ಜೈನಮುನಿ ಹತ್ಯೆ ಕೇಸಲ್ಲಿ ಸರ್ಕಾರದ ಕಣ್ತೆರೆಸಿದ ಮಾಧ್ಯಮಗಳು: ಗುಣಧರನಂದಿ ಸ್ವಾಮೀಜಿ
ಬೆಳಗಾವಿಯ ಜೈನಮುನಿಗಳ ಬರ್ಬರ ಹತ್ತೆಯಾದರೂ ಸರ್ಕಾರದಿಂದ ಯಾವುದೇ ಸ್ಪಂದನೆ ಇರಲಿಲ್ಲ. ಮಾಧ್ಯಮಗಳ ಸಹಾಯದಿಂದ ಕೃತ್ಯ ಬೆಳಕಿಗೆ ಬಂದಿದ್ದರಿಂದಾಗಿ ಸರ್ಕಾರ ಸ್ಪಂದಿಸುತ್ತಿದೆ.
ಹುಬ್ಬಳ್ಳಿ (ಜು.09): ರಾಜ್ಯದಲ್ಲಿ ಬೆಳಗಾವಿಯ ಹಿರೇಕೋಡಿ ಆಶ್ರಮದ ಕಾಮಕುಮಾರ ಮಹಾರಾಜ್ ಜೈನಮುನಿ ಅವರನ್ನು ಅತ್ಯಂತ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. ಇಂತಹ ಘಟನೆ ನಡೆದರೂ ಸರ್ಕಾರದಿಂದ ಯಾವುದೇ ಸ್ಪಂದನೆ ಇರಲಿಲ್ಲ. ಮಾಧ್ಯಮಗಳ ಸಹಾಯದಿಂದ ಈ ಕೃತ್ಯ ಬೆಳಕಿಗೆ ಬಂದಿದ್ದರಿಂದಾಗಿ ಈಗ ಸರ್ಕಾರದಿಂದ ಸ್ಪಂದನೆ ಸಿಗುತ್ತಿದೆ ಎಂದು ಹುಬ್ಬಳ್ಳಿಯ ವರೂರಿನ ಜೈನಮುನಿ ಗುಣಧರನಂದಿ ಮಾಹಾರಾಜ್ ಸ್ವಾಮೀಜಿ ಹೇಳಿದರು.
ಬೆಳಗಾವಿ ಹಿರೇಕೋಡಿ ಜೈನಮುನಿ ಹತ್ಯೆ ಖಂಡಿಸಿ ನಿನ್ನೆಯಿಂದ ಅಮರಣಾಂತ ಉಪವಾಸ ಕೈಗೊಂಡಿರುವ ಹುಬ್ಬಳ್ಳಿಯ ವರೂರಿನ ಜೈನಮುನಿ ಗುಣಧರನಂದಿ ಮಾಹಾರಾಜ್ ಸ್ವಾಮೀಜಿ ಅವರನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಸಿ. ನಾಗರಾಜ್ ಛಬ್ಬಿ ಭೇಟಿ ಮಾಡಿ ಸಾಂತ್ವನ ಹೇಳಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗುಣಧರನಂದಿ ಮುನಿಗಳು, ಜೈನ ಮುನಿಗಳಿಗೆ ಅತ್ಯಂತ ಚಿತ್ರಹಿಂಸೆ ನೀಡಲಾಗಿದೆ. ಒಬ್ಬ ಜೈನಮುನಿಗೆ ಈ ರೀತಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವುದು ನಿಜಕ್ಕೂ ನೋವಿನ ಸಂಗತಿ. ಇಂತಹ ಘಟನೆಯಾದ್ರೂ ಸಹ ಸಿಎಂ ಯಾವುದೇ ಸ್ಪಂದನೆ ಮಾಡಿರಲಿಲ್ಲ. ಮಾದ್ಯಮಗಳ ಸಹಾಯದಿಂದ ಈ ಕೃತ್ಯ ಇದೀಗ ಬೆಳಕಿಗೆ ಬಂದಿದೆ. ಇದೀಗ ಸರ್ಕಾರ ಹಾಗೂ ಜನಪ್ರತಿನಿಧಿಗಳಿಂದ ಸ್ಪಂದನೆ ಸಿಗುತ್ತಿದೆ ಎಂದು ತಿಳಿಸಿದರು.
ಬೆಳಗಾವಿ ಜೈನಮುನಿಗೆ ಕರೆಂಟ್ ಶಾಕ್ ಕೊಟ್ಟು ಕೊಲೆ: ದೇಹ ತುಂಡರಿಸಿ ಗದ್ದೆಗೆ ಬೀಸಾಡಿದರು
ನಾಳೆ ಸಂಜೆಯೊಳಗೆ ಬೇಡಿಕೆ ಈಡೇರಿಸುವ ಭರವಸೆಯಿದೆ: ಇನ್ನು ಜೈನ ಮುನಿಗಳು ದೇಶಾಂತರ ಪಾದಯಾತ್ರೆ ಹಮ್ಮಿಕೊಳ್ಳುತ್ತಾರೆ. ಅಂತಹ ಜೈನಮುನಿಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಬೇಡಿಕೆ ಇಡಲಾಗಿದೆ. ಮಳೆ ಚಳಿ ಎನ್ನದೇ ದೇಶಾಂತರ ಪಾದಯಾತ್ರೆ ಹಮ್ಮಿಕೊಳ್ಳುವ ಮುನಿಗಳಿಗೆ ಯಾವುದೇ ಆಶ್ರಯ ಭದ್ರತೆ ಇರುವುದಿಲ್ಲ. ಹೀಗಾಗಿ ಈ ರೀತಿ ಪಾದಯಾತ್ರೆ ನಡೆಸಲಿರೋ ಜೈನ ಮುನಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದೇವೆ. ರಾಜ್ಯ ಗೃಹ ಮಂತ್ರಿ ಪರಮೇಶ್ವರ್ ಅವರು ನಾಳೆ ಸಂಜೆ 5 ಗಂಟೆಯೊಳಗೆ ನಮ್ಮ ಬೇಡಿಕೆಗಳಿಗೆ ಮನ್ನಣೆ ನೀಡುವುದಾಗಿ ಹೇಳಿದ್ದಾರೆ ಎಂದರು.
ಕೇಂದ್ರ ಗೃಹ ಸಚಿವರಿಗೂ ಆಶ್ರಯ ಕೊಡಲು ಸಂದೇಶ ರವಾನೆ: ದೇಶಾಂತರ ಪಾದಯಾತ್ರೆ ಮಾಡುವಾಗ ಭದ್ರತೆ ಇಲ್ಲದೇ ಜೈನ ಮುನಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪ್ರತಿಯೊಬ್ಬ ಜೈನಮುನಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ಜೊತೆಗೆ ಪಾದಯಾತ್ರೆ ಮಾಡುವ ಜೈನಮುನಿಗಳಿಗೆ ಆಶ್ರಯ ಕಲ್ಪಿಸಬೇಕು. ಈ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮೂಲಕ ಕೇಂದ್ರ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಮನವಿಗೆ ಸರ್ಕಾರಗಳು ಸ್ಪಂದಿಸದೇ ಹೋದಲ್ಲಿ ನಾನು ಅಮರಣಾಂತ ಉಪವಾಸ ಕೈಬಿಡುವುದಿಲ್ಲ. ನಮಗೆ ಭದ್ರತೆ ಒದಗಿಸುವವರೆಗೂ ನಿರಂತರವಾಗಿ ಅಮರಣಾಂತ ಉಪವಾಸ ಶತಸಿದ್ಧವಾಗಿದ್ದೇನೆ ಎಂದು ಹೇಳಿದರು.
ಹೆಂಡ್ತಿ, ಮಕ್ಕಳ ಸಾವಿನ ಸ್ಮಾರಕವಾಗಿ ಬಡಜನರಿಗೆ ಮನೆ ನಿರ್ಮಿಸಿಕೊಟ್ಟ ಕುಟುಂಬ ಪ್ರೇಮಿ
ಬೆಳಗಾವಿ ಜೈನ ಮುನಿಗಳ ಕೊಲೆ ವಿವರ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೊಡಿಯ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜ ಜೈನ ಮುನಿಯನ್ನು ಹಣದ ವಿಚಾರಕ್ಕಾಗಿ ಜು.6ರಂದು ಆಶ್ರಮದ ಭಕ್ತರೇ ಕರೆಂಟ್ ಶಾಕ್ ಕೊಟ್ಟು ಕೊಲೆ ಮಾಡಿದ್ದಾರೆ. ನಂತರ, ಅವರ ದೇಹವನ್ನು ತುಂಡರಿಸಿ ಭತ್ತದ ಗದ್ದೆ ಮತ್ತು ಕೊಳವೆ ಬಾವಿಗೆ ದೇಹದ ತುಂಡುಗಳನ್ನು ಬೀಸಾಡಿದ್ದಾರೆ. ಪೊಲೀಸರು ನೀಡಿದ ಮಾಹಿತಿ ತಿಳಿದು ನಮಗೂ ಶಾಕ್ ಆಯಿತು. ಕಾಮಕುಮಾರ ಮುನಿಗಳು ನಾಪತ್ತೆ ಆಗಿದ್ದಾಗ ಪ್ರಮುಖ ಆರೋಪಿ ನಮ್ಮ ಜೊತೆಗೆ ಹುಡುಕಾಟ ನಡೆಸಿದ್ದನು ಎಂದು ಮುನಿಗಳ ಪೂರ್ವಾಶ್ರಮ ಸಂಬಂಧಿ ಪ್ರದೀಪ ನಂದಗಾಂವ್ ಹೇಳಿದದರು.