ಹಜ್ ಯಾತ್ರೆಯ ಸಮಯದಲ್ಲಿ ಸಾವನ್ನಪ್ಪಿದ 600 ಕ್ಕೂ ಹೆಚ್ಚು ಜನರಲ್ಲಿ 68 ಭಾರತೀಯ ಪ್ರಜೆಗಳು ಸೇರಿದ್ದಾರೆ. ತೀವ್ರವಾದ ಶಾಖ ಮತ್ತು ತೀವ್ರವಾದ ಹೆಚ್ಚಿನ ತಾಪಮಾನದಿಂದ ಇವರೆಲ್ಲ ಸಾವು ಆಗಿದೆ ಎಂದು ವರದಿಯಾಗಿದೆ.
ಬೆಂಗಳೂರು: ಮುಸ್ಲಿಮರ ಪವಿತ್ರ ಕ್ಷೇತ್ರದಲ್ಲಿಯ ರಣಬಿಸಿಲು ಯಾತ್ರಿಕರನ್ನು ಹೈರಾಣು ಮಾಡುತ್ತಿದೆ. ಬಿಸಿಲಿಗೆ ಮೃತರ ಸಂಖ್ಯೆ 600ಕ್ಕೆ ಏರಿಕೆಯಾಗಿದೆ. ಈ ಪೈಕಿ ಬೆಂಗಳೂರಿನ ಇಬ್ಬರು ಯಾತ್ರಿಕರು ಸಹ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ಮೃತರನ್ನು ಆರ್.ಟಿ.ನಗರದ ನಿವಾಸಿ ಕೌಸುರ್ ರುಕ್ಸಾನಾ (69) ಮತ್ತು ಫ್ರಝರ್ ಟೌನ್ ನಿವಾಸಿ ಇಲಿಯಾಸ್ (45) ಎಂದು ಗುರುತಿಸಲಾಗಿದೆ. ಇಬ್ಬರು ಯಾತ್ರಿಕರು ಮೆಕ್ಕಾಗಿಂತ 8 ಕಿಲೋಮೀಟರ್ ದೂರದ ಮಿನ ಎಂಬ ನಗರದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಹಜ್ ಯಾತ್ರೆಯ ಸಮಯದಲ್ಲಿ ಸಾವನ್ನಪ್ಪಿದ 600 ಕ್ಕೂ ಹೆಚ್ಚು ಜನರಲ್ಲಿ 68 ಭಾರತೀಯ ಪ್ರಜೆಗಳು ಸೇರಿದ್ದಾರೆ. ತೀವ್ರವಾದ ಶಾಖ ಮತ್ತು ತೀವ್ರವಾದ ಹೆಚ್ಚಿನ ತಾಪಮಾನದಿಂದ ಇವರೆಲ್ಲ ಸಾವು ಆಗಿದೆ ಎಂದು ವರದಿಯಾಗಿದೆ.
ಈ ವರ್ಷ ಹಜ್ ಯಾತ್ರೆಗಾಗಿ ಒಟ್ಟು 175,000 ಭಾರತೀಯ ಯಾತ್ರಿಕರು ಸೌದಿ ಅರೇಬಿಯಾಕ್ಕೆ ಪ್ರಯಾಣಿಸಿದ್ದಾರೆ. ಜೆರುಸಲೇಂ ರಾಜತಾಂತ್ರಿಕ ಇಲಾಖೆ ಬುಧವಾರ 550 ಯಾತ್ರಿಗಳು ಮೃತರಾಗಿದ್ದು ಎಲ್ಲರೂ ಬಿಸಿಲಿಗೆ ಸಂಬಂಧಿಸಿ ಅನಾರೋಗ್ಯದಿಂದ ಮೃತರಾಗಿದ್ದಾರೆ ಎಂದು ಹೇಳಿದೆ. ಮೃತರಲ್ಲಿ 323 ಜನರು ಈಜಿಪ್ಟ್ ಮೂಲದವರು ಎಂದು ವರದಿಯಾಗಿದೆ. ಯಾತ್ರಾರ್ಥಿಗಳ ಸಾವಿಗೆ ಸಂಬಂಧಿಸಿದಂತೆ ಎರಡು ಆರಬ್ ದೇಶಗಳ ನಡುವೆ ಸಂವಹನ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡುತ್ತಿವೆ.
ಹಜ್ ಯಾತ್ರಿಗಳಿಗೆ ಸುವಿಧಾ ಆ್ಯಪ್ ಜೊತೆ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರ!
ಮೆಕ್ಕಾದ ಶವಾಗಾರದಲ್ಲಿ 550 ಮೃತದೇಹಗಳು
ಈಜಿಪ್ಟ್‌ನ ಎಲ್ಲಾ ಯಾತ್ರಿಗಳು ತೀವ್ರ ಬಿಸಿಲಿಗೆ ಸಂಬಂಧಿಸಿದ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಓರ್ವ ಯಾತ್ರಿ ಮಾತ್ರ ಜನಸಂದಣಿ ಮಧ್ಯೆ ಸಿಲುಕಿ ಸಾವನ್ನಪ್ಪಿದ್ದಾರೆ ಜೆರುಸಲೇ ವಿದೇಶಾಂಗ ಸಚಿವಾಲಯ ತಿಳಿಸಿದೆ. ಮೆಕ್ಕಾದ ಅಲ್-ಮುಯಿಸೆಮ್ ಶವಾಗಾರದಲ್ಲಿ 550 ಶವಗಳನ್ನು ಇರಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ರಸ್ತೆ ಬದಿ ಶವಗಳು ಬಿದ್ದಿರುವ ವಿಡಿಯೋಗಳು ವೈರಲ್ ಆಗುತ್ತಿವೆ. ಮೆಕ್ಕಾದಲ್ಲಿಯ ಈ ಬಾರಿಯ ತೀವ್ರತೆರನಾದ ತಾಪಮಾನಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.
ಎರಡು ಸಾವಿರ ಜನರಿಗೆ ಸೌದಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಹವಾಮಾನ ಇಲಾಖೆಯ ಅಧಿಕಾರಿಗಳ ಪ್ರಕಾರ, ಪ್ರತಿ 10 ವರ್ಷಕ್ಕೊಮ್ಮೆ ಮೆಕ್ಕಾದಲ್ಲಿನ ತಾಪಮಾನ 0.4 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗುತ್ತದೆ. ಈ ವರ್ಷ ಮೆಕ್ಕಾ ಭಾಗದಲ್ಲಿ 51.8 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕಳೆದ ವಾರ ಈಜಿಪ್ಟ್ ವಿದೇಶಾಂಗ ಸಚಿವಾಲಯ, ಮೆಕ್ಕಾ ತೆರಳಿರುವ ತಮ್ಮ ದೇಶದ ಪ್ರಜೆಗಳು ನಾಪತ್ತೆಯಾಗಿದ್ದಾರೆ ಎಂದು ಹೇಳಿಕೊಂಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಸೌದಿ, ಸುಮಾರು 2 ಸಾವಿರಕ್ಕೂ ಅಧಿಕ ಜನರು ತೀವ್ರ ಬಿಸಿಲಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಎಲ್ಲರಿಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ನಾಪತ್ತೆಯಾದವರನ್ನು ಪತ್ತೆ ಮಾಡುವ ಕೆಲಸ ಸೌದಿ ಸರ್ಕಾರ ಮಾಡಲಿದೆ ಎಂದು ಸ್ಪಷ್ಟನೆ ನೀಡಿದೆ.
ಹಜ್ ಯಾತ್ರೆಗೆ ಹೋಗಿದ್ದ ಮುಂಡಗೋಡ ಕುಟುಂಬದ ಮೂವರು ಮೆಕ್ಕಾ-ಮದೀನಾ ರಸ್ತೆ ಅಪಘಾತದಲ್ಲಿ ಸಾವು
