Asianet Suvarna News Asianet Suvarna News

ಮನೆ ಕೆಲಸ ಬಿಟ್ಟು ಮಹಿಳಾ ಸಂಘಟನೆಯಲ್ಲಿ ಬ್ಯುಸಿ; ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದ್ದಕ್ಕೆ ಪತ್ನಿ, ಅತ್ತೆಯನ್ನ ಕೊಂದ ಪತಿ!

ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿ ಹಾಗೂ ಪತ್ನಿಯ ತಾಯಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ನವಭಾಗ್ ನಗರದಲ್ಲಿ ನಡೆದಿದೆ. ರೂಪಾ ಮೇತ್ರಿ (32), ಕಲ್ಲವ್ವ  (55) ಹತ್ಯೆಯಾದವರು. ಮಲ್ಲಿಕಾರ್ಜುನ ಮೇತ್ರಿ ಎಂಬಾತನೇ ಪತ್ನಿ, ಅತ್ತೆಯನ್ನು ಕೊಂದಿರುವ ಆರೋಪಿ.

Family feud case Mallikarjuna accused of murdering wife, mother-in-law at vijayapur rav
Author
First Published Sep 18, 2023, 1:35 PM IST

ವಿಜಯಪುರ (ಸೆ.18): ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿ ಹಾಗೂ ಪತ್ನಿಯ ತಾಯಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ನವಭಾಗ್ ನಗರದಲ್ಲಿ ನಡೆದಿದೆ. ರೂಪಾ ಮೇತ್ರಿ (32), ಕಲ್ಲವ್ವ  (55) ಹತ್ಯೆಯಾದವರು. ಮಲ್ಲಿಕಾರ್ಜುನ ಮೇತ್ರಿ ಎಂಬಾತನೇ ಪತ್ನಿ, ಅತ್ತೆಯನ್ನು ಕೊಂದಿರುವ ಆರೋಪಿ.

ನವಭಾಗ್ ಪ್ರದೇಶದ ಭಾಗವಾನ್ ಎಂಬುವವರಿಗೆ ಸೇರಿದ ಮನೆಯಲ್ಲಿ ಕಳೆದ ಆರು ತಿಂಗಳಿನಿಂದ ಮೂವರು ಮಕ್ಕಳು, ಪತ್ನಿ ಹಾಗೂ ಅತ್ತೆಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಆರೋಪಿ ಮಲ್ಲಿಕಾರ್ಜುನ. ಪತ್ನಿ ರೂಪಾ ತನ್ನ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ, ಮನೆಯಲ್ಲಿ  ಕೆಲಸ ಮಾಡುತ್ತಿರಲಿಲ್ಲವೆಂದು ಆಗಾಗ ಜಗಳ ತೆಗೆಯುತ್ತಿದ್ದ ಮಲ್ಲಿಕಾರ್ಜುನ. ಪತ್ನಿ ರೂಪಾ ಎಂಬಾಕೆ ಮಹಿಳಾ ಹಾಗೂ ವಿವಿಧ ಸಂಘಟನೆ‌ಗಳಲ್ಲಿ ತೊಡಗಿಕೊಂಡು ಸದಾ ಮನೆಯಾಚೆ ಇರುತ್ತಿದ್ದರಿಂದ ಗಂಡನಿಗೆ ಕೋಪ ಈ ಹಿನ್ನೆಲೆ ಪತ್ನಿಯೊಂದಿಗೆ ಹಲವು ಸಲ ಜಗಳ ಮಾಡಿಕೊಂಡಿದ್ದ ಆರೋಪಿ. ದಿನೇದಿನೆ ಇದೇ ಕಾರಣಕ್ಕೆ ರೋಸಿಹೋಗಿದ್ದ ಪತಿ. ಇಂದು ಪತ್ನಿ-ಅತ್ತೆ‌ ಮಲಗಿದ್ದ ವೇಳೆ ಕಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುವ ಆರೋಪಿ.

ಮಚ್ಚಿನಿಂದ ಪತ್ನಿ ಕೊಚ್ಚಿ ಕೊಂದ ಪತಿ: ಮಾವನ ಮೇಲೂ ಮಾರಣಾಂತಿಕ ಹಲ್ಲೆ

ಕೊಲೆಗೈದ ಬಳಿಕ ಗಾಂಧಿಚೌಕ್ ಪೊಲೀಸ್ ಠಾಣೆಗೆ ತಾನೇ ತೆರಳಿ ಶರಣಾಗಿದ್ದಾನೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಭೇಟಿ ಪರಿಶೀಲನೆ ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ 

ರೌಡಿ ಶೀಟರ್‌ ಹತ್ಯೆಗೆ ಸಂಚು: ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಹಣಕಾಸು ವಿಚಾರದ ದ್ವೇಷದ ಹಿನ್ನೆಲೆಯಲ್ಲಿ ರೌಡಿ ಶೀಟರ್‌ ಹತ್ಯೆಗೆ ಸಂಚು ರೂಪಿಸಿದ್ದ ಇಬ್ಬರು ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ಕೆ.ಜಿ.ಹಳ್ಳಿಯ ಎಚ್‌ಬಿಆರ್ ಲೇಔಟ್ ನಿವಾಸಿ ಮೊಹಮ್ಮದ್ ಜುಬೇರ್ (37) ಮತ್ತು ಡಿ.ಜೆ.ಹಳ್ಳಿಯ ಡ್ರೈವರ್ಸ್ ಕಾಲೋನಿಯ ಫುರ್ಕಾನ್ ಅಲಿಖಾನ್ (38) ಬಂಧಿತರು. ಆರೋಪಿಗಳಿಂದ ಕಂಟ್ರಿಮೇಡ್ ಪಿಸ್ತೂಲ್ ಮತ್ತು ಎರಡು ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ. ಇಬ್ಬರು ವ್ಯಕ್ತಿಗಳು ಬಾಣಸವಾಡಿ ಠಾಣೆ ವ್ಯಾಪ್ತಿಯ ಚೇರ್ಮನ್ ಲೇಔಟ್ ಬಳಿ ಪಿಸ್ತೂಲ್‌ ಮತ್ತು ಗುಂಡುಗಳನ್ನು ಇರಿಸಿಕೊಂಡು ಓಡಾಡುತ್ತಿರುವ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಡಿ.ಜೆ.ಹಳ್ಳಿ ಠಾಣೆ ರೌಡಿ ಶೀಟರ್‌ ಅನೀಸ್‌ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

\Bದ್ವೇಷದಿಂದ ಹತ್ಯೆ ಸಂಚು: \Bಬಂಧಿತ ಆರೋಪಿಗಳ ಪೈಕಿ ಮೊಹಮ್ಮದ್ ಜುಬೇರ್ ಹಾಗೂ ರೌಡಿಶೀಟರ್ ಅನೀಸ್ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ, ಮೂರು ವರ್ಷಗಳ ಹಿಂದೆ ಇಬ್ಬರ ನಡುವೆ ಹಣಕಾಸಿನ ವಿಚಾರಕ್ಕೆ ಜಗಳವಾಗಿದ್ದು, ಪರಸ್ಪರ ದ್ವೇಷಿಸಲು ಆರಂಭಿಸಿದ್ದರು. ಈ ನಡುವೆ ಮೊಹಮ್ಮದ್ ಜುಬೇರ್, ಅನೀಸ್ ನಿಯಂತ್ರಣದಲ್ಲಿರುವ ಏರಿಯಾಗಳಲ್ಲಿ ತಾನು ಹವಾ ಸೃಷ್ಟಿಸಲು ಮುಂದಾಗಿದ್ದ. ಅಂತೆಯೆ ಎರಡು ವರ್ಷದ ಹಿಂದೆ ನಡೆದ ಅಲಿ ಎಂಬಾತನ ಕೊಲೆ ಪ್ರಕರಣದಲ್ಲಿ ಅನೀಸ್ ಕೈವಾಡ ಇತ್ತು. ಆತ ಜೈಲಿಗೂ ಹೋಗಿದ್ದ. ಹೀಗಾಗಿ ಅನೀಸ್‌ನನ್ನು ಕೊಲೆಗೈಯಲು ಮೊಹಮ್ಮದ್ ಜುಬೇರ್ ಸಂಚು ರೂಪಿಸಿದ್ದ. ಅದಕ್ಕೆ ಫುರ್ಕಾನ್ ಅಲಿಖಾನ್ ಸಾಥ್‌ ನೀಡಿದ್ದ. ತಮ್ಮ ಯೋಜನೆ ಕಾರ್ಯಗತಗೊಳಿಸುವ ಮುನ್ನ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಇಳಿವಯಸ್ಸಲ್ಲಿ ಮನೆ ಮಾರಲು ವಿರೋಧ: ಪತಿಯಿಂದಲೇ ಸುಪ್ರೀಂಕೋರ್ಟ್ ವಕೀಲೆಯ ಹತ್ಯೆ

ಮಹಾರಾಷ್ಟ್ರದಲ್ಲಿ ಪಿಸ್ತೂಲ್ ಖರೀದಿ: ಅನೀಸ್‌ ಹತ್ಯೆಗಾಗಿ ಆರೋಪಿಗಳು ಕಳೆದ ತಿಂಗಳು ಮುಂಬೈನಲ್ಲಿ ಕಂಟ್ರಿಮೆಡ್ ಪಿಸ್ತೂಲ್ ಮತ್ತು ಎರಡು ಜೀವಂತ ಗುಂಡುಗಳನ್ನು ಖರೀದಿಸಿದ್ದರು. ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದ ಅನೀಸ್‌ನ ಚಟುವಟಿಕೆಗಳು ಮತ್ತು ಆತನ ಸಹಚರರ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದರು. ಇದರ ಬೆನ್ನಲ್ಲೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios