ಕಾನೂನು ಸುವ್ಯವಸ್ಥೆ ಕುಸಿತ; ಸರ್ಕಾರದ ವಿರುದ್ಧ ಗೌರ್ನರ್‌ಗೆ ಬಿಜೆಪಿ ದೂರು

ಜೈನ ಮುನಿ ಹತ್ಯೆ ಸೇರಿದಂತೆ ಹಲವು ಕೊಲೆಗಳು ನಡೆದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಕುಸಿತಗೊಂಡಿದೆ ಎಂದು ಆರೋಪಿಸಿ ಧರಣಿ ನಡೆಸಿದ ಪ್ರತಿಪಕ್ಷ ಬಿಜೆಪಿಯು ರಾಜ್ಯಪಾಲರನ್ನು ಭೇಟಿ ಮಾಡಿ ಸಿದ್ದರಾಮಯ್ಯ ಸರ್ಕಾರಕ್ಕೆ ಶಾಂತಿ ಮತ್ತು ಕಾನೂನು, ಸುವ್ಯವಸ್ಥೆ ಕಾಪಾಡುವ ಸಂಬಂಧ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದೆ.

BJP complains to Governor law and order failure in congress government rav

ಬೆಂಗಳೂರು (ಜು.13):  ಜೈನ ಮುನಿ ಹತ್ಯೆ ಸೇರಿದಂತೆ ಹಲವು ಕೊಲೆಗಳು ನಡೆದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಕುಸಿತಗೊಂಡಿದೆ ಎಂದು ಆರೋಪಿಸಿ ಧರಣಿ ನಡೆಸಿದ ಪ್ರತಿಪಕ್ಷ ಬಿಜೆಪಿಯು ರಾಜ್ಯಪಾಲರನ್ನು ಭೇಟಿ ಮಾಡಿ ಸಿದ್ದರಾಮಯ್ಯ ಸರ್ಕಾರಕ್ಕೆ ಶಾಂತಿ ಮತ್ತು ಕಾನೂನು, ಸುವ್ಯವಸ್ಥೆ ಕಾಪಾಡುವ ಸಂಬಂಧ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದೆ.

ಬುಧವಾರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj bommai), ಮಾಜಿ ಸಚಿವರಾದ ಆರ್‌.ಅಶೋಕ್‌, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ವಿಧಾನಸಭೆ ಮತ್ತು ವಿಧಾನಪರಿಷತ್‌ ಸದಸ್ಯರನ್ನೊಳಗೊಂಡ ನಿಯೋಗವು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಸೂಕ್ತ ಸೂಚನೆ ನೀಡಬೇಕು ಎಂದು ಕೋರಿತು.

Jain monk murder : ಕೊಲೆಗಡುಕರ ರಕ್ಷಣೆಗೆ ನಿಂತ ಕಾಂಗ್ರೆಸ್‌ ಸರ್ಕಾರ: ನಳೀನ್ ಕುಮಾರ ಕಟೀಲ್ ಆರೋಪ

‘ಜೈನಮುನಿ ಹತ್ಯೆ(Jain monk murder case), ಹಿಂದೂ ಕಾರ್ಯಕರ್ತನ ಕೊಲೆ, ಪೊಲೀಸ್‌ ಪೇದೆಯ ಹತ್ಯೆ ಸೇರಿದಂತೆ ರಾಜ್ಯದಲ್ಲಿ ಹಲವು ಕೊಲೆಗಳು ನಡೆದಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹೀಗಾಗಿ ರಾಜ್ಯಪಾಲರು ಮಧ್ಯಪ್ರವೇಶಿಸಿ ಸರ್ಕಾರಕ್ಕೆ ಈ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಮನವಿ ಮಾಡಲಾಗಿದೆ.

ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಜೈನಮುನಿಗಳ ಹತ್ಯೆಯನ್ನು ಸಿಬಿಐ ತನಿಖೆಗೆ ನೀಡುವಂತೆ ನಮ್ಮ ಒತ್ತಾಯವನ್ನು ತಿರಸ್ಕರಿಸಲಾಗಿದೆ. ಹೀಗಾಗಿ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ. ರಾಜ್ಯಪಾಲರು ತಮ್ಮ ಅಧಿಕಾರವನ್ನು ಬಳಸಿ ಡಿಜಿಪಿ, ಮುಖ್ಯ ಕಾರ್ಯದರ್ಶಿಯವರನ್ನು ಕರೆಸಿಕೊಂಡು ಕಾನೂನು, ಸುವ್ಯವಸ್ಥೆಯನ್ನು ಮರಳಿ ಸ್ಥಾಪಿಸಲು ಸೂಚಿಸಬೇಕು ಎಂದು ಕೋರಲಾಗಿದೆ. ಅಲ್ಲದೇ, ರಾಜ್ಯದ ಕಾನೂನು, ಸುವ್ಯವಸ್ಥೆ ಕುಸಿತದ ಕುರಿತು ಕೇಂದ್ರಕ್ಕೆ ಮಾಹಿತಿ ನೀಡುವಂತೆ ಕೋರಿದ್ದೇವೆ. ರಾಜ್ಯಪಾಲರು ಸಹ ಮನವಿಗೆ ಸ್ಪಂದಿಸಿದ್ದು, ಕಾನೂನಿನಡಿ ಸೂಕ್ತ ನಿರ್ದೇಶನ ನೀಡುವುದಾಗಿ ಹೇಳಿದ್ದಾರೆ’ ಎಂದರು.

ಗಾಂಧಿ ಪ್ರತಿಮೆ ಬಳಿ ಕೆಲಕಾಲ ಧರಣಿ:

ರಾಜ್ಯಪಾಲರಿಗೆ ಮನವಿ ಸಲ್ಲಿಸುವ ಮುನ್ನ ವಿಧಾನಸೌಧದಲ್ಲಿನ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ಜೈನ ಮುನಿ ಬರ್ಬರ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಆಗ್ರಹಿಸಿ ಬಿಜೆಪಿ ಸದಸ್ಯರು ಬುಧವಾರವೂ ಸದನದ ಬಾವಿಗೆ ಇಳಿದು ಕೆಲಕಾಲ ಧರಣಿ ನಡೆಸಿ ನಂತರ ವಾಪಸ್‌ ಪಡೆದುಕೊಂಡರು.

ಗಾಂಧಿ ಪ್ರತಿಮೆ ಬಳಿ ಮಾತನಾಡಿದ ಬಸವರಾಜ ಬೊಮ್ಮಾಯಿ, ‘ಕಾಂಗ್ರೆಸ್‌ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿಯೇ ರಾಜ್ಯದಲ್ಲಿ ಜಂಗಲ್‌ ರಾಜ್ಯ ಶುರುವಾಗಿದೆ. ಸಾಮಾನ್ಯ ಜನರಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ಇದೆ. ಜೈನಮುನಿಗಳಂತಹ ಸರ್ವಸಂಗ ಪರಿತ್ಯಾಗಿಗಳಿಗೆ ರಕ್ಷಣೆ ಇಲ್ಲವಾಗಿದೆ. ಕೊಲೆಗಳು, ಸುಲಿಗೆಗಳು ಹೆಚ್ಚಾಗಿ ಕಾನೂನು, ಸುವ್ಯವಸ್ಥೆ ಕುಸಿದು ಬಿದ್ದರೂ ಸರ್ಕಾರಕ್ಕೆ ಏನೂ ಎನ್ನಿಸುತ್ತಿಲ್ಲ. ನಮ್ಮ ಕಾರ್ಯಕರ್ತರ ಕಗ್ಗೊಲೆಯಾಗಿದೆ. ಪೊಲೀಸ್‌ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಮಾತ್ರವಲ್ಲದೇ, ನಿಷ್ಕಿ್ರಯವೂ ಆಗಿದೆ’ ಎಂದು ಟೀಕಿಸಿದರು.

‘ಜನಸಾಮಾನ್ಯರ ಕೊಲೆಗಳು ನಡೆಯುತ್ತಿವೆ. ಬೆಂಗಳೂರಲ್ಲಿ ಹಾಡಹಗಲೇ ಐಟಿ ಕಂಪನಿಯ ಇಬ್ಬರು ಮುಖ್ಯಸ್ಥರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಪೊಲೀಸರ ಭಯವಿಲ್ಲದ ಸ್ಥಿತಿ ಇದೆ. ಆಡಳಿತದಲ್ಲಿ ಬದಲಾವಣೆಯಾಗಿದೆ. ಆಡಳಿತ ವರ್ಗದಿಂದ ರಕ್ಷಣೆ ಸಿಗಲಿದೆ ಎಂದು ಎಲ್ಲಾ ಸಮಾಜಘಾತಕ ವ್ಯಕ್ತಿಗಳು ರಾಜ್ಯದೆಲ್ಲೆಡೆ ದೊಂಬಿ, ಗಲಾಟೆ, ಹತ್ಯೆಗಳಲ್ಲಿ ತೊಡಗಿದ್ದಾರೆ. ಕೆಳಹಂತದ ಪೊಲೀಸರು ಮತ್ತು ಪೊಲೀಸ್‌ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಪೊಲೀಸರ ನೈತಿಕತೆ ಕುಸಿಯುವಂತೆ ಮಾಡಲಾಗುತ್ತಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳು ಬಗ್ಗಿನಿಂತು ಈ ಸರ್ಕಾರದ ಆದೇಶಗಳನ್ನು ಪಾಲಿಸುವಂತೆ ಮಾಡಲಾಗುತ್ತಿದೆ. ಇದರಿಂದ ನ್ಯಾಯ ನಿಷ್ಠುರ ತನಿಖೆಯಾಗುತ್ತಿಲ್ಲ’ ಎಂದು ಕಿಡಿಕಾರಿದರು

ಕ್ರಿಮಿನಲ್‌ಗಳಿಗೆ ಕರ್ನಾಟಕ ಸ್ವರ್ಗವಾಗುತ್ತಿದೆ, ರಾಜ್ಯ ಸರ್ಕಾರದ ವಿರುದ್ಧ ರಾಜೀವ್‌ ಚಂದ್ರಶೇಖರ್‌ ಆಕ್ರೋಶ!

ರಾಹುಲ… ಗಾಂಧಿ ಅವರ ಕಾಂಗ್ರೆಸ್‌ ಸರ್ಕಾರದ ಅಡಿಯಲ್ಲಿ ಕರ್ನಾಟಕವು ಕೋಮುವಾದಿಗಳು ಮತ್ತು ಕ್ರಿಮಿನಲ್‌ಗಳಿಗೆ ಸುರಕ್ಷಿತ ಸ್ವರ್ಗವಾಗಿ ಮಾರ್ಪಟ್ಟಿದೆ. ಪಟ್ಟಭದ್ರರು ಮತ್ತೆ ಚಿಗಿತುಕೊಳ್ಳುತ್ತಿದ್ದಾರೆ. ರಾಜ್ಯವು ಕ್ರೂರ ಮತ್ತು ಹಿಂಸಾತ್ಮಕ ಅಪರಾಧಗಳ ಕೇಂದ್ರ ಆಗುತ್ತಿರುವುದನ್ನು ನೋಡಲು ದುಃಖವಾಗುತ್ತಿದೆ.

- ರಾಜೀವ್‌ ಚಂದ್ರಶೇಖರ್‌, ಕೇಂದ್ರ ಸಚಿವ

Latest Videos
Follow Us:
Download App:
  • android
  • ios