National Games 2022: ಈಜಿನಲ್ಲಿ ಕರ್ನಾಟಕ ಮತ್ತೊಮ್ಮೆ ಪ್ರಾಬಲ್ಯ
ನ್ಯಾಷನಲ್ ಗೇಮ್ಸ್ ಕ್ರೀಡಾಕೂಟದಲ್ಲಿ ಕರ್ನಾಟದ ಈಜುಪಟುಗಳ ಮಿಂಚಿನ ಪ್ರದರ್ಶನ
4 ಕೂಟ ದಾಖಲೆಯೊಂದಿಗೆ, 4 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿನ ಪದಕ ರಾಜ್ಯದ ಸ್ವಿಮ್ಮರ್
ರಿಲೇಯಲ್ಲಿ ಕರ್ನಾಟಕಕ್ಕೆ ಒಲಿದ ಕಂಚು
ಅಹಮದಾಬಾದ್(ಅ.03): 36ನೇ ರಾಷ್ಟ್ರೀಯ ಕ್ರೀಡಾಕೂಟದದಲ್ಲಿ ಕರ್ನಾಟಕದ ಈಜುಪಟುಗಳು ಪ್ರಾಬಲ್ಯ ಮೆರೆದಿದ್ದಾರೆ. ಭಾನುವಾರ ರಾಜ್ಯದ ಸ್ಪರ್ಧಿಗಳು 4 ಕೂಟ ದಾಖಲೆಯೊಂದಿಗೆ, 4 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿನ ಪದಕ ಗಳಿಸಿದರು. 200 ಮೀ. ಫ್ರೀಸ್ಟೈಲ್ ಪುರುಷರ ವಿಭಾಗದಲ್ಲಿ ಅನೀಶ್ ಗೌಡ 1 ನಿ.51.88 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರು. ಇದರೊಂದಿಗೆ ಕೇರಳದ ಆ್ಯರನ್ ಡಿಸೋಜಾ (1 ನಿ. 52.06 ಸೆ.) ನಿರ್ಮಿಸಿದ್ದ ದಾಖಲೆ ಮುರಿದರು. ಮಹಿಳಾ ವಿಭಾಗದಲ್ಲಿ ಹಷಿಕಾ ರಾಮಚಂದ್ರ 2 ನಿ.7.8 ಸೆಕೆಂಡುಗಳ ಸಾಧನೆಯೊಂದಿಗೆ ಚಿನ್ನ ತಮ್ಮದಾಗಿಸಿ, ಕೇರಳದ ಶಿವಾನಿ ಕಟಾರಿಯಾ (2 ನಿ. 7.46 ಸೆ.) ದಾಖಲೆ ಮುರಿದರು. ರಾಜ್ಯದ ಧೀನಿಧಿ ದೇಸಿಂಗು ಬೆಳ್ಳಿ ಜಯಿಸಿದರು.
ಮಹಿಳೆಯರ 100 ಮೀ. ಬಟರ್‌ಫ್ಲೈನಲ್ಲಿ ಅಸ್ಸಾಂನ ಆಸ್ತಾ ಚೌಧರಿ (1 ನಿ. 3.37ಸೆ.) ಚಿನ್ನ ಗೆದ್ದರೆ, ರಾಜ್ಯದ ತನಿಶಿ ಗುಪ್ತಾ, ನೀನಾ ವೆಂಕಟೇಶ್ ಕ್ರಮವಾಗಿ ಬೆಳ್ಳಿ, ಕಂಚು ಪಡೆದರು. ಪುರುಷರ 4*100 ಮೀ. ಫ್ರೀಸ್ಟೈಲ್‌ನಲ್ಲಿ ಅನೀಶ್, ಸಂಭವ್, ಪೃಥ್ವಿ, ಶ್ರೀಹರಿ ನಟರಾಜ್ ಅವರನ್ನೊಳಗೊಂಡ ತಂಡ ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿತು. ರಿಧಿಮಾ, ರುಜುಲಾ, ಲಿತೇಶಾ, ನೀನಾ ಇದ್ದ ಮಹಿಳಾ ತಂಡವೂ ಕೂಟ ದಾಖಲೆಯೊಂದಿಗೆ ಚಿನ್ನ ಪಡೆಯಿತು.
ರಿಲೇಯಲ್ಲಿ ಕರ್ನಾಟಕಕ್ಕೆ ಕಂಚು
36ನೇ ರಾಷ್ಟ್ರೀಯ ಕ್ರೀಡಾಕೂಟದದಲ್ಲಿ ಕರ್ನಾಟಕದ ಕ್ರೀಡಾಪಟುಗಳು ಮತ್ತೊಂದು ಪದಕ ಗೆದ್ದಿದ್ದಾರೆ. ಭಾನುವಾರ ನಡೆದ ಮಹಿಳೆಯರ 4*400 ಮೀ. ರಿಲೇ ಓಟದ ಸ್ಪರ್ಧೆಯಲ್ಲಿ ರಾಜ್ಯದ ಮಹಿಳಾ ತಂಡ ಕಂಚಿನ ಪದಕ ತಮ್ಮದಾಗಿಸಿಕೊಂಡಿತು.
ಸಿಂಚಲ್, ಇಂಚರಾ, ವಿಜಯ ಕುಮಾರಿ ಹಾಗೂ ಲಿಖಿತಾ ಅವರನ್ನೊಳಗೊಂಡ ತಂಡ 3 ನಿ. 36.50 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರೆ, ತಮಿಳುನಾಡು(3:35.32 ನಿ.) ಚಿನ್ನ, ಹರಾರಯಣ (3:35.86 ನಿ.) ಬೆಳ್ಳಿ ಪದಕ ಗೆದ್ದುಕೊಂಡಿತು. ಪುರುಷರ ವಿಭಾಗದಲ್ಲಿ ರಾಜ್ಯ ತಂಡ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇನ್ನು ಪುರುಷರ ಹೈಜಂಪ್‌ನಲ್ಲಿ ಸರ್ವಿಸಸ್‌ನ ಸರ್ವೇಶ್ ಅನಿಲ್, ಮಹಿಳೆಯರ ತ್ರಿಪಲ್ ಜಂಪ್‌ನಲ್ಲಿ ಕೇರಳದ ಶೀನಾ, ಡಿಕಥ್ಲಾನ್‌ನಲ್ಲಿ ಉತ್ತರ ಪ್ರದೇಶದ ಉಸೈದ್ ಖಾನ್ ಚಿನ್ನದ ಪದಕ ಗೆದ್ದುಕೊಂಡರು.
ಅಂತಿಮ್‌ಗೆ ಚಿನ್ನ
ಹಾಲಿ ವಿಶ್ವ ಅಂಡರ್-20 ಚಾಂಪಿಯನ್ ಅಂತಿಮ್ ಪಂಘಾಲ್ ಮಹಿಳೆಯರ 53 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಫೈನಲ್‌ನಲ್ಲಿ 18 ವರ್ಷದ ಅಂತಿಮ್ ಮಧ್ಯಪ್ರದೇಶದ ಪ್ರಿಯಾನ್ಶಿ ವಿರುದ್ಧ ಗೆಲುವು ಸಾಧಿಸಿದರು.
National Games 2022: ಸೈಕ್ಲಿಂಗ್‌ನಲ್ಲಿ ಕರ್ನಾಟಕದ ಕೀರ್ತಿಗೆ ಒಲಿದ ಕಂಚು
ಶರ್ಮದಾ, ಪ್ರಜ್ವಲ್ ಸೆಮೀಸ್‌ಗೆ
ಕ್ರೀಡಾಕೂಟದ ಬ್ಯಾಡ್ಮಿಂಟನ್‌ನಲ್ಲಿ ಕರ್ನಾಟಕದ ಶರ್ಮದಾ ಬಾಲು ಮಹಿಳಾ ಸಿಂಗಲ್ಸ್‌ನಲ್ಲಿ, ಪ್ರಜ್ವಲ್ ದೇವ್ ಪುರುಷರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇವರಿಬ್ಬರೂ ಮಿಶ್ರ ಡಬಲ್ಸ್‌ನಲ್ಲೂ ಅಂತಿಮ 4ರ ಘಟ್ಟತಲುಪಿದರು. ಇನ್ನು, ಮನೀಶ್ ಜಿ. ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೇರಿದರೆ, ಸೋಹಾ ಸಾಧಿಕ್ ಮಹಿಳಾ ಸಿಂಗಲ್ಸ್‌ನಲ್ಲಿ ಸೋತು ಹೊರಬಿದ್ದರು.