Pro Kabaddi League: ಇಂದು ಬೆಂಗಳೂರು ಬುಲ್ಸ್-ಜೈಪುರ ಪಿಂಕ್ ಪ್ಯಾಂಥರ್ಸ್ ಸೆಮೀಸ್ ಫೈಟ್
ಪ್ರೊ ಕಬಡ್ಡಿ ಟೂರ್ನಿಯ ಮೊದಲ ಸೆಮಿಫೈನಲ್‌ಗೆ ಕ್ಷಣಗಣನೆ
ಮೊದಲ ಸೆಮೀಸ್‌ನಲ್ಲಿ ಬೆಂಗಳೂರು ಬುಲ್ಸ್-ಜೈಪುರ ಪಿಂಕ್ ಪ್ಯಾಂಥರ್ಸ್ ಸೆಣಸಾಟ
ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಡೆಲ್ಲಿ ಎದುರು ಗೆದ್ದು ಬೀಗಿದ ಬುಲ್ಸ್
ಮುಂಬೈ(ಡಿ.15): 9ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ಸೆಮಿಫೈನಲ್‌ಗೆ ತಂಡಗಳು ಅಂತಿಮಗೊಂಡಿದ್ದು, ಗುರುವಾರ ಮೊದಲ ಸೆಮಿಫೈನಲ್‌ನಲ್ಲಿ ಮಾಜಿ ಚಾಂಪಿಯನ್‌ಗಳಾದ ಬೆಂಗಳೂರು ಬುಲ್ಸ್ ಹಾಗೂ ಜೈಪುರ ಪಿಂಕ್ಪ್ಯಾಂಥರ್ಸ್ ತಂಡಗಳು ಸೆಣಸಾಡಲಿವೆ.
ಗುಂಪು ಹಂತದಲ್ಲಿ 3ನೇ ಸ್ಥಾನಿಯಾಗಿ ಪ್ಲೇ-ಆಫ್‌ಗೇರಿದ್ದ 2018ರ ಚಾಂಪಿಯನ್ ಬುಲ್ಸ್, ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ವಿರುದ್ಧ 56-24 ಅಂಕಗಳ ಬೃಹತ್ ಗೆಲುವು ಸಾಧಿಸಿತ್ತು. ಪಂದ್ಯದುದ್ದಕ್ಕೂ ಪ್ರಾಬಲ್ಯ ಸಾಧಿಸಿ ಅಧಿಕಾರಯುತವಾಗಿ ಗೆದ್ದ ಬುಲ್ಸ್ ಜೈಪುರಕ್ಕೂ ಶಾಕ್ ನೀಡಲು ಕಾತರಿಸುತ್ತಿದ್ದು, 3ನೇ ಬಾರಿ ಫೈನಲ್ ಪ್ರವೇಶದ ನಿರೀಕ್ಷೆಯಲ್ಲಿದೆ. ಆದರೆ ಗುಂಪು ಹಂತದಲ್ಲಿ ಅಗ್ರಸ್ಥಾನಿಯಾಗಿ ನೇರವಾಗಿ ಸೆಮೀಸ್‌ಗೇರಿದ್ದ ಚೊಚ್ಚಲ ಆವೃತ್ತಿಯ ಚಾಂಪಿಯನ್ ಜೈಪುರದಿಂದ ಬುಲ್ಸ್‌ಗೆ ಕಠಿಣ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಜೈಪುರ ಕೂಡಾ 3ನೇ ಫೈನಲ್ ತವಕದಲ್ಲಿದೆ.
ಮತ್ತೊಂದೆಡೆ ಗುರುವಾರ 2ನೇ ಸೆಮಿಫೈನಲ್‌ನಲ್ಲಿ ಪುಣೇರಿ ಪಲ್ಟನ್ ಹಾಗೂ ತಮಿಳ್ ತಲೈವಾಸ್ ಮುಖಾಮುಖಿಯಾಗಲಿವೆ. ಗುಂಪಿನಲ್ಲಿ 2ನೇ ಸ್ಥಾನಿಯಾಗಿದ್ದ ಪುಣೇರಿ ನೇರವಾಗಿ ಸೆಮೀಸ್‌ಗೇರಿದ್ದರೆ, ತಲೈವಾಸ್ 2ನೇ ಎಲಿಮಿನೇಟರ್‌ನಲ್ಲಿ ಯು.ಪಿ.ಯೋಧಾಸ್ ವಿರುದ್ಧ ಟೈ ಬ್ರೇಕರ್‌ನಲ್ಲಿ ರೋಚಕವಾಗಿ ಗೆದ್ದು ಅಂತಿಮ 4ರ ಘಟ್ಟಪ್ರವೇಶಿಸಿದೆ. ಎರಡೂ ತಂಡಗಳು ಚೊಚ್ಚಲ ಫೈನಲ್ ಮೇಲೆ ಕಣ್ಣಿಟ್ಟಿದೆ.
ಪಂದ್ಯ:
ಬುಲ್ಸ್-ಜೈಪುರ, ಸಂಜೆ 7.30ಕ್ಕೆ
ಪುಣೇರಿ-ತಲೈವಾಸ್, ರಾತ್ರಿ 8.30ಕ್ಕೆ
ನೇಷನ್ಸ್ ಕಪ್ ಹಾಕಿ: ಭಾರತಕ್ಕೆ ಹ್ಯಾಟ್ರಿಕ್ ಜಯ
ವೆಲೆನ್ಸಿಯಾ(ಸ್ಪೇನ್): ಚೊಚ್ಚಲ ಆವೃತ್ತಿಯ ಮಹಿಳಾ ನೇಷನ್ಸ್ ಕಪ್ ಹಾಕಿ ಟೂರ್ನಿಯಲ್ಲಿ ಭಾರತ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದು, ಅಗ್ರಸ್ಥಾನಿಯಾಗಿಯೇ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಬುಧವಾರ ದ.ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ 2-0 ಗೋಲುಗಳ ಅಂತರದಲ್ಲಿ ಜಯಗಳಿಸಿತು. ಆರಂಭಿಕ ಪಂದ್ಯದಲ್ಲಿ ಚಿಲಿ ವಿರುದ್ಧ 3-1 ಗೋಲುಗಳಿಂದ ಗೆದ್ದಿದ್ದ ಭಾರತ, ಬಳಿಕ ಜಪಾನ್ ತಂಡವನ್ನು 2-1 ಗೋಲುಗಳಿಂದ ಮಣಿಸಿತ್ತು. ಇದರೊಂದಿಗೆ ‘ಬಿ’ ಗುಂಪಿನಲ್ಲಿ ಭಾರತ 9 ಅಂಕದೊಂದಿಗೆ ಅಗ್ರಸ್ಥಾನ ಪಡೆಯಿತು. ದ.ಆಫ್ರಿಕಾ ಹ್ಯಾಟ್ರಿಕ್ ಸೋಲಿನೊಂದಿಗೆ ಕೊನೆ ಸ್ಥಾನಿಯಾಯಿತು.
ICC ODI Rankings: ಬರೋಬ್ಬರಿ 117 ಸ್ಥಾನ ಜಿಗಿದ ದ್ವಿಶತಕ ವೀರ ಇಶಾನ್ ಕಿಶನ್!
ಅರ್ಸೆನಲ್ ಫುಟ್ಬಾಲ್ ಕ್ಲಬ್ ಖರೀದಿಸ್ತಾರಾ ಅಂಬಾನಿ?
ಮುಂಬೈ: ವಿಶ್ವದ ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರಾದ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ಇಂಗ್ಲೆಂಡ್ ಪ್ರೀಮಿಯರ್ ಲೀಗ್(ಇಪಿಎಲ್)ನ ಪ್ರಮುಖ ಕ್ಲಬ್ ಅರ್ಸೆನಲ್ ಖರೀದಿಸಲು ಬಿಡ್ ಸಲ್ಲಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಐಪಿಎಲ್‌ನ ಮುಂಬೈ ಇಂಡಿಯನ್ಸ್ ಮಾಲೀಕರಾಗಿರುವ ಅಂಬಾನಿ ಈ ಮೊದಲು ಇಪಿಎಲ್‌ನ ದೈತ್ಯ ತಂಡಗಳಾದ ಲಿವರ್‌ಪೂಲ್, ಮ್ಯಾಂಚೆಸ್ಟರ್ ಯುನೈಡೆಟ್ ತಂಡಗಳನ್ನು ಖರೀದಿಸುವ ಬಗ್ಗೆ ಸುದ್ದಿಯಾಗಿತ್ತು. ಈಗ ಅರ್ಸೆನಲ್ ತಂಡ ಖರೀದಿ ಬಗ್ಗೆ ವರದಿಯಾಗಿದ್ದು, ಸತ್ಯಾಸತ್ಯತೆ ಇನ್ನಷ್ಟುಗೊತ್ತಗಬೇಕಿದೆ.