ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಮಯಾಂಕ್ ಅಗರ್‌ವಾಲ್ ನೇತೃತ್ವದ ಭಾರತ 'ಎ' ತಂಡವು ಭರ್ಜರಿ ಗೆಲುವು ಸಾಧಿಸುವ ಮೂಲಕ ಪ್ರಶಸ್ತಿ ಗೆಲ್ಲುವ ಕನಸು ಜೀವಂತವಾಗಿರಿಸಿಕೊಂಡಿದೆ. 

ಅನಂತಪುರ: ರಿಕಿ ಭುಯಿ ಶತಕ ಸಿಡಿಸಿದರೂ, ದುಲೀಪ್ ಟ್ರೋಫಿ ಪಂದ್ಯದಲ್ಲಿ ಭಾರತ 'ಎ' ವಿರುದ್ಧ ಭಾರತ 'ಡಿ' ಸೋಲುವನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಸ್ಪಿನ್ನರ್‌‌ಗಳಾದ ಶಮ್ಸ್ ಮುಲಾನಿ ಹಾಗೂ ತನುಷ್ ಕೋಟ್ಯಾನ್ ಆಕರ್ಷಕ ಬೌಲಿಂಗ್ ಪ್ರದರ್ಶನದ ನೆರವಿನಿಂದ ಭಾರತ 'ಎ' 186 ರನ್‌ಗಳ ಗೆಲುವು ದಾಖಲಿಸಿ, ಟ್ರೋಫಿ ಎತ್ತಿಹಿಡಿಯುವ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಸತತ 2ನೇ ಸೋಲು ಅನುಭವಿಸಿದ ಭಾರತ 'ಡಿ', ಟ್ರೋಫಿ ರೇಸ್ ನಿಂದ ಹೊರಬಿತ್ತು.

ಗೆಲ್ಲಲು 488 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ್ದ ಭಾರತ 'ಡಿ', 3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 62 ರನ್ ಗಳಿಸಿತ್ತು. 4ನೇ ಹಾಗೂ ಅಂತಿಮ ದಿನವಾದ ಭಾನುವಾರ 2ನೇ ಇನ್ನಿಂಗ್ನಲ್ಲಿ 301 ರನ್‌ಗೆ ಆಲೌಟ್ ಆಯಿತು. ರಿಕಿ ಭುಯಿ 113 ರನ್ ಗಳಿಸಿದರು. ತನುಷ್ ಕ್ರೋಟಾನ್ 4 ಹಾಗೂ ಶಮ್ಸ್ ಮುಲಾನಿ 3 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.

Scroll to load tweet…

ಕ್ರಿಕೆಟ್ ಇತಿಹಾಸದಲ್ಲೇ ಅತಿ ದೊಡ್ಡ ಸಿಕ್ಸರ್ ಸಿಡಿಸಿದ್ದು ಯಾರು? ಇಲ್ಲಿಯವರೆಗೂ ಯಾರಿಗೂ ಆ ರೆಕಾರ್ಡ್‌ ಬ್ರೇಕ್‌ ಮಾಡೋಕಾಗಿಲ್ಲ!

ಸ್ಕೋರ್: 
ಭಾರತ 'ಎ' 290 ಹಾಗೂ 380/3 ಡಿಕ್ಲೇರ್.
ಭಾರತ 'ಡಿ' 183 ಹಾಗೂ 301

ಭಾರತ ಬಿ-ಭಾರತ ಸಿ ನಡುವಿನ ಪಂದ್ಯ ಡ್ರಾ

ಅನಂತಪುರ: ಭಾರತ 'ಬಿ' ವಿರುದ್ಧದ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದ ಭಾರತ 'ಸಿ', ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಮೊದಲ ಇನ್ನಿಂಗ್ನಲ್ಲಿ 525 ರನ್ ಕಲೆಹಾಕಿದ್ದ ಭಾರತ 'ಸಿ', ಆ ಬಳಿಕ ಭಾರತ 'ಬಿ'ಯನ್ನು 332 ರನ್‌ಗೆ ಕಟ್ಟಿಹಾಕಿತು. 3ನೇ ದಿನದಂತ್ಯಕ್ಕೆ 7 ವಿಎಕಟ್‌ಗೆ 309 ರನ್ ಗಳಿಸಿದ್ದ ಭಾರತ 'ಬಿ', ಭಾನುವಾರ ಆ ಮೊತ್ತಕ್ಕೆ ಕೇವಲ 23 ರನ್ ಸೇರಿಸಿತು. ವೇಗಿ ಅಬ್ದುಲ್ ಕಾಂಬೋಜ್ 69ಕ್ಕೆ 8 ವಿಕೆಟ್ ಕಿತ್ತರು. 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ 'ಸಿ' 4 ವಿಕೆಟ್‌ಗೆ 128 ರನ್ ಗಳಿಸಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.

ಸ್ಕೋರ್: ಭಾರತ 'ಸಿ' 525 ಹಾಗೂ 128/4, ಭಾರತ 'ಡಿ' 332