ದೆಹಲಿ ಶೂಟಿಂಗ್ ವಿಶ್ವಕಪ್ - ಭಾರತಕ್ಕೆನಿರಾಸೆ!
ದೆಹಲಿಯಲ್ಲಿ ನಡೆದ ವಿಶ್ವಕಪ್ ಶೂಟಿಂಗ್ ಹಲವು ಕಾರಣಗಳಿಂದ ವಿಶ್ವದ ಗಮನಸೆಳೆದಿತ್ತು. ಆರಂಭಕ್ಕೂ ಮೊದಲೇ ಪಾಕಿಸ್ತಾನ ಶೂಟರ್‌ಗಳಿಗ ವೀಸಾ ನಿರಾಕರಿಸಿದ ಕಾರಣ ಸುದ್ದಿಯಾಗಿತ್ತು. ಆದರೆ ಶೂಟಿಂಗ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ನಿರಾಸೆ ಅನುಭವಿಸಿದೆ.
ನವದೆಹಲಿ(ಫೆ.26): ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವರ್ಷದ ಮೊದಲ ಶೂಟಿಂಗ್ ವಿಶ್ವಕಪ್‌ನಲ್ಲಿ ಸೋಮವಾರ ಭಾರತೀಯರು ಪದಕ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಮೊದಲೆರಡು ದಿನ ಚಿನ್ನದ ಪದಕ ಗೆದ್ದಿದ್ದ ಭಾರತ, ಸೋಮವಾರ ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಪದಕ ನಿರೀಕ್ಷಿಸಿತ್ತು.
ಇದನ್ನೂ ಓದಿ: ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್: ಸೌರಭ್’ಗೆ ವಿಶ್ವದಾಖಲೆಯ ಚಿನ್ನ
ಆದರೆ ಸ್ಪರ್ಧೆಯಲ್ಲಿದ್ದ ಭಾರತದ ದಿವ್ಯಾನ್ಶ್ ಪನ್ವಾರ್, ರವಿ ಕುಮಾರ್ ಹಾಗೂ ದೀಪಕ್ ಕುಮಾರ್ ಫೈನಲ್‌ಗೇರುವಲ್ಲಿ ವಿಫಲರಾದರು. ದಿವ್ಯಾನ್ಶ್ 12ನೇ ಸ್ಥಾನ ಪಡೆದರೆ, ರವಿ ಹಾಗೂ ದೀಪಕ್ ಕ್ರಮವಾಗಿ 14 ಹಾಗೂ 34ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಈ ಮೂವರು 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಮುಂದಿನ ವಿಶ್ವಕಪ್ ವರೆಗೂ ಕಾಯಬೇಕಿದೆ.
ಇದನ್ನೂ ಓದಿ: ಪಾಕ್ ಶೂಟರ್ಸ್‌ಗೆ ವೀಸಾ ನಿರಾಕರಣೆ- ಭಾರತಕ್ಕೆ ಶಾಕ್ ನೀಡಿದ IOC!
ಇಲ್ಲಿನ ಡಾ.ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ನ ಮೊದಲ ದಿನ ಅಪೂರ್ವಿ ಚಾಂಡೆಲಾ, ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದರೆ, 2ನೇ ದಿನ ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸ್ವರ್ಣ ಗೆದ್ದಿದ್ದರು.