Friend and Rival: ಫೆಡರರ್‌ ನಿವೃತ್ತಿಗೆ ರಾಫೆಲ್‌ ನಡಾಲ್‌ ಭಾವುಕ ಮಾತು!

ಟೆನಿಸ್‌ ಕೋರ್ಟ್‌ನ ಸರಳ ಸಜ್ಜನಿಕೆಯ ಮುಖ ಸ್ವಿಸ್‌ನ ದಿಗ್ಗಜ ರೋಜರ್‌ ಫೆಡರರ್‌ ವೃತ್ತಿಪರ ಟೆನಿಸ್‌ಗೆ ವಿದಾಯ ಪ್ರಕಟಿಸಿದ್ದಾರೆ. ಫೆಡರರ್‌ ವಿದಾಯ ಪ್ರಕಟವಾಗುತ್ತಿದ್ದಂತೆ ಅವರ ದೀರ್ಘಕಾಲದ ಪರಮ ಎದುರಾಳಿ ಹಾಗೂ ಆತ್ಮೀಯ ಸ್ನೇಹಿತನೂ ಕೂಡ ಆಗಿರುವ ರಾಫೆಲ್‌ ನಡಾಲ್‌ ಭಾವುಕವಾಗಿ ಟ್ವೀಟ್‌ ಮಾಡಿದ್ದಾರೆ.
 

Swiss great Roger Federer retires Rafael Nadal pays incredible tribute to friend and rival san

ಬೆಂಗಳೂರು (ಸೆ. 16): ಟೆನಿಸ್‌ ವೈಯಕ್ತಿಕ ಕ್ರೀಡೆ ಆಗಿದ್ದರೂ, ಟೆನಿಸ್‌ ತಾರೆಯ ಶ್ರೇಷ್ಠತೆ ಅಳೆಯುವುದು ಅವರು ಎದುರಿಸಿದ್ದ ಎದುರಾಳಿಗಳ ಕಾರಣಕ್ಕೆ. ತಮ್ಮ ಅವಧಿಯಲ್ಲಿ ಎಷ್ಟು ಶ್ರೇಷ್ಠ ಎದುರಾಳಿಗಳನ್ನು ಎದುರಿಸಿ ಅವರನ್ನು ಎಷ್ಟು ಬಾರಿ ಮಣಿಸಿದ್ದರು ಎನ್ನುವುದರ ಮೇಲೆಯೂ ಅವರ ಸಾಧನೆಗೆ ಮೌಲ್ಯ ಬರುತ್ತದೆ. ಪೀಟ್‌ ಸಾಂಪ್ರಾಸ್‌, ರೋಜರ್‌ ಫೆಡರರ್‌, ರಾಫೆಲ್‌ ನಡಾಲ್‌, ನೊವಾಕ್‌ ಜೋಕೊವಿಕ್‌ರಂಥ ಆಟಗಾರರು ನೆನಪಿನಲ್ಲಿ ಉಳಿಯುವುದು ಅದೇ ಕಾರಣಕ್ಕೆ. ನಡಾಲ್‌, ಜೋಕೊವಿಕ್‌ ಜೊತೆ ವಿಶ್ವ ಟೆನಿಸ್‌ನ ಬಿಗ್‌-3 ಎನಿಸಿಕೊಂಡಿದ್ದ ರೋಜರ್‌ ಫೆಡರರ್‌ ಗುರುವಾರ ವೃತ್ತಿಪರ ಟೆನಿಸ್‌ಗೆ ವಿದಾಯ ಪ್ರಕಟಿಸಿದ್ದಾರೆ. ಇದರ ಬೆನ್ನಲ್ಲಿಯೇ ಅವರ ವೃತ್ತಿಜೀವನದ ಪ್ರಮುಖ ಭಾಗವಾಗಿ, ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಟೆನಿಸ್‌ನ ಅತ್ಯಂತ ಪ್ರಸಿದ್ಧ ರೈವರ್ಲಿಯನ್ನು ಹಂಚಿಕೊಳ್ಳುತ್ತಾರೆ. ವಿವಿಧ ಟೆನಿಸ್‌ ಕಣದಲ್ಲಿ 40 ಬಾರಿ ಪರಸ್ಪರ ಮುಖಾಮುಖಿಯಾಗಿದ್ದಾರೆ. ಇದರಲ್ಲಿ ನಡಾಲ್‌ 24ರಲ್ಲಿ ಹಾಗೂ ಫೆಡರರ್‌ 16ರಲ್ಲಿ ಗೆಲುವು ಕಂಡಿದ್ದಾರೆ. ಕೋರ್ಟ್‌ನಲ್ಲಿ ಜಗಜಟ್ಟಿಗಳ ಕಾದಾಟದ ಹೊರತಾಗಿಯೂ, ಕೋರ್ಟ್‌ನ ಹೊರಗೆ ಇಬ್ಬರೂ ಅಷ್ಟೇ ಆತ್ಮೀಯ ಸ್ನೇಹವನ್ನು ಹಂಚಿಕೊಂಡಿದ್ದರು. ಪರಸ್ಪರರ ಯಶಸ್ಸಿಗೆ ಮೆಚ್ಚುಗೆ ಸೂಚಿಸಿದರು. ಅದೇ ಕಾರಣದಿಂದಾಗಿ, ಫೆಡರರ್‌ ನಿವೃತ್ತಿಯಾದ ಬಳಿಕ ಸ್ಪೇನ್‌ನ ಟೆನಿಸ್‌ ದಂತಕಥೆ ತಮ್ಮ ಟ್ವಿಟರ್‌ ಪೇಜ್‌ನಲ್ಲಿ ಹೃದಯಸ್ಪರ್ಶಿಯಾಗಿ ಬರೆದುಕೊಂಡಿದ್ದಾರೆ.

ಫೆಡರರ್ ವಿರುದ್ಧ ಆಡುವುದು ನನ್ನ "ಸಂತೋಷ ಮತ್ತು ಗೌರವ" ಎಂದು ನಡಾಲ್ ಹೇಳಿದ್ದಲ್ಲದೆ,  ಭವಿಷ್ಯಕ್ಕಾಗಿ ಅವರಿಗೆ ಶುಭ ಹಾರೈಸಿದರು. ನಡಾಲ್‌ ತಮ್ಮ ಟ್ವಿಟರ್‌ ಪೇಜ್‌ನಲ್ಲಿ ಬರೆದಿದ್ದು ಹೀಗಿದೆ..

'ಆತ್ಮೀಯ ರೋಜರ್‌, ನನ್ನ ಸ್ನೇಹಿತ ಹಾಗೂ ಪ್ರತಿಸ್ಪರ್ಧಿ. ಇಂಥದ್ದೊಂದು ದಿನ ಎಂದಿಗೂ ಬರಬಾರದು ಎಂದು ನಾನು ಬಯಸಿದ್ದೆ. ಇದು ನನಗೆ ವೈಯಕ್ತಿಕವಾಗಿ ಹಾಗೂ ಪ್ರಪಂಚದಾದ್ಯಂತ ಇರುವ ಕ್ರೀಡಾಭಿಮಾನಿಗಳಿಗೆ ದುಃಖದ ದಿನ. ಇಷ್ಟು ವರ್ಷಗಳ ಕಾಲ ನಿಮ್ಮೊಂದಿಗೆ ಇದ್ದಿದ್ದು, ಕೋರ್ಟ್‌ಅನ್ನು ಹಂಚಿಕೊಂಡಿದ್ದು ನನ್ನ ಪಾಲಿನ ಗೌರವ ಹಾಗೂ ಹೆಮ್ಮೆ ಎಂದುಕೊಳ್ಳುತ್ತೇವೆ. ಕೋರ್ಟ್‌ನ ಹೊರಗೆ ಹಾಗೂ ಒಳಗೆ ಅದ್ಭುತ ಕ್ಷಣಗಳನ್ನು ನೀವು ಜೀವಿಸಿದ್ದೀರಿ.

"ಭವಿಷ್ಯದಲ್ಲಿ ನಾವು ಒಟ್ಟಿಗೆ ಹಂಚಿಕೊಳ್ಳಲು ಇನ್ನೂ ಹಲವು ಕ್ಷಣಗಳನ್ನು ಹೊಂದಿದ್ದೇವೆ, ಒಟ್ಟಿಗೆ ಯೋಜಿಸಲು ಇನ್ನೂ ಸಾಕಷ್ಟು ವಿಷಯಗಳಿವೆ, ಅದು ನಮ್ಮಿಬ್ಬರಿಗೂ ತಿಳಿದಿದೆ. ಸದ್ಯಕ್ಕೆ, ನಿಮ್ಮ ಹೆಂಡತಿ, ಮಿರ್ಕಾ, ನಿಮ್ಮ ಮಕ್ಕಳು, ನಿಮ್ಮ ಕುಟುಂಬದೊಂದಿಗೆ ನಿಮಗೆ ಎಲ್ಲಾ ಸಂತೋಷವನ್ನು ನಾನು ನಿಜವಾಗಿಯೂ ಬಯಸುತ್ತೇನೆ ಮತ್ತು ಪ್ರಸ್ತುತ ನಿಮ್ಮ ಮುಂದಿರುವುದನ್ನು ಪೂರ್ಣವಾಗಿ ಆನಂದಿಸಿ. ನಾನು ನಿಮ್ಮನ್ನು ಲಂಡನ್‌ನಲ್ಲಿ ಭೇಟಿಯಾಗುತ್ತೇನೆ" ಎಂದು ನಡಾಲ್ ಬರೆದಿದ್ದಾರೆ.

Roger Federer Retires 1996ರಲ್ಲಿ ಟೆನಿಸ್‌ಗೆ ಕಾಲಿಟ್ಟಿದ್ದ ಫೆಡರರ್‌, ದಿಢೀರ್ ನಿವೃತ್ತಿ ಘೋಷಿಸಿದ್ದೇಕೆ..?

ಲಂಡನ್‌ನಲ್ಲಿ ನಡೆಯಲಿರುವ ಲೆವರ್‌ ಕಪ್‌ (Lever Cup) ಟೂರ್ನಿಯಲ್ಲಿ ರಾಫೆಲ್‌ ನಡಾಲ್‌ (Rafael Nadal) ಹಾಗೂ ರೋಜರ್‌ ಫೆಡರರ್‌ (Roger Federer) ಒಟ್ಟಾಗಿ ಕೊನೆಯ ಬಾರಿಗೆ ಆಡಲಿದ್ದಾರೆ. ಅವರೊಂದಿಗೆ ನೋವಾಕ್‌ ಜೋಕೊವಿಕ್‌ (Novak Djokovic), ಕ್ಯಾಸ್ಪರ್‌ ರುಡ್‌, ಸ್ಟೀಫಾನೋಸ್ ಸಿಸಿಪಾಸ್‌ ಮತ್ತು ಆಂಡಿ ಮರ್ರೆ ಕೂಡ ಇರಲಿದ್ದಾರೆ. ಇವರು ಟೀಮ್‌ ಯುರೋಪ್‌ನ (Team Europe) ಭಾಗವಾಗಿದ್ದು, ಟೀಮ್‌ ವರ್ಲ್ಡ್‌ (Team World) ವಿರುದ್ದ ಕಣಕ್ಕಿಳಿಯಲಿದ್ದಾರೆ. 

2022ರ ಗರಿಷ್ಠ ಗಳಿಕೆಯಲ್ಲಿ ರೋಜರ್ ಫೆಡರರ್‌ ನಂ.1 ಟೆನಿಸಿಗ..!

ಸತತ ಆರು ವರ್ಷಗಳ ಕಾಲ ಎಟಿಪಿ ಟೆನಿಸ್‌ (ATP Rankings) ಶ್ರೇಯಾಂಕದಲ್ಲಿ ನಂ.1 ಹಾಗೂ ನಂ.2 ಸ್ಥಾನದಲ್ಲಿ ಕೊನೆಗೊಳಿಸಿದ ವಿಶ್ವದ ಏಕೈಕ ಜೋಡಿ ರೋಜರ್‌ ಫೆಡರರ್‌ ಹಾಗೂ ರಾಫೆಲ್‌ ನಡಾಲ್‌. ಕ್ಲೇ ಕೋರ್ಟ್‌ನಲ್ಲಿ (Clay Court) ಫೆಡರರ್‌ ವಿರುದ್ಧ ನಡಾಲ್‌ ಮೇಲುಗೈ ಸಾಧಿಸಿದ್ದಾರೆ. 16 ಮುಖಾಮುಖಿಯಲ್ಲಿ ನಡಾಲ್‌ 14 ರಲ್ಲಿ ಹಾಗೂ ಫೆಡರರ್‌ 2 ರಲ್ಲಿ ಗೆಲುವು ಕಂಡಿದ್ದಾರೆ. ಹುಲ್ಲಿನಂಕಣದ 4 ಮುಖಾಮುಖಿಯಲ್ಲಿ ಫೆಡರರ್‌ 3 ಹಾಗೂ ನಡಾಲ್‌ 1 ಪಂದ್ಯದಲ್ಲಿ ಗೆದ್ದಿದ್ದಾರೆ. ಇನ್ನು ಹೊರಾಂಗಣದ ಹಾರ್ಡ್‌ಕೋರ್ಟ್‌ನಲ್ಲಿ ನಡೆದ 14 ಮುಖಾಮುಖಿಯಲ್ಲಿ ಸ್ಪೇನ್‌ ದಿಗ್ಗಜ 8 ರಲ್ಲಿ ಹಾಗೂ ಫೆಡ್‌ 6ರಲ್ಲಿ ಗೆಲುವು ಕಂಡಿದ್ದರು.ಯುಎಸ್‌ ಓಪನ್‌ನಲ್ಲಿ ಮಾತ್ರ ನಡಾಲ್‌ ಹಾಗೂ ಫೆಡರರ್‌ ಎಂದಿಗೂ ಮುಖಾಮುಖಿಯಾಗಿರಲಿಲ್ಲ.

Latest Videos
Follow Us:
Download App:
  • android
  • ios