Pro Kabaddi League ಹರ್ಯಾಣ ಸ್ಟೀಲರ್ಸ್‌, ಪಾಟ್ನಾ ಪೈರೇಟ್ಸ್‌ಗೆ ಭರ್ಜರಿ ಜಯ

ಸಿದ್ಧಾರ್ಥ್‌ ದೇಸಾಯಿ (11 ಅಂಕ) ಹಾಗೂ ಶಿವಂ (12 ಅಂಕ) ಅವರ ಸೂಪರ್‌ 10 ಸಾಹಸದಿಂದ ಹರ್ಯಾಣ, ಬೆಂಗಾಲ್ ತಂಡವನ್ನು ಬಗ್ಗುಬಡಿಯಿತು. ಮಣೀಂದರ್‌ ಸಿಂಗ್‌ 13 ಅಂಕ ಕಲೆಹಾಕಿದರೂ, ಬೆಂಗಾಲನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

Pro Kabaddi League Haryana Steelers and Patna Pirates win and keep hope play offs kvn

ಪಾಟ್ನಾ: ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ಪ್ಲೇ-ಆಫ್‌ ಪ್ರವೇಶಿಸಲು ಪೈಪೋಟಿ ತೀವ್ರಗೊಳ್ಳುತ್ತಿದ್ದು, ಹರ್ಯಾಣ ಸ್ಟೀಲರ್ಸ್‌ ಹಾಗೂ ಪಾಟ್ನಾ ಪೈರೇಟ್ಸ್‌ ಆಕರ್ಷಕ ಗೆಲುವುಗಳ ಮೂಲಕ, ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯುವ ಪ್ರಯತ್ನ ನಡೆಸಿವೆ. ಸೋಮವಾರ ಹರ್ಯಾಣ ತಂಡವು ಬೆಂಗಾಲ್‌ ವಾರಿಯರ್ಸ್‌ ವಿರುದ್ಧ 41-36 ಅಂಕಗಳಲ್ಲಿ ಗೆದ್ದರೆ, ಪಾಟ್ನಾ 32-20ರ ಅಂತರದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ ಜಯಭೇರಿ ಬಾರಿಸಿತು. ಹರ್ಯಾಣ ಅಂಕಪಟ್ಟಿಯಲ್ಲಿ 6ನೇ ಸ್ಥಾನ ಪಡೆದರೆ, ಪಾಟ್ನಾ 5ನೇ ಸ್ಥಾನಕ್ಕೇರಿದೆ.

ಸಿದ್ಧಾರ್ಥ್‌ ದೇಸಾಯಿ (11 ಅಂಕ) ಹಾಗೂ ಶಿವಂ (12 ಅಂಕ) ಅವರ ಸೂಪರ್‌ 10 ಸಾಹಸದಿಂದ ಹರ್ಯಾಣ, ಬೆಂಗಾಲ್ ತಂಡವನ್ನು ಬಗ್ಗುಬಡಿಯಿತು. ಮಣೀಂದರ್‌ ಸಿಂಗ್‌ 13 ಅಂಕ ಕಲೆಹಾಕಿದರೂ, ಬೆಂಗಾಲನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

Ranji Trophy: ತ್ರಿಪುರಾ ವಿರುದ್ಧ ಗೆದ್ದ ಕರ್ನಾಟಕ ಕ್ರಿಕೆಟ್ ತಂಡ

ಇನ್ನು ಯುವ ರೈಡರ್‌ ಸಂದೀಪ್‌ ಕುಮಾರ್‌ (07 ಅಂಕ), ಆಲ್ರೌಂಡರ್‌ ಅಂಕಿತ್‌ (06 ಅಂಕ)ರ ಆಕರ್ಷಕ ಪ್ರದರ್ಶನ, ಪಾಟ್ನಾಗೆ ದೊಡ್ಡ ಅಂತರದ ಗೆಲುವು ತಂದುಕೊಟ್ಟಿತು.

ಇಂದಿನ ಪಂದ್ಯ: ಪುಣೇರಿ ಪಲ್ಟನ್‌-ತೆಲುಗು ಟೈಟಾನ್ಸ್‌, ರಾತ್ರಿ 8ಕ್ಕೆ

ಹಾಕಿ ಫೈವ್ಸ್‌ ವಿಶ್ವಕಪ್: ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಭಾರತ

ಮಸ್ಕಟ್: ಎಚ್‌ಎಫ್‌ಐ ಹಾಕಿ ಫೈವ್ಸ್‌ ವಿಶ್ವಕಪ್ ಪಂದ್ಯಾವಳಿ ಭಾರತ ಪುರುಷರ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಜಮೈಕಾ ವಿರುದ್ಧ 13-0 ಗೋಲುಗಳಿಂದ ಗೆದ್ದ ಭಾರತ. 'ಬಿ' ಗುಂಪಿನಲ್ಲಿ ಎರಡನೇ ಸ್ಥಾನಿಯಾಗಿ ನಾಕೌಟ್ ಹಂತಕ್ಕೇರಿತು. 

ಮಗ ಟೀಂ ಇಂಡಿಯಾದಲ್ಲಿ ಮಿಂಚುತ್ತಿದ್ದರೂ ಅಪ್ಪ ಈಗಲೂ ಸಿಲಿಂಡರ್ ಡಿಸ್ಟ್ರಿಬ್ಯೂಟ್ ಮಾಡ್ತಿದ್ದಾರೆ..! ವಿಡಿಯೋ ವೈರಲ್

ಗುಂಪು ಹಂತದಲ್ಲಿ ಭಾರತ ಸ್ವಿಟ್ಜರ್‌ಲೆಂಡ್ ವಿರುದ್ದ ಗೆದ್ದರೆ, ಈಜಿಪ್ಟ್ ಎದುರು ಸೋಲುಂಡಿತ್ತು. ಇನ್ನು ಭಾನುವಾರ ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಭಾರತಕ್ಕೆ ನೆದರ್‌ಲೆಂಡ್ಸ್ ಎದುರಾಗಲಿದೆ.

ಪ್ಯಾರಾ ಬ್ಯಾಡ್ಮಿಂಟನ್: ಸಿದ್ದಣ್ಣ ಸಾಹುಕಾರ್‌ಗೆ ಚಿನ್ನ

ಬೆಂಗಳೂರು: ಈಜಿಪ್ಟ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಪಂದ್ಯಾವಳಿ ಪುರುಷರ ಸಿಂಗಲ್ಸ್‌ನಲ್ಲಿ ಕರ್ನಾಟಕದ ಸಿದ್ಧಣ್ಣ ಸಾಹುಕಾರ್ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಪುರುಷರ ಡಬಲ್ಸ್‌ನಲ್ಲಿ ಹೇಮಂತ್ ಕುಮಾರ್ ಜತೆಗೂಡಿ ಕಂಚು ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಪಲ್ಲವಿ ಕಾಲುವೇಹಳ್ಳಿ ಅವರೊಂದಿಗೆ ಕಂಚ ಸಹ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮಹಿಳಾ ಸಿಂಗಲ್ಸ್‌ನಲ್ಲಿ ಪಲ್ಲವಿ ಕಂಚು ಜಯಿಸಿದ್ದು, ಮಹಿಳಾ ಡಬಲ್ಸ್‌ನಲ್ಲಿ ಅಲ್ಫಿಯಾ ಜೇಮ್ಸ್‌ರೊದಿಗೆ ಕಂಚಿನ ಪದಕ ಗೆದ್ದಿದ್ದಾರೆ.
 

Latest Videos
Follow Us:
Download App:
  • android
  • ios