Asianet Suvarna News Asianet Suvarna News

ಪ್ರತಿನಿತ್ಯ 8 ತಾಸು ಚೆಸ್‌ ಆಡುತ್ತೇನೆ, ವಿಶ್ವ ಚಾಂಪಿಯನ್‌ ಆಗುವ ಗುರಿ ಇದೆ: ಪ್ರಣವ್ ಆನಂದ್‌

ಭಾರತದ 76ನೇ ಗ್ರ್ಯಾಂಡ್‌ಮಾಸ್ಟರ್‌ ಪ್ರಣವ್ ಆನಂದ್‌ ಸಂದರ್ಶನ
15ನೇ ವಯಸ್ಸಿನಲ್ಲೇ ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ ಪಟ್ಟ ಅಲಂಕರಿಸಿದ ಪ್ರಣವ್
ತಮಿಳುನಾಡು ಮೂಲದ ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಪ್ರಣವ್ ಪೋಷಕರು

Paly 8 hour chess every day and my aim is to win World Chess Championship says Pranav Anand kvn
Author
First Published Sep 21, 2022, 10:55 AM IST

- ನಾಸಿರ್‌ ಸಜಿಪ, ಕನ್ನಡಪ್ರಭ

ಆತನಿಗಾಗ ಕೇವಲ 7 ವರ್ಷ. ಎಳೆವಯಸ್ಸಿನಲ್ಲೇ ಆತನ ಚೆಸ್‌ ಆಟದ ವೈಖರಿ ಗಮನಿಸಿದ ಪೋಷಕರು ಇನ್ನೂ ಹೆಚ್ಚು ಆಡುವಂತೆ ಹುರಿದುಂಬಿಸಿದರು. ವಿಶೇಷ ಕೌಶಲ್ಯ ಕಂಡ ಪೋಷಕರಿಗೆ ಮಗನಿಗೆ ಚದುರಂಗದಲ್ಲಿ ಉಜ್ವಲ ಭವಿಷ್ಯವಿದೆ ಎಂದು ಮನಗಂಡಿದ್ದರು. ಕಲಿಕೆಯ ನಡುವೆಯೂ ಚೆಸ್‌ನಲ್ಲೂ ಮುಂದುವರಿದ, ವಿವಿಧ ಟೂರ್ನಿಗಳಲ್ಲಿ ಆಡಿ ರಾಷ್ಟ್ರೀಯ ಮಟ್ಟದಲ್ಲೂ ಮಿಂಚಿದ ಆತ ಈಗ ಭಾರತದ 76ನೇ ಗ್ರ್ಯಾಂಡ್‌ಮಾಸ್ಟರ್‌.

ಹೆಸರು ಪ್ರಣವ್‌ ಆನಂದ್‌. ತಮಿಳುನಾಡು ಮೂಲದ ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ, ಹಾರ್ಡ್‌ವೇರ್‌ ಎಂಜಿನಿಯರ್‌ ಆಗಿರುವ ಆನಂದ್‌ ಅನಂತರಾಮನ್‌-ಅಪರ್ಣಾ ದಂಪತಿಯ 15 ವರ್ಷದ ಪುತ್ರ. ಈಗಾಗಲೇ ವಿಶ್ವ ಅಂಡರ್‌-16, ಏಷ್ಯಾ ಅ-16 ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿರುವ ಪ್ರಣವ್‌ ತನ್ನ ಆಟ, ಪೋಷಕರ ಪ್ರೋತ್ಸಾಹ, ಮುಂದಿನ ಗುರಿ ಬಗ್ಗೆ ‘ಕನ್ನಡಪ್ರಭ’ದ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ.

ಗ್ರ್ಯಾಂಡ್‌ಮಾಸ್ಟರ್‌ವರೆಗಿನ ಪಯಣ ಹೇಗಿತ್ತು?

ಚಿಕ್ಕಂದಿನಲ್ಲೇ ಚೆಸ್‌ನಲ್ಲಿ ಆಸಕ್ತಿ ಇತ್ತು. ಪೋಷಕರು ಕೂಡಾ ಉತ್ತಮ ಬೆಂಬಲ ನೀಡಿದರು. ವಿವಿಧ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಸಹಕರಿಸಿದರು. ಗ್ರ್ಯಾಂಡ್‌ಮಾಸ್ಟರ್‌ ಪಟ್ಟಸಿಕ್ಕಿದ್ದಕ್ಕೆ ಅತೀವ ಸಂತೋಷವಿದೆ. ಮುಂದೆ ಇನ್ನಷ್ಟುಸಾಧಿಸುವ ಗುರಿ ಇದೆ.

ಎಸೆಸೆಲ್ಸಿ ನಡುವೆ ಅಭ್ಯಾಸ ಕಷ್ಟವಾಗುತ್ತಿಲ್ಲವೇ?

ಇಲ್ಲ. ದಿನಕ್ಕೆ 6ರಿಂದ 8 ಗಂಟೆ ಅಭ್ಯಾಸ ನಡೆಸುತ್ತೇನೆ. ಕಲಿಕೆಗೆ ಸಮಯ ಹೊಂದಿಸಿ ಉಳಿದ ಸಮಯ ಚೆಸ್‌ ಆಡುತ್ತೇನೆ. ಟೈಂ ಮ್ಯಾನೇಜ್‌ಮೆಂಟ್‌ ಮಾಡಲು ಕೋಚ್‌, ಪೋಷಕರು ಸಹಕರಿಸುತ್ತಾರೆ.

15 ವರ್ಷದ ಬೆಂಗಳೂರು ಬಾಲಕ ಪ್ರಣವ್ ಆನಂದ್ ಈಗ ಚೆಸ್ ಗ್ರ್ಯಾಂಡ್ ಮಾಸ್ಟರ್..!

ಕೋವಿಡ್‌ನಿಂದ ಜಿಎಂ ಪಟ್ಟತಡವಾಯಿತೇ?

2020ರಲ್ಲೇ ಇಂಟರ್‌ನ್ಯಾಷನಲ್‌ ಮಾಸ್ಟರ್‌(ಐಎಂ) ನಾಮ್‌ರ್‍ ಪೂರ್ಣಗೊಳಿಸಿದ್ದೆ. ಕೋವಿಡ್‌ನಿಂದಾಗಿ 1 ವರ್ಷ ತಡವಾಗಿ ಐಎಂ ಪಟ್ಟಲಭಿಸಿತು. ಗ್ರ್ಯಾಂಡ್‌ಮಾಸ್ಟರ್‌ ಪಟ್ಟಕ್ಕೂ ಕೋವಿಡ್‌ ಅಡ್ಡಿಯಾಯಿತು. ಇಲ್ಲದಿದ್ದರೆ ಕನಿಷ್ಠ ಒಂದು ವರ್ಷ ಮೊದಲೇ ಜಿಎಂ ಪಟ್ಟಸಿಗುತ್ತಿತ್ತು.

ಮುಂದಿನ ಗುರಿ ಏನು?

ಸ್ಥಿರತೆ ಕಾಪಾಡಿಕೊಂಡು 2600 ಎಲೊ ಅಂಕ ಪಡೆಯುವ ಗುರಿ ಇದೆ. ವಿಶ್ವ ಚಾಂಪಿಯನ್‌ಶಿಪ್‌ ನನ್ನ ಮುಖ್ಯ ಗುರಿ. ಮುಂದೊಂದು ದಿನ ಅದನ್ನು ಸಾಧಿಸುವ ಭರವಸೆ ಇದೆ. ಸದ್ಯಕ್ಕೆ ಕಲಿಕೆಯ ಮೇಲೆ ಗಮನ ಹರಿಸಬೇಕಿದೆ. ವಿಶ್ವನಾಥನ್‌ ಆನಂದ್‌ ಮತ್ತು ಮ್ಯಾಗ್ನಸ್‌ ಕಾಲ್‌ರ್‍ಸನ್‌ ನನ್ನ ಫೇವರಿಟ್‌ ಆಟಗಾರರು.

ಪ್ರಣವ್‌ 7ನೇ ವಯಸ್ಸಿನಿಂದ ಚೆಸ್‌ ಆಡುತ್ತಿದ್ದಾನೆ. ಆಗಲೇ ಅವನಲ್ಲಿ ಕೌಶಲ್ಯ ಇತ್ತು. ಬೆಂಗಳೂರಿನ ಚೆಸ್‌ ಶೂಟ್ಸ್‌ ಅಕಾಡೆಮಿಯಲ್ಲಿ ಜಯರಾಂ ರಾಮಣ್ಣ ಅವರ ಬಳಿ ಮೊದಲು ತರಬೇತಿ ಪಡೆಯುತ್ತಿದ್ದ. ಈಗ ಚೆನ್ನೈನಲ್ಲಿ ಕೋಚ್‌ ವಿ.ಸರವಣನ್‌ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದಾನೆ. ಮಗನ ಸಾಧನೆ ಬಗ್ಗೆ ತುಂಬಾ ಖುಷಿ, ಹೆಮ್ಮೆ ಇದೆ. - ಆನಂದ್‌ ಅನಂತ ನಾರಾಯಣನ್‌, ಪ್ರಣವ್‌ ತಂದೆ
 

Follow Us:
Download App:
  • android
  • ios