Asianet Suvarna News Asianet Suvarna News

2 ಅಂತಾರಾಷ್ಟ್ರೀಯ ಕೂಟಕ್ಕೆ ಗೈರು: ಕುಸ್ತಿ​ಪ​ಟು​ಗಳ ವರ್ತ​ನೆ​ಗೆ ಸಚಿ​ವಾ​ಲಯ ಅಸ​ಮಾ​ಧಾ​ನ..!

ಈ ವರ್ಷದಲ್ಲಿ 2 ಅಂತಾರಾಷ್ಟ್ರೀಯ ಟೂರ್ನಿಗೆ ಅಗ್ರ ಕುಸ್ತಿಪಟುಗಳು ಗೈರು
ಜಾಗ್ರೆಬ್‌ ಮತ್ತು ಅಲೆ​ಕ್ಸಾಂಡ್ರಿಯಾ ಕೂಟ​ಗ​ಳಿಂದ ಗೈರು
ವಿನೇಶ್‌, ಭಜ​ರಂಗ್‌, ರವಿ ದಹಿಯಾ, ಅನ್ಶು ಮಲಿಕ್‌ ಸೇರಿ​ದಂತೆ ಪ್ರಮು​ಖರು ಗೈರು

Indian Sports Ministry unhappy with top wrestlers for skipping international meets kvn
Author
First Published Feb 25, 2023, 11:41 AM IST | Last Updated Feb 25, 2023, 11:41 AM IST

ನವದೆಹ​ಲಿ(ಫೆ.25): ಭಾರ​ತದ ಅಗ್ರ ಕುಸ್ತಿ​ಪ​ಟು​ಗಳು ಈ ವರ್ಷದ 2 ಅಂತಾ​ರಾ​ಷ್ಟ್ರೀಯ ಟೂರ್ನಿ​ಗಳಿಗೆ ಗೈರಾ​ಗಿ​ರುವುದಕ್ಕೆ ಕೇಂದ್ರ ಕ್ರೀಡಾ ಸಚಿ​ವಾ​ಲಯ ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದೆ. ‘ಕು​ಸ್ತಿ​ಪ​ಟು​ಗಳ ಬೇಡಿ​ಕೆ​ಗ​ಳನ್ನು ಈಡೇ​ರಿ​ಸಿದ ಬಳಿ​ಕವೂ ಅವ​ರು ಸ್ಪರ್ಧಿ​ಸಲು ನಿರಾ​ಕ​ರಿ​ಸು​ತ್ತಿ​ರು​ವುದು ಏಕೆ ಎಂಬುದು ಅರ್ಥ​ವಾ​ಗು​ತ್ತಿಲ್ಲ. ಅವ​ರನ್ನು ಸ್ಪರ್ಧಿ​ಸು​ವಂತೆ ಒತ್ತಡ ಹೇರಲು ಸಾಧ್ಯ​ವಿಲ್ಲ. ಆದರೆ ಟೂರ್ನಿ​ಗ​ಳನ್ನು ತಪ್ಪಿ​ಸಿ​ಕೊ​ಳ್ಳ​ಬಾ​ರ​ದು’ ಎಂದು ಸಚಿ​ವಾ​ಲಯದ ಅಧಿ​ಕಾ​ರಿ​ಗಳು ಹೇಳಿ​ದ್ದಾ​ರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಭಾರ​ತೀಯ ಕುಸ್ತಿ ಫೆಡ​ರೇ​ಶನ್‌ ಜೊತೆ​ಗಿನ ಸಂಘ​ರ್ಷ​ದಿಂದಾಗಿ ವಿನೇಶ್‌ ಪೋಗಟ್, ಭಜ​ರಂಗ್‌ ಪೂನಿಯಾ, ರವಿ ದಹಿಯಾ, ಅನ್ಶು ಮಲಿಕ್‌ ಸೇರಿ​ದಂತೆ ಪ್ರಮು​ಖರು ಜಾಗ್ರೆಬ್‌ ಮತ್ತು ಅಲೆ​ಕ್ಸಾಂಡ್ರಿಯಾ ಕೂಟ​ಗ​ಳಲ್ಲಿ ಪಾಲ್ಗೊಂಡಿಲ್ಲ.

ಭಾರತದಿಂದ ಏಷ್ಯಾ ಕುಸ್ತಿ ಪಂದ್ಯಾವಳಿ ಸ್ಥಳಾಂತರ!

ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್‌(ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧ ಕುಸ್ತಿಪಟುಗಳು ಮಾಡಿರುವ ಲೈಂಗಿಕ ಕಿರುಕುಳ ಆರೋಪದ ತನಿಖೆ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಮಾ.28ರಿಂದ ಏ.2ರ ವರೆಗೂ ಇಲ್ಲಿ ನಡೆಯಬೇಕಿದ್ದ ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ ಅನ್ನು ಸ್ಥಳಾಂತರಿಸಲಾಗಿದೆ. ಕುಸ್ತಿಯ ಜಾಗತಿಕ ಮಟ್ಟದ ಸಂಸ್ಥೆಯಾದ ಯುನೈಟೆಡ್‌ ವಿಶ್ವ ಕುಸ್ತಿ(ಯುಡಬ್ಲ್ಯುಡಬ್ಲ್ಯು) ಈ ವಿಷಯವನ್ನು ಡಬ್ಲ್ಯುಎಫ್‌ಐನ ದೈನಂದಿನ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿರುವ ಮೇಲುಸ್ತುವಾರಿ ಸಮಿತಿಗೆ ತಿಳಿಸಿದೆ ಎಂದು ತಿಳಿದುಬಂದಿದೆ. ಪಂದ್ಯಾವಳಿಯನ್ನು ಸ್ಥಳಾಂತರಗೊಳಿಸದಂತೆ ಡಬ್ಲ್ಯುಎಫ್‌ಐ ಜಾಗತಿಕ ಮಂಡಳಿಯ ಮನವೊಲಿಸಲು ಪ್ರಯತ್ನವನ್ನೂ ಮಾಡಲಿಲ್ಲ ಎನ್ನುವುದು ಅಚ್ಚರಿಗೆ ಕಾರಣವಾಗಿದೆ.

ಭಾರತ ಮಹಿಳಾ ಕ್ರಿಕೆಟ್‌ ತಂಡವು ನಾಕೌಟ್‌ನಲ್ಲಿ ಮುಗ್ಗರಿಸಲು ಕಾರಣವೇನು..? ಇಲ್ಲಿವೆ ನೋಡಿ ಇಂಟ್ರೆಸ್ಟಿಂಗ್ ಸಂಗತಿ

ತನಿಖೆಗೆ ಮತ್ತೆರಡು ವಾರ ಕಾಲಾವಕಾಶ

ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್‌(ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷನ್‌ ಸಿಂಗ್‌ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ತನಿಖೆ ನಡೆಸಲು ಮೇಲುಸ್ತುವಾರಿ ಸಮಿತಿಗೆ ಕ್ರೀಡಾ ಸಚಿವಾಲಯ ಇನ್ನೆರಡು ವಾರಗಳ ಕಾಲಾವಕಾಶ ನೀಡಿದೆ. ಜ.23ರಂದು ಬಾಕ್ಸಿಂಗ್‌ ದಿಗ್ಗಜೆ ಮೇರಿ ಕೋಮ್‌ ನೇತೃತ್ವದ ಸಮಿತಿಯನ್ನು ರಚಿಸಿ ತನಿಖೆಯನ್ನು ಪೂರ್ಣಗೊಳಿಸಲು ಒಂದು ತಿಂಗಳು ಸಮಯಾವಕಾಶ ನೀಡಲಾಗಿತ್ತು. ಇದೀಗ ಸಮಿತಿಯು ಹೆಚ್ಚುವರಿ ಸಮಯ ಕೇಳಿದ್ದು, ಮಾ.9ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಕೋಚ್‌ ಪಾರ್ಕ್ರನ್ನು ಕೈಬಿಟ್ಟ ಪಿ.ವಿ.​ಸಿಂಧು

ನವ​ದೆ​ಹ​ಲಿ: ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ತಮ್ಮ ಬಹು​ಕಾ​ಲದ ಕೋಚ್‌, ದ.ಕೊ​ರಿ​ಯಾ​ದ ಪಾರ್ಕ್ ಟಾಯ್‌ ಸಾಂಗ್‌ ಅವ​ರಿಂದ ದೂರ​ವಾ​ಗಿ​ದ್ದಾರೆ. ಇತ್ತೀ​ಚಿನ ಟೂರ್ನಿ​ಗ​ಳಲ್ಲಿ ಸಿಂಧು ಕಳಪೆ ಪ್ರದ​ಶ​ರ್‍ನ ತೋರಿದ್ದು, ಇದರ ನೈತಿಕ ಹೊಣೆ ಹೊತ್ತು ತಮ್ಮ ಹುದ್ದೆಗೆ ರಾಜೀ​ನಾಮೆ ನೀಡುತ್ತಿ​ದ್ದೇನೆ ಎಂದು ಪಾರ್ಕ್ ತಿಳಿ​ಸಿ​ದ್ದಾರೆ. ‘ಸಿಂಧು ನನ್ನ ಬದಲು ಹೊಸ ಕೋಚ್‌ ಹುಡು​ಕು​ತ್ತಿ​ದ್ದಾರೆ. ಅವರ ನಿರ್ಧಾರ ಗೌರ​ವಿಸಿ ಹುದ್ದೆ ತೊರೆ​ಯು​ತ್ತಿ​ದ್ದೇನೆ’ ಎಂದಿ​ದ್ದಾ​ರೆ. ಪಾರ್ಕ್ ಕೋಚಿಂಗ್‌ ಅವ​ಧಿ​ಯಲ್ಲೇ ಸಿಂಧು ಟೋಕಿಯೋ ಒಲಿಂಪಿಕ್ಸ್‌ ಕಂಚು, ಕಾಮ​ನ್‌​ವೆಲ್ತ್‌ ಗೇಮ್ಸ್‌ ಚಿನ್ನ ಗೆದ್ದಿ​ದ್ದ​ರು.

ಶೂಟಿಂಗ್‌: ಅನೀ​ಶ್‌ಗೆ ಕಂಚು

ಕೈರೋ: ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತ ಮತ್ತೊಂದು ಪದ​ಕ ಗೆದ್ದಿದೆ. ಗುರು​ವಾರ ಪುರು​ಷರ 25 ಮೀ. ರಾರ‍ಯಪಿಡ್‌ ಫೈರ್‌ ಪಿಸ್ತೂ​ಲ್‌​ನಲ್ಲಿ ಅನೀಶ್‌ ಭನ್ವಾಲಾ ಕಂಚಿನ ಪದಕ ಜಯಿ​ಸಿ​ದ​ರು. ಟೂರ್ನಿಯಲ್ಲಿ ಈವರೆಗೂ ಭಾರತ 4 ಚಿನ್ನ ಸೇರಿ ಒಟ್ಟು 7 ಪದಕ ಜಯಿಸಿದೆ.

Latest Videos
Follow Us:
Download App:
  • android
  • ios