ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸಿಂಧು, ಶರತ್ ಕಮಲ್ ಭಾರತದ ಧ್ವಜಧಾರಿ
ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು, ಭಾರತದ ಧ್ವಜಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ: ಒಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದಿರುವ ಭಾರತದ ಏಕೈಕ ಮಹಿಳೆ ಖ್ಯಾತಿಯ ತಾರಾ ಶಟ್ಲರ್ ಪಿ.ವಿ.ಸಿಂಧು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಧ್ವಜಧಾರಿ ಆಗಿರಲಿದ್ದಾರೆ. ಅವರು ಟೇಬಲ್ ಟೆನಿಸ್ ಪಟು ಶರತ್ ಕಮಾಲ್ ಜೊತೆ ಭಾರತದ ಧ್ವಜ ಹಿಡಿದು ಪಥಸಂಚಲನದಲ್ಲಿ ಸಾಗಲಿದ್ದಾರೆ.
ಇದನ್ನು ಸೋಮವಾರ ಭಾರತೀಯ ಒಲಿಂಪಿಕ್ ಸಂಸ್ಥೆ ಮುಖ್ಯಸ್ಥೆ ಪಿ.ಟಿ.ಉಷಾ ಪ್ರಕಟಿಸಿದ್ದಾರೆ. ಇನ್ನು, ಮೇರಿ ಕೋಮ್ ಬದಲು ಲಂಡನ್ ಒಲಿಂಪಿಕ್ ಕಂಚು ವಿಜೇತ ಶೂಟರ್ ಗಗನ್ ನಾರಂಗ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ. 6 ಬಾರಿ ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್‌ರನ್ನು ಈ ಮೊದಲು ಮುಖ್ಯಸ್ಥೆಯಾಗಿ ಆಯ್ಕೆ ಮಾಡಲಾಗಿದ್ದರೂ, ಏಪ್ರಿಲ್ ನಲ್ಲಿ ತಮ್ಮ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದರು. ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 26ರಂದು ಆರಂಭಗೊಳ್ಳಲಿದೆ
ಮಾರಿಗುಡಿಯಲ್ಲಿ ಗ್ರೇಟ್ ಕ್ಯಾಚ್ ಹಿಡಿದು ವಿಶ್ವಕಪ್ ಗೆಲ್ಲಿಸಿದ, ತುಳುನಾಡಿನ ಅಳಿಯ ಸೂರ್ಯಕುಮಾರ್ ಯಾದವ್
ಭಾರತೀಯ ಅಥ್ಲೀಟ್‌ಗಳು ಒಲಿಂಪಿಕ್ಸ್‌ಗೆ ಫಿಟ್: ಮುಖ್ಯ ವೈದ್ಯಾಧಿಕಾರಿ ಡಾ.ದಿನ್‌ಶಾ
ನವದೆಹಲಿ: ನೀರಜ್ ಚೋಪ್ರಾ ಸೇರಿದಂತೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಭಾರತದ ಎಲ್ಲಾ ಅಥ್ಲೀಟ್‌ಗಳು ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದು ಭಾರತ ಒಲಿಂಪಿಕ್ಸ್ ಪಡೆಯ ಮುಖ್ಯ ವೈದ್ಯಾಧಿಕಾರಿ ಡಾ.ದಿನ್‌ಶಾ ಪರ್ದೀವಾಲಾ ಹೇಳಿದ್ದಾರೆ. ಒಲಿಂಪಿಕ್ಸ್‌ನಲ್ಲಿ ದಿನ್‌ಶಾ ಒಳಗೊಂಡ 13 ವೈದ್ಯರ ತಂಡ ಭಾರತದ ಅಥ್ಲೀಟ್‌ಗಳ ಮೇಲೆ ನಿಗಾ ಇಡಲಿದೆ.
ವಿಂಬಲ್ಡನ್ ಗ್ರ್ಯಾನ್‌ಸ್ಲಾಂ: ವಿಶ್ವ ನಂ .1 ಸಿನ್ನರ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ
‘ಎಲ್ಲಾ ಅಥ್ಲೀಟ್‌ಗಳು ಒಲಿಂಪಿಕ್ಸ್‌ನಲ್ಲಿ ಆಡಲು ಫಿಟ್ ಆಗಿದ್ದಾರೆ. ಕೆಲ ಅಥ್ಲೀಟ್‌ಗಳಿಗೆ ಸಣ್ಣ ಮಟ್ಟಿನ ಗಾಯಗಳಿವೆ. ಆದರೆ ಒಲಿಂಪಿಕ್ಸ್‌ನಲ್ಲಿ ಆಡಲು ಫಿಟ್ ಇದ್ದಾರೆ. ಇದೇ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳಿಗಾಗಿಯೇ ಚಿಕಿತ್ಸೆ ಮತ್ತು ಪುನಶ್ಚೇತನ ಕೇಂದ್ರ ಇರಲಿದೆ. ಇದು ದಿನದ 24 ಗಂಟೆಯೂ ತೆರೆದಿರುತ್ತದೆ. ಅಲ್ಲದೆ ಕ್ರೀಡಾಕೂಟದಲ್ಲಿ ಅಥ್ಲೀಟ್‌ಗಳ ನಿದ್ದೆಗೆ ಸಮಸ್ಯೆ ಉಂಟಾಗದಿರಲು ವಿಶೇಷ ವೈದ್ಯರನ್ನು ನೇಮಕ ಮಾಡಿದ್ದೇವೆ’ ಎಂದು ದಿನ್‌ಶಾ ತಿಳಿಸಿದ್ದಾರೆ.