ಮುಂಬೈ: ಚೊಚ್ಚಲ ಬಾರಿಗೆ ಪ್ರೊ ಕಬಡ್ಡಿ ಚಾಂಪಿಯನ್‌ ಆದ ಬೆಂಗಳೂರು ಬುಲ್ಸ್‌, ರಾತ್ರಿ ಇಡೀ ಪಾರ್ಟಿ ಮಾಡಿ ಸಂಭ್ರಮಿಸಿತು ಎಂದು ತಂಡದ ಯುವ ರೈಡರ್‌ ಸುಮಿತ್‌ ಸಿಂಗ್‌ ಹೇಳಿದರು. 

ಸೋಮವಾರ ಇಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಬುಲ್ಸ್‌ ಸಂಭ್ರಮಾಚರಣೆಯ ವಿಷಯ ಬಹಿರಂಗಗೊಳಿಸಿದ ಅವರು, ‘ಪ್ರಶಸ್ತಿ ಗೆದ್ದಿದ್ದು ಎಲ್ಲಾ ಆಟಗಾರರಿಗೂ ಬಹಳಷ್ಟುಸಂತಸ ಮೂಡಿಸಿತು. ನಮ್ಮ ಪರಿಶ್ರಮಕ್ಕೆ ಫಲ ಸಿಕ್ಕಿದ್ದಕ್ಕೆ ಹೆಮ್ಮೆ ಎನಿಸಿತು. ರಾತ್ರಿ ಪೂರ್ತಿ ಪಾರ್ಟಿ ಮಾಡುತ್ತಾ ಗೆಲುವಿನ ಸಂಭ್ರಮ ಆಚರಿಸಿದೆವು’ ಎಂದು ಸುಮಿತ್‌ ಹೇಳಿದರು.

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಚಾಂಪಿಯನ್

ಪ್ರೊ ಕಬಡ್ಡಿ 7ನೇ ಆವೃತ್ತಿ ಜುಲೈನಲ್ಲಿ ಆರಂಭಗೊಳ್ಳಲಿದ್ದು, ಬುಲ್ಸ್‌ ಮುಂದಿನ ಆವೃತ್ತಿಗೆ ತಯಾರಿ ನಡೆಸಲು ಶೀಘ್ರದಲ್ಲೇ ತರಬೇತಿ ಶಿಬಿರ ಆರಂಭಿಸಲಿದೆ ಎನ್ನುವ ವಿಷಯವನ್ನು ಸುಮಿತ್‌ ಬಹಿರಂಗಗೊಳಿಸಿದರು. ‘ನಾವು ಹಾಲಿ ಚಾಂಪಿಯನ್‌. ಮುಂದಿನ ವರ್ಷ ಟ್ರೋಫಿ ಉಳಿಸಿಕೊಳ್ಳಲು ಈಗಿನಿಂದಲೇ ತಯಾರಿ ಆರಂಭಿಸುತ್ತೇವೆ. ಸದ್ಯದಲ್ಲೇ ತಂಡದ ಶಿಬಿರ ಆರಂಭಗೊಳ್ಳಲಿದೆ’ ಎಂದರು.

ಆರನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬಲಾಢ್ಯ ಗುಜರಾತ್ ಫಾರ್ಚೂನ್’ಜೈಂಟ್ಸ್ ತಂಡವನ್ನು ಮಣಿಸಿದ ರೋಹಿತ್ ಕುಮಾರ್ ನೇತೃತ್ವದ ಬೆಂಗಳೂರು ಬುಲ್ಸ್ ಚೊಚ್ಚಲ ಪ್ರಶಸ್ತಿ ಜಯಿಸಿ ಸಂಭ್ರಮಿಸಿದೆ.