ಥಾಮಸ್, ಊಬರ್ ಕಪ್: ಕೆನಡಾ ಎದುರು ಭಾರತ ಶುಭಾರಂಭ
ಪುರುಷರು ಥಾಯ್ಲೆಂಡ್ ವಿರುದ್ಧ, ಮಹಿಳೆಯರು ಕೆನಡಾ ವಿರುದ್ಧ ತಲಾ 4-1 ಅಂತರದಲ್ಲಿ ಜಯಗಳಿಸಿದರು. ಮಹಿಳೆಯರು ಭಾನುವಾರ ಸಿಂಗಾಪೂರ ವಿರುದ್ಧ, ಪುರುಷರು ಸೋಮವಾರ ಇಂಗ್ಲೆಂಡ್ ವಿರುದ್ಧ ಸೆಣಸಾಡಲಿದ್ದಾರೆ.
ಚೆಂಗ್ಡು(ಚೀನಾ): ಥಾಮಸ್ ಕಪ್ ಹಾಗೂ ಊಬರ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಭಾರತದ ಪುರುಷ, ಮಹಿಳಾ ತಂಡಗಳು ಶುಭಾರಂಭ ಮಾಡಿದೆ. ಪುರುಷರು ಥಾಯ್ಲೆಂಡ್ ವಿರುದ್ಧ, ಮಹಿಳೆಯರು ಕೆನಡಾ ವಿರುದ್ಧ ತಲಾ 4-1 ಅಂತರದಲ್ಲಿ ಜಯಗಳಿಸಿದರು. ಮಹಿಳೆಯರು ಭಾನುವಾರ ಸಿಂಗಾಪೂರ ವಿರುದ್ಧ, ಪುರುಷರು ಸೋಮವಾರ ಇಂಗ್ಲೆಂಡ್ ವಿರುದ್ಧ ಸೆಣಸಾಡಲಿದ್ದಾರೆ.
ಅಥ್ಲೆಟಿಕ್ಸ್: ಕರ್ನಾಟಕದ ಉನ್ನತಿ ಅಯ್ಯಪ್ಪಗೆ ಕಂಚು
ದುಬೈ: ಏಷ್ಯನ್ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಉನ್ನತಿ ಅಯ್ಯಪ್ಪ ಕಂಚಿನ ಪದಕ ಜಯಿಸಿದ್ದಾರೆ. ಕೂಟದ ಕೊನೆ ದಿನವಾದ ಶನಿವಾರ ಮಹಿಳೆಯರ 100 ಮೀ. ಹರ್ಡಲ್ಸ್‌ನಲ್ಲಿ ಉನ್ನತಿ 13.65 ಸೆಕೆಂಡ್‌ಗಳಲ್ಲಿ ಕ್ರಮಿಸಿ 3ನೇ ಸ್ಥಾನಿಯಾದರು. ಕೂಟದಲ್ಲಿ ಕರ್ನಾಟಕಕ್ಕಿದು 3ನೇ ಪದಕ. ಭಾರತ ಕೂಟದಲ್ಲಿ 5 ಚಿನ್ನ ಸೇರಿ 20 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ.
IPL 2024 ನರೇಂದ್ರ ಸ್ಟೇಡಿಯಂನಲ್ಲಿಂದು ಆರ್‌ಸಿಬಿಗೆ ಗುಜರಾತ್ ಟೈಟಾನ್ಸ್ ಚಾಲೆಂಜ್
ಆರ್ಚರಿ ವಿಶ್ವಕಪ್: ಜ್ಯೋತಿಗೆ 3 ಚಿನ್ನ
ಶಾಂಘೈ: ಭಾರತದ ಜ್ಯೋತಿ ಸುರೇಖಾ ಆರ್ಚರಿ ವಿಶ್ವಕಪ್‌ನಲ್ಲಿ 3 ಚಿನ್ನ ಗೆದ್ದಿದ್ದಾರೆ. ಒಟ್ಟಾರೆ ಭಾರತಕ್ಕೆ 4 ಚಿನ್ನ ಸೇರಿ 5 ಪದಕ ಒಲಿದಿದೆ. ಜ್ಯೋತಿಗೆ ಕಾಂಪೌಂಡ್ ಮಹಿಳಾ ತಂಡ, ವೈಯುಕ್ತಿಕ, ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಲಭಿಸಿತು. ಅಭಿಷೇಕ್ ಪುರುಷರ ತಂಡ, ಮಿಶ್ರ ವಿಭಾಗದಲ್ಲಿ ಸ್ವರ್ಣ ಗೆದ್ದರೆ, ಪುರುಷರ ಕಾಂಪೌಂಡ್ ವೈಯುಕ್ತಿಕ ವಿಭಾಗದಲ್ಲಿ ಪ್ರಿಯಾನ್ಶ್ ಬೆಳ್ಳಿ ಪದಕ ಗೆದ್ದರು.
ಅಂತೂ ಇಂತೂ ಆರ್ಸಿಬಿ ಗೆಲ್ಲಿಸಿದ ಸ್ವಪ್ಲಿಲ್ ಸಿಂಗ್ ಯಾರು?
ನೆಲ್ಲಮಕ್ಕಡ, ಚೇಂದಂಡ ನಡುವೆ ಇಂದು ಫೈನಲ್
ನಾಪೋಕ್ಲು: ಕೊಡವ ಕುಟುಂಬಗಳ ಹಾಕಿ ಟೂರ್ನಿಯಲ್ಲಿ ನೆಲ್ಲಮಕ್ಕಡ ಹಾಗೂ ಚೇಂದಂಡ ಫೈನಲ್ ಪ್ರವೇಶಿಸಿದ್ದು, ಭಾನುವಾರ ಪ್ರಶಸ್ತಿಗಾಗಿ ಸೆಣಸಾಡಲಿವೆ. ಸೆಮಿಫೈನಲ್‌ನಲ್ಲಿ ಕುಲ್ಲೇಟಿರ ವಿರುದ್ಧ ಚೇಂದಂಡ, ಕಳೆದ ಬಾರಿ ಚಾಂಪಿಯನ್ ಕುಪ್ಪಂಡ(ಕೈಕೇರಿ) ವಿರುದ್ಧ ನೆಲ್ಲಮಕ್ಕಡ ಜಯಗಳಿಸಿದವು.