ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್: ಲಕ್ಷ ಸೇನ್ ಮೊದಲ ಸುತ್ತಿನಲ್ಲೇ ಔಟ್!
ಲಕ್ಷ್ಯ ಸೇನ್ ಮಲೇಷ್ಯಾ ಓಪನ್‌ನ ಮೊದಲ ಸುತ್ತಿನಲ್ಲಿ ಸೋತು ಹೊರಬಿದ್ದರೆ, ಗಾಯತ್ರಿ ಗೋಪಿಚಂದ್ ಮತ್ತು ಸಾ ಜಾಲಿ ಪ್ರಿ ಕ್ವಾರ್ಟರ್‌ಗೆ ಲಗ್ಗೆ ಇಟ್ಟಿದ್ದಾರೆ. ಮಳೆ ನೀರು ಸೋರಿಕೆಯಿಂದಾಗಿ ಎಚ್.ಎಸ್. ಪ್ರಣಯ್ ಪಂದ್ಯ ಸ್ಥಗಿತಗೊಂಡಿದೆ.
ಕೌಲಾಲಂಪುರ: ಭಾರತದ ತಾರಾ ಶಟ್ಲರ್ ಲಕ್ಷ ಸೇನ್ 2025ರ ಮೊದಲ ಬ್ಯಾಡ್ಮಿಂಟನ್ ಟೂರ್ನಿಯಾದ ಮಲೇಷ್ಯಾ ಓಪನ್‌ನ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಚೈನೀಸ್ ತೈಪೆಯ ಚೀಯು-ಜೆನ್ ವಿರುದ್ಧ 14-21, 7-21 ನೇರ ಗೇಮ್‌ಗಳಲ್ಲಿ ಸೋಲುಂಡರು.
ಇದೇ ವೇಳೆ ಮಹಿಳಾ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಗೆದ್ದ ಭಾರತದ ಗಾಯತ್ರಿ ಗೋಪಿಚಂದ್ ಹಾಗೂ ಸಾ ಜಾಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಭಾರತೀಯ ಜೋಡಿಯು ಮೊದಲ ಸುತ್ತಿನಲ್ಲಿ ಥಾಯ್ಲೆಂಡ್‌ನ ಓನ್ರಿಚಾ ಹಾಗೂ ಸುಕಿತಾ ಜೋಡಿಯನ್ನು 21-10, 21-10 ಗೇಮ್‌ಗಳಲ್ಲಿ ಸುಲಭವಾಗಿ ಸೋಲಿಸಿತು.
ಮೇಲ್ಚಾವಣಿಯಿಂದ ಸೋರಿದ ನೀರು: ಪ್ರಣಯ್‌ರ ಪಂದ್ಯ ಸ್ಥಗಿತ!
ಭಾರತದ ಎಚ್.ಎಸ್.ಪ್ರಣಯ್ ಮೊದಲ ಸುತ್ತಿನ ಪಂದ್ಯದ ವೇಳೆ ಕ್ರೀಡಾಂಗಣದ ಮೇಲ್ಟಾವಣಿಯಿಂದ ಮಳೆ ನೀರು ಸೋರಿ ಕೋರ್ಟ್‌ನಲ್ಲಿ ನೀರು ನಿಂತ ಕಾರಣ, ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. 1 ಗಂಟೆ ಬಳಿಕ ಪಂದ್ಯ ಪುನಾರಂಭಗೊಂಡರೂ, ಮತ್ತೆ ಸೋರಿಕೆ ಶುರುವಾಗಿ ದ್ದರಿಂದ ಪಂದ್ಯ ಮುಂದೂಡಲಾಯಿತು. ಕೆನಡಾದ ಬ್ರಿಯಾನ್ ವಿರುದ್ಧ ಪ್ರಣಯ್ ಆಡುತ್ತಿದ್ದರು.
ಜನವರಿ 12ಕ್ಕೆ ಕೋಚ್ ಗೌತಮ್ ಗಂಭೀರ್ ಭವಿಷ್ಯ ನಿರ್ಧಾರ? ಬಲಿಷ್ಠ ತಂಡ ಕಟ್ಟಲು ಮಾಸ್ಟರ್ ಪ್ಲಾನ್
ಈ ವರ್ಷ ಭಾರತದಲ್ಲಿ ಅಂತಾರಾಷ್ಟ್ರೀಯ ಜಾವೆಲಿನ್ ಥ್ರೋ
ನವದೆಹಲಿ: ಭಾರತದಲ್ಲಿ ಜಾವೆಲಿನ್ ಥ್ರೋ ಬಗ್ಗೆ ಆಸಕ್ತಿ ಹೆಚ್ಚುತ್ತಿರುವ ಸಮಯದಲ್ಲೇ, ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಜಾವೆಲಿನ್ ಥ್ರೋ ಕೂಟವನ್ನು ಆಯೋಜಿಸಲು ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್ (ಎಎಫ್‌ಐ), ದೇಶದ ಅಗ್ರ ಖಾಸಗಿ ಕ್ರೀಡಾ ಸಂಸ್ಥೆಗಳಲ್ಲಿ ಒಂದಾದ ಜೆಎಸ್‌ಡಬ್ಲ್ಯು ಜೊತೆ ಕೈಜೋಡಿಸಿದೆ.
ಸೆಪ್ಟೆಂಬರ್‌ನಲ್ಲಿ ಈ ಕೂಟ ನಡೆಯುವ ಸಾಧ್ಯತೆ ಇದ್ದು, ಭಾರತೀಯ ತಾರೆ ನೀರಜ್ ಚೋಪ್ರಾ ಸೇರಿ ವಿಶ್ವದ ಅಗ್ರ-10 ಜಾವೆಲಿನ್ ಎಸೆತಗಾರರು ಪಾಲ್ಗೊಳ್ಳಲಿದ್ದಾರೆ ಎಂದು ಎಎಫ್‌ಐನ ಮಾಜಿ ಅಧ್ಯಕ್ಷ ಅದಿಲೆ ಸುಮರಿವಾಲಾ ತಿಳಿಸಿದ್ದಾರೆ.
ಡೋಪಿಂಗ್ ದೇಶದ ದೊಡ್ಡ ಸಮಸ್ಯೆ: ನೀರಜ್ ಚೋಪ್ರಾ ಎಚ್ಚರಿಕೆ
ಎಎಫ್‌ಐ ಸಮಿತಿಗೆ ಸದಸ್ಯರಾಗಿ ರಾಜ್ಯದ ರಾಜವೇಲು ಆಯ್ಕೆ ಆಯ್ಕೆ
ಬೆಂಗಳೂರು: ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್ (ಎಎಫ್‌ಐ)ನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ (ಕೆಎಎ) ಕಾರ್ಯದರ್ಶಿ ಎ. ರಾಜವೇಲು ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ರಾಷ್ಟ್ರೀಯ ಫೆಡರೇಶನ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಮಂಗಳವಾರ ಚಂಡೀಗಢದಲ್ಲಿ ನಡೆದ ಎಎಫ್‌ಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಏಷ್ಯನ್ ಗೇಮ್ಸ್ ಪದಕ ವಿಜೇತ ಮಾಜಿ ಶಾಟ್ ಪುಟ್ ಪಟು ಬಹದ್ದೂರ್ ಸಿಂಗ್ ಸಾಗೊ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು. ಅವರು 4 ವರ್ಷ ಅವಧಿಗೆ ಕಾರ್ಯನಿರ್ವಹಿಸಲಿದ್ದಾರೆ. ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ, ಒಲಿಂಪಿಯನ್ ಅಂಜು ಬಾಬಿ ಜಾರ್ಜ್ ಹಿರಿಯ ಉಪಾಧ್ಯಕ್ಷೆಯಾಗಿ ಮುಂದುವರಿಯಲಿದ್ದಾರೆ.