Pro Kabaddi league ತವರು ನೆಲದಲ್ಲಿ ಕೊನೆಯ ಪಂದ್ಯ, ಪಾಟ್ನಾ ವಿರುದ್ಧ ಸಮಬಲ ಸಾಧಿಸಿದ ಬೆಂಗಳೂರು ಬುಲ್ಸ್!

ಬೆಂಗಳೂರು ಬುಲ್ಸ್ ತಂಡಕ್ಕೆ ತವರಿನಲ್ಲಿ ಇದು ಕೊನೆಯ ಪಂದ್ಯವಾಗಿತ್ತು. ಗೆಲುವಿನೊಂದಿಗೆ ಬೆಂಗಳೂರಿಗೆ ವಿದಾಯ ಹೇಳಲು ಮುಂದಾಗಿದ್ದ ಬುಲ್ಸ್ ತಂಡ ಸಮಬಲ ಸಾಧಿಸುವ ಮೂಲಕ ಪಂದ್ಯ ಅಂತ್ಯಗೊಳಿಸಿತು.

Pro Kabaddi League 2022 Bengaluru Bulls vs patna pirates match tied by 31 31 points ckm

ಬೆಂಗಳೂರು(ಅ.23): ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ಹಾಗೂ ಪಾಟ್ನಾ ಪೈರೇಟ್ಸ್‌ ತಂಡಗಳು 31-31  ಅಂತರದಲ್ಲಿ ಸಮಬಲ ಸಾಧಿಸಿದವು. ಪಾಟ್ನಾ ಪೈರೇಟ್ಸ್‌ ತಂಡ ಕೊನೆಯ ವರೆಗೂ ಗೆಲ್ಲುವ ಅವಕಾಶ ಹೊಂದಿತ್ತು, ಆದರೆ ಕೊನೆಯ ಕ್ಷಣದಲ್ಲಿ ಮಾಡಿದ ಪ್ರಮಾದ ಫಲವಾಗಿ ಗೆಲ್ಲುವ ಪಂದ್ಯದಲ್ಲಿ ಅಂಕ ಹಂಚಿಕೊಂಡಿತು. ಬೆಂಗಳೂರು ಬುಲ್ಸ್‌ ಯು ಮುಂಬಾ ವಿರುದ್ಧದ ಪಂದ್ಯದಂತೆಯೇ ದ್ವಿತಿಯಾರ್ಧದಲ್ಲಿ ಪುಟಿದೆದ್ದು ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಭರತ್‌ 11 ಅಂಕಗಳನ್ನು ಗಳಿಸಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು. ಇತ್ತಂಡಗಳಿಗೂ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಇದು ಕೊನೆಯ ಪಂದ್ಯವಾಗಿತ್ತು.  

ಯು ಮುಂಬಾ ವಿರುದ್ಧ ಗೆಲುವಿನ ಬಳಿಕ ಬೆಂಗಳೂರು ಬುಲ್ಸ್ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿತ್ತು. ಇದೀಗ ಪಾಟ್ನಾ ಪೈರೇಟ್ಸ್ ವಿರುದ್ಧದ ಪಂದ್ಯ ಟೈ ಮಾಡಿಕೊಂಡು ಅಂಕಪಟ್ಟಿಯಲ್ಲಿ 3ನೇ ಸ್ಥಾನ ಉಳಿಸಿಕೊಂಡಿದೆ. ಪ್ರತಿ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆಗಳಾಗುತ್ತಿದೆ. ಪೈಪೋಟಿ ಹೆಚ್ಚಾಗುತ್ತಿದೆ.

ಸೆಕೆಂಡ್ ಹಾಫ್‌ನಲ್ಲಿ ಪಂದ್ಯದ ಗತಿ ಬದಲು, ಯು ಮುಂಬಾ ವಿರುದ್ಧ ಬೆಂಗಳೂರು ಬುಲ್ಸ್‌ಗೆ ಗೆಲುವು!

ಪಾಟ್ನಾ ಪೈರೇಟ್ಸ್‌ ಮುನ್ನಡೆ: 
ಹಿಂದಿನ ಪಂದ್ಯದಲ್ಲಿ ಜಯದ ಖಾತೆ ತೆರೆದು ಆತ್ಮವಿಶ್ವಾಸವನ್ನು ಇಮ್ಮಡಿ ಮಾಡಿಕೊಂಡಿದ್ದ ಪಾಟ್ನಾ ಪೈರೇಟ್ಸ್‌ ತಂಡ ಬೆಂಗಳೂರು ಬುಲ್ಸ್‌ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 19-10 ಅಂಕಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ಉತ್ತಮ ರೈಡಿಂಗ್‌ ಮತ್ತು ಟ್ಯಾಕಲ್‌ ಪ್ರದರ್ಶನ ನೀಡಿದ ಪಾಟ್ನಾ ತಂಡ ಪಂದ್ಯ ಆರಂಭಗೊಂಡ 9 ನಿಮಿಷದಲ್ಲಿಯೇ ಬೆಂಗಳೂರು ತಂಡವನ್ನು ಆಲೌಟ್‌ ಮಾಡಿ ಪ್ರಭುತ್ವ ಸಾಧಿಸಿತು. ರೈಡಿಂಗ್‌ನಲ್ಲಿ ರೋಹಿತ್‌ ಗುಲಿಯಾ (4) ಮತ್ತು ಸಚಿನ್‌ (6) ಉತ್ತಮ ಪ್ರದರ್ಶನ ತೋರಿ ಪ್ರತಿಯೊಂದು ಹಂತದಲ್ಲೂ ತಂಡದ ಮುನ್ನಡೆಗೆ ನೆರವಾದರು. ನಾಯಕ ಮಹೆಂದರ್‌ ಸಿಂಗ್‌ ಟ್ಯಾಕಲ್‌ನಲ್ಲಿ ಹಾಗೂ ಭರತ್‌ ರೈಡಿಂಗ್‌ನಲ್ಲಿ ತಲಾ 3 ಅಂಕ ಗಳಿಸುವ ಮೂಲಕ ಬೆಂಗಳೂರು ಬುಲ್ಸ್‌ ಸಮರ್ಥ ಹೋರಾಟ ನೀಡಿತು. ಹಿಂದಿನ ಪಂದ್ಯದಲ್ಲಿ ಇದೇ ರೀತಿ ಹಿನ್ನಡೆ ಕಂಡಿದ್ದ ಬೆಂಗಳೂರು ದ್ವಿತಿಯಾರ್ಧದಲ್ಲಿ ದಿಟ್ಟ ಹೋರಾಟ ನೀಡಿ ಪಂದ್ಯ ಗೆದ್ದುಕೊಂಡಿತ್ತು. ಪಾಟ್ನಾ ಪೈರೇಟ್ಸ್‌ ಪರ ನೀರಜ್‌ ಕುಮಾರ್‌ ಹಾಗೂ ಮನೀಶ್‌ ಟ್ಯಾಕಲ್‌ನಲ್ಲಿ ತಲಾ 2 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು.

ಕಳೆದ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಗೆಲುವು
ಕಳೆದ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಬೆಂಗಳೂರು ಬುಲ್ಸ್ 42-32 ಅಂತರದಲ್ಲಿ ಗೆಲುವು ದಾಖಲಿಸಿತ್ತು. ಹೋರಾಟ ನೀಡಿದ ಬೆಂಗಳೂರು ಬುಲ್ಸ್‌ ಆರಂಭದಲ್ಲೇ ಯು ಮುಂಬಾ ತಂಡವನ್ನು ಆಲೌಟ್‌ ಮಾಡಿ ಅಂಕ ಸಂಪಾದಿಸಿತ್ತು. ರೋಚಕ ಹೋರಾಟದಲ್ಲಿ ಬೆಂಗಳೂರು 10 ಅಂಕಗಳ ಅಂತರದಲ್ಲಿ ಪಂದ್ಯ ಗೆದ್ದುಕೊಂಡಿತ್ತು.

ಪಿಂಕ್‌ ಪ್ಯಾಂಥರ್ಸ್‌, ಗುಜರಾತ್‌ ಜಯಂಟ್ಸ್‌ ತಂಡಗಳಿಗೆ ಜಯ
 ಅಕ್ಟೋಬರ್‌ 22 ರಂದು ನಡೆದ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಮತ್ತು ಗುಜರಾತ್‌ ಜಯಂಟ್ಸ್‌ ತಂಡಗಳು ಜಯ ಗಳಿಸಿವೆ.
ದಿನದ ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ತೆಲುಗು ಟೈಟಾನ್ಸ್‌ ವಿರುದ್ಧ 51-27 ಅಂತರದಲ್ಲಿ ಜಯ ಗಳಿಸಿದರೆ, ಮೂರನೇ ಪಂದ್ಯದಲ್ಲಿ ಗುಜರಾತ್‌ ಜಯಂಟ್ಸ್‌ ತಂಡ ಹರಿಯಾಣ ಸ್ಟೀಲರ್ಸ್‌ ವಿರುದ್ಧ 42-38 ಅಂತರದಲ್ಲಿ ಜಯ ಗಳಿಸಿತು.

Latest Videos
Follow Us:
Download App:
  • android
  • ios