Asianet Suvarna News Asianet Suvarna News

ಅಯ್ಯೋ ದೇವ್ರೇ... ಸಹ ಬಾಕ್ಸರ್‌ನ ಬ್ಯಾಗ್‌ನಿಂದ ಹಣ ಕದ್ದು ಪಾಕ್ ಬಾಕ್ಸರ್‌ ಪರಾರಿ!

ಲಾರಾ ಇಕ್ರಮ್‌ ಎನ್ನುವ ಬಾಕ್ಸರ್‌ ಅಭ್ಯಾಸಕ್ಕೆ ತೆರಳಿದ್ದಾಗ ಝೊಯೆಬ್‌ ರಶೀದ್‌ ಎನ್ನುವ ಬಾಕ್ಸರ್‌ ಒಬ್ಬ ಹೋಟೆಲ್‌ ಸಿಬ್ಬಂದಿಯಿಂದ ಲಾರಾ ಅವರ ರೂಂ ಕೀ ಪಡೆದು, ಬ್ಯಾಗ್‌ನಿಂದ ಹಣ ಕದ್ದು ಪರಾರಿಯಾಗಿದ್ದಾನೆ. ಆತನಿಗಾಗಿ ಸ್ಥಳೀಯ ಪೊಲೀಸರು ಹುಡುಕಾಟ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

Pakistani Boxer Zohaid Rasheed missing in Italy after Stealing money from Teammate kvn
Author
First Published Mar 6, 2024, 10:27 AM IST

ಕರಾಚಿ(ಮಾ.06): : ಇಟಲಿಯಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ಅರ್ಹತಾ ಸುತ್ತಿನ ಬಾಕ್ಸಿಂಗ್‌ ಕೂಟದಲ್ಲಿ ಪಾಲ್ಗೊಂಡಿರುವ ಪಾಕಿಸ್ತಾನದ ಬಾಕ್ಸರ್‌ ಒಬ್ಬ, ತಮ್ಮ ದೇಶದವರೇ ಆದ ಮಹಿಳಾ ಬಾಕ್ಸರ್‌ ಒಬ್ಬರ ಬ್ಯಾಗ್‌ನಿಂದ ಹಣ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. 

ಲಾರಾ ಇಕ್ರಮ್‌ ಎನ್ನುವ ಬಾಕ್ಸರ್‌ ಅಭ್ಯಾಸಕ್ಕೆ ತೆರಳಿದ್ದಾಗ ಝೊಯೆಬ್‌ ರಶೀದ್‌ ಎನ್ನುವ ಬಾಕ್ಸರ್‌ ಒಬ್ಬ ಹೋಟೆಲ್‌ ಸಿಬ್ಬಂದಿಯಿಂದ ಲಾರಾ ಅವರ ರೂಂ ಕೀ ಪಡೆದು, ಬ್ಯಾಗ್‌ನಿಂದ ಹಣ ಕದ್ದು ಪರಾರಿಯಾಗಿದ್ದಾನೆ. ಆತನಿಗಾಗಿ ಸ್ಥಳೀಯ ಪೊಲೀಸರು ಹುಡುಕಾಟ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

Ranji Trophy Semifinal ಜಯಕ್ಕಾಗಿ ವಿದರ್ಭ-ಮ.ಪ್ರದೇಶ ಹೋರಾಟ

"ಝೊಯೆಬ್‌ ರಶೀದ್‌ ಮಾಡಿರುವ ಈ ಕೃತ್ಯವು ಬಾಕ್ಸಿಂಗ್ ಫೆಡರೇಷನ್ ಹಾಗೂ ದೇಶಕ್ಕೆ ಮುಜುಗರವನ್ನುಂಟು ಮಾಡಿದೆ. ಇವರು ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ಪಾಲ್ಗೊಳ್ಳಲು ಆಯೋಜನೆಗೊಂಡಿದ್ದ ಅರ್ಹತಾ ಸುತ್ತಿನ ಬಾಕ್ಸಿಂಗ್‌ ಕೂಟದಲ್ಲಿ ಪಾಲ್ಗೊಂಡ ಐವರು ಬಾಕ್ಸರ್‌ಗಳಲ್ಲಿ ಒಬ್ಬರಾಗಿದ್ದರು" ಎಂದು ನ್ಯಾಷನಲ್ ಫೆಡರೇಷನ್ ಸೆಕ್ರೇಟರಿ ಕರ್ನಲ್ ನಾಸಿರ್ ಅಹಮದ್ ಹೇಳಿದ್ದಾರೆ.

ಕಳೆದ ವರ್ಷ ನಡೆದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಕೂಟದಲ್ಲಿ ಝೊಯೆಬ್‌ ರಶೀದ್‌ ಕಂಚಿನ ಪದಕ ಜಯಿಸುವ ಮೂಲಕ ಪಾಕಿಸ್ತಾನದ ಭರವಸೆಯ ಬಾಕ್ಸರ್ ಎನಿಸಿಕೊಂಡಿದ್ದರು.

ಬಾಕ್ಸಿಂಗ್‌: ಭಾರತದ ಲಕ್ಷ್ಯ ಮೊದಲ ಸುತ್ತಲ್ಲೇ ಔಟ್‌

ಬುಸ್ಟೋ ಅರ್ಸಿಜಿಯೊ(ಇಟಲಿ): ಹಾಲಿ ರಾಷ್ಟ್ರೀಯ ಚಾಂಪಿಯನ್‌ ಲಕ್ಷ್ಯ ಚಹರ್‌ ಇಲ್ಲಿ ನಡೆಯುತ್ತಿರುವ ಒಲಿಂಪಿಕ್‌ ಅರ್ಹತಾ ಸುತ್ತಿನ ಬಾಕ್ಸಿಂಗ್‌ ಟೂರ್ನಿಯ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಪುರುಷರ 80 ಕೆ.ಜಿ. ವಿಭಾಗದ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಇರಾನ್‌ನ ಘೆಶ್ಲಾಘಿ ಮೇಯ್ಮಸ್‌ ವಿರುದ್ಧ ಸೋಲುಂಡರು. ಇದರೊಂದಿಗೆ ಭಾರತದ ನಾಲ್ವರು ಬಾಕ್ಸರ್‌ಗಳು ಟೂರ್ನಿಯ ಮೊದಲ ಸುತ್ತಿನಲ್ಲೇ ಹೊರಬಿದ್ದಂತಾಗಿದೆ. ಕೂಟದಲ್ಲಿ ಸೆಮಿಫೈನಲ್‌ ಪ್ರವೇಶಿಸಿದರೆ ಒಲಿಂಪಿಕ್ಸ್‌ಗೆ ಅರ್ಹತೆ ಸಿಗಲಿದೆ.

ಚರ್ಚೆಗೆ ಗ್ರಾಸವಾದ ಯುಜುವೇಂದ್ರ ಚಹಾಲ್​ ಪತ್ನಿಯ ಪೋಸ್ಟ್..! ಕಹಾನಿಯಲ್ಲಿ ಮತ್ತೆ ಹೊಸ ಟ್ವಿಸ್ಟ್?

ಫ್ರೆಂಚ್‌ ಓಪನ್‌: 2ನೇ ಸುತ್ತಿಗೆ ಲಕ್ಷ್ಯ, ಸಾತ್ವಿಕ್‌-ಚಿರಾಗ್‌

ಪ್ಯಾರಿಸ್‌: ಭಾರತದ ತಾರಾ ಶಟ್ಲರ್‌ಗಳಾದ ಲಕ್ಷ್ಯ ಸೇನ್‌, ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಇಲ್ಲಿ ಮಂಗಳವಾರದಿಂದ ಆರಂಭಗೊಂಡ ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಲಕ್ಷ್ಯ, ಜಪಾನ್‌ನ ಕೆಂಟಾ ಸುನೆಯಾಮ ವಿರುದ್ಧ 15-21, 21-15, 21-3 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. 

ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ವಿಶ್ವ ನಂ.1 ಸಾತ್ವಿಕ್‌-ಚಿರಾಗ್‌ ಮಲೇಷ್ಯಾದ ಒಂಗ್‌ ಸಿನ್‌ ಹಾಗೂ ತಿಯೊ ಯಿ ವಿರುದ್ಧ 21-13, 24-22 ಗೇಮ್‌ಗಳಲ್ಲಿ ಗೆದ್ದರು. ಇನ್ನು ಮಹಿಳಾ ಡಬಲ್ಸ್‌ನಲ್ಲಿ ಗಾಯತ್ರಿ ಗೋಪಿಚಂದ್‌ ಹಾಗೂ ತ್ರೀಸಾ ಜಾಲಿ 16-21, 21-19, 21-17 ಗೇಮ್‌ಗಳಲ್ಲಿ ಭಾರತದವರೇ ಆದ ಅಶ್ವಿನಿ ಪೊನ್ನಪ್ಪ-ತನೀಶಾ ಕ್ರಾಸ್ಟೋ ವಿರುದ್ಧ ಗೆದ್ದು 2ನೇ ಸುತ್ತು ಪ್ರವೇಶಿಸಿದರು.

ಬ್ಯಾಡ್ಮಿಂಟನ್‌ಗೆ ನಿವೃತ್ತಿ ಹೇಳಿದ ಸಾಯಿ ಪ್ರಣೀತ್‌..!

ಬಾಕ್ಸಿಂಗ್‌: ಭಾರತದ ಲಕ್ಷ್ಯ ಮೊದಲ ಸುತ್ತಲ್ಲೇ ಔಟ್‌

ಬುಸ್ಟೋ ಅರ್ಸಿಜಿಯೊ(ಇಟಲಿ): ಹಾಲಿ ರಾಷ್ಟ್ರೀಯ ಚಾಂಪಿಯನ್‌ ಲಕ್ಷ್ಯ ಚಹರ್‌ ಇಲ್ಲಿ ನಡೆಯುತ್ತಿರುವ ಒಲಿಂಪಿಕ್‌ ಅರ್ಹತಾ ಸುತ್ತಿನ ಬಾಕ್ಸಿಂಗ್‌ ಟೂರ್ನಿಯ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಪುರುಷರ 80 ಕೆ.ಜಿ. ವಿಭಾಗದ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಇರಾನ್‌ನ ಘೆಶ್ಲಾಘಿ ಮೇಯ್ಮಸ್‌ ವಿರುದ್ಧ ಸೋಲುಂಡರು. ಇದರೊಂದಿಗೆ ಭಾರತದ ನಾಲ್ವರು ಬಾಕ್ಸರ್‌ಗಳು ಟೂರ್ನಿಯ ಮೊದಲ ಸುತ್ತಿನಲ್ಲೇ ಹೊರಬಿದ್ದಂತಾಗಿದೆ. ಕೂಟದಲ್ಲಿ ಸೆಮಿಫೈನಲ್‌ ಪ್ರವೇಶಿಸಿದರೆ ಒಲಿಂಪಿಕ್ಸ್‌ಗೆ ಅರ್ಹತೆ ಸಿಗಲಿದೆ.

Ranji Trophy: ತಮಿಳುನಾಡು ಮಣಿಸಿ 48ನೇ ಬಾರಿ ಫೈನಲ್‌ಗೆ ಮುಂಬೈ..!

ಪಂದ್ಯದ ವೇಳೆ ತಲೆಗೆ ಪೆಟ್ಟು ಬಿದ್ದು ಪಾಕ್‌ನ ಜುಡೋ ಪಟು ಸಾವು

ಕರಾಚಿ: ಪಾಕಿಸ್ತಾನದ ಯುವ ಮಹಿಳಾ ಜುಡೋ ಪಟು ಫಿಜಾ ಶೇರ್‌ ಅಲಿ, ಪಂದ್ಯದ ವೇಳೆ ಎದುರಾಳಿ ತಲೆಗೆ ಒದ್ದ ಕಾರಣ ಅಂಕಣದಲ್ಲೇ ಸಾವನ್ನಪ್ಪಿದ ದುರ್ಘಟನೆ ಖೈಬರ್‌ ಪಖ್ತುನ್ಖ್ವಾದಲ್ಲಿ ನಡೆದಿದೆ. ಸ್ಥಳೀಯ ಟೂರ್ನಿಯ 44 ಕೆ.ಜಿ. ವಿಭಾಗದ ಪಾಲ್ಗೊಂಡಿದ್ದ 20 ವರ್ಷದ ಫಿಜಾ, ಪಂದ್ಯದ ವೇಳೆಯೇ ಕುಸಿದು ಬಿದ್ದಿದ್ದಾರೆ.

Follow Us:
Download App:
  • android
  • ios