವೈಯಕ್ತಿಕ ವಸತಿ ನಿರ್ಮಾಣ (ಬಿಎಲ್‌ಸಿ) ಘಟಕಗಳನ್ನು ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಗಾಗಿ ಆಯ್ಕೆ ಮಾಡಲಾಯಿತು. 2021ರ ಮಾಚ್‌ರ್‍ ವೇಳೆಗೆ ಎಎಚ್‌ಪಿ ಮತ್ತು ಬಿಎಲ್‌ಸಿ ಘಟಕಗಳಡಿ ಶೇ.38ರಷ್ಟುಫಲಾನುಭವಿಗಳಿಗೆ ಮಾತ್ರ ಮನೆ ನೀಡುವ ಯೋಜನೆಗಳನ್ನು ತೆಗೆದುಕೊಳ್ಳಲಾಗಿದೆ. ಈ ಪೈಕಿ ಕೇವಲ ಶೇ.17ರಷ್ಟುಮಾತ್ರ ಪೂರ್ಣಗೊಂಡಿದೆ. ಶೇ.63ರಷ್ಟುಇನ್ನೂ ಪ್ರಾರಂಭವಾಗಬೇಕಿದೆ. ಉಳಿದ ಶೇ.20ರಷ್ಟುನಡೆಯುತ್ತಿದೆ. ಹೀಗಾಗಿ ಎಲ್ಲರಿಗೂ ವಸತಿ ಗುರಿಯನ್ನು 2022ರ ವೇಳೆಗೆ ಸಾಧಿಸುವುದು ಕಷ್ಟಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಎಎಚ್‌ಪಿ ಘಟಕದಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕೈಗೆತ್ತಿಗೊಂಡ ಮನೆಗಳಲ್ಲಿ ಕೇವಲ ಶೇ.14ರಷ್ಟುಮನೆಗಳನ್ನು ಗುಂಪು ಮನೆಗಳಾಗಿ ನಿರ್ಮಿಸಿ ಉಳಿದ ಮನೆಗಳನ್ನು ಚದುರಿದ ರೀತಿಯಲ್ಲಿ ಪ್ರತ್ಯೇಕವಾಗಿ ತೆಗೆದುಕೊಳ್ಳಲಾಗಿದೆ. ಇದರಿಂದ ಎಎಚ್‌ಪಿ ಘಟಕದಡಿಯಲ್ಲಿ ಮೂಲಸೌಕರ್ಯ ಸೌಲಭ್ಯಗಳೊಂದಿಗೆ ಗುಂಪು ವಸತಿ ಒದಗಿಸುವ ಯೋಜನೆಯ ಉದ್ದೇಶವು ಈಡೇರಲಿಲ್ಲ. ಯೋಜನೆಯ ಮಾರ್ಗಸೂಚಿಗಳಡಿಯಲ್ಲಿ ಸೂಚಿಸಲಾದ ನೀರು ಸರಬರಾಜು, ಒಳಚರಂಡಿ, ರಸ್ತೆಗಳು, ವಿದ್ಯುತ್‌ ಮುಂತಾದ ನಾಗರಿಕ ಮೂಲಸೌಕರ್ಯಗಳನ್ನು ಒದಗಿಸದೆ ಈ ಯೋಜನೆಯನ್ನು ಕೈಗೊಳ್ಳಲಾಗಿತ್ತು ಎಂದು ಹೇಳಿದೆ.

ಯೋಜನೆಗಳಿಗೆ ಫಲಾನುಭವಿಗಳ ಸೇರಿಸುವಿಕೆಯಲ್ಲಿನ ಕೊರತೆಯಿಂದಾಗಿ ಕೇಂದ್ರ ಸರ್ಕಾರವು ಬಿಎಲ್‌ಸಿ ಯೋಜನೆಯಡಿಯಲ್ಲಿ 569.56 ಕೋಟಿ ರು. ಮೊಂದಲ ಕಂತಿನ ಬಿಡುಗಡೆ ತಡೆಹಿಡಿದಿದೆ. 62,648 ಬಿಎಲ್‌ಸಿ ಫಲಾನುಭವಿಗಳಲ್ಲಿ 12,757 ಫಲಾನುಭವಿಗಳಿಗೆ ಪಾವತಿ ಮಾಡಿದ 172.64 ಕೋಟಿ ರು. ಮೊತ್ತದ ಡಿಬಿಟಿ ಪಾವತಿಗೆ ಆಧಾರ್‌ ಮೂಲಕ ದೃಢೀಕರಣ ಮಾಡಿಲ್ಲ ಎಂದು ತಿಳಿಸಿದೆ.

ರಾಜ್ಯದಲ್ಲಿ ವಸತಿ ಬೇಡಿಕೆಯನ್ನು ದೃಢಪಡಿಸಿಕೊಳ್ಳಲು ರಾಜ್ಯ ಸರ್ಕಾರವು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಮತ್ತು 2022ರೊಳಗೆ ಮನೆಗಳನ್ನು ಪೂರ್ಣಗೊಳಿಸಲು ಗುರಿಗಳನ್ನು ನಿಗದಿಪಡಿಸಿಕೊಳ್ಳಬೇಕು. ಯೋಜನೆಯ ಗುರಿಗಳನ್ನು ಸಾಧಿಸಲು ಗುರಿಗಳನ್ನು ಮತ್ತು ಸಂಪನ್ಮೂಲಗಳನ್ನು ನಿಗದಿಪಡಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ವಿವಿಧ ಅನುಷ್ಠಾನ ಸಂಸ್ಥೆಗಳು ನಿಗದಿತ ಕಾಲಮಿತಿಯೊಳಗೆ ಕಾರ್ಯತಂತ್ರದ ಯೋಜನೆ ಮತ್ತು ವಾರ್ಷಿಕ ಯೋಜನೆಗಳನ್ನು ಸಿದ್ಧಪಡಿಸುವುದನ್ನು ಖಚಿತಪಡಿಸಬೇಕು ಎಂದು ಸಿಎಜಿ ಶಿಫಾರಸ್ಸು ಮಾಡಿದೆ.

3 ವರ್ಷದಲ್ಲಿ 3.92 ಲಕ್ಷ ಮನೆ ನಿರ್ಮಾಣ: ಸಚಿವ ಸೋಮಣ್ಣ

ಕೇಂದ್ರದ ನೆರವಿನ ಬಿಡುಗಡೆಗೆ ಸೂಚಿಸಲಾದ ಷರತ್ತುಗಳಿಗೆ ರಾಜ್ಯ ಸರ್ಕಾರವು ಬದ್ಧವಾಗಿರಬೇಕು. ಯೋಜನೆಯಡಿ ಯೋಜನೆಗಳನ್ನು ಅನುಮೋದಿಸುವ ಮೊದಲು ಫಲಾನುಭವಿಗಳ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಪಾಲಿನ ವಂತಿಗೆಯ ಬಗ್ಗೆ ಒಪ್ಪಿಗೆಯನ್ನು ಪಡೆಯಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ.

ಇನ್ನೂ ಹಳಿಗೇರದ ಖಜಾನೆ-2: ಸಿಎಜಿ ಆಕ್ಷೇಪ:

ಬಜೆಟ್‌ ತಯಾರಿಕೆ, ನಗದು ನಿರ್ವಹಣೆ, ಸರ್ಕಾರಿ ಸಾಲ ಮತ್ತು ಖಾತರಿಗಳ ನಿರ್ವಹಣೆ, ಹಣಕಾಸು ಸ್ವತ್ತುಗಳ ನಿರ್ವಹಣೆಯ ಕಾರ್ಯಗಳನ್ನೊಳೊಂಡಿರುವ ಖಜಾನೆ -2 (ಕೆ2) ಯೋಜನೆಯು ದಶಕಕ್ಕೂ ಹೆಚ್ಚಿನ ಸಮಯವಾದರೂ ನಿರೀಕ್ಷಿತ ಫಲಿತಾಂಶ ಸಾಧಿಸಲು ಸಾಧ್ಯವಾಗಿಲ್ಲ ಎಂದು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿ (ಸಿಎಜಿ) ತಿಳಿಸಿದೆ.

ಮಂಗಳವಾರ ಸದನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಗ್ರ ಹಣಕಾಸು ನಿರ್ವಹಣಾ ವ್ಯವಸ್ಥೆ ಖಜಾನೆ -2 ಕುರಿತು ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯನ್ನು ಮಂಡಿಸಿದರು. 2013ರ ಫೆಬ್ರವರಿ ವೇಳೆಗೆ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು ಎಲ್ಲಾ ಕಾರ್ಯಗಳನ್ನು ಕೆ-2 ಮೂಲಕ ಆರಂಭಿಸಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, 2021ರ ಮಾಚ್‌ರ್‍ ವೇಳೆಗೂ ಪೂರ್ಣಗೊಂಡಿಲ್ಲ. 2015ರಿಂದ 2021ರ ಅವಧಿಯಲ್ಲಿ ಕಂತು ಕಂತುಗಳಾಗಿ ಕಾರ್ಯಾರಂಭ ಮಾಡಲಾಗಿದೆ. ಹಲವು ವ್ಯವಹಾರ ಪ್ರಕ್ರಿಯೆಗಳು ಕೆ2 ಅಪ್ಲಿಕೇಷನ್‌ನಿಂದ ಹೊರಗೆ ಉಳಿದಿವೆ. ಎಲ್ಲಾ ಮಾಡ್ಯೂಲ್‌ಗಳ ಕಾರ್ಯಾರಂಭದಲ್ಲಿ ವಿಳಂಬವಾದ ಕಾರಣ ‘ಗೋ-ಲೈವ್‌’ ಘೋಷಣೆ ಸಾಧ್ಯವಾಗಲಿಲ್ಲ ಎಂದು ಉಲ್ಲೇಖಿಸಿದೆ

Follow Us:
Download App:
  • android
  • ios