Pro Kabaddi League ಬೆಂಗಳೂರು ಬುಲ್ಸ್ ಸೆಮೀಸ್‌ಗೇರಿತ್ತಾ, ಅಥವಾ ಮನೆಗೆ ಬರುತ್ತಾ?
9ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಇಂದಿನಿಂದ ಪ್ಲೇ ಆಫ್ ಕದನ
ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ಗೆ ದಬಾಂಗ್ ಡೆಲ್ಲಿ ಸವಾಲು
2ನೇ ಎಲಿಮಿನೇಟರ್‌ನಲ್ಲಿ ಯು.ಪಿ.ಯೋಧಾಸ್ ಹಾಗೂ ತಮಿಳ್ ತಲೈವಾಸ್ ಕಾದಾಟ
ಮುಂಬೈ(ಡಿ.13): 9ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ಪ್ಲೇ-ಆಫ್ ಹಂತಕ್ಕೆ ವೇದಿಕೆ ಸಿದ್ಧಗೊಂಡಿದ್ದು, ಮೊದಲ ಎಲಿಮಿನೇಟರ್‌ನಲ್ಲಿ ಮಂಗಳವಾರ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ಡೆಲ್ಲಿ ಮುಖಾಮುಖಿಯಾಗಲಿವೆ. 2018ರ ಚಾಂಪಿಯನ್ ಬುಲ್ಸ್ ಆಡಿದ 22 ಪಂದ್ಯಗಳಲ್ಲಿ 13 ಗೆಲುವು ಸಾಧಿಸಿದ್ದು, 74 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿತ್ತು. ಅತ್ತ ಹಾಲಿ ಚಾಂಪಿಯನ್ ಡೆಲ್ಲಿ 10 ಗೆಲುವಿನೊಂದಿಗೆ 63 ಅಂಕಗಳಿಸಿ 6ನೇ ಸ್ಥಾನ ಪಡೆದಿದೆ. ಲೀಗ್‌ನ ಎರಡೂ ಪಂದ್ಯಗಳಲ್ಲಿ ಡೆಲ್ಲಿ ವಿರುದ್ಧ ಗೆದ್ದಿದ್ದ ಬುಲ್ಸ್ ಮತ್ತೊಂದು ಜಯದೊಂದಿಗೆ ಸೆಮಿಫೈನಲ್ ಪ್ರವೇಶಿಸುವ ನಿರೀಕ್ಷೆಯಲ್ಲಿದೆ.
ಮತ್ತೊಂದೆಡೆ ಮಂಗಳವಾರ 2ನೇ ಎಲಿಮಿನೇಟರ್‌ನಲ್ಲಿ ಯು.ಪಿ.ಯೋಧಾಸ್ ತಂಡ ತಮಿಳ್ ತಲೈವಾಸ್ ಸವಾಲನ್ನು ಎದುರಿಸಲಿದೆ. ಯೋಧಾಸ್ 12 ಗೆಲುವಿನೊಂದಿಗೆ 71 ಅಂಕಗಳಿಸಿ 4ನೇ ಸ್ಥಾನ ಪಡೆದಿದ್ದರೆ, ತಲೈವಾಸ್ 10 ಜಯದೊಂದಿಗೆ 66 ಅಂಕ ಸಂಪಾದಿಸಿ 5ನೇ ಸ್ಥಾನ ಪಡೆದಿತ್ತು. ಗುಂಪಿನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆದ ಜೈಪುರ ಪಿಂಕ್ಪ್ಯಾಂಥರ್ಸ್, ಪುಣೇರಿ ಪಲ್ಟನ್ ನೇರವಾಗಿ ಸೆಮಿಫೈನಲ್ ಪ್ರವೇಶಿಸಿವೆ.
ಪಂದ್ಯ: ಬುಲ್ಸ್-ಡೆಲ್ಲಿ, ಸಂಜೆ 7.30ಕ್ಕೆ,
ಯೋಧಾಸ್-ತಲೈವಾಸ್, ರಾತ್ರಿ 8.30ಕ್ಕೆ
ವಿಶ್ವಕಪ್ ಸಂಭವನೀಯರ ಪಟ್ಟೀಲಿ ರಾಜ್ಯದ ರಾಹೀಲ್
ಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್‌ಗೆ 33 ಸದಸ್ಯರ ಭಾರತ ಸಂಭವನೀಯರ ತಂಡ ಪ್ರಕಟಗೊಂಡಿದ್ದು, ಕರ್ನಾಟಕದ ಫಾರ್ವರ್ಡ್ ಆಟಗಾರ ಮೊಹಮದ್ ರಾಹೀಲ್ ಸ್ಥಾನ ಪಡೆದಿದ್ದಾರೆ. ವಿಶ್ವಕಪ್ ಸಿದ್ಧತೆಗಾಗಿ ಬುಧವಾರದಿಂದ ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ತಂಡಕ್ಕೆ ವಿಶೇಷ ತರಬೇತಿ ಶಿಬಿರ ಆರಂಭವಾಗಲಿದೆ.
'ನೀವು ನನ್ನ ಪಾಲಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ': ರೊನಾಲ್ಡೊಗೆ ಕಿಂಗ್ ಕೊಹ್ಲಿ ಭಾವನಾತ್ಮಕ ಸಂದೇಶ..!
ಇದು ಸೋಮವಾರ ಆರಂಭವಾದ 2 ವಾರಗಳ ರಾಷ್ಟ್ರೀಯ ತರಬೇತಿ ಶಿಬಿರದ ಭಾಗವಾಗಿರಲಿದ್ದು, ಡಿಸೆಂಬರ್ 20ಕ್ಕೆ ಕೊನೆಗೊಳ್ಳಲಿದೆ. ಶಿಬಿರದಲ್ಲಿ ತಂಡದ ಗೋಲ್‌ಕೀಪರ್, ಡ್ರ್ಯಾಗ್ ಫ್ಲಿಕರ್‌ಗಳಿಗೆ ನೆದರ್‌ಲೆಂಡ್‌್ಸನ ದಿಗ್ಗಜ ಆಟಗಾರರಾದ ಬ್ರಾಮ್ ಲೊಮನ್ಸ್, ಡೆನಿಸ್ ವಾನ್ ಡೆ ಪೊಲ್ ತರಬೇತಿ ನೀಡಲಿದ್ದಾರೆ. ವಿಶ್ವಕಪ್ ಜನವರಿ 13ರಿಂದ 29ರ ವರೆಗೆ ಭುವನೇಶ್ವರ್, ರೂರ್ಕೆಲಾದಲ್ಲಿ ನಡೆಯಲಿದೆ.
ವನಿತಾ ಹಾಕಿ ನೇಷನ್ಸ್ ಕಪ್: ಭಾರತಕ್ಕೆ ಸತತ 2ನೇ ಜಯ
ವೆಲೆನ್ಸಿಯಾ(ಸ್ಪೇನ್): ಚೊಚ್ಚಲ ಆವೃತ್ತಿಯ ಮಹಿಳಾ ನೇಷನ್ಸ್ ಕಪ್ ಹಾಕಿ ಟೂರ್ನಿಯಲ್ಲಿ ಭಾರತ ಸತತ 2ನೇ ಗೆಲುವು ದಾಖಲಿಸಿದೆ. ಆರಂಭಿಕ ಪಂದ್ಯದಲ್ಲಿ ಭಾನುವಾರ ಚಿಲಿ ವಿರುದ್ಧ 3-1 ಗೋಲುಗಳಿಂದ ಗೆದ್ದಿದ್ದ ಭಾರತ, ಸೋಮವಾರ ಜಪಾನ್ ತಂಡವನ್ನು 2-1 ಗೋಲುಗಳಿಂದ ಮಣಿಸಿತು. ಇದರೊಂದಿಗೆ ‘ಬಿ’ ಗುಂಪಿನಲ್ಲಿ ಭಾರತ 6 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದು, ಬುಧವಾರ ಕೊನೆ ಪಂದ್ಯದಲ್ಲಿ ದ.ಆಫ್ರಿಕಾ ವಿರುದ್ಧ ಸೆಣಸಲಿದೆ. ತಲಾ 4 ತಂಡಗಳಿರುವ ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆದ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
ರಾಜ್ಯದ ದಿವ್ಯಾ ರಾಷ್ಟ್ರೀಯ ಶೂಟಿಂಗ್‌ನಲ್ಲಿ ಚಾಂಪಿಯನ್
ಭೋಪಾಲ್: ಕರ್ನಾಟಕದ ತಾರಾ ಶೂಟರ್ ದಿವ್ಯಾ ಟಿ.ಎಸ್. 65ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭೋಪಾಲ್‌ನಲ್ಲಿ ಸೋಮವಾರ ಮುಕ್ತಾಯಗೊಂಡ ಕೂಟದಲ್ಲಿ ದಿವ್ಯಾ ಮಹಿಳಾ ವಿಭಾಗದ ಫೈನಲ್‌ನಲ್ಲಿ ಉತ್ತರ ಪ್ರದೇಶದ ಸಂಸ್ಕೃತಿ ಬಾನ ವಿರುದ್ಧ 16-14 ಅಂತರದಲ್ಲಿ ಜಯಗಳಿಸಿ ಚಿನ್ನ ಪಡೆದರು. ಹರಾರಯಣದ ರಿಧಂ ಸಂಗ್ವಾನ್ ಕಂಚು ಗೆದ್ದರು. ದಿವ್ಯಾ ರಾರಯಂಕಿಂಗ್ ಸುತ್ತಿನಲ್ಲಿ 254.2 ಅಂಕ ಪಡೆದಿದ್ದರೆ, ಸಂಸ್ಕೃತಿ 251.6 ಅಂಕ ಗಳಿಸಿದ್ದರು.