ಏಷ್ಯಾ ಖೋ-ಖೋ: ಭಾರತ ಪುರುಷ&ಮಹಿಳಾ ತಂಡಗಳು ಚಾಂಪಿಯನ್‌!

* 4ನೇ ಏಷ್ಯನ್‌ ಖೋ-ಖೋ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಚಾಂಪಿಯನ್
* ಭಾರತ ಮಹಿಳಾ&ಪುರುಷ ತಂಡಗಳೆರಡು ಚಾಂಪಿಯನ್‌ ಕಿರೀಟ
* ಫೈನಲ್‌ನಲ್ಲಿ ನೇಪಾಳ ವಿರುದ್ದವೇ ಭರ್ಜರಿ ಜಯಭೇರಿ ಬಾರಿಸಿದ ಭಾರತ

Indian men women emerge Asian kho kho champions kvn

ನವದೆಹಲಿ(ಮಾ.25): 4ನೇ ಏಷ್ಯನ್‌ ಖೋ-ಖೋ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪುರುಷ ಹಾಗೂ ಮಹಿಳಾ ತಂಡಗಳು ಚಾಂಪಿಯನ್‌ ಆಗಿವೆ. ಅಸ್ಸಾಂನ ತಮುಲ್‌ಪುರ್‌ನಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಭಾರತ ಪುರುಷರ ತಂಡ ನೇಪಾಳ ವಿರುದ್ಧ ಇನ್ನಿಂಗ್‌್ಸ ಹಾಗೂ 6 ಅಂಕಗಳಿಂದ ಗೆದ್ದರೆ, ಮಹಿಳಾ ತಂಡ ನೇಪಾಳವನ್ನು ಇನ್ನಿಂಗ್‌್ಸ ಹಾಗೂ 33 ಅಂಕಗಳಿಂದ ಬಗ್ಗುಬಡಿಯಿತು.

ಸೆಮಿಫೈನಲ್‌ನಲ್ಲಿ ಭಾರತ ಪುರುಷರು ಶ್ರೀಲಂಕಾವನ್ನು 45 ಅಂಕಗಳಿಂದ ಸೋಲಿಸಿದರೆ, ನೇಪಾಳ ತಂಡವು ಬಾಂಗ್ಲಾದೇಶವನ್ನು 12 ಅಂಕಗಳಿಂದ ಮಣಿಸಿ ಫೈನಲ್‌ಗೇರಿತ್ತು. ಇನ್ನು ಮಹಿಳೆಯರ ವಿಭಾಗದಲ್ಲಿ ಭಾರತ ತಂಡವು ಬಾಂಗ್ಲಾವನ್ನು ಇನ್ನಿಂಗ್‌್ಸ ಹಾಗೂ 49 ಅಂಕ, ನೇಪಾಳ ತಂಡವು ಶ್ರೀಲಂಕಾವನ್ನು ಇನ್ನಿಂಗ್‌್ಸ ಹಾಗೂ 59 ಅಂಕಗಳಿಂದ ಮಣಿಸಿದ್ದವು.

ಟೂರ್ನಿಯಲ್ಲಿ ಭಾರತ, ಬಾಂಗ್ಲಾ, ಭೂತಾನ್‌, ಇಂಡೋನೇಷ್ಯಾ, ಇರಾನ್‌, ಮಲೇಷ್ಯಾ, ನೇಪಾಳ, ಸಿಂಗಾಪುರ, ದ.ಕೊರಿಯಾ ಹಾಗೂ ಶ್ರೀಲಂಕಾದ ತಂಡಗಳು ಸ್ಪರ್ಧಿಸಿದ್ದವು.

ಖೇಲೋ ಇಂಡಿಯಾ: ವೇಟ್‌ಲಿಫ್ಟಿಂಗ್‌ ಟೂರ್ನಿಗೆ ಚಾಲನೆ

ಬೆಂಗಳೂರು: 4ನೇ ಆವೃತ್ತಿಯ ಖೇಲೋ ಇಂಡಿಯಾ ರಾಷ್ಟ್ರೀಯ ಮಹಿಳಾ ರ‍್ಯಾಂಕಿಂಗ್‌‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ಗೆ ಶುಕ್ರವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಿತು. ಕರ್ನಾಟಕ ರಾಜ್ಯ ಒಲಿಂಪಿಕ್ಸ್‌ ಸಂಸ್ಥೆ(ಕೆಒಎ) ಅಧ್ಯಕ್ಷ ಡಾ.ಕೆ.ಗೋವಿಂದರಾಜು ಕೂಟಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ‘ಈ ಕೂಟಕ್ಕೆ ಕರ್ನಾಟಕ ಆತಿಥ್ಯ ವಹಿಸುತ್ತಿರುವುದು ಖುಷಿಯ ವಿಚಾರ. ಖೇಲೋ ಇಂಡಿಯಾದಂತಹ ಕೂಟಗಳು ದೇಶದಲ್ಲಿ ಮತ್ತಷ್ಟು ಪ್ರತಿಭೆಗಳು ಅನಾವರಣಗೊಳ್ಳಲು ಕಾರಣವಾಗಲಿವೆ. ಎಲ್ಲಾ ಕ್ರೀಡೆಗಳಲ್ಲೂ ಇಂತಹ ಕೂಟಗಳು ಅಗತ್ಯ’ ಎಂದರು.

Swiss Open 2023: ಹಾಲಿ ಚಾಂಪಿಯನ್‌ ಸಿಂಧುಗೆ ಸ್ವಿಸ್ ಆಘಾತ

ಕೂಟದಲ್ಲಿ 600ಕ್ಕೂ ಹೆಚ್ಚು ವೇಟ್‌ಲಿಫ್ಟರ್‌ಗಳು ಪಾಲ್ಗೊಂಡಿದ್ದು, ಮೊದಲ ದಿನ ಕಿರಿಯರ 40 ಕೆ.ಜಿ. ವಿಭಾಗದ ಸ್ಪರ್ಧೆ ನಡೆಯಿತು. ಮಹಾರಾಷ್ಟ್ರದ ವಿನತೈ ಅಹೆರ್‌ ಸ್ನ್ಯಾಚ್‌ನಲ್ಲಿ 61 ಕೆ.ಜಿ., ಕ್ಲೀನ್‌ ಅಂಡರ್‌ ಜರ್ಕ್ನಲ್ಲಿ 74 ಕೆ.ಜಿ. (ಒಟ್ಟು 131 ಕೆ.ಜಿ.) ಭಾರ ಎತ್ತಿ ಮೊದಲ ಸ್ಥಾನ ಪಡೆದರು.

ಸ್ವಿಸ್‌ ಓಪ​ನ್‌: ಭಾರ​ತೀ​ಯ ಪುರು​ಷರ ಅಭಿ​ಯಾನ ಅಂತ್ಯ

ಬಸೆಲ್‌: 2023ರಲ್ಲಿ ಭಾರ​ತೀಯ ಪುರುಷ ಶಟ್ಲ​ರ್‌​ಗಳ ಕಳಪೆ ಲಯ ಮುಂದು​ವ​ರಿ​ದಿದ್ದು, ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ​ಯಲ್ಲಿ 2ನೇ ಸುತ್ತಿ​ನಲ್ಲೇ ಅಭಿ​ಯಾನ ಕೊನೆ​ಗೊ​ಳಿ​ಸಿ​ದ್ದಾರೆ. ಗುರು​ವಾರ ಪುರು​ಷರ ಸಿಂಗ​ಲ್ಸ್‌​ನಲ್ಲಿ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್‌, ಎಚ್‌.​ಎ​ಸ್‌.​ಪ್ರ​ಣಯ್‌ ಹಾಗೂ ಹಾಲಿ ರಾಷ್ಟ್ರೀಯ ಚಾಂಪಿ​ಯನ್‌, ಕರ್ನಾ​ಟ​ಕದ ಮಿಥುನ್‌ ಮಂಜುನಾಥ್‌ ಸೋಲ​ನ​ಭ​ವಿ​ಸಿ​ದರು. ಲಕ್ಷ್ಯ ಸೇನ್‌ ಮೊದಲ ಸುತ್ತಲ್ಲೇ ಸೋತು ಹೊರ​ಬಿ​ದ್ದಿ​ದ್ದರು.

Latest Videos
Follow Us:
Download App:
  • android
  • ios