ಟೆನಿಸ್ ರ್‍ಯಾಂಕಿಂಗ್‌: 3ನೇ ಸ್ಥಾನಕ್ಕೆ ಕುಸಿದ ನೋವಾಕ್ ಜೋಕೋವಿಚ್

ಸೋಮವಾರ ನೂತನ ರ್‍ಯಾಂಕಿಂಗ್‌ ಪಟ್ಟಿ ಪ್ರಕಟಗೊಂಡಿದ್ದು, ಫ್ರೆಂಚ್ ಓಪನ್ ಚಾಂಪಿಯನ್ ಕಾರ್ಲೊಸ್ ಆಲ್ಕರಜ್ 2ನೇ ಸ್ಥಾನಕ್ಕೇರಿದ್ದಾರೆ. ಸೆಮಿ ಫೈನಲ್‌ನಲ್ಲಿ ಸೋತಹೊರತಾಗಿಯೂ ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್, ಇಟಲಿಯ 22ರ ಯಾನ್ನಿಕ್ ಸಿನ್ನರ್ ಅಗ್ರಸ್ಥಾನಕ್ಕೇರಿದ್ದಾರೆ. 

jannik Sinner overtakes Novak Djokovic to debut at No 1 in ATP ranking kvn

ಪ್ಯಾರಿಸ್: ಈ ಬಾರಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಗಾಯದಿಂದಾಗಿ ಕ್ವಾರ್ಟರ್ ಫೈನಲ್‌ಗೂ ಮುನ್ನವೇ ನಿರ್ಗಮಿಸಿದ 24 ಗ್ರಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ನೋವಾಕ್ ಜೋಕೋವಿಚ್ ಎಟಿಪಿ ವಿಶ್ವ ಟೆನಿಸ್ ರ್‍ಯಾಂಕಿಂಗ್‌ನಲ್ಲಿ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಸೋಮವಾರ ನೂತನ ರ್‍ಯಾಂಕಿಂಗ್‌ ಪಟ್ಟಿ ಪ್ರಕಟಗೊಂಡಿದ್ದು, ಫ್ರೆಂಚ್ ಓಪನ್ ಚಾಂಪಿಯನ್ ಕಾರ್ಲೊಸ್ ಆಲ್ಕರಜ್ 2ನೇ ಸ್ಥಾನಕ್ಕೇರಿದ್ದಾರೆ. ಸೆಮಿ ಫೈನಲ್‌ನಲ್ಲಿ ಸೋತಹೊರತಾಗಿಯೂ ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್, ಇಟಲಿಯ 22ರ ಯಾನ್ನಿಕ್ ಸಿನ್ನರ್ ಅಗ್ರಸ್ಥಾನಕ್ಕೇರಿದ್ದಾರೆ. 

ಇನ್ನು, ಡಬ್ಲ್ಯುಟಿಎ ಮಹಿಳಾ ವಿಶ್ವ ರ್‍ಯಾಂಕಿಂಗ್‌ನಲ್ಲಿ ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ಅಮೆರಿಕದ ಗಾಫ್, ಸಬಲೆಂಕಾ, ರಬೈಕೆನಾ ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ. ಫ್ರೆಂಚ್ ಓಪನ್ ರನ್ನರ್-ಅಪ್, ಇಟಲಿಯ ಪೌಲಿನಿ ಮೊದಲ ಬಾರಿ ಅಗ್ರ -10ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಜೀವನಶ್ರೇಷ್ಠ 7ನೇ ಸ್ಥಾನನಕ್ಕೇರಿದ್ದಾರೆ.

T20 World Cup 2024: ಪಾಕಿಸ್ತಾನಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ..!

ಒಲಿಂಪಿಕ್ಸ್‌ನಲ್ಲಿ ನಗಾಲ್‌ ಸ್ಪರ್ಧೆ ಬಹುತೇಕ ಖಚಿತ

ನವದೆಹಲಿ: ಜರ್ಮನಿಯ ಎಟಿಪಿ 100 ಹ್ರೀಲ್‌ಬ್ರಾನ್ ಚಾಲೆಂಜರ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿ, ವಿಶ್ವ ರ್‍ಯಾಂಕಿಂಗ್‌ನಲ್ಲಿ 77ನೇ ಸ್ಥಾನಕ್ಕೇರಿರುವ ಭಾರತದ ಅಗ್ರ ಟೆನಿಸಿ ಸುಮಿತ್‌ ನಗಾಲ್‌ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲೂ ಬಹುತೇಕ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ. 

ನಿಯಮಗಳ ಪ್ರಕಾರ ಸಿಂಗಲ್ಸ್‌ ರ್‍ಯಾಂಕಿಂಗ್‌ನಲ್ಲಿ ಅಗ್ರ-56 ಸ್ಥಾನಗಳಲ್ಲಿರುವವರು ಒಲಿಂಪಿಕ್ಸ್‌ ಅರ್ಹತೆ ಪಡೆಯಲಿದ್ದಾರೆ. ಆದರೆ ಒಂದು ದೇಶದಿಂದ 4 ಮಂದಿಗೆ ಮಾತ್ರ ಅವಕಾಶವಿದೆ. ಹೀಗಾಗಿ ರ್‍ಯಾಂಕಿಂಗ್‌ನಲ್ಲಿ 56ರಿಂದ ಕೆಳಗಿರುವವರಿಗೂ ಒಲಿಂಪಿಕ್ಸ್‌ ಪ್ರವೇಶಿಸಲು ಅವಕಾಶವಿದೆ. ಸದ್ಯದ ಲೆಕ್ಕಾಚಾರ ಪ್ರಕಾರ ನಗಾಲ್‌ ಒಲಿಂಪಿಕ್ಸ್‌ ಪ್ರವೇಶಿಸಲಿದ್ದು, ಶೀಘ್ರದಲ್ಲೇ ಅಧಿಕೃತಗೊಳ್ಳುವ ನಿರೀಕ್ಷೆಯಿದೆ. ಕೊನೆ ಬಾರಿ ಭಾರತದ ಸೋಮ್‌ದೇವ್‌ ದೇವ್‌ವರ್ಮನ್‌ 2012ರಲ್ಲಿ ಒಲಿಂಪಿಕ್ಸ್‌ನಲ್ಲಿ ಆಡಿದ್ದರು.

5000 ಮೀ. ರಾಷ್ಟ್ರೀಯ ದಾಖಲೆ ಬರೆದ ಗುಲ್ವಿ‌

ಪೋರ್ಟ್‌ಂಡ್ (ಅಮೆರಿಕ): ಭಾರತದ ಗುಲ್ಬರ್ ಸಿಂಗ್ ಪೋರ್ಟ್‌ಲೆಂಡ್‌ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 5000 ಮೀಟರ್ ಓಟದ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಯೊಂದಿಗೆ ಬೆಳ್ಳಿ ಪದಕ ಗೆದ್ದಿದ್ದಾರೆ. ಸೋಮವಾರ 26ರ ಗುಲ್ವೇರ್ 13 ನಿಮಿಷ 18.92 ಸೆಕೆಂಡ್‌ಗಳಲ್ಲಿ ಕ್ರಮಿಸಿ 2ನೇ ಸ್ಥಾನಿಯಾದರು. ಇದರೊಂದಿಗೆ ಕಳೆದ ವರ್ಷ ಅವಿನಾಶ್ ಸಾಬ್ಳೆ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆ(13 ನಿಮಿಷ 19.30 ಸೆಕೆಂಡ್) ಮುರಿದರು. ಗುರ್ 10000ಮೀ.ನಲ್ಲೂ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ.

ಸತತ 2 ಪಂದ್ಯ ಸೋತ ಪಾಕಿಸ್ತಾನಕ್ಕೆ ಇನ್ನೂ ಇದೇ ಸೂಪರ್ 8ಕ್ಕೇರುವ ಅವಕಾಶ..! ಆದ್ರೆ ಭಾರತದ ಸಪೋರ್ಟ್‌ ಬೇಕು

ಇಂದಿನಿಂದ ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್

ಸಿಡ್ನಿ: ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಮಂಗ ಳವಾರ ಆರಂಭಗೊಳ್ಳಲಿದ್ದು, ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ಭಾರತದ ತಾರಾ ಶಟ್ಲರ್‌ಗಳು ಸುಧಾರಿತ ಪ್ರದರ್ಶನ ನೀಡಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ವಿಶ್ವಾಸ ದಲ್ಲಿದ್ದಾರೆ. 

ಪುರುಷರ ಸಿಂಗಲ್ಸ್‌ನಲ್ಲಿ ಪ್ರಣಯ್, ಕಿರಣ್ ಜಾರ್ಜ್, ಮಿಥುನ್ ಮಂಜುನಾಥ್, ಸಮೀರ್, ಶಂಕರ್, ಮಹಿಳಾ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್, ಅಶ್ಮಿತಾ ಚಾಲಿಹಾ, ಅನುಪಮಾ ಉಪಾಧ್ಯಾಯ, ಇಮಾದ್ ಪಾರೂಖಿ, ಮಾಳವಿಕಾ ಕಣಕ್ಕಿಳಿಯಲಿದ್ದಾರೆ. ತಾರಾ ಪುರುಷ ಡಬಲ್ಸ್ ಜೋಡಿ ಸಾತ್ವಿಕ್ -ಚಿರಾಗ್ ಶೆಟ್ಟಿ ಟೂರ್ನಿಗೆ ಗೈರಾಗಲಿದ್ದು, ಮಹಿಆಳಾ ಡಬಲ್ಸ್‌ನಲ್ಲಿ ರುತುಪರ್ಣ-ಶ್ವೇತಪರ್ಣ, ಮಿಶ್ರ ಡಬಲ್ಸ್‌ನಲ್ಲಿ ಸುಮೀತ್-ಸಿಕ್ಕಿ ರೆಡ್ಡಿ ದಂಪತಿ ಕಣಕ್ಕಿಳಿಯಲಿದ್ದಾರೆ.

Latest Videos
Follow Us:
Download App:
  • android
  • ios