ಕೋಲ್ಕತಾ(ಡಿ.27): ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ನಡೆದ ಪ್ರೊ ಕಬಡ್ಡಿ ಲೀಗ್ ಟೂರ್ನಿಯ 131ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಗೆಲುವಿ ನಗೆ ಬೀರಿದೆ. ರೋಚಕ ಹೋರಾಟದಲ್ಲಿ ಬೆಂಗಳೂರು 40-32 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. 

 

 

ಇದನ್ನೂ ಓದಿ: ಪೂಜಾರ ಶತಕ-ಕೊಹ್ಲಿ ದಾಖಲೆಯ ಅರ್ಧಶತಕ-ಆಸಿಸ್‌ಗೆ ನಡುಕ

ಮೊದಲ ರೈಡ್‌ನಲ್ಲಿ ಯಶಸ್ಸು ಸಾಧಿಸಿದ  ಜೈಪುರ ಅಂಕ ಖಾತೆ ತೆರೆಯಿತು. ಆರಂಭಿಕ ನಿಷದಲ್ಲಿ ಮುನ್ನಡೆ ಸಾಧಿಸಿದ ಜೈಪುರ ತಂಡಕ್ಕೆ ಬೆಂಗಳೂರು ಶಾಕ್ ನೀಡಿತು. ಆಕ್ರಮಣಕಾರಿ ಆಟದಿಂದ ಮೊದಲಾರ್ಧದ ಅಂತ್ಯದಲ್ಲಿ 19-15 ಅಂಕಗಳ ಮುನ್ನಡೆ ಪಡೆಯಿತು.

ಇದನ್ನೂ ಓದಿ: ವಿವ್ ರಿಚರ್ಡ್ಸ್ ಆಟ ನೆನಪಿಸಿದ ವಿರಾಟ್ ಕೊಹ್ಲಿ-ದಿಗ್ಗಜನಿಂದ ಶ್ಲಾಘನೆ!

ದ್ವಿತೀಯಾರ್ಧದಲ್ಲಿ ಜೈಪುರ ತಂಡ ಮುನ್ನಡೆಗಾಗಿ ಕಠಿಣ ಹೋರಾಟ ನಡೆಸಿತು. ಆದರೆ ಇದಕ್ಕೆ ಬೆಂಗಳೂರು ತಂಡ ಅವಕಾಶ ನೀಡಲಿಲ್ಲ. ಅಂತಿಮ ಹಂತದವರೆಗೂ ಲೀಡ್ ಕಾಯ್ದುಕೊಂಡ ಬೆಂಗಳೂರು ಬುಲ್ಸ್, 40-32 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.