ಯುಎಸ್ ಓಪನ್ ಮಹಿಳಾ ಸಿಂಗಲ್ಸ್‌ ಫೈನಲ್:ಪ್ರಶಸ್ತಿಗಾಗಿ ಅರೈನಾ ಸಬಲೆಂಕಾ-ಜೆಸ್ಸಿಕಾ ಪೆಗುಲಾ ಫೈಟ್

ಯುಎಸ್ ಓಪನ್ ಟೆನಿಸ್ ಗ್ರ್ಯಾನ್‌ ಸ್ಲಾಂ ನಿರ್ಣಾಯಕ ಘಟ್ಟ ತಲುಪಿದ್ದು, ಮಹಿಳಾ ಸಿಂಗಲ್ಸ್‌ನಲ್ಲಿಂದು ಪ್ರಶಸ್ತಿಗಾಗಿ ಅರೈನಾ ಸಬಲೆಂಕಾ-ಜೆಸ್ಸಿಕಾ ಪೆಗುಲಾ ಕಾದಾಡಲಿದ್ದಾರೆ.

US Open 2024 Aryna Sabalenka to face Jessica Pegula in womens singles final kvn

ನ್ಯೂಯಾರ್ಕ್: ಈ ಬಾರಿ ಯುಎಸ್ ಓಪನ್ ಗ್ರಾನ್‌ಸ್ಲಾ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಬೆಲಾರಸ್‌ನ ಅರೈನಾ ಸಬಲೆಂಕಾ ಹಾಗೂ ಅಮೆರಿಕದ ಜೆಸ್ಸಿಕಾ ಪೆಗುಲಾ ಪರಸ್ಪರ ಸೆಣಸಾಡಲಿದ್ದಾರೆ. ಇಬ್ಬರೂ ಚೊಚ್ಚಲ ಬಾರಿ ಯುಎಸ್ ಓಪನ್ ಗೆಲ್ಲುವ ತವಕದಲ್ಲಿದ್ದು, ಶನಿವಾರ ರಾತ್ರಿ ಪ್ರಶಸ್ತಿ ಸುತ್ತಿನ ಫೈಟ್ ನಿಗದಿಯಾಗಿದೆ.

ಕಳೆದೆರಡು ಬಾರಿಯು ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸಬಲೆಂಕಾ, ಗುರುವಾರ ಮಧ್ಯರಾತ್ರಿ ನಡೆದ ಸೆಮಿಫೈನಲ್‌ನಲ್ಲಿ ವಿಶ್ವ ನಂ.13, ಅಮೆರಿಕದ ಎಮ್ಮಾ ನವಾರ್ರೊ ವಿರುದ್ಧ 6-3, 7-6(2) ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಕಳೆದ ವರ್ಷ ಟೂರ್ನಿಯ ಫೈನಲ್‌ನಲ್ಲಿ ಕೊಕೊ ಗಾಫ್ ವಿರುದ್ಧ ಸೋತು ಪ್ರಶಸ್ತಿ ತಪ್ಪಿಸಿಕೊಂಡಿದ್ದ ವಿಶ್ವ ನಂ.2 ಸಬಲೆಂಕಾ ಈ ಬಾರಿ ಟ್ರೋಫಿ ಎತ್ತಿಹಿಡಿಯುವ ಕಾತರದಲ್ಲಿದ್ದಾರೆ.

ಬಂಗಾರದ ದಾಖಲೆ ಬರೆದ ಭಾರತ: ಟೋಕಿಯೋ ಗೇಮ್ಸ್‌ನ ದಾಖಲೆ ಪತನ, ಸಂಭ್ರಮಾಚರಣೆ

ಮತ್ತೊಂದು ಸೆಮಿಫೈನಲ್‌ನಲ್ಲಿ, ಕಳೆದ ವರ್ಷದ ಫ್ರೆಂಚ್ ಓಪನ್ ರನ್ನರ್-ಅಪ್, ಚೆಕ್ ಗಣರಾಜ್ಯದ ಕ್ಯಾರೊಲಿನಾ ಮುಕೋವಾ ವಿರುದ್ಧ 6ನೇ ಶ್ರೇಯಾಂಕಿತ ಪೆಗುಲಾ 1-6, 6-4, 6-2 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಪೆಗುಲಾ ಇದೇ ಮೊದಲ ಬಾರಿ ಗ್ಯಾನ್ ಸ್ಲಾಂ ಫೈನಲ್ ಪ್ರವೇಶಿಸಿದ್ದು, ಚೊಚ್ಚಲ ಪ್ರಯತ್ನದಲ್ಲೇ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಈವರೆಗೂ ಸಬಲೆಂಕಾ ಹಾಗೂ ಪೆಗುಲಾ 7
ಬಾರಿ ಪರಸ್ಪರ ಸೆಣಸಾಡಿದ್ದು, ಸಬಲೆಂಕಾ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು ಪೆಗುಲಾ ಕೊನೆ 16 ಪಂದ್ಯಗಳ ಪೈಕಿ 15ರಲ್ಲಿ ಜಯಗಳಿಸಿದ್ದು, ಉತ್ತಮ ಲಯದಲ್ಲಿದ್ದಾರೆ.

ಡೈಮಂಡ್ ಲೀಗ್ ಫೈನಲ್ಸ್ ಅರ್ಹತೆ ಪಡೆದ ನೀರಜ್

ನವದೆಹಲಿ: ಭಾರತದ ತಾರಾ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಸೆ.13 ಹಾಗೂ 14ರಂದು ಬೆಲ್ಲಿಯಂನ ಬ್ರಸೆಲ್ಸ್ ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಫೈನಲ್ಸ್‌ಗೆ ಅರ್ಹತೆ ಪಡೆದುಕೊ೦ಡಿದ್ದಾರೆ. ಡೈಮಂಡ್ ಲೀಗ್ ವಾರ್ಷಿಕ ಕ್ರೀಡಾಕೂಟವಾಗಿದ್ದು, ಒಟ್ಟು 14 ಚರಣಗಳ ಸ್ಪರ್ಧೆಗಳು ನಡೆಯುತ್ತವೆ. ಈ ಸ್ಪರ್ಧೆಗಳಲ್ಲಿ ಒಟ್ಟಾರೆ ಅಗ್ರ-6ರಲ್ಲಿ ಸ್ಥಾನ ಪಡೆದ ಅಥೀಟ್ ಗಳು ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ. ನೀರಜ್ ಚೋಪ್ರಾ ಒಟ್ಟು 14 ಅಂಕಗಳೊಂದಿಗೆ 4ನೇ ಸ್ಥಾನಿಯಾಗಿ ಫೈನಲ್‌ಗೇರಿದ್ದಾರೆ.

Latest Videos
Follow Us:
Download App:
  • android
  • ios