ವಂಚನೆ ಪ್ರಕರಣ: ಐಶ್ವರ್ಯ ಗೌಡ ನನಗೆ ಕಾರು ಕೊಡಿಸಿಲ್ಲ, ವಿನಯ್ ಕುಲಕರ್ಣಿ

ನಾನು ಯಾರಿಂದಲೂ ಕಾರು ಪಡೆದಿಲ್ಲ. ಹಾಗೆಯೇ, ಬೇರೆಯವರ ಕಾರು ನನ್ನ ಬಳಿಯಿಲ್ಲ. ಅವೆಲ್ಲವೂ ಸುಳ್ಳು ಆರೋಪಗಳು. ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ. ತನಿಖೆಯಿಂದ ಸತ್ಯಾಂಶ ಹೊರ ಬೀಳುತ್ತದೆ. ಪ್ರತಿದಿನ ನನ್ನೊಂದಿಗೆ ಹಲವರು ಫೋಟೋ ತೆಗೆಸಿ ಕೊಳ್ಳುತ್ತಾರೆ. ಹಾಗೆಂದ ಮಾತ್ರಕ್ಕೆ ಅವರು ಮಾಡಿದ ತಪ್ಪಿನಲ್ಲಿ ನನ್ನನ್ನೂ ಭಾಗಿಯಾಗಿಸುವುದು ಸರಿಯಲ್ಲ ಎಂದ ಶಾಸಕ ವಿನಯ್ ಕುಲಕರ್ಣಿ 

Aishwarya Gowda  not given me Car Says Congress MLA Vinay Kulkarni

ಬೆಂಗಳೂರು(ಜ.14):  ವಂಚನೆ ಪ್ರಕರಣದ ಆರೋಪಿ ಐಶ್ವರ್ಯ ಗೌಡ ನನಗೆ ಯಾವುದೇ ಕಾರು ನೀಡಿಲ್ಲ ಹಾಗೂ ನನ್ನ ಬಳಿ ಅವರಿಗೆ ಸಂಬಂಧಿಸಿದ ಯಾವುದೇ ಕಾರು ಇಲ್ಲ. ಪ್ರಕರಣದ ತನಿಖೆ ನಡೆಯುತ್ತಿದ್ದು, ತನಿಖೆ ನಂತರ ಸತ್ಯಾಂಶ ತಿಳಿಯಲಿದೆ ಎಂದು ಶಾಸಕ ವಿನಯ್ ಕುಲಕರ್ಣಿ ಸ್ಪಷ್ಟಪಡಿಸಿದರು. 

ಕೆಪಿಸಿಸಿ ಕಚೇರಿ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಯಾರಿಂದಲೂ ಕಾರು ಪಡೆದಿಲ್ಲ. ಹಾಗೆಯೇ, ಬೇರೆಯವರ ಕಾರು ನನ್ನ ಬಳಿಯಿಲ್ಲ. ಅವೆಲ್ಲವೂ ಸುಳ್ಳು ಆರೋಪಗಳು. ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ. ತನಿಖೆಯಿಂದ ಸತ್ಯಾಂಶ ಹೊರ ಬೀಳುತ್ತದೆ. ಪ್ರತಿದಿನ ನನ್ನೊಂದಿಗೆ ಹಲವರು ಫೋಟೋ ತೆಗೆಸಿ ಕೊಳ್ಳುತ್ತಾರೆ. ಹಾಗೆಂದ ಮಾತ್ರಕ್ಕೆ ಅವರು ಮಾಡಿದ ತಪ್ಪಿನಲ್ಲಿ ನನ್ನನ್ನೂ ಭಾಗಿಯಾಗಿಸುವುದು ಸರಿಯಲ್ಲ ಎಂದರು. 
ಐಶ್ವರ್ಯ ಗೌಡ ವಂಚನೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರ ಹೆಸರು ಕೇಳಿಬಂದಿತ್ತು. ಐಶ್ವರ್ಯ ಗೌಡಗೆ ಸೇರಿದ ಕಾರನ್ನು ವಿನಯ್ ಅವರು ಬಳಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲದೇ ಆ ಕಾರನ್ನು ಪೊಲೀಸರು ಸೀಜ್ ಮಾಡಿದ್ದರು.

ಡಿಕೆ ಬ್ರದರ್ಸ್​ ಹೆಸರೇ ಬಂಡವಾಳ, ಶ್ರೀಮಂತರಿಗೆ ಗಾಳ: ಬಗೆದಷ್ಟು ಬಯಲಾಗ್ತಿದೆ ಐಶ್ವರ್ಯ ವಂಚನೆ ಪುರಾಣ

ವಂಚನೆ ಕೇಸ್‌ ಆರೋಪಿ ಐಶ್ವರ್ಯ ಗೌಡ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್‌

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ತಂಗಿ ಎಂದು ಹೇಳಿಕೊಂಡು ವೈದ್ಯೆಯೊಬ್ಬರ ಬಳಿ 2.52 ಕೋಟಿ ಹಣ ಮತ್ತು 2 ಕೆ.ಜಿ. 350 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿ, ಬೆದರಿಕೆ ಹಾಕಿರುವ ಆರೋಪದಡಿ ದಾಖಲಾಗಿರುವ ಎಫ್‌ಐಆರ್ ಸಂಬಂಧ ಆರೋಪಿಗಳಾದ ಐಶ್ವರ್ಯಾ ಗೌಡ ಮತ್ತು ಆಕೆಯ ಪತಿ ಕೆ.ಎನ್.ಹರೀಶ್ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ರಾಜೇಶ್ವರಿನಗರ ಪೊಲೀಸರಿಗೆ ಹೈಕೋರ್ಟ್ ಜ.9 ರಂದು ಸೂಚಿಸಿತ್ತು.

ಡಿ.ಕೆ.ಶಿವಕುಮಾರ್‌ ತಂಗಿ ಹೆಸರನಲ್ಲಿಯೂ ಐಶ್ವರ್ಯ ಭಾರೀ ವಂಚನೆ

ಪ್ರಕರಣ ಸಂಬಂಧ ತಮ್ಮ ವಿರುದ್ಧ ರಾಜ ರಾಜೇಶ್ವರಿ ಠಾಣೆಯಲ್ಲಿ ಎರಡನೇ ದಾಖಲಾ ಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಐಶ್ವರ್ಯಾ ಗೌಡ ಮತ್ತು ಆಕೆಯ ಪತಿ ಕೆ.ಎನ್.ಹರೀಶ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಆರ್.ಕೃಷ್ಣಮೂರ್ತಿ ಅವರ ಪೀಠ ಈ ಆದೇಶ ಮಾಡಿದೆ. ಕೆಲ ಕಾಲ ಅರ್ಜಿದಾರರ ಪರ ವಾದ ಆಲಿ ಸಿದ ನ್ಯಾಯಪೀಠ, ಅರ್ಜಿಯ ಮುಂದಿನ ವಿಚಾರಣೆ ವರೆಗೂ ಪೊಲೀಸರು ಅರ್ಜಿದಾ ರರ ಪರ ಯಾವುದೇ ಬಲವಂತದ ಕ್ರಮ ಕೈ ಗೊಳ್ಳಬಾರದು ಎಂದು ಸೂಚಿಸಿದೆ. ಅಲ್ಲದೆ, ಪ್ರತಿವಾದಿಗಳಾಗಿ ರುವ ಆರ್.ಆರ್.ನಗರ ಠಾಣೆಯ ಪೊಲೀಸರು ಮತ್ತು ದೂರುದಾರೆ ಡಾ| ಮಂಜುಳಾ ಎ.ಪಾಟೀಲ್‌ಗೆ ನೋಟಿಸ್ ಜಾರಿಗೊಳಿಸಿ, ಅರ್ಜಿ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತ್ತು. 

ಡಾ| ಮಂಜುಳಾ ಎ.ಪಾಟೀಲ್ ಅವರು ದೂರು ನೀಡಿ, ಗೋಲ್ಡ್ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ಒಳ್ಳೆಯ ಲಾಭ ಬರಲಿದೆ ಎಂದು ತಿಳಿಸಿ 2022ರ ಮಾರ್ಚ್ ನಿಂದ 2024ರ ಡಿಸೆಂಬರ್ ವರೆಗೆ ವಿವಿಧ ಹಂತಗಳಲ್ಲಿ ನನ್ನಿಂದ ₹2.52 2.2.350 ಗ್ರಾಂ ಚಿನ್ನಾಭರಣ ಪಡೆದ ಐಶ್ವರ್ಯಾ ಗೌಡ ಮತ್ತು ಆಕೆ ಪತಿ ಹರೀಶ್ ನಂತರ ವಾಪಾಸ್ ಹಣ ಹಾಗೂ ಚಿನ್ನ ಹಿಂದಿರುಗಿಸದೆ ವಂಚಿಸಿದ್ದಾರೆ ಎಂದಿದ್ದರು.

Latest Videos
Follow Us:
Download App:
  • android
  • ios