Asianet Suvarna News Asianet Suvarna News

ಪ್ರಜ್ವಲ್ ರೇವಣ್ಣ ಕೇಸ್‌ ದಾರಿ ತಪ್ಪಿಸಲು ಎಚ್‌ಡಿಕೆಯಿಂದ ಡಿಕೆಶಿ ಹೆಸರು: ಸಿಎಂ ಸಿದ್ದರಾಮಯ್ಯ

ದೇವೇಗೌಡರು ಹಾಗೂ ಅವರ ಮನೆಯವರಿಗೆ ಗೊತ್ತಿಲ್ಲದೇ ಪ್ರಜ್ವಲ್ ಮನೆಯಿಂದ ಹೋಗಿದ್ದಾರಾ? ಪ್ರಜ್ವಲ್ ಅವರು ತಮ್ಮ ಕುಟುಂಬದವರ ಸಂಪರ್ಕದಲ್ಲಿ ಇಲ್ವಾ? ಎಂದು ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ 

CM Siddaramaiah React to HD Kumaraswmy Statement on Prajwal Revanna Case grg
Author
First Published May 25, 2024, 10:23 AM IST

ಮೈಸೂರು(ಮೇ.25):  ಸಂಸದ ಪ್ರಜ್ವಲ್ ರೇವಣ್ಣ ಮೇಲೆ ರೇಪ್, ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪಗಳಿವೆ. ಈ ವಿಚಾರವನ್ನು ಡೈವರ್ಟ್ ಮಾಡಲು ಎಚ್.ಡಿ. ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್‌ ಹೆಸರು ಹೇಳುತ್ತಿದ್ದಾರೆಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಶಿವಕುಮಾ‌ರ್ ಆಡಿಯೋ ಹಿನ್ನೆಲೆ ಅವರನ್ನು ವಿಚಾರಣೆಗೆ ಒಳಪಡಿಸಿ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, 'ಪ್ರಜ್ವಲ್‌ರನ್ನು ನಾನು ಅಪರಾಧಿ ಅಂತ ಎಲ್ಲೂ ಹೇಳಿಲ್ಲ. ನಾನು ಆರೋಪಿ ಅಂತಲೇ ಹೇಳುತ್ತಿರುವುದು' ಎಂದರು. 

ಬ್ಲೂಕಾರ್ನರ್‌ ತಪ್ಪಿಸಲು ಪ್ರಜ್ವಲ್‌ ರೇವಣ್ಣ ಶೆನ್‌ಜೆನ್‌ ಮೊರೆ?

ಎಚ್.ಡಿ.ದೇವೇಗೌಡರ ಪತ್ರದ ಕುರಿತು ಪ್ರತಿಕ್ರಿಯಿಸಿ, ದೇವೇಗೌಡರು ಹಾಗೂ ಅವರ ಮನೆಯವರಿಗೆ ಗೊತ್ತಿಲ್ಲದೇ ಪ್ರಜ್ವಲ್ ಮನೆಯಿಂದ ಹೋಗಿದ್ದಾರಾ? ಪ್ರಜ್ವಲ್ ಅವರು ತಮ್ಮ ಕುಟುಂಬದವರ ಸಂಪರ್ಕದಲ್ಲಿ ಇಲ್ವಾ? ಎಂದು ತಿರುಗೇಟು ನೀಡಿದರು. 

ಈ ಹಿಂದೆ ಕುಮಾರಸ್ವಾಮಿಯವರು ಪ್ರಜ್ವಲ್ ಪರ ಪ್ರಚಾರಕ್ಕೆ ಹೋದಾಗ, 'ಪ್ರಜ್ವಲ್ ನನ್ನ ಮಗ' ಎಂದಿದ್ದರು. ಆ ಹೇಳಿಕೆ ಅವರ ಸಂಪರ್ಕದಲ್ಲಿ ಇದ್ದ ಹಾಗೆ ಅಲ್ವಾ? ಪ್ರಜ್ವಲ್ ಬಗ್ಗೆ ಅವರ ಕುಟುಂಬಕ್ಕೆ ಎಲ್ಲವೂ ಗೊತ್ತಿದೆ ಎಂದು ಅವರು ತಿಳಿಸಿದರು.

ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ ಸಂಬಂಧ ಒಂದಲ್ಲ, ಎರಡು ಬಾರಿ ಪ್ರಧಾನಿಗೆ ಪತ್ರ ಬರೆದಿದ್ದೇನೆ. ಆದರೆ, ಈವರೆಗೂ ಯಾವುದೇ ಉತ್ತರ ಬಂದಿಲ್ಲ ಎಂದು ಹೇಳಿದರು. 
 

Latest Videos
Follow Us:
Download App:
  • android
  • ios