Asianet Suvarna News Asianet Suvarna News

ಬ್ಯಾಡ್ಮಿಂಟನ್‌ಗೆ ನಿವೃತ್ತಿ ಹೇಳಿದ ಸಾಯಿ ಪ್ರಣೀತ್‌..!

ಇನ್ನು ಮುಂದೆ ಅಮೆರಿಕದಲ್ಲಿ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ ಕೋಚ್‌ ಆಗಿ ಕಾರ್ಯನಿರ್ವಹಿಸುವುದಾಗಿ ಪ್ರಣೀತ್‌ ತಿಳಿಸಿದ್ದಾರೆ. 2017ರಲ್ಲಿ ಪ್ರಣೀತ್‌ ಸಿಂಗಾಪೂರ ಓಪನ್ ಗೆದ್ದಿದ್ದಾರೆ.

B Sai Praneeth announces retirement from international badminton kvn
Author
First Published Mar 5, 2024, 9:28 AM IST

ನವದೆಹಲಿ(ಮಾ.05): ವಿಶ್ವ ಚಾಂಪಿಯನ್‌ಶಿಪ್‌ ಕಂಚಿನ ಪದಕ ವಿಜೇತ ಭಾರತದ ತಾರಾ ಶಟ್ಲರ್‌ ಸಾಯಿ ಪ್ರಣೀತ್‌ ಅವರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ಗೆ ಸೋಮವಾರ ನಿವೃತ್ತಿ ಘೋಷಿಸಿದ್ದಾರೆ. 31 ವರ್ಷದ ಪ್ರಣೀತ್‌ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಬಳಿಕ ಸತತವಾಗಿ ಗಾಯದಿಂದ ಬಳಲುತ್ತಿದ್ದಾರೆ. 

ಇನ್ನು ಮುಂದೆ ಅಮೆರಿಕದಲ್ಲಿ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ ಕೋಚ್‌ ಆಗಿ ಕಾರ್ಯನಿರ್ವಹಿಸುವುದಾಗಿ ಪ್ರಣೀತ್‌ ತಿಳಿಸಿದ್ದಾರೆ. 2017ರಲ್ಲಿ ಪ್ರಣೀತ್‌ ಸಿಂಗಾಪೂರ ಓಪನ್ ಗೆದ್ದಿದ್ದಾರೆ.

ಇಂದಿನಿಂದ ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌

ಪ್ಯಾರಿಸ್‌: ಫ್ರೆಂಚ್ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿ ಮಂಗಳವಾರದಿಂದ ಆರಂಭಗೊಳ್ಳಲಿದ್ದು, ಮಾಜಿ ಚಾಂಪಿಯನ್‌ ಸಾತ್ವಿಕ್-ಚಿರಾಗ್‌ ಶೆಟ್ಟಿ ಈ ಬಾರಿ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದ್ದಾರೆ. ಪುರುಷರ ಡಬಲ್ಸ್‌ನ ವಿಶ್ವ ನಂ.1 ಜೋಡಿ ಸಾತ್ವಿಕ್‌-ಚಿರಾಗ್‌ ಈ ವರ್ಷ ಚೀನಾ ಮಾಸ್ಟರ್ಸ್‌, ಮಲೇಷ್ಯಾ ಓಪನ್‌, ಇಂಡಿಯಾ ಓಪನ್‌ಗಳಲ್ಲಿ ರನ್ನರ್‌-ಅಪ್‌ ಆಗಿದ್ದು, 2024ರ ಚೊಚ್ಚಲ ಪ್ರಶಸ್ತಿ ತವಕದಲ್ಲಿದ್ದಾರೆ. 

Ranji Trophy: ತಮಿಳುನಾಡು ಮಣಿಸಿ 48ನೇ ಬಾರಿ ಫೈನಲ್‌ಗೆ ಮುಂಬೈ..!

ಇನ್ನು ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ಕಣದಲ್ಲಿರುವ ಏಕೈಕ ಭಾರತೀಯ ಎನಿಸಿಕೊಂಡಿದ್ದು, ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌.ಪ್ರಣಯ್‌, ಲಕ್ಷ್ಯ ಸೇನ್‌, ಕಿದಂಬಿ ಶ್ರೀಕಾಂತ್‌, ಪ್ರಿಯಾನ್ಶು ರಾಜಾವತ್ ಸ್ಪರ್ಧಿಸಲಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ತನಿಶಾ-ಅಶ್ವಿನಿ ಪೊನ್ನಪ್ಪ, ತ್ರೀಸಾ-ಗಾಯತ್ರಿ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ.

ಡಬ್ಲ್ಯುಎಫ್‌ಐ ಎಲೆಕ್ಷನ್‌: ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ) ಚುನಾವಣೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಸೋಮವಾರ ಕೇಂದ್ರ ಸರ್ಕಾರ, ಡಬ್ಲ್ಯುಎಫ್‌ಐ ನೋಟಿಸ್‌ ಜಾರಿಗೊಳಿಸಿದೆ. ಡಿಸೆಂಬರ್‌ನಲ್ಲಿ ಡಬ್ಲ್ಯುಎಫ್‌ಐಗೆ ನಡೆದಿದ್ದ ಚುನಾವಣೆ ಅಕ್ರಮ ಎಂದು ಆರೋಪಿಸಿರುವ ತಾರಾ ಕುಸ್ತಿಪಟುಗಳಾದ ಬಜರಂಗ್‌ ಪೂನಿಯಾ, ಸಾಕ್ಷಿ ಮಲಿಕ್‌, ವಿನೇಶ್‌ ಫೋಗಟ್‌ ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಿದ್ದರು. 

ಚುನಾವಣೆಯಲ್ಲಿ ಕ್ರೀಡಾ ನಿಯಮ ಉಲ್ಲಂಘನೆಯಾಗಿದೆ. ಹೀಗಾಗಿ ಚುನಾವಣೆಯನ್ನು ಅಸಿಂಧುಗೊಳಿಸಬೇಕೆಂದು ಎಂದು ಕುಸ್ತಿಪಟುಗಳು ಕೋರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಸಚಿನ್‌ ದತ್ತಾ ಅವರು ಈ ಬಗ್ಗೆ ಉತ್ತರಿಸುವಂತೆ ಸರ್ಕಾರ, ಸಂಜಯ್‌ ಸಿಂಗ್‌ ನೇತೃತ್ವದ ಡಬ್ಲ್ಯುಎಫ್‌ಐ ಹಾಗೂ ಸ್ವತಂತ್ರ ಸಮಿತಿಗೆ ನೋಟಿಸ್‌ ನೀಡಿದೆ. ಮುಂದಿನ ವಿಚಾರಣೆಯನ್ನು ಮಾ.7ಕ್ಕೆ ನಿಗದಿಪಡಿಸಿದೆ.

ಚರ್ಚೆಗೆ ಗ್ರಾಸವಾದ ಯುಜುವೇಂದ್ರ ಚಹಾಲ್​ ಪತ್ನಿಯ ಪೋಸ್ಟ್..! ಕಹಾನಿಯಲ್ಲಿ ಮತ್ತೆ ಹೊಸ ಟ್ವಿಸ್ಟ್?

ಭಾರತ ಟಿಟಿ ತಂಡಗಳು ಮೊದಲ ಸಲ ಒಲಿಂಪಿಕ್ಸ್‌ಗೆ

ನವದೆಹಲಿ: ಭಾರತ ಪುರುಷ ಹಾಗೂ ಮಹಿಳಾ ಟೇಬಲ್‌ ಟೆನಿಸ್‌ ತಂಡಗಳು ಚೊಚ್ಚಲ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿ ಇತಿಹಾಸ ಸೃಷ್ಟಿಸಿವೆ. ಇತ್ತೀಚೆಗಷ್ಟೇ ವಿಶ್ವ ಟೇಬಲ್‌ ಟೆನಿಸ್‌ ಟೀಂ ಚಾಂಪಿಯನ್‌ಶಿಪ್‌ನ ಉಭಯ ತಂಡಗಳೂ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲುಂಡಿದ್ದವು. ಕ್ವಾರ್ಟರ್‌ ಫೈನಲ್‌ಗೇರಿದ್ದರೆ ನೇರವಾಗಿ ಒಲಿಂಪಿಕ್ಸ್‌ಗೇರಬಹುದಿತ್ತು. ಆದರೆ ವಿಶ್ವ ರ್‍ಯಾಂಕಿಂಗ್ ಆಧಾರದಲ್ಲೂ ಕೆಲ ತಂಡಗಳು ಒಲಿಂಪಿಕ್ಸ್‌ ಪ್ರವೇಶ ಪಡೆಯಲಿವೆ. ಈ ಮೂಲಕ ಭಾರತದ 2 ತಂಡಗಳಿಗೂ ಪ್ಯಾರಿಸ್‌ ಒಲಿಂಪಿಕ್ಸ್‌ ಟಿಕೆಟ್‌ ಲಭಿಸಿವೆ. ಸದ್ಯ ರ್‍ಯಾಂಕಿಂಗ್‌ನಲ್ಲಿ ಪುರುಷರ ತಂಡ 15ನೇ, ಮಹಿಳಾ ತಂಡ 13ನೇ ಸ್ಥಾನದಲ್ಲಿವೆ.

Follow Us:
Download App:
  • android
  • ios