ಚೀನಾ ಕಂಪನಿ ಜತೆ ಶಟ್ಲರ್‌ ಶ್ರೀಕಾಂತ್‌ 35 ಕೋಟಿ ಒಪ್ಪಂದ!

ಭಾರತದ ಬ್ಯಾಡ್ಮಿಂಟನ್ ಪಟು ಕಿದಂಬಿ ಶ್ರೀಕಾಂತ್ ಬರೋಬ್ಬರಿ 35 ಕೋಟಿ ರೂಪಾಯಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. 4 ವರ್ಷಗಳ ಒಪ್ಪಂದಲ್ಲಿ ಶ್ರೀಕಾಂತ್ 35 ಕೋಟಿ ರೂಪಾಯಿ ಜೇಬಿಗಿಳಿಸಿದ್ದಾರೆ. ಈ ಒಪ್ಪಂದದ ಡೀಟೆಲ್ಸ್ ಇಲ್ಲಿದೆ.

kidambi srikanth signs rs 35 crore deal with li ning chinese brand

ನವದೆಹಲಿ(ಜ.15): ಭಾರತದ ತಾರಾ ಶಟ್ಲರ್‌ ಕಿದಂಬಿ ಶ್ರೀಕಾಂತ್‌, ಸೋಮವಾರ ಚೀನಾದ ಕ್ರೀಡಾ ಉತ್ಪನ್ನಗಳ ಸಂಸ್ಥೆ ಲೀ-ನಿಂಗ್‌ ಜತೆ 35 ಕೋಟಿ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. 6 ಸೂಪರ್‌ ಸರಣಿಗಳನ್ನು ಗೆದ್ದಿರುವ ಭಾರತದ ಏಕೈಕ ಶಟ್ಲರ್‌ ಆಗಿರುವ ಶ್ರೀಕಾಂತ್‌, ಕಂಪನಿಯೊಂದಿಗೆ 4 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದಾರೆ. 

ಇದನ್ನೂ ಓದಿ: ಬೆಂಗಳೂರು ರ‍್ಯಾಪ್ಟರ್ಸ್ PBL ಚಾಂಪಿಯನ್

ಕಂಪನಿಯು ವಿಶ್ವದ ಮಹತ್ವದ ಕ್ರೀಡಾಕೂಟಗಳ ಪ್ರಾಯೋಜಕತ್ವ ಮತ್ತು ಕ್ರೀಡಾ ಉಪಕರಣಗಳನ್ನು ಪೂರೈಕೆ ಮಾಡುತ್ತದೆ. ಲೀ-ನಿಂಗ್‌ ಕಂಪನಿಯು ಚೀನಾ, ಇಂಡೋನೇಷ್ಯಾ, ಸಿಂಗಾಪುರ, ಆಸ್ಪ್ರೇಲಿಯಾ ಮತ್ತು 2018ರ ಜಕಾರ್ತ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಕ್ರೀಡಾಪಟುಗಳ ತಂಡಕ್ಕೆ ಪ್ರಾಯೋಜಕತ್ವ ನೀಡಿತ್ತು. ಅಲ್ಲದೆ 2020ರ ಟೋಕಿಯೋ ಒಲಿಂಪಿಕ್ಸ್‌ಗೂ ಭಾರತದ ಕ್ರೀಡಾಪಟಗಳಿಗೆ ಕ್ರೀಡಾ ಉಡುಪುಗಳನ್ನು ನೀಡಲಿದೆ.

ಇದನ್ನೂ ಓದಿ: ಆಸ್ಪ್ರೇಲಿಯನ್‌ ಓಪನ್‌: 2ನೇ ಸುತ್ತಿಗೆ ಫೆಡರರ್‌, ನಡಾಲ್‌

ನೂತನ ಒಪ್ಪಂದ ನನ್ನ ಸಂತಸವನ್ನ ಇಮ್ಮಡಿಗೊಳಿಸಿದೆ. ಭಾರತ ಹಾಗೂ ವಿಶ್ವದಲ್ಲಿ ಲೀ-ನಿಂಗ್‌ ಬ್ರ್ಯಾಂಡ್ ಪಸರಿಸಲು ಹೆಮ್ಮೆಯಾಗುತ್ತಿದೆ ಎಂದು ಕಿಡಂಬಿ ಶ್ರೀಕಾಂತ್ ಹೇಳಿದ್ದಾರೆ. ಭಾರತದ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ 35ಕೋಟಿ  ಒಪ್ಪಂದ ಮಾಡಿಕೊಂಡಿರುವ ಶ್ರೀಕಾಂತ್ ಹೊಸ ದಾಖಲೆ ಬರೆದಿದ್ದಾರೆ.

Latest Videos
Follow Us:
Download App:
  • android
  • ios