ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ  2019-20ನೇ ಸಾಲಿನ,  2020-21 ಹಾಗೂ 2021-22ನೇ ಸಾಲಿನ ವರೆಗೆ ಒಟ್ಟು 877 ಹುದ್ದೆಗಳನ್ನು ಭರ್ತಿ ಮಾಡಲು ಒಪ್ಪಿಗೆ ಸಿಕ್ಕಿದೆ. ಹುದ್ದೆಗಳ ವಿವರ ಈ ಕೆಳಗಿನಂತಿದೆ.

Finance Dept green signal for Karnataka police recruitment for 877 post

ಬೆಂಗಳೂರು, (ಜೂನ್ 05) : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ಸಿಕ್ಕಿದೆ. 

ಪೊಲೀಸ್ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದ್ದು,  2019 ರಿಂದ 2022ರ ತನಕ ಒಟ್ಟು 877 ಹುದ್ದೆಗಳ ಭರ್ತಿಗೆ ಮಾಡಲಾಗುತ್ತದೆ.  ಈ ಬಗ್ಗೆ ರಾಜ್ಯ ಗೃಹ ಸಚಿವ ಎಂ.ಬಿ.ಪಾಟೀಲ್ ಅಧಿಕೃತವಾಗಿ ತಿಳಿಸಿದ್ದಾರೆ.

ಸರ್ಕಾರಿ, ಖಾಸಗಿ ಜಾಬ್ಸ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳನ್ನು ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ಭರ್ತಿ ಮಾಡಲಾಗುತ್ತದೆ. 2019-20ನೇ ಸಾಲಿನಲ್ಲಿ 292 ಹುದ್ದೆ ಭರ್ತಿಯಾಗಲಿದೆ.

ಕರ್ನಾಟಕ ಪೊಲೀಸ್ ಶೀಘ್ರದಲ್ಲಿಯೇ ಅಧಿಸೂಚನೆ ಹೊರಡಿಸಲಿದೆ. ಅಭ್ಯರ್ಥಿಗಳಿಗೆ ವಿದ್ಯಾರ್ಹತೆ, ವೇತನ ಮುಂತಾದ ವಿವರಗಳು ನೇಮಕಾತಿ ಆದೇಶದಲ್ಲಿ ಪ್ರಕಟವಾಗಲಿದೆ. 

ಯಾವ-ಯಾವ ಹುದ್ದೆಗಳು
 * ಪಿಎಸ್‌ಐ (ಸಿವಿಲ್) 556
 * ಆರ್‌ಎಸ್‌ಐ (ಸಿಎಆರ್/ಡಿಎಆರ್) 120 
* ಎಸ್‌ಪಿಎಲ್. ಆರ್‌ಎಸ್‌ಐ (ಕೆಎಸ್‌ಆರ್‌ಪಿ) 120 
* ಪಿಎಸ್‌ಐ (ವೈರ್‌ಲೆಸ್) 26 
* ಪಿಎಸ್‌ಐ (ಕೆಎಸ್‌ಐಎಸ್‌ಎಫ್) 51
 * ಪಿಎಸ್‌ಐ (ಸಿಐಡಿ) 4

2091-20ನೇ ಸಾಲಿನ ಹುದ್ದೆಗಳ ವಿವರ
* ಪಿಎಸ್‌ಐ (ಸಿವಿಲ್) 200
* ಆರ್‌ಎಸ್‌ಐ (ಸಿಎಆರ್/ಡಿಎಆರ್) 40 
* ಎಸ್‌ಪಿಎಲ್. ಆರ್‌ಎಸ್‌ಐ (ಕೆಎಸ್‌ಆರ್‌ಪಿ) 40
* ಪಿಎಸ್‌ಐ (ವೈರ್‌ಲೆಸ್) 5
* ಪಿಎಸ್‌ಐ (ಕೆಎಸ್‌ಐಎಸ್‌ಎಫ್) 5
* ಪಿಎಸ್‌ಐ (ಸಿಐಡಿ) 2 
* ಪಿಎಸ್‌ಐ (ಕೆಎಸ್‌ಐಎಸ್‌ಎಫ್) 7
* ಪಿಎಸ್‌ಐ (ವೈರ್‌ಲೆಸ್) 0

2020-21ನೇ ಸಾಲಿನ ಹುದ್ದೆಗಳ ವಿವರ
* ಪಿಎಸ್‌ಐ (ಸಿವಿಲ್) 200
* ಆರ್‌ಎಸ್‌ಐ (ಸಿಎಆರ್/ಡಿಎಆರ್) 40 
* ಆರ್‌ಎಸ್‌ಐ (ಸಿಎಆರ್/ಡಿಎಆರ್) 40 
* ಪಿಎಸ್‌ಐ (ವೈರ್‌ಲೆಸ್) 5

2021-22ನೇ ಸಾಲಿನ ಹುದ್ದೆಗಳ ವಿವರ
* ಪಿಎಸ್‌ಐ (ಸಿವಿಲ್) 156
* ಆರ್‌ಎಸ್‌ಐ (ಸಿಎಆರ್/ಡಿಎಆರ್) 40 
* ಎಸ್‌ಪಿಎಲ್. ಆರ್‌ಎಸ್‌ಐ (ಕೆಎಸ್‌ಆರ್‌ಪಿ) 40
* ಪಿಎಸ್‌ಐ (ವೈರ್‌ಲೆಸ್) 16
* ಪಿಎಸ್‌ಐ (ಕೆಎಸ್‌ಐಎಸ್‌ಎಫ್) 39 
* ಪಿಎಸ್‌ಐ (ಸಿಐಡಿ) 2

Latest Videos
Follow Us:
Download App:
  • android
  • ios