Asianet Suvarna News Asianet Suvarna News

ಎಡಗೈ ಮುರಿದಿದ್ದರೂ ಡೈಮಂಡ್‌ ಲೀಗ್‌ ಫೈನಲ್ಸ್‌ನಲ್ಲಿ ನೀರಜ್‌ ಚೋಪ್ರಾ ರನ್ನರ್‌-ಅಪ್‌

ಶನಿವಾರ ಮಧ್ಯರಾತ್ರಿ ನಡೆದ ಡೈಮಂಡ್‌ ಲೀಗ್‌ ಫೈನಲ್ಸ್‌ ಕೂಟದಲ್ಲಿ ಗಾಯದ ಸಮಸ್ಯೆಯ ಹೊರತಾಗಿಯೂ ಕೇವಲ ಒಂದು ಸೆಂಟಿಮೀಟರ್ ಅಂತರದಲ್ಲಿ ನೀರಜ್ ಚೋಪ್ರಾ ಚಾಂಪಿಯನ್ ಪಟ್ಟವನ್ನು ಕೈಚೆಲ್ಲಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Javelin Thrower Neeraj Chopra reveals he competed in Diamond League Final with broken hand kvn
Author
First Published Sep 16, 2024, 9:49 AM IST | Last Updated Sep 16, 2024, 9:49 AM IST

ಬ್ರುಸ್ಸೆಲ್ಸ್‌ (ಬೆಲ್ಜಿಯಂ): ಎರಡು ಬಾರಿ ಒಲಿಂಪಿಕ್‌ ಪದಕ ವಿಜೇತ ಭಾರತದ ತಾರಾ ಅಥ್ಲೀಟ್‌ ನೀರಜ್‌ ಚೋಪ್ರಾ, ಋತು ಅಂತ್ಯದ ಡೈಮಂಡ್‌ ಲೀಗ್‌ ಫೈನಲ್ಸ್‌ ಕೂಟದಲ್ಲಿ ಗಾಯದ ನಡುವೆಯೂ ಸ್ಪರ್ಧಿಸಿ 2ನೇ ಸ್ಥಾನ ಪಡೆದಿದ್ದಾರೆ.

ಶನಿವಾರ ಮಧ್ಯರಾತ್ರಿ ನಡೆದ ಸ್ಪರ್ಧೆಯಲ್ಲಿ 87.86 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಸತತ 2ನೇ ವರ್ಷ ರನ್ನರ್‌-ಅಪ್‌ ಸ್ಥಾನ ಪಡೆದ ನೀರಜ್‌, ಭಾನುವಾರ ತಮ್ಮ ‘ಎಕ್ಸ್‌’(ಟ್ವೀಟರ್‌) ಖಾತೆಯಲ್ಲಿ ಗಾಯದ ವಿಷಯ ಬಹಿರಂಗಪಡಿಸಿದ್ದಾರೆ. ‘ಸೋಮವಾರ ಅಭ್ಯಾಸದ ವೇಳೆ ಎಡಗೈ ಮುರಿತಕ್ಕೊಳಗಾಗಿದ್ದೆ. ತೀವ್ರ ನೋವಿನ ನಡುವೆಯೇ ಸ್ಪರ್ಧಿಸಿದೆ. ನಿರೀಕ್ಷಿತ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ’ ಎಂದು ನೀರಜ್‌ ಕೈ ಮುರಿದಿರುವುದನ್ನು ತೋರಿಸುತ್ತಿರುವ ಎಕ್ಸ್‌-ರೇ ಸಮೇತ ಟ್ವೀಟ್‌ ಮಾಡಿದ್ದಾರೆ.

ಶನಿವಾರ ಮಧ್ಯರಾತ್ರಿ ನಡೆದ ಸ್ಪರ್ಧೆ ಯಲ್ಲಿ ನೀರಜ್, 87.86 ಮೀ. ದೂರಕ್ಕೆ ಜಾವೆಲಿನ್ ಎಸೆದು 2ನೇ ಸ್ಥಾನ ಪಡೆದರು. ಕೇವಲ 1 ಸೆಂ.ಮೀ. ಅಂತರದಲ್ಲಿ ನೀರಜ್‌ಗೆ ಚಾಂಪಿಯನ್‌ಶಿಪ್ ಕೈತಪ್ಪಿತು. ಪ್ಯಾರಿಸ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಮಾಜಿ ವಿಶ್ವ ಚಾಂಪಿಯನ್ ಗ್ರೆನಡಾದ ಆ್ಯಂಡರ್‌ಸನ್ ಪೀಟರ್ 87.87 ಮೀ. ದೂರಕ್ಕೆ ಜಾವೆಲಿನ್ ಎಸೆದು, ಡೈಮಂಡ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಜರ್ಮನಿಯ ಜೂಲಿಯನ್ ವೇಬರ್ 85.97 ಮೀ. ಎಸೆದು 3ನೇ ಸ್ಥಾನ ಗಳಿಸಿದರು.

ಡೇವಿಸ್‌ ಕಪ್‌ ಟೆನಿಸ್‌: ಸ್ವೀಡನ್‌ ವಿರುದ್ಧ ಭಾರತಕ್ಕೆ 0-4 ಸೋಲಿನ ಮುಖಭಂಗ

ಸ್ಟಾಕ್‌ಹೋಮ್‌: ಡೇವಿಸ್‌ ಕಪ್‌ ಟೆನಿಸ್‌ ವಿಶ್ವ ಗುಂಪು-1ರ ಪಂದ್ಯದಲ್ಲಿ ಭಾರತಕ್ಕೆ ಬಲಿಷ್ಠ ಸ್ವೀಡನ್‌ ವಿರುದ್ಧ 0-4 ಅಂತರದ ಸೋಲು ಎದುರಾಗಿದೆ. ಸ್ವೀಡನ್‌ ವಿರುದ್ಧ ಭಾರತಕ್ಕಿದು ಡೇವಿಸ್‌ ಕಪ್‌ನಲ್ಲಿ ಸತತ 6ನೇ ಸೋಲು. ಇದರೊಂದಿಗೆ ಮುಂದಿನ ವರ್ಷ ಭಾರತ, ವಿಶ್ವ ಗುಂಪು-1ರಲ್ಲೇ ಉಳಿಯಲು ಪ್ಲೇ-ಆಫ್‌ ಪಂದ್ಯದಲ್ಲಿ ಆಡಬೇಕಿದೆ.

ಮೊದಲ ದಿನವಾದ ಶನಿವಾರ ಎರಡು ಸಿಂಗಲ್ಸ್‌ ಪಂದ್ಯಗಳನ್ನು ಸೋತಿದ್ದ ಭಾರತ, ಭಾನುವಾರ ನಿರ್ಣಾಯಕ ಡಬಲ್ಸ್‌ ಪಂದ್ಯದಲ್ಲಿ ಸೋಲುಂಡಿತು. ರಾಮ್‌ಕುಮಾರ್‌ ರಾಮನಾಥನ್‌ ಹಾಗೂ ಶ್ರೀರಾಮ್‌ ಬಾಲಾಜಿ ಜೋಡಿಗೆ, ಆ್ಯಂಡ್ರೆ ಗೊರನ್ಸನ್‌ ಹಾಗೂ ಫಿಲಿಪ್‌ ಬರ್ಗಿವಿ ವಿರುದ್ಧ 3-6, 4-6 ನೇರ ಸೆಟ್‌ಗಳಲ್ಲಿ ಸೋಲು ಎದುರಾಯಿತು. ಕೇವಲ 1 ಗಂಟೆ 19 ನಿಮಿಷಗಳಲ್ಲಿ ಪಂದ್ಯ ಗೆದ್ದ ಸ್ವೀಡನ್‌, 3-0 ಅಜೇಯ ಮುನ್ನಡೆ ಸಾಧಿಸಿತು.

ದುಲೀಪ್ ಟ್ರೋಫಿ: ಮಯಾಂಕ್ ಅಗರ್‌ವಾಲ್ ನೇತೃತ್ವದ ಭಾರತ 'ಎ'ಗೆ ಭರ್ಜರಿ ಗೆಲುವು!

ಔಪಚಾರಿಕ ಎನಿಸಿದ್ದ ರಿವರ್ಸ್‌ ಸಿಂಗಲ್ಸ್‌ನಲ್ಲಿ ಕೇವಲ 1 ಪಂದ್ಯ ನಡೆಯಿತು. ಆಡದ ನಾಯಕ ರೋಹಿತ್‌ ರಾಜ್‌ಪಾಲ್‌, ಮಾಜಿ ರಾಷ್ಟ್ರೀಯ ಚಾಂಪಿಯನ್‌ ಸಿದ್ಧಾರ್ಥ್‌ ವಿಶ್ವಕರ್ಮ ಅವರನ್ನು ಕಣಕ್ಕಿಳಿಸಿದರು. ಎಲಿಯಸ್‌ ಎಮೆರ್‌ ವಿರುದ್ಧ ಸಿದ್ಧಾರ್ಥ್‌ಗೆ 2-6, 2-6 ಸೆಟ್‌ಗಳ ಸೋಲು ಎದುರಾಯಿತು.
 

Latest Videos
Follow Us:
Download App:
  • android
  • ios